ಪುನೀತ್ ರಾಜ್‌ಕುಮಾರ್ ಗ್ರಾಂಡ್‌ ಹುಟ್ಟುಹಬ್ಬದ ಆಚರಣೆ: ಅದ್ರಿಂದ ಪ್ರೂವ್ ಆಗಿದ್ದೇನು?

Published : Mar 19, 2025, 01:07 PM ISTUpdated : Mar 19, 2025, 01:16 PM IST
ಪುನೀತ್ ರಾಜ್‌ಕುಮಾರ್ ಗ್ರಾಂಡ್‌ ಹುಟ್ಟುಹಬ್ಬದ ಆಚರಣೆ: ಅದ್ರಿಂದ ಪ್ರೂವ್ ಆಗಿದ್ದೇನು?

ಸಾರಾಂಶ

ಫ್ಯಾನ್ಸ್ ಖುಷಿಗೋಸ್ಕರ ಅವರ ನಟನೆಯ ಮೊಟ್ಟಮೊದಲ ಚಿತ್ರ 'ಅಪ್ಪು' ಬಿಡುಗಡೆ ಮಾಡಿ, ಅಲ್ಲೂ ಕೂಡ ಪುನೀತ್‌ರ 'ದರ್ಶನ' ಮಾಡಿಸಿದ್ದಾರೆ. ಇಲ್ಲಿ ಒಂದು ವಿಷಯವಂತೂ ಸ್ಪಷ್ಟ. ನಟರಾಗಲೀ ಅಭಿಮಾನಿಗಳಾಗಲೀ ಸಾವಂತೂ ನಿಶ್ಚಿತ. ಆದರೆ ಬದುಕಿದ್ದಾಗ ಹೇಗೆ, ಎಷ್ಟು.. ಮುಂದೆ ನೋಡಿ..

ಕರ್ನಾಟಕ ರತ್ನ, ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಹುಟ್ಟುಹಬ್ಬದ ಆಚರಣೆ ಮೊನ್ನೆ, ಅಂದ್ರೆ 17 ಮಾರ್ಚ್ 2025ರಂದು ಗ್ರಾಂಡ್‌ ಆಗಿ ಆಚರಣೆ ಆಗಿದ್ದು ಗೊತ್ತೇ ಇದೆ. ಡಾ ರಾಜ್‌ಕುಮಾರ್ ಇಡೀ ಕುಟುಂಬ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಬಂದು ಸಾಂಗವಾಗಿ ಪೂಜೆ ನೆರವೇರಿಸಿದೆ. ಜೊತೆಗೆ ಅಪ್ಪು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸಮಾಧಿಯ ಬಂದು ತಮ್ಮ ಮೆಚ್ಚಿನ ನಟನ ಆರಾಧನೆ, ಪೂಜೆ ಹಾಗೂ ನೆನಪು ಮಾಡಿದ್ದಾರೆ. ಬೆಂಗಳೂರು ಸೇರಿದಂತೆ, ಕರ್ನಾಟಕದ ಹಲವು ಕಡೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘ ತಿಂಡಿ, ಊಟ ಹಂಚಿ ಸಂಭ್ರಮಿಸಿದೆ. ಇದು ಬಹಳಷ್ಟು ಕಡೆ ನಡೆದಿದೆ. 

ಊಟ ಹಂಚಿದ್ದು, ಪೂಜೆ ಮಾಡಿದ್ದು, ಪುನೀತ್ ಅವರಿಗಿಂತ ಹಿರಿಯರೂ ಕೂಡ ಸಮಾಧಿ ಬಳಿ ಬಂದಾಗ ಅಲ್ಲಿ ಕೈ ಮುಗಿದಿದ್ದು ಎಲ್ಲವೂ ಅಭಿಮಾನದ ಜೊತೆ ಗೌರವ ಹಾಗೂ ಪ್ರೀತಿಯ ದ್ಯೋತಕ ಎನ್ನಬಹುದು. ಜೊತೆಗೆ, ಎಲ್ಲೂ ಲೋಪದೋಷಗಳಿಲ್ಲದೇ ಎಲ್ಲವನ್ನೂ ಸ್ವ ಇಚ್ಛೆಯಿಂದ ಮಾಡಿದ್ದಾರೆ ಪುನೀತ್ ಅಭಿಮಾನಿಗಳು. ಫ್ಯಾನ್ಸ್ ಖುಷಿಗೋಸ್ಕರ ಅವರ ನಟನೆಯ ಮೊಟ್ಟಮೊದಲ ಚಿತ್ರ 'ಅಪ್ಪು' ಬಿಡುಗಡೆ ಮಾಡಿ, ಅಲ್ಲೂ ಕೂಡ ಪುನೀತ್‌ರ 'ದರ್ಶನ' ಮಾಡಿಸಿದ್ದಾರೆ. 

ಪುನೀತ್‌ ರಾಜ್‌ಕುಮಾರ್‌ಗೆ ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು.. ಅದಕ್ಕೇ ಹಾಗೆ ಹೇಳಿದ್ರಾ..?

