
1. ಕರ್ಣನ್: ಧನುಷನ್ ನಟನೆಯ ತಮಿಳು ಸಿನಿಮಾ. ಅಮೆಜಾನ್‌ನಲ್ಲಿ ತೆರೆಕಂಡಿದೆ. ಮಾರಿ ಸೆಲ್ವರಾಜ ನಿರ್ದೇಶನದ ಚಿತ್ರವಿದು. ಹಿಂದುಳಿದ ಹಳ್ಳಿಗೆ ಬಸ್ ಸೌಲಭ್ಯಕ್ಕಾಗಿ ನಡೆಯುವ ಹೋರಾಟದ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗುತ್ತದೆ. ಸದ್ಯ ಅತೀ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಸಿನಿಮಾ ಇದು.
ಸ್ಟಾರ್ ಸಿನಿಮಾಗಳು ಓಟಿಟಿಯಲ್ಲಿ ತೆರೆಕಾಣಲಿವೆಯೇ; 'ರಾಧೆ' ಬೆನ್ನಿಗೇ ಶುರುವಾಗಿದೆ ಲೆಕ್ಕಾಚಾರ
2. ಅಪರೇಷನ್ ಜಾವಾ: ಸೈಬರ್ ಕ್ರೈಮ್ ಕತೆಯ ಹಿನ್ನೆಲೆಯಲ್ಲಿ ಸಾಗುವ ಕ್ಲಾಸಿಕ್ ಕ್ರೈಮ್ ಕತೆ. ತರುಣ್ ಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಬಾಲು ವಿಘ್ನೇಶನ್, ಬಿನು ಪಾಪು, ಮಮಿತಾ ಬಿಜು ಮುಂತಾದವರು ನಟಿಸಿದ್ದಾರೆ. ಮಲಯಾಳಂನ ಈ ಚಿತ್ರವನ್ನು ಜೀ 5 ಓಟಿಟಿಯಲ್ಲಿ ನೋಡಬಹುದು.
3. ನಯಾಟ್ಟು: ಮಾರ್ಟಿನ್ ಪ್ರಕ್ಕಾಟ್ ನಿರ್ದೇಶನದ ಮಲಯಾಳಂ ಸಿನಿಮಾ. ನೆಟ್ ಪ್ಲಿಕ್‌ಸ್ನಲ್ಲಿ ಈ ಚಿತ್ರ ನೋಡಲು ಲಭ್ಯವಿದೆ. ಜೋಜು ಜಾರ್ಜ್, ಅನಿಲ್, ಜಾಫರ್ ಇದ್ದುಕಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿನ ಇನ್‌ಸೈಡ್ ಸ್ಟೋರಿಯನ್ನು ಅದ್ಬುತವಾಗಿ ತೆರೆ ಮೇಲೆ ತರಲಾಗಿದೆ. ಸ್ಕ್ರೀನ್ ಪ್ಲೇ ಹಾಗೂ ಕತೆಯ ಕಾರಣಕ್ಕೆ ಈ ಚಿತ್ರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
"
4. ಸಿನಿಮಾ ಬಂಡಿ: ನೆಟ್‌ಪ್ಲಿಕ್‌ಸ್ನಲ್ಲಿ ತೆರೆಕಂಡಿರುವ ತೆಲುಗಿನ ಈ ಚಿತ್ರವನ್ನು ಪ್ರವೀಣ್ ಕಂಡರೇಗುಲ ನಿರ್ದೇಶನ ಮಾಡಿದ್ದಾರೆ. ಇದು ತೆಲುಗು ಚಿತ್ರವಾದರೂ ನಟಿಸಿರುವ ಬಹುತೇಕರು ಕನ್ನಡಿಗರು. ಕರ್ನಾಟಕದ ಕೋಲಾರ ಜಿಲ್ಲೆಯ ತೆಲುಗು ಭಾಷೆಯನ್ನು ಬಳಸಿಕೊಂಡು ರೂಪಿಸಲಾಗಿದೆ. ಹಳ್ಳಿ ಹುಡುಗನೊಬ್ಬ ಸಿನಿಮಾ ನಿರ್ದೇಶಕನಾಗಬೇಕೆಂದು ಹೊರಟಾಗ ನಡೆಯುವ ಸನ್ನಿವೇಶಗಳೇ ಚಿತ್ರದ ಕತೆ. ಹಾಸ್ಯವೇ ಈ ಚಿತ್ರದ ಜೀವಾಳ. ತ್ರಿಶಾರ, ರಾಮ್ ಚರಣ್, ಉಮಾ ವೈಜಿ, ದಾವಣಿ, ವಿಕಾಸ್ ವಸಿಷ್ಠ ಮುಂತಾದವರು ನಟಿಸಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.