ಚಪ್ಪಲಿ ಕಣ್ಣಿಗೊತ್ತಿಕೊಂಡು ನಮಿಸಿದ ಡಾ.ರಾಜ್‌; ಚಂದ್ರಚೂಡ್ ಹೇಳಿದ ಕತೆ!

Suvarna News   | Asianet News
Published : May 18, 2021, 11:52 AM ISTUpdated : May 18, 2021, 12:26 PM IST
ಚಪ್ಪಲಿ ಕಣ್ಣಿಗೊತ್ತಿಕೊಂಡು ನಮಿಸಿದ ಡಾ.ರಾಜ್‌; ಚಂದ್ರಚೂಡ್ ಹೇಳಿದ ಕತೆ!

ಸಾರಾಂಶ

ವೀರಪ್ಪನ್ ಸೆರೆಯಲ್ಲಿದ್ದಾಗ ಅಣ್ಣಾವ್ರನ್ನು ಕಾಪಾಡಿದ ಶಕ್ತಿ ಯಾವುದು, ಎಂದು ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಖಾಸಗಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

108 ದಿನಗಳ ಕಾಲ ವೀರಪ್ಪನ್ ಸೆರೆಯಲ್ಲಿದ್ದ ವರನಟ ಡಾ.ರಾಜ್‌ಕುಮಾರ್ ಬಿಡುಗಡೆಯಾದ ನಂತರ ತಮ್ಮ ಬಹುತೇಕ ಸಮಯವನ್ನು ಕುಟುಂಬಸ್ಥರ ಜೊತೆ ಮನೆಯಲ್ಲಿಯೇ ಕಳೆಯುತ್ತಿದ್ದರು. ಈ ವೇಳೆ ತಮ್ಮ ಆಪ್ತ ಮಾಧ್ಯಮ ಮಿತ್ರರನ್ನು ಮನೆಗೆ ಕರೆಯಿಸಿ ಮಾತನಾಡಿಸುತ್ತಾರೆ. ಈ ವೇಳೆ ಯಾರಿಗೂ ಗೊತ್ತಿರದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಜ್‌ಕುಮಾರ್ ಅಪಹರಣದ ರೋಚಕ ಕಥೆ;ಅಂತೆ ಕಂತೆಗಳಿಗೆಲ್ಲಾ ತೆರೆ ಬೀಳಲಿದೆ! 

ಕೆಲವೊಂದು ಪತ್ರಕರ್ತ ಸ್ನೇಹಿತರ ಜೊತೆ ಚಕ್ರವರ್ತಿಯೂ ರಾಜ್‌ಕುಮಾರ್‌ ಅವರನ್ನು ಮಾತನಾಡಿಸಲು ಹೋಗುತ್ತಾರೆ. 'ನಿಮ್ಮನ್ನು ಇಷ್ಟು ದಿನ ಕಾಡಿನಲ್ಲಿ ಕಾಪಾಡಿದ ಶಕ್ತಿ ಯಾವುದು? ಕರ್ನಾಟಕ ಜನರ ಪ್ರೀತಿ, ಪಾರ್ವತಮ್ಮನವರ ಪೂಜೆ ಅಥವಾ ನಿಮ್ಮ ಮಕ್ಕಳ ಪ್ರೀತಿಯೋ?' ಎಂದು ಅಣ್ಣಾವ್ರಿಗೆ ಪ್ರಶ್ನೆ ಮಾಡಲಾಗಿತ್ತು.

ಅಣ್ಣಾವ್ರ ಕಿಡ್ನಾಪ್ ನಡೆದೇ ಇಲ್ವಾ? 

ಡಾ.ರಾಜ್‌ಕುಮಾರ್ ಕೊಟ್ಟ ಉತ್ತರ:

ಪ್ರಶ್ನೆಯನ್ನು ಸಂಪೂರ್ಣವಾಗಿ ಕೇಳಿಸಿಕೊಂಡ ರಾಜ್‌ಕುಮಾರ್ ಎದ್ದು ತಮ್ಮ ರೂಮಿನಿಂದ ಒಂದು ಕವರ್ ಹಿಡಿದುಕೊಂಡು ತಂದರು. ಅ ಕವರ್‌ನೊಳಗೆ ಹಳೆ ಜಪ್ಪಲ್ಲಿ ಇತ್ತು, ಅದನ್ನು ತೆಗೆದುಕೊಂಡು 'ನೀವು ಹೇಳಿದ ಎಲ್ಲಾ ಅಂಶಗಳ ಜೊತೆಗೆ ಈ ಚಪ್ಪಲಿಯೂ ನನ್ನನ್ನು ಕಾಪಾಡಿತ್ತು. ಇದು ವೀರಪ್ಪನ್ ಕೊಡಿಸಿದ್ದ ಚಪ್ಪಲಿ. ಕಾಡಿನಲ್ಲಿದ್ದ ಅಷ್ಟೂ ದಿನ ಇದು ನನ್ನನ್ನು ಕಾಪಾಡಿತು. ಇದಿಲ್ಲದೆ ಹೋಗಿದ್ದರೆ ಕಷ್ಟವಾಗುತ್ತಿತ್ತು. ಹಾಗಾಗಿ ಇದನ್ನು ಎತ್ತಿಟ್ಟುಕೊಂಡು ಬಂದಿದ್ದೇನೆ,' ಎಂದು ಚಪ್ಪಲಿಯನ್ನು ಕಣ್ಣಿಗೆ ಒತ್ತಿಕೊಂಡರು ಎಂದು ಚಕ್ರವರ್ತಿ ಚಂದ್ರಚೂಡ್‌ ವೆಬ್‌ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?