ನಟ ವಿಷ್ಣುವರ್ಧನ್ ಅವರ ಜೊತೆಗಿನ ಒಡನಾಟ, ಅವರ ಗುಣಗಳ ಕುರಿತು ನಟಿ ಅನು ಪ್ರಭಾಕರ್ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದ್ದೇನು?
ವಿಷ್ಣುವರ್ಧನ್ ಎಂದಾಕ್ಷಣ ಅವರ ಇತ್ತೀಚಿನ ವೇಷಭೂಷಣಗಳೇ ಸಾಮಾನ್ಯವಾಗಿ ನೆನಪಿಗೆ ಬರುತ್ತದೆ. ತಲೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದ ರೀತಿ, ಕೊರಳಿನಲ್ಲಿ ಸರಗಳು... ಇಂಥ ನೋಟದಿಂದಲೇ ಅವರು ಎಲ್ಲರ ಹೃದಯವನ್ನು ಆಳಿದವರು. ಇವರ ಜೊತೆ ಕೆಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿರುವ ನಟಿ ಅನು ಪ್ರಭಾಕರ್ ವಿಷ್ಣು ಸರ್ ಜತೆಗಿನ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ರ್ಯಾಪಿಡ್ ರಶ್ಮಿ ಅವರು ನಡೆಸಿಕೊಡುವ ಷೋನಲ್ಲಿ ವಿಷ್ಣುವರ್ಧನ್ ಜೊತೆಗಿನ ತಮ್ಮ ಮತ್ತು ಅಮ್ಮ ಗಾಯತ್ರಿ ಪ್ರಭಾಕರ್ ಅವರ ಜೊತೆಗಿನ ಒಡನಾಟದ ಕುರಿತು ಮಾತನಾಡಿದ್ದಾರೆ. ವಿಷ್ಣು ಸರ್ ವಿಷಯವನ್ನು ಹೇಳುವುದಾದರೆ ಒಂದು ದಿನ ಸಾಕಾಗಲ್ಲ ಎನ್ನುತ್ತಲೇ ಅವರ ಗುಣಗಾನ ಮಾಡಿದ್ದಾರೆ ಅನು ಪ್ರಭಾಕರ್.
ಸೂರಪ್ಪ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಆಗಿ ನಟಿಸುವಂತೆ ನನ್ನನ್ನು ಕೇಳಿಕೊಳ್ಳಲಾಗಿತ್ತು. ಆ ಚಿತ್ರದಲ್ಲಿ ವಿಷ್ಣು ಸರ್ ಎದುರು ಎಂದಾಗ ನಾನು ದಂಗಾಗಿ ಹೋದೆ. ಆದರೆ ಅಮ್ಮ ನೀನು ಮಾಡು ಎಂದು ಹೇಳಿದರು. ಆಗೆಲ್ಲಾ ಎಲ್ಲಾ ಡಿಸಿಷನ್ ಅಮ್ಮನೇ ತೆಗೆದುಕೊಳ್ಳುತ್ತಿದ್ದರು. ಅದಕ್ಕೆ ಒಪ್ಪಿದೆ. ಆಗ ಶ್ರೀರಸ್ತು ಶುಭಮಸ್ತು ಮತ್ತು ಸ್ನೇಹ ಲೋಕ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದರ ನಡುವೆಯೇ 2-3 ದಿನ ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಇದರ ಶೂಟಿಂಗ್ ಇತ್ತು. ಮೊದಲ ಸಲ ವಿಷ್ಣು ಸರ್ ಅನ್ನು ನೋಡಿದಾಗ ಮಾತೇ ಹೊರಳಲಿಲ್ಲ. ನನ್ನ ಕ್ಯಾರೆಕ್ಟರ್ ಅದರಲ್ಲಿ ಚಿಕ್ಕದಾಗಿತ್ತು. ವಿಷ್ಣು ಅವರ ಪಕ್ಕದಲ್ಲಿ ಕುಳಿತುಕೊಂಡು ಒಡೆಯಾ ನಮ್ಮ ಊಟ ತಿಂತಾ ಇದ್ದೀರಾ ಎಂದು ಹೇಳಬೇಕಿತ್ತು. ಆದರೆ ನನಗೆ ಭಯವಾಗುತ್ತಿತ್ತು. ಅದನ್ನು ಗಮನಿಸಿದ ವಿಷ್ಣುವರ್ಧನ್ ಅವರು, ತಾವೇ ಖುದ್ದಾಗಿ ಕ್ಯಾಮೆರಾ ಹಿಂದೆ ಬಂದು ನಟನೆ ಹೇಗೆಮಾಡಬೇಕು ಎಂದು ಹೇಳಿಕೊಟ್ಟರು. ನನಗೆ ಶಾಕ್ ಆಗಿ ಹೋಯಿತು. ಅಲ್ಲಿ ನಿರ್ದೇಶಕರು ಇರುತ್ತಾರೆ.ಅವರು ಹೇಳಿ ಕೊಡುತ್ತಾರೆ. ಆದರೆ ವಿಷ್ಣುವರ್ಧನ್ ಅವರಂಥ ನಟ ನಾನು ಹೊಸಬಳು ಎನ್ನುವ ಕಾರಣಕ್ಕೆ ಅವರೇ ಬಂದು ಹೇಳಿಕೊಟ್ಟಿರುವುದು ನಿಜಕ್ಕೂ ಅದ್ಭುತ. ಅದು ಅವರ ಗುಣವನ್ನು ತೋರಿಸುತ್ತದೆ. ಈ ವಿಷಯವನ್ನು ನನ್ನ ಅಮ್ಮನಿಗೆ ಹೇಳಿದಾಗ ಅವರೂ ಅಚ್ಚರಿ ಪಟ್ಟರು ಎಂದು ಅನು ಪ್ರಭಾಕರ್ ಹೇಳಿದ್ದಾರೆ.
