ನನ್ನ ತುಟಿ ಮೇಲ್ಯಾಕೆ ಕಣ್ಣು? ನಿಜ ಹೇಳ್ತೇನೆ ಕೇಳಿ... 'ಯಜಮಾನ' ನಟಿ ತಾನ್ಯಾ ಗರಂ

Published : Sep 03, 2023, 05:24 PM IST
 ನನ್ನ ತುಟಿ ಮೇಲ್ಯಾಕೆ ಕಣ್ಣು? ನಿಜ ಹೇಳ್ತೇನೆ ಕೇಳಿ... 'ಯಜಮಾನ' ನಟಿ ತಾನ್ಯಾ ಗರಂ

ಸಾರಾಂಶ

ತುಟಿಯ ಬಗ್ಗೆ ಪದೇ ಪದೇ ಕೇಳುವ ಪ್ರಶ್ನೆಗೆ ಸಿಟ್ಟುಗೊಂಡಿದ್ದಾರೆ ನಟಿ ತಾನ್ಯ ಹೋಪ್​. ಅವರು ಹೇಳಿದ್ದೇನು?   

 ಸಿನಿಮಾದಲ್ಲಿ ಸೌಂದರ್ಯ ಬಹಳ ಮುಖ್ಯ. ಅದರಲ್ಲೂ ನಟಿಯರ ವಿಚಾರಕ್ಕೆ ಬಂದರೆ. ಇಂದು ಆ ಆಲೋಚನಾ ಕ್ರಮದಲ್ಲಿ ಕೆಲವು ಬದಲಾವಣೆಗಳಾಗಿವೆ. ಆದರೆ ಸಿನಿಮಾ ರಂಗಕ್ಕೆ ತಮ್ಮ ಸೌಂದರ್ಯವು ಸಾಕಾಗುವುದಿಲ್ಲ ಎಂದು ಭಾವಿಸಿ ಪ್ಲಾಸ್ಟಿಕ್ ಸರ್ಜರಿ (Plasti Surgery) ಮೂಲಕ ತಮ್ಮ ನೋಟವನ್ನು ಬದಲಾಯಿಸಿರುವ ಅದೆಷ್ಟೋ  ತಾರೆಗಳು ಇದ್ದಾರೆ. ಬಾಲಿವುಡ್​ನಿಂದ ಹಿಡಿದು ಎಲ್ಲಾ ವುಡ್​ಗಳಲ್ಲಿಯೂ  ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡ ತಾರೆಯರಿದ್ದಾರೆ. ಅದರಲ್ಲಿಯೂ ದೇಹದ ಭಾಗಕ್ಕೆ ಕತ್ತರಿ ಹಾಕಿಸಿಕೊಂಡಿರುವವರು ಅನೇಕರು ಇದ್ದಾರೆ. ತುಟಿ, ಮೂಗಿನೂ ಸರ್ಜರಿ ಬಿದ್ದಿವೆ. ಆದರೆ ಅನೇಕರು ಅದರ ಬಗ್ಗೆ ಮಾತನಾಡಲು ಸಿದ್ಧರಿಲ್ಲ. 

ಇದೀಗ ಇದರ ಬಗ್ಗೆ ಕನ್ನಡತಿ, ಬಹುಭಾಷಾ ನಟಿ ತಾನ್ಯಾ ಹೋಪ್​ (Tanya Hope) ಮಾತನಾಡಿದ್ದಾರೆ. ಅಂದಹಾಗೆ ತಾನ್ಯಾ, ಬೆಂಗಳೂರು ಮೂಲದವರು.  ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರಿಯಾಗಿ ಜನಿಸಿದ ತಾನ್ಯಾ ಬೆಂಗಳೂರಿನ ಸ್ಯಾಕ್ರೆಡ್ ಹಾರ್ಟ್ ಸ್ಕೂಲ್‌ನಲ್ಲಿ ವಿಧ್ಯಾಭ್ಯಾಸ ಮುಗಿಸಿದರು. ನಂತರ ಪದವಿಗಾಗಿ ಲಂಡನ್‌ನ `ವೆಸ್ಟ್‌ಮಿಂಸ್ಟರ್' ಯುನಿವರ್ಸಿಟಿ ಸೇರಿದರು. ಇಲ್ಲಿ `ಅಂತರಾಷ್ಟ್ರೀಯ ಸಂಬಂಧ'ಗಳ ವಿಷಯಗಳ ಮೇಲೆ ಪದವಿ ಮುಗಿಸಿದ್ದಾರೆ. ಆನಂತರ ಭಾರತಕ್ಕೆ ಹಿಂದುರಿಗಿದ ಇವರು ಪುಣೆಯ `ಟೈರಾ ಟ್ರೇನಿಂಗ್ ಸ್ಟುಡಿಯೋಸ್‌ನಲ್ಲಿ ಮಾಡೆಲಿಂಗ್ ತರಬೇತಿ ಪಡೆದರು. 2015 ರಲ್ಲಿ ಕೊಲ್ಕತ್ತಾದಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದದ್ದು ವಿಶೇಷ. 

KHUSHI: ಸಮಂತಾ- ವಿಜಯ ದೇವರಕೊಂಡ ಬೆಡ್​ರೂಮ್​ ರೊಮ್ಯಾನ್ಸ್​ ನೋಡಿ ಹುಬ್ಬೇರಿಸಿದ ಫ್ಯಾನ್ಸ್​!

