'ಬದುಕು ಅಲೆಗಳಂತೆ ಅಪ್ಪಳಿಸುತ್ತದೆ, ಅವನ್ನ ನಿಭಾಯಿಸೋದ ಕಲೀಬೇಕು'

By Suvarna News  |  First Published Sep 2, 2023, 4:25 PM IST

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅಭಿನಯನದ ಸಪ್ತ ಸಾಗರದಾಚೆ ಎಲ್ಲೋ ಸಾಹಿತ್ಯ ಪ್ರಿಯರಿಗೆ ಹುಚ್ಚು ಹಿಡಿಸುವಂತೆ ಮಾಡಿರುವ ಚಿತ್ರ. ಬದುಕು, ಪ್ರೀತಿಯ ಕಥೆ ಹೇಳುವ ಈ ಚಿತ್ರದ ಬಗ್ಗೆ ವಿನಯ್ ಶಿವಮೊಗ್ಗ ಹೇಳಿದ್ದಿಷ್ಟು.


- ವಿನಯ್ ಶಿವಮೊಗ್ಗ

ಅವಳಿಗೋ…ಪಾಲಿಗೆ ಬಂದ ಜೀವನವನ್ನು ಪದರ ಪದರವಾಗಿ ಕಟ್ಟಿಕೊಳ್ಳುವ ಸಹನೆ. ಅವನಿಗೆ ಸಿಕ್ಕ ಜೀವನವನ್ನು ಇಡಿಯಾಗಿ ನುಂಗುವ ಧಾವಂತ… ಅವಳಿಗೆ ನಿಧಾನದ ಸಂತೋಷಯ. ಅವನಿಗೆ ವೇಗದ ಆವೇಗ… ನೆಲದಲ್ಲಿ ಕಾಲೂರಿದ ಬದುಕು ಅವಳದ್ದು. ಆಕಾಶಕ್ಕೆ ಮುಖ ಮಾಡಿ ಹಾರಾಡುವ ಮನಸ್ಸು ಅವನದು. ಅವಳದು ವಾಸ್ತವದ ಎಚ್ಚರ. ಅವನದು ಕನಸಿನ ಗೋಪುರ. ಆದರೂ ಇಬ್ಬರ ಮಧ್ಯೆ ಬಿಡಿಸಲಾಗದಷ್ಟು ಬಲಿಷ್ಠವಾದ ಪ್ರೀತಿ-ಭರವಸೆಯ ಸೂತ್ರ! 

Latest Videos

undefined

ಕಾಲ ತಂದಿಟ್ಟ  ವೈಪರೀತ್ಯಗಳ ದಾಳಿಯಲ್ಲಿ ಒಂದಿಷ್ಟು ತಾಳ್ಮೆಯ ಪರೀಕ್ಷೆ. ಉತ್ಕಟ ಪ್ರೀತಿಯ ಜೊತೆ ಜೊತೆಗೆ ಬಂದ ಹತಾಶೆ, ನೋವಿನ ಬಳುವಳಿ. ಇದು ಕಣ್ಣಿಗೆ ಕಾಣುವ ಸಪ್ತ ಸಾಗರವಲ್ಲ. ಅದರಾಚೆಗಿನ ಸುಪ್ತಸಾಗರದ ನೀರವ ಮೌನದ ಮಾತುಕತೆ!  ಮನಸ್ಸಿನ ಸಮುದ್ರದಲ್ಲಿ ಹೊಯ್ದಾಡುವ ಅಲೆಗಳ ಮೂಕ ಮರ್ಮರ! ಕನ್ನಡದ ಮಟ್ಟಿಗೆ ಇದು ಅತಿ ವಿಭಿನ್ನ ಪ್ರಯೋಗ. Rap-jazz ಶಬ್ದದ  ಹೃದಯ ಬಡಿತ ಹೆಚ್ಚಿಸುವ ಈ ಕಾಲದಲ್ಲಿ ವಿಸ್ತಾರ ರಾಗಾಲಾಪದ ವಿಳಂಬಿತ ಲಯದ ಸಂಗೀತ ಕಛೇರಿಯಲ್ಲಿ ಕೂತ ಅನುಭವ!