ಇಲ್ಲಿ ಒಂದು ವಿಷಯವಂತೂ ಸ್ಪಷ್ಟ. ನಟರಾಗಲೀ ಅಭಿಮಾನಿಗಳಾಗಲೀ ಸಾವಂತೂ ನಿಶ್ಚಿತ. ಆದರೆ ಬದುಕಿದ್ದಾಗ ಹೇಗೆ, ಎಷ್ಟು ಚೆನ್ನಾಗಿ ಬಹಳಷ್ಟು ಜನರಿಗೆ ಉಪಯೋಗವಾಗುವಂತೆ ಬದುಕಿ ಹೋಗಿದ್ದಾರೆ ಎಂಬುದನ್ನು ಇದು ನಿರೂಪಿಸುತ್ತದೆ. ಸಿನಿಮಾರಂಗದಲ್ಲಿದ್ದು, ಡಾ ರಾಜ್‌ಕುಮಾರ್ ಮಗನೂ ಆಗಿ ತಮ್ಮ ವೃತ್ತಿ ಜೊತೆಜೊತೆಗೆ ಸಾಮಾಜಿಕ ಸೇವೆಯ ಪ್ರವೃತ್ತಿಯನ್ನೂ ಕೂಡ ಬೆಳೆಸಿಕೊಂಡಿದ್ದು ಪುನೀತ್ ಅವರ ಹೆಚ್ಚುಗಾರಿಗೆ ಎನ್ನಬಹುದು. ತಮ್ಮ ಅಮ್ಮ ಪಾರ್ವತಮ್ಮ ಹಾಗೂ ಅಪ್ಪಾಜಿ ಡಾ ರಾಜ್‌ಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲಿ ಸ್ವಲ್ಪವೂ ಲೋಪವಾಗದಂತೆ ಬದುಕಿ ತೋರಿಸಿಬಿಟ್ಟರು ಅಪ್ಪು ಖ್ಯಾತಿಯ ಪುನೀತ್ ರಾಜ್‌ಕುಮಾರ್. 

ಇದ್ದಾಗ ಮಾಡಿರುವ ಘನಕಾರ್ಯಗಳು ಸತ್ತ ಮೇಲೆ ಕೂಡ ಹೇಗೆ ಫಲ ಕೊಡುತ್ತವೆ ಎಂಬುದನ್ನು ಪುನೀತ್ ಅವರ ಬದುಕು ಮತ್ತು ಸಾವಿನಿಂದ ಅರ್ಥ ಮಾಡಿಕೊಳ್ಳಬಹುದು. ಇದ್ದಾಗ ನಗುನಗುತ್ತ ಬದುಕಿ ಯಾರಿಗೂ ನೋವು ಕೊಡದೇ ಆದಷ್ಟೂ ಸರಳವಾಗಿ ಬದುಕಿ ಮಾದರಿ ಆದವರು ನಟ ಪುನೀತ್ ರಾಜ್‌ಕುಮಾರ್. ಅವರ ನಿಧನದ ಬಳಿಕ ಕರ್ನಾಟಕದ ತುಂಬಾ ಹರಿದ ಕಂಬನಿಯೇ ಇದಕ್ಕೆ ಸಾಕ್ಷಿ. ಯಾರನ್ನೂ ಯಾರಿಗೂ ಕಂಪೇರ್ ಮಾಡುವ ಅಗತ್ಯವಿಲ್ಲ. ಆದರೆ, ಅಪ್ಪಾಜಿ ಡಾ ರಾಜ್‌ಕುಮಾರ್ ಅವರಂತೆ ಕರ್ನಾಟಕ ರತ್ನವೇ ಆಗಿಬಿಟ್ಟರು ಅಪ್ಪು!

ದೂರದರ್ಶನ ಬಂದ್ಮೆಲೂ ಕನ್ನಡದ ಬಹಳಷ್ಟು ಸಿನಿಮಾಗಳು ಚೆನ್ನಾಗಿಯೇ ಓಡ್ತಿವೆ: ಡಾ ರಾಜ್‌ಕುಮಾರ್

ಒಟ್ಟಿನಲ್ಲಿ ಒಂದು ಮಾತಂತೂ ಸತ್ಯ.. ನಟ ಪುನೀತ್ ಅವರು ಇಹಲೋಕ ತ್ಯಜಿಸಿದ್ದರೂ ಅವರ ನೆನಪು ಅಜರಾಮರ ಎಂಬಂತೆ ಬದುಕುತ್ತಿದ್ದಾರೆ ಅಪ್ಪು ಫ್ಯಾನ್ಸ್. ಜೊತೆಗೆ, ಅವರು ಬದುಕಿದ್ದಾಗ ಮಾಡುತ್ತಿದ್ದ ಸಾಮಾಜಿಕ ಸೇವೆಯನ್ನು ಅವರ ಪತ್ನಿ ಅಶ್ವಿನಿ ಅವರು ಆದಷ್ಟೂ ಶ್ರದ್ರ್ಧೆಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಡಾ ರಾಜ್‌ಕುಮಾರ್ ಕುಟುಂಬ ಅಪ್ಪು ನೆನಪಿಂದ ಯಾವತ್ತೂ ಆಚೆ ಬರಲಾಗದು ಎಂಬುದನ್ನೂ ಪ್ರೂವ್ ಮಾಡಿದೆ ಎನ್ನಬಹುದು. ಅದೇ ಅಪ್ಪು ಸಾಧನೆ, ಪುನೀತ್ ಹಿರಿಮೆ ಎಂದು ಧಾರಾಳವಾಗಿ ಹೇಳಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್