Junior Appu: ಇವರೇ ಜ್ಯೂನಿಯರ್​ ಅಪ್ಪು! ಪುನೀತ್​ ರಾಜ್​ರನ್ನು ಹೋಲುವ ಯುವಕನ ಡೈಲಾಗ್​ಗೆ ಫ್ಯಾನ್ಸ್​ ಫಿದಾ

Published : Feb 13, 2025, 05:00 PM ISTUpdated : Feb 13, 2025, 05:21 PM IST
Junior Appu: ಇವರೇ ಜ್ಯೂನಿಯರ್​ ಅಪ್ಪು! ಪುನೀತ್​ ರಾಜ್​ರನ್ನು ಹೋಲುವ ಯುವಕನ ಡೈಲಾಗ್​ಗೆ ಫ್ಯಾನ್ಸ್​ ಫಿದಾ

ಸಾರಾಂಶ

ಪುನೀತ್ ರಾಜ್‍ಕುಮಾರ್ ಅವರನ್ನು ಹೋಲುವ ಹಲವು ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ. ಬೆಳಗಾವಿಯ ಯುವಕನೊಬ್ಬ ಅಪ್ಪುವಿನಂತೆ ವೇಷಭೂಷಣ, ಮಾತು, ಹಾವಭಾವಗಳನ್ನು ಅನುಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಿದ್ದಾನೆ. ಕುಂದಾಪುರದ ಬಾಲಕನೊಬ್ಬ ಕೂಡ ಬಾಲ್ಯದ ಅಪ್ಪುವನ್ನು ಹೋಲುತ್ತಿದ್ದು, ವಿಡಿಯೋ ವೈರಲ್ ಆಗಿತ್ತು.

ಜಗತ್ತಿನಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ. ಕೆಲವೊಮ್ಮೆ ಇದು ನಿಜ ಕೂಡ ಅನ್ನಿಸಿಬಿಡುತ್ತದೆ. ಯಾರನ್ನೋ ನೋಡಿದಾಗ ಅವರು, ಇವರು ಹೌದಾ, ಅಲ್ವಾ ಎಂದು ಎನ್ನಿಸುವುದು ಉಂಟು. ಇಂಥ ಹಲವು ಸನ್ನಿವೇಶಗಳು   ಎದುರಾಗುವುದು ಉಂಟು. ಇನ್ನು ಚಿತ್ರ ನಟರ ವಿಷಯಕ್ಕೆ ಬರುವುದಾದರೆ, ಕೆಲವರ ಮುಖಚಹರೆ ಕೆಲವು ಚಿತ್ರನಟರನ್ನು ಹೋಲುವುದು ಇದೆ. ಅಂಥ ಸಂದರ್ಭದಲ್ಲಿ ಆ ನಟ-ನಟಿಯರು ಚಿತ್ರ ತಾರೆಯರಂತೆ, ವೇಷ-ಭೂಷಣ, ಹಾವ-ಭಾವ, ಮಾತು, ಹೇರ್‍‌ಸ್ಟೈಲ್‌, ಅವರ ವಿಶೇಷ ಪೋಸ್‌ಗಳು... ಹೀಗೆ ಎಲ್ಲವನ್ನೂ ಅನುಕರಿಸಿ ಅವರಂತೆಯೇ ಕಾಣಿಸತೊಡಗುತ್ತಾರೆ. ಕೆಲವೊಮ್ಮೆ ಅಸಲಿ ನಕಲಿ ನಡುವೆ ಕನ್‌ಫ್ಯೂಸ್‌ ಆಗುವಷ್ಟರ ಮಟ್ಟಿಗೆ ಈ ನಕಲಿ ತಾರೆಗಳ ಹಾವ ಭಾವಗಳು ಇರುತ್ತವೆ. ಆದರೆ ಅವರು ಅದನ್ನು ಕೃತಕವಾಗಿ ಸೃಷ್ಟಿಸಿಕೊಂಡಿರುತ್ತಾರೆ.

ಕೆಲ ದಿನಗಳ ಹಿಂದೆ ಪುನೀತ್​ ರಾಜ್​ಕುಮಾರ್​ ಅವರನ್ನೇ ಹೋಲುವ ಬಾಲಕನೊಬ್ಬನ ವಿಡಿಯೋ ವೈರಲ್​ ಆಗಿತ್ತು. ಅದಾದ ಬಳಿಕ ಹಾವೇರಿಯ ಯುವಕನೊಬ್ಬ ರಿಯಾಲಿಟಿ ಷೋನಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ಬೆಳಗಾವಿಯ ಹುಡುಗ ಎನ್ನುವ ಹೆಸರು ಪಡೆದಿರುವ ಯುವಕನೊಬ್ಬ ಥೇಟ್​ ಪುನೀತ್​ ಅವರನ್ನೇ ಹೋಲುತ್ತಿದ್ದು, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅಸಂಖ್ಯ ಅಭಿಮಾನಿಗಳನ್ನು ಇದರ ಸಲುವಾಗಿಯೇ ಪಡೆದುಕೊಂಡಿದ್ದಾರೆ. ಪುನೀತ್​ ಅವರ ಸಿನಿಮಾಗಳ ಡೈಲಾಗ್​ಗಳನ್ನು ಅವರದ್ದೇ ಹಾವಭಾವದೊಂದಿಗೆ ಅಭಿನಯಿಸುತ್ತಾ, ಅಗಲಿದ ಅಪ್ಪುವನ್ನು ನೆನಪಿಸುತ್ತಿದ್ದಾರೆ ಇವರು. ಇದೀಗ ಇವರ ಒಂದು ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಕೂಡ ಅಪ್ಪು ಅವರ ಡೈಲಾಗ್​ ಅನ್ನು ಇವರು ಹೇಳಿದ್ದಾರೆ. ಇವರ ಇನ್​ಸ್ಟಾಗ್ರಾಮ್​ನಲ್ಲಿ ಕೂಡ ಅಪ್ಪು ಅವರ ಸಿನಿಮಾದ ಹಲವಾರು ವಿಡಿಯೋಗಳನ್ನು ನೋಡಬಹುದಾಗಿದೆ. 