ಡ್ರೋನ್ ಪ್ರತಾಪ್ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್
ಬಾಬಾ ರೀತಿ ಬಟ್ಟೆ ಕಟ್ಟಿಕೊಳ್ಳುತ್ತಿರುವ ಕುರಿತು ರಶ್ಮಿ ಅವರು ಕೇಳಿದ ಪ್ರಶ್ನೆಗೆ ಅನು ಪ್ರಭಾಕರ್ ಅವರು, ವಿಷ್ಣು ಸರ್ ತುಂಬಾ ಧಾರ್ಮಿಕ ಪ್ರವೃತ್ತಿಯವರು. ಸದಾ ಫಿಲಾಸಾಫಿ, ಸ್ಪಿರಿಚ್ಯುವಲ್ ಎಂದು ಮಾತನಾಡುತ್ತಿದ್ದರು. ನನ್ನ ಅಮ್ಮ ಮತ್ತು ಅವರು ಯಾವಾಗಲೂ ಅದರ ಬಗ್ಗೆ ಡಿಸ್ಕಸ್ ಮಾಡುತ್ತಿದ್ದರು. ನಾನು ಅವರ ಮಾತುಗಳಿಗೆ ಸಾಕ್ಷಿಯಾಗುತ್ತಿದ್ದೆ. ಜೀವನ ಹೇಗೆ ಎದುರಿಸಬೇಕು. ಸಿನಿಮಾ, ಹೆಸರು, ಖ್ಯಾತಿ ಎಲ್ಲವುಗಳಿಗಿಂತಲೂ ಮುಖ್ಯವಾಗಿ ಜೀವನ, ಕುಟುಂಬ ಹೇಗೆ ಮುಖ್ಯ ಎನ್ನುವುದನ್ನು ಅವರು ಹೇಳುತ್ತಿದ್ದರು. ಅವೆಲ್ಲಾ ನನ್ನ ಮೇಲೂ ಸಾಕಷ್ಟು ಪ್ರಭಾವ ಬೀರಿತು ಎಂದಿದ್ದಾರೆ ಅನು. ಜೀವನದಲ್ಲಿ ಕಷ್ಟಗಳನ್ನು ಹೇಗೆ ಎದುರಿಸಬೇಕು, ಜೀವನ ಎಂದರೇನು ಎನ್ನುವ ಬಗ್ಗೆ ಅವರು ಮಾತನಾಡುತ್ತಿದ್ದರು. ಧಾರ್ಮಿಕತೆಯಲ್ಲಿ ಅವರಿಗೆ ಅಪಾರ ನಂಬಿಕೆ ಇರುವ ಕಾರಣ ಅವರ ವೇಷಭೂಷಣಗಳೂ ಅದೇ ರೀತಿ ಇದ್ದವು ಎಂದಿದ್ದಾರೆ. ವಿಷ್ಣು ಸಹಸ್ರನಾಮ, ಗಾಯತ್ರಿ ಮಂತ್ರ ಇವುಗಳ ಬಗ್ಗೆಯೂ ಹೇಳುತ್ತಿದ್ದರು. ಅವುಗಳನ್ನು ಪಠಣ ಮಾಡುವಂತೆ ನನಗೆ ಹೇಳುತ್ತಿದ್ದರು ಎಂದಿದ್ದಾರೆ.
ಇನ್ನು ಅನು ಪ್ರಭಾಕರ್ ಕುರಿತು ಹೇಳುವುದಾದರೆ, ಅನು 1999 ರಲ್ಲಿ ಶಿವ ರಾಜ್‌ಕುಮಾರ್ ಜೊತೆಗಿನ ಹೃದಯ ಹೃದಯ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಚಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಹಾಗೂ ಇಂಗ್ಲಿಷ್‌ನ್ ಡಾರ್ಕ್ ಜಂಗಲ್ ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ರಮೇಶ್ ಅರವಿಂದ್ ಅವರೊಂದಿಗೆ ಜನಪ್ರಿಯ ಜೋಡಿಯಾದರು. ಸೂರಪ್ಪ , ಜಮಿಂದಾರ್ರು , ಹೃದಯವಂತ , ಸಾಹುಕಾರ ಮತ್ತು ವರ್ಷ ಮುಂತಾದ ಹಲವಾರು ಚಿತ್ರಗಳಲ್ಲಿ ಸೂಪರ್‌ಸ್ಟಾರ್ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದಾರೆ. 1980 ನವೆಂಬರ್ 9ರಂದು ಜನಿಸಿರುವ ನಟಿಗೆ ಈಗ 44 ವರ್ಷ ವಯಸ್ಸು. ಇವರ ತಂದೆ ಎಮ್.ವಿ ಪ್ರಭಾಕರ್ ಮತ್ತು ತಾಯಿ ಗಾಯತ್ರಿ.
ಮೈಮರೆತು ಸೆಕ್ಸ್ ಮಾಡಿ ಗರ್ಭಿಣಿಯಾದೆ ಎನ್ನುತ್ತಲೇ ಶೂಟಿಂಗ್ನ ಕರಾಳ ಕಥೆ ಬಿಚ್ಚಿಟ್ಟ ನಟಿ ಕುಬ್ರಾ ಸೇಠ್