Puneeth Rajkumar: 'ಗಂಧದ ಗುಡಿ'ಯ ಹಿಂದೆಂದೂ ಕಾಣದ ಸಿನಿಮಾ ಅನುಭವದ ಬಗ್ಗೆ ಅಶ್ವಿನಿ ಟ್ವೀಟ್

Suvarna News   | Asianet News
Published : Dec 05, 2021, 06:24 PM ISTUpdated : Dec 10, 2021, 02:46 PM IST
Puneeth Rajkumar: 'ಗಂಧದ ಗುಡಿ'ಯ ಹಿಂದೆಂದೂ ಕಾಣದ ಸಿನಿಮಾ ಅನುಭವದ ಬಗ್ಗೆ ಅಶ್ವಿನಿ ಟ್ವೀಟ್

ಸಾರಾಂಶ

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' ಡಾಕ್ಯುಮೆಂಟರಿಯ ಟೈಟಲ್ ಟೀಸರ್ ಬಿಡುಗಡೆಯ ಬಗ್ಗೆ ದಿನಾಂಕ ನಿಗದಿಯಾಗಿದೆ. ಡಿ.6ರಂದು ಇದರ ಟೈಟಲ್ ಟೀಸರ್ ಬಿಡುಗಡೆಯಾಗಲಿದೆ. ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ (Puneeth Rajkumar)  ಅವರ ಡ್ರೀಮ್ ಪಾಜೆಕ್ಟ್ 'ಗಂಧದ ಗುಡಿ' (Gandhada Gudi) ಡಾಕ್ಯುಮೆಂಟರಿಯ ಟೈಟಲ್ ಟೀಸರ್ ಬಿಡುಗಡೆಯ ಬಗ್ಗೆ ದಿನಾಂಕ ನಿಗದಿಯಾಗಿದೆ. ಡಿ.6ರಂದು ಇದರ ಟೈಟಲ್ ಟೀಸರ್ ಬಿಡುಗಡೆಯಾಗಲಿದೆ. ಇದೀಗ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ಮತ್ತಷ್ಟು ಮಾಹಿತಿ ನೀಡಿದ್ದು, ಡಿಸೆಂಬರ್ 6ರಂದು ಬೆಳಗ್ಗೆ 10 ಗಂಟೆಗೆ 'ಪಿಆರ್‌ಕೆ ಆಡಿಯೋ'ದ (PRK Audio) ಯುಟ್ಯೂಬ್ ಚಾನೆಲ್‌ನಲ್ಲಿ ಟೈಟಲ್ ಟೀಸರ್ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವಿಟರ್‌ನಲ್ಲಿ (Twitter) ಪೋಸ್ಟ್ ಮಾಡಿರುವ ಅಶ್ವಿನಿ, 'ಹಿಂದೆಂದೂ ಕಾಣದ ಸಿನಿಮಾ ಅನುಭವ! ನಿಮ್ಮ ಮುಂದೆ ನಾಳೆ ಪಿಆರ್‌ಕೆ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ' ಎಂದು ಬರೆದುಕೊಂಡು ಪುನೀತ್ ಇರುವ ಪೋಸ್ಟರ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ 'ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ'ದ ಟೀಸರ್ ಡಿಸೆಂಬರ್​ 6ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಮಾಡಿ ದಟ್ಟ ಕಾಡಿನ ಮಧ್ಯೆ ಪುನೀತ್ ಬೆನ್ನ ಹಿಂದೆ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವ ಪೋಸ್ಟರ್‌ನ್ನು ಹಂಚಿಕೊಂಡಿದ್ದರು.

