ಮೊನ್ನೆ ಮೊನ್ನೆ ಡ್ರಗ್ ಕೇಸ್‌ನಲ್ಲಿ ವಿಚಾರಣೆಗೊಳಪಟ್ಟು ಅತ್ತು ಕರೆದಿದ್ದ ಅನುಶ್ರೀ ಇದೀಗ ಯಾರನ್ನೋ ಮುದ್ದಿಸುವಾಗ ಕ್ಯಾಮರ ಕಣ್ಣಿಗೆ ಬಿದ್ದಿದ್ದಾರೆ! ಆಕೆಯ ಜೊತೆಗಿದ್ದವರು ಯಾರು?
ಹಿಂದೆಲ್ಲ ಆ್ಯಂಕರ್ ಅನುಶ್ರೀ ಅಂದರೆ ಅರುಳು ಹುರಿದಂಥಾ ಸೊಗಸಾದ ಮಾತು, ಮುಖದಿಂದ ಎಂದೂ ಮಾಯವಾಗದ ಚೆಂದದ ನಗುವೇ ನೆನಪಾಗುತ್ತಿತ್ತು. ಫ್ಯಾಶನೇಬಲ್ ಉಡುಗೆಗಳು, ಮಸ್ತ್ ಅನ್ನಬಹುದಾದ ಡ್ಯಾನ್ಸ್, ಸುಂದರಿ ಅಂತ ಖಚಿತವಾಗಿ ಹೇಳುವಷ್ಟು ಸೌಂದರ್ಯ. ಎಲ್ಲವೂ ಸೇರಿ ಅನುಶ್ರೀ ಅಂದ್ರೆ ಹಳ್ಳಿಮಂದಿಯೂ ಪಕ್ಕದ್ಮನೆ ಹುಡುಗಿಯೇನೋ ಅಂತ ಭಾವಿಸ್ತಿದ್ರು.
ಅದಕ್ಕೆ ಸರಿಯಾಗಿ ಈ ಅನುಶ್ರೀ ಎಷ್ಟೇ ಹೆಸರು, ಪ್ರಸಿದ್ಧಿ ಬಂದರೂ ಜನರನ್ನು ಅಷ್ಟೇ ಪ್ರೀತಿಯಿಂದ ಮಾತಾಡಿಸುತ್ತಾ, ಶೋಗಳಲ್ಲಿ ಯಾರಾದರೂ ನೋವಿನಿಂದ ಇದ್ದರೆ ತಾನೂ ಕಣ್ತುಂಬಿ ಕೊಳ್ಳುತ್ತಿದ್ದರು. ಅದು ಸಹ ಸ್ಕ್ರಿಪ್ಟೆಡ್ ಆಗಿರಬಹುದು. ಆದರೆ ಜನ ಅದನ್ನೂ ಅನುಶ್ರೀ ಎಂದೇ ಭಾವಿಸುತ್ತಾರೆ. ಇನ್ನೂ ಹೇಳ್ಬೇಕು ಅಂದರೆ ಕನ್ನಡದಲ್ಲಿ ಇಂಥಾ ಪ್ರತಿಭಾವಂತೆ, ಸುಂದರಿ, ಸಂವೇದನಾಶೀಲ ಆಂಕರ್ ಇನ್ನೊಬ್ಬರಿಲ್ಲ ಅನ್ನೋ ಲೆವೆಲ್‌ಗೆ ಹೈಪ್ ಪಡೆದಿದ್ರು ಅನುಶ್ರೀ.
ಅನುಶ್ರೀ ವಿಚಾರದಲ್ಲಿ ಕೇಳಿ ಬಂದ ಶುಗರ್ ಡ್ಯಾಡಿ ಇವರೇ ನಾ? ...
ಆದರೆ ಯಾವಾಗ ಡ್ರಗ್ಸ್ ಕೇಸ್ ನಲ್ಲಿ ಅವರ ಹೆಸರು ಕೇಳಿ ಬರಲು ಶುರುವಾಯ್ತೋ ಆವಾಗಿಂದ ಜನ ಅವರನ್ನು ನೋಡೋ ರೀತಿನೇ ಬದಲಾಗಿದೆ. ಶುರುವಲ್ಲಿ ಅವರ ಹೆಸರು ಬಂದ ತಕ್ಷಣ ಜನ ಇರಲಿಕ್ಕಿಲ್ಲ, ಅನುಶ್ರೀ ಅಂಥಾ ಹೆಣ್ಮಗಳಲ್ಲ ಅಂತಲೇ ಭಾವಿಸಿದ್ರು. ಆದರೆ ಯಾವಾಗ ಈಕೆ ಕುಂಬಳಕಾಯಿ ಕಳ್ಳನ ಥರ ಹೆಗಲು ಮುಟ್ಟಿ ನೋಡ್ಕೊಳ್ಳೋ ಥರ ಆಡೋದಕ್ಕೆ ಶುರು ಮಾಡಿದ್ರೋ ಆಗ ಸೂಕ್ಷ್ಮ ಇದ್ದವರಿಗೆ ಅನುಮಾನ ಬರಲಾರಂಭಿಸಿತು
ಈಕೆ ಸಿಕ್ಕ ಸಿಕ್ಕ ದೇವಸ್ಥಾನಗಳಿಗೆಲ್ಲ ಟೆಂಪಲ್ ರನ್ ಆರಂಭಿಸಿದ್ದೇ ಜನರ ಡೌಟ್ ಬಲವಾಯ್ತು. ಅಷ್ಟರಲ್ಲೇ ಯಾರೋ ಈಕೆಯಿಂದ ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಕಾಲ್ ಹೋಗಿದೆ. ಈಕೆ ಅವರ ಮೂಲಕ ಈ ಕೇಸ್ ನಿಂದ ಬಚಾವ್ ಆಗೋದಕ್ಕೆ ಟ್ರೈ ಮಾಡ್ತಿದಾಳೆ ಅಂದರು, ಆ ಸುದ್ದಿ ವೈರಲ್ ಆಯ್ತು. ಇದಕ್ಕೆ ಕುಮಾರ ಸ್ವಾಮಿ ಅವರು ಗುಡುಗಿದ್ದೂ ಆಯ್ತು. ಅತ್ತ ಸಂಬರಗಿ ಅನುಶ್ರೀಗೆ ಶುಗರ್ ಡ್ಯಾಡಿ ಸಪೋರ್ಟ್ ಇದೆ ಅಂದುಬಿಟ್ರು.
