
ಕಿರುತೆರೆಯಲ್ಲಿ ಖಳನಟನಾಗಿ ಗಮನ ಸೆಳೆದಿದ್ದ ‘ಅಣ್ಣಯ್ಯ’ ಧಾರಾವಾಹಿಯ ಚಿರಂಜೀವಿ ಇದೀಗ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದಾರೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿಯಲ್ಲಿ ಪರಶು ಪಾತ್ರದ ಮೂಲಕ ಮನೆಮಾತಾಗಿರುವ ಅವರು, ಹೊಸ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಚಿರಂಜೀವಿ ತಮ್ಮ ಹೊಸ ಸಿನಿಮಾದ ಶೂಟಿಂಗ್ ಆರಂಭಿಸಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ‘ವಾಲ್‌ಪೋಸ್ಟರ್’ ಎಂಬ ವಿಭಿನ್ನ ಶೀರ್ಷಿಕೆಯ ಈ ಸಿನಿಮಾದ ