ಸಿನಿಮಾ ಆಡಿಷನ್‌ ಬಗ್ಗೆ ಅಣ್ಣಾವ್ರ ಮಾತೀಗ ವೈರಲ್, ಏರಿದ್ದ ಏಣಿ ಬಗ್ಗೆ ಡಾ ರಾಜ್‌ ಹೇಳಿದ್ದೇನು?

Published : Feb 13, 2025, 03:25 PM ISTUpdated : Feb 13, 2025, 03:53 PM IST
ಸಿನಿಮಾ ಆಡಿಷನ್‌ ಬಗ್ಗೆ ಅಣ್ಣಾವ್ರ ಮಾತೀಗ ವೈರಲ್, ಏರಿದ್ದ ಏಣಿ ಬಗ್ಗೆ ಡಾ ರಾಜ್‌ ಹೇಳಿದ್ದೇನು?

ಸಾರಾಂಶ

ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್, ತಮ್ಮ ೨೦೦ಕ್ಕೂ ಹೆಚ್ಚು ಚಿತ್ರಗಳ ವೃತ್ತಿಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಟನಾ ಪರೀಕ್ಷೆ, ನವರಸಗಳ ಅಭಿನಯ, ಕ್ಯಾಮೆರಾ ಮುಂದಿನ ಅನುಭವಗಳನ್ನು ವಿವರಿಸಿದ್ದಾರೆ. ಫಲಿತಾಂಶಕ್ಕಾಗಿ ಕಾಯುತ್ತಿದ್ದ ದಿನಗಳನ್ನು ಸ್ಮರಿಸಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡಾ ರಾಜ್‌ಕುಮಾರ್ (Dr Rajkumar) ಅವರನ್ನು ಕನ್ನಡದ ಮೇರು ನಟ, ಅಣ್ಣಾವ್ರು, ಕನ್ನಡದ ಆಸ್ತಿ ಅಂತೆಲ್ಲ ಕರೆಯವುದು ಗೊತ್ತೇ ಇದೆ. ಕಪ್ಪು-ಬಿಳುಪು ಚಿತ್ರದಿಂದ ಶುರು ಮಾಡಿ, ಕಲರ್‌ ಚಿತ್ರದಲ್ಲೂ ಮುಂದುವಎದರು, ಬರೋಬ್ಬರಿ 200 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಡಾ ರಾಜ್‌ಕುಮಾರ್. ಅವ್ರಿಗೆ ಪದ್ಮಭೂಷಣ ಸೇರಿದಂತೆ ಹಲವು ಸನ್ಮಾನಗಳು ಬಂದಿವೆ. ಹಾಡಿಗೆ ನ್ಯಾಷನಲ್ ಅವಾರ್ಡ್ ಕೂಡ ಪಡೆದಿದ್ದಾರೆ. ಇಂಥ ರಾಜ್‌ಕುಮಾರ್ ಅವರು ತಮ್ಮ ಹಳೆಯ ದಿನಗಳನ್ನು ನೆನೆದು ಮಾತನ್ನಾಡಿದ್ದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಹಾಗಿದ್ರೆ ಡಾ ರಾಜ್‌ಕುಮಾರ್ ಅವರು ಅದೇನು ಮಾತನ್ನಾಡಿದ್ದಾರೆ? ಇಲ್ಲಿದೆ ನೋಡಿ.. 'ನಮ್ ವೀರಣ್ನವ್ರು... ಅವ್ರು ನಮ್ ಸಂಸ್ಥೆಯಲ್ಲಿ ತಾನೇ ಇದ್ದಿದ್ದು ಅವ್ನು..? ಅಂತ ಹೇಳಿ ಅವ್ರಿಗೂ ಬಹಳ ಸಂತೋಷ ಆಯ್ತು.. ಸರಿ, ಕರ್ಕೊಂಡು ಹೋಗಿ ನಮ್ಗೆ ಟೆಸ್ಟ್‌ ಗಿಸ್ಟ್ ಎಲ್ಲಾ ಮಾಡಿ, ಸರಿಯಾಗಿ ಬಣ್ಣ ಗಿಣ್ಣ ಹಾಕಿ, ನಾಟಕದ ಕುಳಗಳು ಅಂತ ಗೊತ್ತಿದ್ಯಲ್ಲಾ.. ಸಿನಿಮಾದಲ್ಲಿ ನಿಗದಿ ಮಾಡಿರುವಂಥ ಸ್ಥಳ, ಅಷ್ಟರಲ್ಲೇ ಪ್ರತಿಯೊಂದನ್ನೂ ಅಭಿನಯ ಮಾಡಿ ತೋರಿಸ್ಬೇಕು.. 

ಬ್ಯೂಟಿ ಟ್ರೀಟ್ಮೆಂಟ್ ಪ್ರಶ್ನೆಗೆ ಕೋಪಗೊಂಡ್ರಾ ರಮ್ಯಾ? ಮತ್ತೆ ನಟಿಸೋ ಗುಟ್ಟು ಬಿಚ್ಚಿಟ್ಟ ಸ್ಯಾಂಡಲ್‌ವುಡ್ ಕ್ವೀನ್!

ನಾಟಕದಲ್ಲಿ ಕೈಯಿ ಗಿಯ್ಯಿ ಎಲ್ಲಾ ಬೀಸ್ಕೊಂಡು, ಬಾಯಿ ಗೀಯಿ ಎಲ್ಲಾ ಬಿಟ್ಕೊಂಡು, ಕಣ್ಣು ನಿಣ್ಣು ಎಲ್ಲಾ ದಪ್ಪನಾಗಿ ಅಗಲಿಸ್ಕೊಂಡು ಮಾತಾಡೋದು.. ಸರಿ, ನವರಸಗಳನ್ನು ತೋರಿಸ್ಬೇಕಂತೆ ಕ್ಯಾಮೆರಾ ಮುಂದೆ.. ಅದು ರನ್ ಆಗ್ತಾ ಇರುತ್ತೆ, ಫಿಲಂ ಓಡ್ತಾ ಇರುತ್ತೆ.. ನಾವು ಒಂದೊಂದನ್ನೂ ಮಾಡಿ ತೋರಸ್ಬೇಕಂತೆ.. ಆ ಥರ ಎಲ್ಲಾ ಮಾಡ್ಸಿ, ಏನೋ, ನಾನು ಅದ್ನೆಲ್ಲಾ ನೋಡ್ಲಿಲ್ಲ ಅಂತ ಇಟ್ಕೊಳ್ಳಿ..

ಆಮೇಲೆ ನಿಮ್ಗೆ ತಿಳಿಸ್ತೀವಿ ಒಂದ್ ಎಂಟು ದಿವಸದಲ್ಲಿ ಅಂದ್ರು.. ಎಂಟು ದಿನ ಏನು, ಹದಿನೈದು ದಿನ ಆಯ್ತು, ಆದ್ರೂ  ಏನೂ ಗೊತ್ತಾಗ್ಲಿಲ್ಲ.. ಆಮೇಲೆ ಹದಿನೈದು ದಿನ ಆದ್ಮೇಲೆ ಒಂದು ಪತ್ರ ಬಂತು.. ' ಎಂದಿದ್ದಾರೆ ಡಾ ರಾಜ್‌ಕುಮಾರ್. ಅವರು ಮಾತನ್ನಾಡುತ್ತಿದ್ದರೆ ಅದೇನೋ ಮುತ್ತು ಉದುರಿತು ಅಂತಾರಲ್ಲಾ, ಹಾಗೆ ಇದೆ. ಅಷ್ಟು ಚೆಂದವಾಗಿ, ಸ್ಪಷ್ಟವಾಗಿ ಮಾತನ್ನಾಡಿದ್ದಾರೆ ಡಾ ರಾಜ್‌ಕಲುಮಾರ್. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನೋಡಿ, ಆನಂದ ಅನುಭವಿಸಿ.. 

ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?