ಕನ್ನಡ ಸೇರಿದಂತೆ  ತೆಲಗು ,ತಮಿಳು ಚಿತ್ರರಂಗದಲ್ಲಿಯೂ ಇವರು  ಸಕ್ರಿಯರಾಗಿದ್ದಾರೆ.  2016 ರಿಂದ ತೆಲಗು ಚಿತ್ರಗಳ ಮೂಲಕ ಸಿನಿಪಯಣ ಆರಂಭಿಸಿದ ಇವರು  ದರ್ಶನ್‌ರವರ `ಯಜಮಾನ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ  ಪ್ರವೇಶಿಸಿದವರು. 2019ರಲ್ಲಿ ಯಜಮಾನ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ತಾನ್ಯಾ ಹೋಪ್‌, ಅದಾದ ಬಳಿಕ ಉದ್ಘರ್ಷ, ಅಮರ್‌, ಖಾಕಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಕೈಯಲ್ಲಿ  ಉಪೇಂದ್ರ ಅವರ `ಹೋಮ್ ಮಿನಿಸ್ಟರ್', ಅಭಿಷೇಕ್ ಅಂಬರೀಶ್‌ ಅವರ `ಅಮರ್' ಮತ್ತು ಸುನೀಲ್ ಕುಮಾರ (Sunil Kumar) ದೇಸಾಯಿವರ `ಉದ್ಘರ್ಷ' ಚಿತ್ರಗಳೂ ಇವೆ.  ಸದ್ಯ ತಮಿಳಿನಲ್ಲಿ ಇವರು ಬಿಜಿಯಾಗಿದ್ದಾರೆ.  

ಸಂತಾನಂ (Santanam) ಚಿತ್ರದ ಪ್ರಮೋಷನ್​ ಸಂದರ್ಭದಲ್ಲಿ ನಟಿಗೆ ಅವರ ತುಟಿಯ ಕುರಿತಾಗಿ ಪ್ರಶ್ನೆಯೊಂದು ಎದುರಾಗಿದೆ. ಈ ಬಗ್ಗೆ ಸ್ವಲ್ಪ ನೋವಿನಿಂದಲೇ ಉತ್ತರಿಸಿದ್ದಾರೆ ತಾನ್ಯ. ಏಕೆಂದರೆ ಅವರು ತುಟಿಗಳು ದಪ್ಪದ್ದಾಗಿವೆ. ಅದರ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಸಾಮಾನ್ಯವಾಗಿ ನಟಿಯರು ಹಾಟ್​ ಎನಿಸಲು ಎದೆ ಮತ್ತು ತುಟಿ ಸರ್ಜರಿ ಮಾಡಿಸುವುದು ಸಾಮಾನ್ಯ. ಇದೇ ಕಾರಣಕ್ಕೆ ನೀವು ನಿಮ್ಮ ತುಟಿಗೆ ಸರ್ಜರಿ ಮಾಡಿಸಿದ್ದೀರಾ ಎಂಬ ಪ್ರಶ್ನೆಗಳೇ ತಾನ್ಯಾ ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ತಾನ್ಯಾ, ಇಂಥ ಪ್ರಶ್ನೆ ಪದೇ ಪದೇ ನಾನು ಎದುರಿಸುತ್ತಲೇ ಇದ್ದೇನೆ, ಕೆಲವೊಮ್ಮೆ ಇದರಿಂದ ಕೋಪವೂ ಬರುತ್ತದೆ ಎಂದಿದ್ದಾರೆ.   ನಿಮ್ಮ ತುಟಿಗಳು ಇಷ್ಟು ದೊಡ್ಡದಾಗಿದ್ದು ಹೇಗೆ? ನೀವು ನಿಮ್ಮ ತುಟಿಗೆ ಸರ್ಜರಿ ಮಾಡಿಸಿಕೊಂಡಿದ್ದೀರಾ? ಅಥವಾ ನೀವು ಯಾವುದಾದರೂ ಕಾಸ್ಮೆಟಿಕ್‌ ಬಳಸುತ್ತೀರಾ ಎಂದೆಲ್ಲಾ ಕೇಳುತ್ತಾರೆ. ಆದರೆ ನಿಜಕ್ಕೂ ನಾನು ಯಾವುದೇ ರೀತಿಯ ಆಪರೇಷನ್​ ಮಾಡಿಸಿಕೊಂಡಿಲ್ಲ. ನನ್ನ ತುಟಿಯ ಮೇಲೆ ಯಾಕೆ ಕಣ್ಣೋ ಗೊತ್ತಾಗ್ತಿಲ್ಲ. ನನ್ನ ತುಟಿಗಳೇ ಹೀಗೆ. ಹುಟ್ಟಿದಿಂದಲೂ ನನ್ನ ತುಟಿಗಳು ಇರುವುದೇ ಹೀಗಿವೆ. ಇದಕ್ಕಾಗಿ ನಾನು ವಿಶೇಷ ಶಸ್ತ್ರಚಿಕಿತ್ಸೆ ಅಥವಾ ಚುಚ್ಚುಮದ್ದಿನ ಮೊರೆಹೋಗಿಲ್ಲ ಎಂದಿದ್ದಾರೆ. 

ನಿಜವಾದ ಮುಸಲ್ಮಾನರು ಸುಳ್ಳು ಹೇಳಲ್ಲ, ಡ್ರಾಮಾ ಮಾಡಲ್ಲ: ನಟಿ ಶೆರ್ಲಿನ್​ ಚೋಪ್ರಾ ಹೇಳಿದ್ದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?