'ಅಪ್ಪು' ಜೀವನಚರಿತ್ರೆಯಲ್ಲಿದೆ ಏಳು 'F': ಕುತೂಹಲದ ವಿಷಯ ರಿವೀಲ್​ ಮಾಡಿದ ಲೇಖಕ ಪ್ರಕೃತಿ ಬನವಾಸಿ

Published : Mar 19, 2025, 01:41 PM ISTUpdated : Mar 19, 2025, 02:39 PM IST
'ಅಪ್ಪು' ಜೀವನಚರಿತ್ರೆಯಲ್ಲಿದೆ ಏಳು 'F': ಕುತೂಹಲದ ವಿಷಯ ರಿವೀಲ್​ ಮಾಡಿದ ಲೇಖಕ ಪ್ರಕೃತಿ ಬನವಾಸಿ

ಸಾರಾಂಶ

ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬದಂದು, ಪತ್ನಿ ಅಶ್ವಿನಿ ಅವರು ಅಪ್ಪು ಜೀವನಚರಿತ್ರೆ ಪುಸ್ತಕ ಬಿಡುಗಡೆ ಮಾಡುವ ಬಗ್ಗೆ ತಿಳಿಸಿದ್ದಾರೆ. ಪ್ರಕೃತಿ ಬನವಾಸಿ ಬರೆದಿರುವ ಈ ಪುಸ್ತಕವನ್ನು ಅಶ್ವಿನಿ ಅವರೇ ಎಡಿಟ್ ಮಾಡಿದ್ದಾರೆ. ಪುಸ್ತಕದಲ್ಲಿ ಅಪ್ಪು ಅವರ ಜೀವನದ ಪ್ರಮುಖ ಘಟನೆಗಳು, ಆಸಕ್ತಿಗಳು, ಮತ್ತು ಅವರ ಒಡನಾಡಿಗಳ ಅಭಿಪ್ರಾಯಗಳಿವೆ. 144 ಪುಟಗಳಲ್ಲಿ, ಫ್ಯಾಮಿಲಿ, ಫಿಲ್ಮ್, ಫ್ರೆಂಡ್ಸ್, ಫುಡ್, ಫಿಟ್ನೆಸ್, ಫ್ಯಾನ್ಸ್ ವಿಷಯಗಳಿವೆ. 17 ಅಧ್ಯಾಯಗಳಲ್ಲಿ ಅಪ್ಪು ಅವರ ಜೀವನವನ್ನು ವಿವರಿಸಲಾಗಿದೆ.

ಮೊನ್ನೆ ಅಂದರೆ ಮಾರ್ಚ್​ 17ರಂದು ನಟ ಪುನೀತ್​ ರಾಜ್​ಕುಮಾರ್​ ಅವರ 50ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಪ್ಪು ಅವರ ಅಸಂಖ್ಯ ಅಭಿಮಾನಿಗಳಿಗೆ ಅವರ ಪತ್ನಿ ಅಶ್ವಿನಿ ಅವರು ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಅಪ್ಪು ಹೆಸರಿನಲ್ಲಿಯೇ ಅವರ ಜೀವನ ಚರಿತ್ರೆ ಪುಸ್ತಕ ಇಂಗ್ಲಿಷ್​ ಮತ್ತು ಕನ್ನಡದಲ್ಲಿ ಹೊರಬರಲಿದೆ ಎಂದಿದ್ದಾರೆ. ಇದಾಗಲೇ ಪುಸ್ತಕದ ಕವರ್​ ಪೇಜ್​ ಅನ್ನು ಕೂಡ ಅಶ್ವಿನಿ ಪುನೀತ್​ ಹಾಗೂ ಅವರ ಪುತ್ರಿಯರಾದ ವಂದಿತಾ ಮತ್ತು ಧೃತಿ ಅನಾವರಣಗೊಳಿಸಿದ್ದಾರೆ. ಈ ಪುಸ್ತಕದ ಸಂಪೂರ್ಣ ಎಡಿಟಿಂಗ್​ ಖುದ್ದು ಅಶ್ವಿನಿ ಅವರೇ  ಮಾಡುತ್ತಿದ್ದು, ಲೇಖಕ ಪ್ರಕೃತಿ ಬನವಾಸಿ ಅವರು ಜೀವನಚರಿತ್ರೆಯನ್ನು ಬರೆದಿದ್ದಾರೆ. ಎರಡು ವರ್ಷಗಳ ಶ್ರಮದ ಫಲವಾಗಿ ಶೀಘ್ರದಲ್ಲಿಯೇ ಇದು ಬಿಡುಗಡೆಯಾಗಲಿದೆ. ಈ ಬಗ್ಗೆ ಅಶ್ವಿನಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದಾರೆ. 

