
ಟ್ವಿಟರ್ ನಲ್ಲಿ ರಾಜ್ಯಸರ್ಕಾರಕ್ಕೆ ಆಕ್ಷನ್- ಪ್ರಿನ್ಸ್ ಧ್ರುವ ಸರ್ಜಾ ಪ್ರಶ್ನೆ ಮಾಡಿದ್ದು 100% ಆಸನ ವ್ಯವಸ್ಥೆಗೆ ಅನುವು ಮಾಡಿಕೊಡದ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಧ್ವನಿ ಎತ್ತಿದ್ದಾರೆ.
"
ಟ್ವಿಟರ್ ನಲ್ಲಿ ಪ್ರಶ್ನೆ ಹಾಕಿರೋ ನಟ ಧ್ರುವ ಸರ್ಜಾ ಎಲ್ಲದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ಫುಲ್ ರಶ್..! ಮಾರ್ಕೆಟ್ ನಲ್ಲಿ ಗಿಜಿ ಗಿಜಿ..! ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಪ್ರೇಕ್ಷಕರು ಮೆಚ್ಚಿದ ರಾಮಾರ್ಜುನ: ಅನೀಶ್ ತೇಜೇಶ್ವರ್ ಹೇಳಿದ್ದಿಷ್ಟು
ಕೇಂದ್ರ ಸರ್ಕಾರ 100 ರಷ್ಟು ಸೀಟು ಬರ್ತಿಗೆ ಅವಕಾಶ ಕೊಟ್ಟಿದೆ. ಫೆ.19ಕ್ಕೆ ಪೊಗರು ಸಿನಿನಾ ರಿಲೀಸ್ ಹಿನ್ನಲೆ ಕನ್ನಡ ಹಾಗೂ ತೆಲುಗಿನಲ್ಲಿ ದೊಡ್ಡಮಟ್ಟದಲ್ಲೇ ಪೊಗರು ರಿಲೀಸ್ ಮಾಡುವ ಹಿನ್ನೆಲೆ ನಟ ಈ ರೀತಿ ಟ್ವೀಟ್ ಮಾಡಿದ್ದಾರೆ.
ಪೊಗರು ಚಿತ್ರತಂಡಕ್ಕೆ ಬೆಂಬಲ ಕೊಟ್ಟ ಕೆಜಿಎಫ್ ಟೀಂ ಧ್ರುವ ಸರ್ಜಾ ಟ್ವೀಟ್ ಗೆ ರೀ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದೆ. ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್ ರೀಟ್ವೀಟ್ ಮಾಡಿದ್ದಾರೆ.
ಥಿಯೇಟರುಗಳಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಧ್ರುವ ಸರ್ಜಾ ಜೊತೆಗೂಡಿದ ಮತ್ತೊಬ್ಬ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಚಿತ್ರರಂಗದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಮಾರ್ಕೆಟ್ ಓಪನ್ ಇದೆ, ದೇವಸ್ಥಾನಗಳು ಮುಕ್ತವಾಗಿವೆ. ಖಾಸಗಿ ಸಮಾರಂಭಗಳಿಗೆ ನಿರ್ಬಂಧ ಇಲ್ಲ. ಪ್ರವಾಸಿ ತಾಣಗಳಲ್ಲಿ ಯಾವುದೇ ರೂಲ್ಸ್ ಇಲ್ಲ. ಇಲ್ಲೆಲ್ಲೂ ಇಲ್ಲದ ರೂಲ್ಸ್ ಟಾಕೀಸ್‌ಗಳಿಗಷ್ಟೇ ಏಕೆ..? ಎಂದು ಪ್ರಶ್ನಿಸಿದ್ದಾರೆ.
ಎಲ್ಲರಿಗೂ 100% ಅವಕಾಶ ಕೊಟ್ಟಿರುವಾಗ ನಮಗೆ ಮಾತ್ರ 50% ಯಾಕೆ. ನಮಗೂ ಶೇಕಡ 100ರಷ್ಟು ಅವಕಾಶ ಬೇಕು . ಸರ್ಕಾರದ ಈ ನಿಲುವು ಬದಲಾಗಬೇಕು. ಚಿತ್ರರಂಗಕ್ಕಾಗಿ ನಾವೆಲ್ಲರೂ ಜೊತೆಯಲ್ಲಿದ್ದೇವೆ ಎಂದಿದ್ದಾರೆ ಶಿವರಾಜ್‌ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.