
ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ನಟ ದರ್ಶನ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಸುರಿಸಿದ್ದಾರೆ. ಸದ್ಯ ಕೊಲೆ ಕೇಸ್ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸುತ್ತಿರುವ ನಟ ದರ್ಶನ್ ಬಗ್ಗೆ ಹಿರಿಯನಟಿ ಗಿರಿಜಾ ಲೋಕೇಶ್ ದುಃಖ ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಈಗಿನ ಪರಿಸ್ಥಿತಿ ಹಾಗು ಮೊದಲಿನ ಸ್ಥಿತಿ ನೆನದು ಹಿರಿಯ ನಟಿ ಮಾತನಾಡಿದ್ದಾರೆ.
ಈ ಬಗ್ಗೆ 'ಅವನು ಕಷ್ಟ ಪಟ್ಟಿರೋದು ನೋಡಿದ್ರೆ ತುಂಬಾ ಸಂಕಟ ಆಗುತ್ತೆ. ನಟ ದರ್ಶನ್ ಈ ಪರಿಸ್ಥಿತಿಯಿಂದ ಬೇಗ ಆಚೆ ಬರಲಿ ಅಂತ ಹಾರೈಸ್ತಿನಿ' ಎಂದಿದ್ದಾರೆ. ಜೊತೆಗೆ, 'ಕಾನೂನಿನ ಚೌಕಟ್ಟಿನಲ್ಲಿ ಇದೇ ನಾವು ಎನು ಮಾತನಾಡೋದಕ್ಕೆ ಆಗಲ್ಲ. ತಪ್ಪು ಮಾಡಿಯೂ ಬಾ ಅಂತ ಹೇಳೋದಿಲ್ಲ, ತಪ್ಪು ಮಾಡಿದಾನೋ ಇಲ್ವೋ ಗೊತ್ತಿಲ್ಲ. ಯಾರಿಗೂ ನಾವು ತಪ್ಪು ಮಾಡಿಬಿಡಿ ಬಂದು ಬಿಡಿ ಅಂತ ಹೇಳೋಕೆ ಆಗಲ್ಲ.
ಸೃಜನ್ ಲೋಕೇಶ್ ಸಿನಿಮಾಗೆ ಚಂದನ್ ಶೆಟ್ಟಿ ಮ್ಯೂಸಿಕ್; ನೋಡಿ ಸ್ವಾಮಿ ನಾವಿರೋದು ಹೀಗೆ..!
ನಾನು ಕಂಡಂತೆ ಆ ಮಗು ದರ್ಶನ್ ಆ ತರ ಇಲ್ಲ . ಮುಗ್ಧ ಸ್ವಭಾವ, ಆತ ತಮ್ಮ ತಂದೆಗೇ ಹೆದರಿಕೊಳ್ತಿದ್ದ ಹುಡುಗ. ಎಲ್ಲಾ ದೇವರು ಮಾಡಿರೋದು, ಇದೆಲ್ಲಾ ಕನಸಾಗಿರಬಾರದಾ ಅಂತ ಅನ್ನಿಸುತ್ತೆ.. ಅವ್ರ ತಂದೆ ಸತ್ತಾಗ, ಅಕ್ಕನ ಮದುವೆ ಮಾಡಿದಾಗ ಹೇಗೆ ಎದುರಿಸಿದ ಅಂತ ನಾನು ನೋಡಿದೀನಿ.. ಚಿತ್ರರಂಗಕ್ಕೆ ಬಂದಾಗಲೂ ಅವನು ಯಾವ ರೀತಿ ಅವಮಾನಗಳನ್ನ ಫೇಸ್ ಮಾಡಿ ಬಂದಿದಾನೆ ಎಂಬುದೂ ಗೊತ್ತು.
ಈಗ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ನಟ ದರ್ಶನ್ ಆದಷ್ಟೂ ಬೇಗ ನಿರಪರಾಧಿ ಎಂದು ಸಾಬೀತಾಗಿ ಬರಲಿ ಅಂತ ದೇವ್ರಲ್ಲಿ ಪ್ರಾರ್ಥಿಸ್ತಿನಿ..' ಎಂದಿದ್ದಾರೆ ಹಿರಿಯ ನಟಿ ಗಿರಿಜಾ ಲೋಕೇಶ್. ಹಿರಿಯ ನಟ ಲೋಕೇಶ್, ಅವರ ಪತ್ನಿ ನಟಿ ಗಿರಿಜಾ ಲೋಕೇಶ್ ಕುಟುಂಬ ಹಾಗೂ ತೂಗುದೀಪ ಶ್ರೀನಿವಾಸ್ ಕುಟುಂಬದವರಿಗೂ ಸಾಕಷ್ಟು ಅತ್ಮೀಯತೆ ಇತ್ತು. ಈಗಲೂ ಕೂಡ ಎರಡು ಕುಟುಂಬಗಳ ಮಧ್ಯೆ ಆತ್ಮೀಯ ಸಂಬಂಧ ಇದೆ ಎನ್ನಲಾಗಿದೆ.
ಯಶ್-ಅಜಿತ್ ಜೋಡಿ ಫೋಟೋ ವೈರಲ್, ಇದ್ಯಾವುದು ಹೊಸ ಸಿನಿಮಾ? ತಲೆ ಕೆಡಿಸಿಕೊಂಡ ಫ್ಯಾನ್ಸ್!
ಗಿರಿಜಾ ಲೋಕೇಶ್ ಹಾಗು ಅವರ ಮಗ ನಟ ಸೃಜನ್ ಲೋಕೇಶ್ ಅವರಿಬ್ಬರೂ ಸ್ವಲ್ಪ ಸಮಯದ ಮೊದಲು ಒಳ್ಳೇ ಸ್ನೇಹಿತರಾಗಿದ್ದರು. ಅವರಿಬ್ಬರೂ ಸಾಕಷ್ಟು ವೇಳೆ ಜೊತೆಯಲ್ಲೇ ಇರುತ್ತಿದ್ದರು. ಇತ್ತೀಚೆಗಷ್ಟೇ ಅವರಿಬ್ಬರ ಮಧ್ಯೆ ಸಣ್ಣ ಭಿನ್ನಾಭಿಪ್ರಾಯ ಬಂದು ದೂರವಾಗಿದ್ದರು ಎನ್ನಲಾಗುತ್ತಿದೆ. ಆದರೆ, ಗಿರಿಜಾ ಲೋಕೇಶ್ ಅವರು ನಟ ದರ್ಶನ್ ಚಿಕ್ಕ ಮಗುವಾಗಿದ್ದಾಗಿನಿಂದಲೂ ನೋಡಿದವರು, ಎತ್ತಿ ಆಡಿಸಿದವರು. ಹೀಗಾಗಿ ಸಹಜವಾಗಿ ಅವರಿಗೆ ನೋವು ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.