ಇದೀಗ ಮಾಧ್ಯಮವೊಂದಕ್ಕೆ ಈ ಪುಸ್ತಕ ಹಲವು ವಿಷಯಗಳ ಬಗ್ಗೆ ಲೇಖಕ  ಪ್ರಕೃತಿ ಬನವಾಸಿ ಮಾತನಾಡಿದ್ದಾರೆ. ಅಪ್ಪು ಅವರ ಜೀವನದ ಹಲವಾರು ವಿಷಯಗಳನ್ನು ಪುಸ್ತಕದಲ್ಲಿ ಅಳವಡಿಸಲಾಗಿದೆ. ಅದರ ಜೊತೆ, ಅವರ ಹಲವು ಫೋಟೋಗಳನ್ನು ಪ್ರಿಂಟ್​ ಮಾಡಲಾಗಿದೆ. ಪುನೀತ್​ ರಾಜ್​ ಅವರಿಗೆ ಅಡುಗೆ ಮಾಡುವುದು ಇಷ್ಟ. ಆ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಲಾಗಿದೆ. ಪುನೀತ್​ ಅವರ ಒಡನಾಟ ಇಟ್ಟುಕೊಂಡಿರುವ ಹಲವರ ಅಭಿಪ್ರಾಯಗಳನ್ನು ಇದರಲ್ಲಿ ಕೇಳಲಾಗಿದೆ ಎಂದಿದ್ದಾರೆ ಪ್ರಕೃತಿ ಬನವಾಸಿ.  ಇದರಲ್ಲಿ ಹಲವಾರು ಸೆಲೆಬ್ರಿಟಿಗಳನ್ನು ಮಾತನಾಡಿಸಿದ್ದೇವೆ. ಆದರೆ ಅವರನ್ನು ಸೆಲೆಬ್ರಿಟಿ ಪೇಜ್​ನಲ್ಲಿ ಹಾಕಲಿಲ್ಲ. ಏಕೆಂದರೆ ಇವರೆಲ್ಲರೂ ಅಪ್ಪು ಅವರ ಸ್ನೇಹಿತರು. ಆದ್ದರಿಂದ ಫ್ರೆಂಡ್ಸ್​ ಎಂದೇ ಅಂದುಕೊಂಡಿದ್ದೇವೆ. ಯಶ್​, ರಾಧಿಕಾ, ನಾಗಾರ್ಜುನ, ಪ್ರಭುದೇವ, ರಶ್ಮಿಕಾ ಮಂದಣ್ಣ, ರಮ್ಯಾ, ರಕ್ಷಿತಾ, ಪ್ರಿಯಾಮಣಿ ಸೇರಿದಂತೆ ಹಲವರ ಬಗ್ಗೆ ಹೃದಯ ಬಿಚ್ಚಿ ಮಾತನಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು ತಮ್ಮ ಪುಷ್ಪ ಚಿತ್ರದಲ್ಲಿ ಸಕತ್​ ಬಿಜಿಯಾಗಿದ್ದರೂ ಕರೆ ಮಾಡಿದಾಗ 30 ನಿಮಿಷ ಮಾತನಾಡಿದರು. ಅಷ್ಟರ ಮಟ್ಟಿಗೆ ಪುನೀತ್​ ರಾಜ್​ ಎಲ್ಲರಿಗೂ ಹತ್ತಿರವಾಗಿದ್ದರು ಎಂದಿದ್ದಾರೆ. 

ಅಪ್ಪಾಜಿ ಸಮಾಧಿ ಬಳಿ ಯಾರೋ ಇಟ್ಟಿದ್ದ ಊಟ ಮಾರನೆಯ ದಿನ ತಿಂದಿದ್ದ ಅಪ್ಪು: ಆ ದಿನ ಆಗಿದ್ದೇನು?

