8 ವರ್ಷಗಳ ವೈವಾಹಿಕ ಜೀವನ ಆಚರಿಸಿಕೊಳ್ಳಲು ಸಜ್ಜಾಗಿರುವ ಅನು- ರಘು...ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.
ನಟಿ ಅನು ಪ್ರಭಾಕರ್ ಮತ್ತು ನಟ ರಘು ಮುಖರ್ಜಿ ತಮ್ಮ ಬಾಲ್ಯವನ್ನು ಮಲ್ಲೇಶ್ವರಂನಲ್ಲಿ ಅತಿ ಹೆಚ್ಚಾಗಿ ಕಳೆದಿದ್ದಾರೆ. ಕಿರುತೆರೆಯ ಜನಪ್ರಿಯ ಟಿವಿ ಕಾರ್ಯಕ್ರಮವೊಂದಕ್ಕೆ ಇಬ್ಬರು ವಿಶೇಷ ಅತಿಥಿಗಳಾಗಿ ಆಗಮಿಸಿದ ನಂತರ ಪರಿಚಯವಾಗಿದೆ. 'ಇಬ್ಬರು ಟಿವಿ ಶೋವೊಂದರ ಜಡ್ಜ್ ಆಗಿದ್ವಿ. ಆ ಸಮಯಲ್ಲಿ ನಾವು ಮೊದಲು ಭೇಟಿ ಮಾಡಿದ್ದು. ಚಿತ್ರೀಕರಣದಲ್ಲಿ ತುಂಬಾ ಖುಷಿಯಾಗಿ ಎಂಜಾಯ್ ಮಾಡುತ್ತಿದ್ದೆವು...ಶೋ ಮುಗಿದ ಮೇಲೂ ಸಂಪರ್ಕದಲ್ಲಿ ಇರುವುದಾಗಿ ಪ್ರಾಮಿಸ್ ಮಾಡಿದ್ವಿ. ಆದರೆ ಮಾತು ಕೊಟ್ಟಹಾಗಿ ಉಳಿಯಲಿಲ್ಲ. ಹಲವು ವರ್ಷಗಳ ನಂತರ ನಾವು ಭೇಟಿ ಮಾಡಿದ್ದೆ ಅದಾದ ಮೇಲೆ ಮದುವೆ ಮಾಡಿಕೊಂಡೆವು' ಎಂದು ಅನು ಪ್ರಭಾಕರ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನ್ನ ತಾಯಿ ಮದುವೆ ಮಾಡಿಕೊಳ್ಳಲು ಸಲಹೆ ಕೊಟ್ಟಿದ್ದರು ಆದರೆ ಮದುವೆ ಬೇಡ ಎಂದು ತೀರ್ಮಾನ ಮಾಡಿದ್ದೆ' ಎಂದು ರಘು ಮುಖರ್ಜಿ ಹೇಳಿದ್ದಾರೆ. ತಕ್ಷಣವೇ ಅನು 'ದಿನದಿಂದ ದಿನಕ್ಕೆ ನಮ್ಮಿಬ್ಬರ ಕುಟುಂಬ ಹತ್ತಿರವಾಗುತ್ತಿತ್ತು' ಎಂದು ಅನು ಹೇಳಿದ್ದಾರೆ. 'ಮಾರ್ಚ್ 2016ರಲ್ಲಿ ಒಂದು ದಿನ ಅನುಗೆ ಕರೆ ಮಾಡಿ ನನ್ನನ್ನು ಮದುವೆ ಮಾಡಿಕೊಳ್ಳುತ್ತೀರಾ ಎಂದು ಕೇಳಿದೆ' ಎಂದಿದ್ದಾರೆ ರಘು. ಅದೇ ವರ್ಷ ಏಪ್ರಿಲ್ 25ರಂದು ಇಬ್ಬರು ಮದುವೆ ಮಾಡಿಕೊಂಡಿದ್ದಾರೆ.
ಹಣ ಇಲ್ಲದೆ ಜೀವನ ನಡೆಯೋಲ್ಲ; ಚಿಕ್ಕ ವಯಸ್ಸಿಗೆ ಪಾಠ ಕಲಿತ ನಟಿ ಅನು ಪ್ರಭಾಕರ್
'ಅನು ಮತ್ತು ನಾನು ಒಳ್ಳೆಯ ಸ್ನೇಹಿತರು. ಒಬ್ಬರನೊಬ್ಬರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀವಿ. ಯಾವ ವಿಚಾರದಲ್ಲಿ ದೂರ ಇರಬೇಕು ಯಾವಾಗ ಇಬ್ಬರಿಗೂ ಸ್ಪೇಸ್ ಕೊಡಬೇಕು ಎಂದು ಅರ್ಥ ಮಾಡಿಕೊಂಡಿದ್ದೀವಿ. ನಮ್ಮ ಸಂಬಂಧದಲ್ಲಿ ಗೌರವ ತುಂಬಾ ಮುಖ್ಯವಾಗುತ್ತದೆ. ನಾವಿಬ್ಬರು ಒಟ್ಟಿಗೆ ಸಂಸಾರ ಕಟ್ಟಿ ಬೆಳೆಯುತ್ತಿದ್ಧಂತೆ ನಮ್ಮ ಸಂಬಂಧ ಎಷ್ಟು ಬದಲಾಗುತ್ತಿದೆ ಎಂದು ಅರ್ಥವಾಗುತ್ತದೆ. ಟೀನೇಜರ್ ಆಗಿರುವ ಪ್ರೀತಿ ಅಂದ್ರೆ ಏನೋ ಅಂದುಕೊಂಡ್ವಿ ಆದರೆ ಈಗ ಅನಿಸುತ್ತದೆ ಪ್ರೀತಿ ಅನ್ನೋದು ತುಂಬಾ ಮೆಚ್ಯೂರ್ ವಿಚಾರ. ಪ್ರೀತಿ ಅನ್ನೋ ಪದಕ್ಕೆ ಒಂದು ಅರ್ಥವಿಲ್ಲ. ಅದಕ್ಕೆ ನೂರಾರು ಅರ್ಥಗಳು ಇದೆ' ಎಂದು ರಘು ಮುಖರ್ಜಿ ಹೇಳಿದ್ದಾರೆ.
ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದು ನಿಜವೇ?; ರೋಚಕ ಕಥೆ ಬಿಚ್ಚಿಟ್ಟ ನಟಿ
'ಮೊದಲ ಇಂಪ್ರೆಶನ್ ಕೆಟ್ಟದಾಗಿಯೂ ಇರಬಹುದು. ನಾವು ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುವಾಗ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ವಿ ಆದರೆ ರಘು ಮಾತ್ರ ಒಂಟಿಯಾಗಿರುತ್ತಿದ್ದರು, ನಾವು ಕರೆದರೂ ಬರುತ್ತಿರಲಿಲ್ಲ. ಆಗ ರಘುಗೆ ದುರಹಂಕಾರ ಜಾಸ್ತಿ ಅಂದುಕೊಂಡೆ ಆನಂತರ ತಿಳಿಯಿತ್ತು ಅದು ನಾಚಿಕೆ ಸ್ವಭಾವ ಎಂದು' ಎಂದಿದ್ದಾರೆ ಅನು.