
‘ಅತ್ತಿಬೆಲೆಯ ಆಚೆಗಿನ ಗಡಿ ಭಾಗದ ಪ್ರದೇಶಗಳಲ್ಲಿ ಕಂಡುಬರುವ ವಿಶಿಷ್ಟ ಜೀವನಶೈಲಿ ಮತ್ತು ಅಲ್ಲಿ ನಾನು ಕಂಡ ನೈಜ ಪಾತ್ರಗಳನ್ನು ಆಧರಿಸಿ ಈ ಕಥೆ ಹೆಣೆದಿದ್ದೇನೆ. ಹತ್ತು ವರ್ಷಗಳ ಹಿಂದೆ ನಾನು ಓಡಾಡುತ್ತಿದ್ದ ಜಾಗದ ನೆನಪುಗಳು ಈ ಕಥೆಯನ್ನು ಬರೆಯಲು ಪ್ರೇರಣೆ ನೀಡಿತು.’
- ಹೀಗೆ ತಮ್ಮ ‘ಬಾರ್ಡರ್ ಡೈರೀಸ್’ ಚಿತ್ರದ ಕುರಿತು ಮಾತನಾಡಿದ್ದು ನಿರ್ದೇಶಕ ಎಎಸ್‌ಜಿ. ಇವರ ನಿಜವಾದ ಹೆಸರು ಶಶಿಕುಮಾರ್. ‘ಇದು ಕೇವಲ ಕರ್ನಾಟಕದ ಹುಡುಗ, ತಮಿಳುನಾಡಿನ ಹುಡುಗಿಯ ಪ್ರೇಮಕಥೆ ಮಾತ್ರವಲ್ಲ. ಅತ್ತಿಬೆಲೆಯ ಆಚೆಗಿನ ಗಡಿ ಭಾಗದ ಕತೆ. ಚಿತ್ರದ ನಾಯಕಿ ಆ ಜಾಗಕ್ಕೆ ಬಂದ ನಂತರ ಅಲ್ಲಿನ ಪ್ರಪಂಚ ಹೇಗೆ ತೆರೆದುಕೊಳ್ಳುತ್ತದೆ ಎಂಬುದೇ ಚಿತ್ರದ ಮೂಲ ತಿರುಳು. ಮೇಲ್ನೋಟಕ್ಕೆ ಇದೊಂದು ಪ್ರೇಮ ಕಥೆಯಂತೆ ಕಂಡರೂ, ಒಳಗೆ ತೀವ್ರವಾದ ಡ್ರಾಮಾ, ಕ್ರೈಮ್ ಹಾಗೂ ಸಾಮಾಜಿಕ ವಾಸ್ತವತೆಗಳ ಸಂಕೀರ್ಣತೆ ಇದೆ’ ಎಂದರು.
ಈ ಚಿತ್ರದ ‘ಯಾರೋ ನೀನು ಯಾರೋ ನೀನು’ ಎಂಬ ಸುಮಧುರ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ, ಎಎಸ್‌ಜಿ ಸಾಹಿತ್ಯವಿದೆ. ಸಿದ್ಧಾರ್ಥ ಬೆಳ್ಮಣ್ಣು ಹಾಗೂ ಶ್ರೀಲಕ್ಷ್ಮಿ ಬೆಳ್ಮಣ್ಣು ಹಾಡಿದ್ದಾರೆ. ಕವಿರಾಜ್ ಹಾಡು ಬಿಡುಗಡೆ ಮಾಡಿದರು. ಅಂಜನ್ ನಾಗೇಂದ್ರ, ಅಶ್ವಿತಾ ಹೆಗ್ಡೆ ಜೋಡಿ. ಗೋಪಾಲಕೃಷ್ಣ ದೇಶಪಾಂಡೆ, ಶಿವರಾಜ್ ಕೆ.ಆರ್. ಪೇಟೆ ಚಿತ್ರದ ಮುಖ್ಯ ಪಾತ್ರಧಾರಿಗಳು. ಹೊಯ್ಸಳ ಚಿತ್ರದ ನಿರ್ಮಾಪಕರು.
ಹೆಗ್ಗಣ ಮುದ್ದು: ಪೂರ್ಣಚಂದ್ರ ಮೈಸೂರು ಹಾಗೂ ಅದಿತಿ ಸಾಗರ್ ಜೋಡಿಯಾಗಿ ನಟಿಸಿರುವ ಚಿತ್ರವಿದು. ಡಾಲಿ ಪಿಚ್ಚರ್ಸ್ ನಿರ್ಮಾಣದ ಈ ಚಿತ್ರವನ್ನು ಅವಿನಾಶ್ ಬಲೆಕ್ಕಳ ನಿರ್ದೇಶಿದ್ದಾರೆ. ಇದು ಹೊಸದಾಗಿ ಮದುವೆ ಆದ ದಂಪತಿ ಸಂಬಂಧಗಳ ಸುತ್ತ ಹೆಣೆಯಲಾದ ಕೌಟುಂಬಿಕ ಡ್ರಾಮಾ ಹಾಗೂ ಥ್ರಿಲ್ಲರ್ ಜಾನರ್ ಕತೆಯನ್ನು ಒಳಗೊಂಡ ಸಿನಿಮಾ. ಕಾರ್ತಿಕ್ ಚೆನ್ನೂಜಿ ರಾವ್ ಹಾಗೂ ರೋಣದ ಬಕ್ಕೇಶ್ ಸಂಗೀತ, ನಚಿಕೇತ್ ಬಲೆಕ್ಕಳ ಛಾಯಾಗ್ರಹಣವಿದೆ.
ರುದ್ರಾಭಿಷೇಕಂ: ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸಿರುವ ಚಿತ್ರ. ವೀರಗಾಸೆ ಕಲಾ ಪ್ರಕಾರ ಪಾಲಿಸಿಕೊಂಡು ಬಂದಿರುವ ಕುಟುಂಬ ಹಾಗೂ ವೀರಭದ್ರ ದೇವರ ಇತಿಹಾಸವನ್ನು ಒಳಗೊಂಡ ಸಿನಿಮಾ ಇದು. ವಸಂತ್ ಕುಮಾರ್ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್ ನಾಯಕಿ. ಮಂಜುನಾಥ ಕೆ.ಎನ್ ಮತ್ತು ಅವರ ಸ್ನೇಹಿತರು ಸೇರಿ ನಿರ್ಮಿಸಿದ್ದಾರೆ. ಬಲ ರಾಜವಾಡಿ, ವಿ. ಮನೋಹರ್, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.