ಇದೇ ವೇಳೆ ಪುಸ್ತಕದಲ್ಲಿ 144 ಷೀಟ್​ (288 ಪುಟಗಳು) ಹಾಗೂ ಆರು ಎಫ್​ಗಳಿರುವ ಕುತೂಹಲದ ವಿಷಯವನ್ನೂ ಪ್ರಕೃತಿ ಬನವಾಸಿ ಅವರು ರಿವೀಲ್​ ಮಾಡಿದ್ದಾರೆ. ಪುನೀತ್​ ರಾಜ್​ ಅವರಿಗೆ 144 ನಂಬರ್​ ತುಂಬಾ ಇಷ್ಟ. ಅದಕ್ಕಾಗಿ, 144 ಶೀಟ್​ ಪುಸ್ತಕದಲ್ಲಿ ಇದೆ. ಅವರ ಕಾರಿನ ಸಂಖ್ಯೆ ಕೂಡ 144. ಇದೇ ವೇಳೆ ಆರು ಎಫ್​ ಎಂದರೆ ಫ್ಯಾಮಿಲಿ, ಫಿಲ್ಮ್​, ಫ್ರೆಂಡ್ಸ್​, ಫುಡ್​, ಫಿಟ್​ನೆಸ್​, ಫ್ಯಾನ್ಸ್ ಬಗ್ಗೆ ಈ ಪುಸ್ತಕದಲ್ಲಿ ವಿಭಾಗಗಳಿವೆ. ಫಿಲಾಸಿಫಿಯೂ ಇದೆ. ಇದನ್ನೂ ಬೇಕಿದ್ದರೆ ಎಫ್​ ಸಾಲಿಗೆ ಸೇರಿಸಿಕೊಳ್ಳಬಹುದು ಎಂದಿದ್ದಾರೆ. 

ಅವರ ಜೀವನ ಚರಿತ್ರೆಯನ್ನು 17 ಚಾಪ್ಟರ್​ಗಳಲ್ಲಿ ಬರೆಯಲಾಗಿದೆ. ಆದರೆ ಅಷ್ಟು ಸಾಕಾಗಲಿಲ್ಲ. ಇದರಲ್ಲಿಯೇ ಸಾಧ್ಯವಾಷ್ಟು ಮುಗಿಸುವ ಪ್ರಯತ್ನ ಮಾಡಿದ್ದೇವೆ. ಬರೆಯುತ್ತಾ ಹೋದರೆ ಇನ್ನೂ ಎಷ್ಟೋ ಚಾಪ್ಟರ್​ಗಳು ಬೇಕಾಗಿತ್ತು ಎಂದಿದ್ದಾರೆ ಪ್ರಕೃತಿ ಬನವಾಸಿ ಅವರು.  ಈ ಪುಸ್ತಕಕ್ಕೆ ಅಪ್ಪು ಎಂದೇ ಹೆಸರು ಇಡಲು ಕಾರಣವನ್ನೂ ತಿಳಿಸಿರುವ ಅವರು, ಪುನೀತ್​ ರಾಜ್​ ಅವರು ಸಿನಿಮಾಕ್ಕೆ ರೀ ಎಂಟ್ರಿ ಕೊಟ್ಟಾಗ, ಆ ಸಿನಿಮಾಗೆ ಏನು ಹೆಸರು ಇಡಬೇಕು ಎಂದು ಶಿವಣ್ಣ ಯೋಚಿಸಿದ್ದರು. ಸಾವಿರಾರು ಹೆಸರುಗಳು ಬಂದಿದ್ದವು. ಆದರೆ ಶಿವಣ್ಣ ಅವರು ಅಪ್ಪು ಎಂದು ಫೈನಲ್​ ಮಾಡಿದ್ದರು. ಅದಕ್ಕಾಗಿಯೇ ಈ ಹೆಸರು ಎಂದಿದ್ದಾರೆ.  ಈ ಪುಸ್ತಕಕ್ಕಾಗಿ ಅಭಿಮಾನಿಗಳು ಕಾದಿದ್ದು, ಶೀಘ್ರದಲ್ಲಿಯೇ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. 

ಅಪ್ಪು ಎಂದು ಗೊತ್ತಾಗ್ದೇ ರಪರಪ ಅಂತ ಲಾಠಿ ಏಟು ಕೊಟ್ರಂತ ಪೊಲೀಸ್ರು! ಆ ಘಟನೆ ವಿವರಿಸಿದ್ದ ಪುನೀತ್​ ರಾಜ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