ನೋಡಲು ಥೇಟ್‌ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್‌ ಟು ಸೇಮ್‌... ಅವನ ಮಾತು ಕೇಳಿ...

ಅಂದಹಾಗೆ ಕೆಲ ದಿನಗಳ ಹಿಂದೆ,  ಸೇಮ್‌ ಟು ಸೇಮ್ ಪುನೀತ್‌ ರಾಜ್‌ಕುಮಾರ್ ಅವರನ್ನೇ ಹೋಲುತ್ತಿ ಅಂದರೆ, ಬಾಲ್ಯದಲ್ಲಿ ಲೋಹಿತ್‌ ಹೆಸರಿನಲ್ಲಿ ಕೆಲವು ಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದ್ದ ಪುನೀತ್‌ ರಾಜ್‌ ಅವರನ್ನು ಹೋಲುತ್ತಿದ್ದ ಬಾಲಕೊಬ್ಬನ ವಿಡಿಯೋ ವೈರಲ್​ ಆಗಿತ್ತು. ಈತನ ಹೆಸರು ಕುಂದಾಪುರದ ರಟ್ಟಾಡಿಯ ಮಣಿಕಂಠ. ಇವನ ಹಾವ-ಭಾವ, ಇವನ ಸ್ಟೈಲು, ಅಷ್ಟೇ ಏಕೆ ಇವನ ಹಲ್ಲು ಮಾತ್ರವಲ್ಲದೇ ಇವನ ದನಿ ಕೂಡ ಬಾಲಕ ಅಪ್ಪುನಂತೇ ಇದೆ! ಅಭಿಷೇಕ್ ತೀರ್ಥಹಳ್ಳಿ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈತನ ವಿಡಿಯೋ ಶೇರ್‍‌ ಮಾಡಿದ್ದರು. ವನಗಿರಿ ರಂಗು ಎನ್ನುವ ಪ್ರಾಜೆಕ್ಟ್‌ ಮೇರೆಗೆ ರಡ್ಡಾಡಿ ಶಾಲೆಗೆ ಬಂದಿದ್ವಿ. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲೆಯನ್ನು ಕಲಿಸುವ ಕಾರ್ಯಕ್ರಮ ಇದು. ಇಲ್ಲಿ ಈ ಬಾಲಕ ಸಿಕ್ಕಿದ. ಇವನನ್ನು ನೋಡಿದಾಗ ಸೇಮ್‌ ಅಪ್ಪು ಸರ್‍‌ ನೋಡಿದ ಹಾಗೆ ಕಾಣಿಸಿದ. ಅದಕ್ಕಾಗಿ ಮಾತನಾಡಿಸಿದೆ ಎಂದು ಅಭಿಷೇಕ್‌ ಅವರು ಈವಿಡಿಯೋದಲ್ಲಿ ಹೇಳಿದ್ದರು. 

ಬಳಿಕ ಬಾಲಕನನ್ನು ಮಾತನಾಡಿಸಿದ್ದರು. ನೀನು ಸೇಮ್‌ ಅಪ್ಪು ಸರ್‍‌ ಥರ ಇದ್ಯಾ, ನಿನಗೆ ಯಾರೂ ಇದನ್ನು ಹೇಳಲಿಲ್ವಾ ಎಂದು ಕೇಳಿದಾಗ, ಬಾಲಕ ಗುಂಡಣ್ಣ ಹೇಳಿದ್ದ ಎಂದಿದ್ದ. ಕೊನೆಗೆ ನಿನಗೆ ದೊಡ್ಡವನಾದ ಮೇಲೆ ಏನು ಆಗಲು ಇಷ್ಟ ಎಂದು ಕೇಳಿದಾಗ, ಸರ್‍‌ ಆಗಬೇಕು ಎಂದು ಹೇಳಿದ್ದ. 
ಚಿನ್ನದ ವಿಷ್ಯದಲ್ಲಿ ಶಿವಣ್ಣ-ಅಪ್ಪು ಸೇರಿ ಜನರನ್ನು ಕನ್‌ಫ್ಯೂಸ್‌ ಮಾಡ್ತಿದ್ದಾರಾ? ಶಾಕಿಂಗ್‌ ಪ್ರಶ್ನೆಗೆ ನಟ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?