Puneeth Rajkumar: ಅಪ್ಪು ಕನಸಿನ 'ಗಂಧದ ಗುಡಿ'​ ಟೀಸರ್ ಬಿಡುಗಡೆಗೆ ಸಿಎಂಗೆ ಆಹ್ವಾನ ನೀಡಿದ ಶಿವಣ್ಣ

ನಿನ್ನೆಯಷ್ಟೇ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸಕ್ಕೆ ಶಿವರಾಜ್​ ಕುಮಾರ್ (Shiva Rajkumar) ಪತ್ನಿ ಗೀತಾ ಅವರೊಂದಿಗೆ ತೆರಳಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು (Basavaraj Bommai)  ಅವರನ್ನು ಭೇಟಿಯಾಗಿ ಗಂಧದ ಗುಡಿ' ಸಾಕ್ಷ್ಯ ಚಿತ್ರದ ಟೀಸರ್ ಟೈಟಲ್​ ಬಿಡುಗಡೆಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. 'ವೈಲ್ಡ್​ ಕರ್ನಾಟಕ' ಡಾಕ್ಯುಮೆಂಟರಿ (Wild Karnataka Documentary) ಮಾಡಿದ್ದ ಅಮೋಘ ವರ್ಷ ಜತೆ ಸೇರಿ ಪುನೀತ್​ ಕರುನಾಡ (Karnataka) ಬಗ್ಗೆ ಡಾಕ್ಯುಮೆಂಟರಿ ಒಂದನ್ನು ಸಿದ್ಧಪಡಿಸಿದ್ದರು. 



ರಾಜ್ಯದ ನಾನಾ ಕಡೆಗಳಲ್ಲಿ ಭೇಟಿ ನೀಡಿ ಶೂಟ್​ ಮಾಡಲಾಗಿತ್ತು. ಇದಕ್ಕೆ 'ಗಂಧದಗುಡಿ' ಎಂದು ಹೆಸರಿಡಲಾಗಿದೆ. ಪುನೀತ್​ ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರ ಟೀಸರ್​ ನವೆಂಬರ್ 1ರಂದು ರಿಲೀಸ್​ ಆಗಬೇಕಿತ್ತು. ನವೆಂಬರ್​ 1 ಕನ್ನಡ ರಾಜ್ಯೋತ್ಸವ (Kannada Rajyotsava). ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್​ ಮಾಡಬೇಕು ಎಂದು ಪುನೀತ್​ ಕನಸು ಕಂಡಿದ್ದರು. ಆದರೆ, ಕನಸು ನನಸಾಗುವ ಮೊದಲೇ ಅಕ್ಟೋಬರ್​ 29ರಂದು ಪುನೀತ್​ ನಿಧನ ಹೊಂದಿದ್ದರು. ಮುಖ್ಯವಾಗಿ ನಾಗರಹೊಳೆ, ಕಾಳಿನದಿ, ಹೊಸಪೇಟೆ ಸೇರಿದಂತೆ ಕರ್ನಾಟಕದ ಹಲವು ಜಾಗಗಳಲ್ಲಿ ಸುತ್ತಿ 'ಗಂಧದ ಗುಡಿ' ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆಸಲಾಗಿದೆ. 

Puneeth Rajkumar: ಅಪ್ಪು ಡ್ರೀಮ್ ಪಾಜೆಕ್ಟ್ ಟೈಟಲ್​ ಟೀಸರ್ ಬಿಡುಗಡೆ ದಿನಾಂಕ ಘೋಷಿಸಿದ ಅಶ್ವಿನಿ

ಪುನೀತ್ ನಿಧನ ಹೊಂದುವ ಮೊದಲು, 'ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ' ಎಂದು ಪೋಸ್ಟ್ ಮಾಡಿದ್ದರು. ಇನ್ನು ಅಪ್ಪು ಕನಸನ್ನು ನನಸು ಮಾಡುವ ಕುರಿತು ಕೆಲ ದಿನಗಳ ಹಿಂದಷ್ಟೇ ಟ್ವೀಟ್‌ (Tweet) ಮಾಡಿದ್ದ ಅಶ್ವಿನಿ, 'ಅಪ್ಪು ಅವರ ಕನಸೊಂದು ನವೆಂಬರ್‌ 1ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪ ವಿರಾಮವಷ್ಟೆ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ' ಎಂದು ಬರೆದುಕೊಂಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್