ಪ್ರತಿಯೊಬ್ಬ ಪ್ರೇಮಿಯೂ ವಿಚಾರಾಣಿದೀನ ಕೈದಿಯೇ
 
ಈ ಚಿತ್ರ ನೋಡಲು ಒಂದು ಮಾನಸಿಕ ಸಿದ್ಧತೆ ಬೇಕು. ಮನಸ್ಸಿನ ಭಿತ್ತಿಯಲ್ಲಿ ಪೂರ್ವಾಗ್ರಹದ ಕಲೆ ಇರದಂತೆ ನೋಡಿಕೊಂಡರೆ ಈ ಚಿತ್ರ ಕನ್ನಡ ಚಿತ್ರ ಪ್ರಪಂಚದಲ್ಲಿ ಮೂಡಿಬಂದ ಅಪರೂಪದ ದೃಶ್ಯಕಾವ್ಯ. ಕವಿ ಮನಸ್ಸಿನ ನಿರ್ದೇಶಕ ಮಾತ್ರ ಇಂತಹ ಕೃತಿಯನ್ನು ರಚಿಸಲು ಸಾಧ್ಯ! ಈ ಚಿತ್ರ ನಿರ್ಮಾಣದ ಮಾಧ್ಯಮವನ್ನು ನಿರ್ದೇಶಕ ಹೇಮಂತ್  ಅದೆಷ್ಟು  ಪ್ರೀತಿಸುತ್ತಾರೆ ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ.
 
ರುಕ್ಮಿಣಿ ವಂಸತ್ ! ವಾವ್!!!  ಇಷ್ಟು ದಿವಸ ಎಲ್ಲಿದ್ರಪ್ಪ ಈಕೆ?  ಹಾಗೆ ನೋಡಿದ್ರೆ ಈ 'ಅಭಿನಯ' ಮತ್ತು 'ಸಹಜತೆ'  ಪದಗಳು  ಸಾಮಾನ್ಯವಾಗಿ ವಿರುದ್ಧಾರ್ಥಕ. ಕೆಲವೇ ಕೆಲವು ಕಲಾವಿದರು ಈ ಎರಡೂ ಪದಗಳಿಗೆ ಒಂದೇ ಅರ್ಥ ಕೊಡಬಲ್ಲರು. ರುಕ್ಮಿಣಿ ವಂಸತ್  is just fantabulous.ನಮ್ಮ ರಕ್ಷತ್ ಶೆಟ್ರು  ಬಗ್ಗೆ ಏನ್ ಹೇಳೋದು? ಕನ್ನಡ ಚಿತ್ರ ಪ್ರೇಮಿಗಳನ್ನು Hero worshiping cult cultureನಿಂದ ಹೊರ ತಂದ ಕಲಾವಿದ. His passion and intensity ಪ್ರತಿ ನಿಮಿಷವೂ ಎದ್ದು ಕಾಣತ್ತೆ.

ಪ್ರೇಮಿಗಳ ಮನಸ್ಸು ಗೆದ್ದ 'ಸಪ್ತ ಸಾಗರದಾಚೆ ಎಲ್ಲೋ': ರಕ್ಷಿತ್-ರುಕ್ಮಿಣಿ ಲವ್ ಸ್ಟೋರಿ ಬೆಸ್ಟ್ ಎಂದ ಪ್ರೇಕ್ಷಕ..!

ಸಂಗೀತ ಹೇಗೆ ಎಲ್ಲವನ್ನೂ ತೂಗಿಸಿಕೊಂಡು ಹೋಗಬಲ್ಲದು ಎನ್ನುವುದಕ್ಕೆ ಈ ಚಿತ್ರದ background score ಒಂದು best example. ಚರಣ್ ರಾಜ್  ಪ್ರಸಕ್ತ ಕನ್ನಡ ಚಿತ್ರರಂಗದ very talented and versatile music director ಅನ್ನೋದ್ರಲ್ಲಿ ಅನುಮಾನವಿಲ್ಲ.  ರಾತ್ರಿ ಸಿನಿಮಾ ನೋಡಿ ಮನೆಗೆ ಬಂದಾಗ ತುಂಬಾ ಲೇಟಾಗಿತ್ತು . ಬೆಳಗ್ಗೆ  ಎದ್ದಾಗಲೂ ಸಮುದ್ರದ ಅಲೆಯ ಭೋರ್ಗರೆತ ಕಿವಿಯಲ್ಲಿ ರಿಂಗಣಿಸುತ್ತಿತ್ತು . 
#ಸಪ್ತ_ಸಾಗರದಾಚೆ_ಎಲ್ಲೋ 

click me!