ನಟಿ ಅನುಶ್ರೀ ವಿಚಾರಣೆ ನಡೆಸಿದ್ದ ಎಸ್‌ಐ ಮತ್ತೆ ವರ್ಗ ...
ಅನುಶ್ರೀ ಇನ್ನೇನು ಅರೆಸ್ಟ್ ಆಗಿಯೇ ಬಿಟ್ತಾರೆ ಅನ್ನೋಷ್ಟರಲ್ಲಿ ಅಲ್ಲೇನೋ ಜಾದೂ ನಡೆಯಿತು. ಆಕೆಯ ವಿಚಾರಣೆ ನಿಂತುಹೋಯ್ತು. ಆಮೇಲೆ ಈಕೆಯನ್ನು ವಿಚಾರಣೆ ಮಾಡಿದ ಅಧಿಕಾರಿಯ ಎತ್ತಂಗಡಿಯೂ ಆಯ್ತು. ಅಲ್ಲಿಗೆ ಅನುಶ್ರೀಗಿರುವ ಪ್ರಭಾವ ಎಂಥಾದ್ದು ಅನ್ನೋದು ಜನರಿಗೆ ಮನದಟ್ಟಾಗ್ತಾ ಬಂತು. ತಾವು ಸ್ಕ್ರೀನ್‌ನಲ್ಲಿ ನೋಡಿದ ಅಮಾಯಕ, ಸುಂದರ ನಗುವಿನ ನಿರೂಪಕಿ ಅಂದುಕೊಂಡ ಹಾಗಲ್ಲ ಅಂತ ಜನ ತಿಳ್ಕೊಂಡ್ರು. ಇದೇ ಟೈಮ್‌ನಲ್ಲಿ ಈಕೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಅತ್ತು ಕರೆದು ಗೋಳು ತೋಡಿಕೊಂಡರು.
ಜನ ಏನು ನಂಬೋದು, ಏನು ಬಿಡೋದು ಅಂತ ಕನ್ ಫ್ಯೂಶನ್‌ನಲ್ಲಿ ಬಿದ್ರು. ಈಗ ಅನುಶ್ರೀ ಸಖತ್ ಬೇಜಾರಲ್ಲಿ ಇದ್ದ ಹಾಗೆ ಕಾಣುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಅವರು ಕಾಣಿಸಿಕೊಳ್ಳೋದು ಕಡಿಮೆ ಆಗಿದೆ. ಆದರೆ ಈ ನಡುವೆ ಯಾರನ್ನೋ ಮುದ್ದಿಸುವಾಗ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈಕೆ ಯಾರನ್ನು ಮುದ್ದು ಮಾಡುತ್ತಿರಬಹುದು, ಈಕೆಯ ಪ್ರೇಮಿ ಯಾರಿರಬಹುದು, ಅನುಶ್ರೀ ಯಾರ ಜೊತೆಗಾದ್ರೂ ರಿಲೇಶನ್ ಶಿಪ್‌ನಲ್ಲಿದ್ದಾರಾ ಅನ್ನೋ ಥರದ ಅನುಮಾನಗಳು ಬರುವುದು ಸಹಜ.
ಪ್ರಭಾವಿಗಳ ಒತ್ತಡದ ಬೆನ್ನಲ್ಲೇ ಅನುಶ್ರೀ ವಿಚಾರಣೆ ಕ್ಲೋಸ್? ...
ಆದರೆ ಅನುಶ್ರೀ ಮುದ್ದಾಡುತ್ತಿದ್ದದ್ದು ಅವರ ಪ್ರೀತಿಯ ನಾಯಿಯನ್ನು! ನಾಯಿಗೆ ಕಿಸ್ ಮಾಡುತ್ತಾ, ಅದನ್ನು ಮುದ್ದಿಸ್ತಾ, ಪ್ರೀತಿಯಿಂದ ಮಾತಾಡಿಸುತ್ತಿರೋ ಫೋಟೋವನ್ನು ಅವರು ಇನ್ ಸ್ಟಾ ಗ್ರಾಂನಲ್ಲಿ ಹಾಕಿದ್ದಾರೆ. ಜೊತೆಗೆ ಈ ಮನುಷ್ಯರಿಗಿಂತ ಪ್ರಾಣಿಗಳು ಎಷ್ಟೋ ಮೇಲು ಅನ್ನೋ ಸ್ಟೇಟ್ ಮೆಂಟೂ ಇದೆ. ಅಲ್ಲಿಗೆ ಈ ಹುಡುಗಿಗೆ ಆಘಾತವಾಗಿದೆ, ಪ್ರಾಣಿಗಳೇ ಬೆಸ್ಟ್ ಅಂತ ಅನಿಸಲಾರಂಭಿಸಿದೆ ಅನ್ನೋದು ಪಕ್ಕಾ ಆಯ್ತು.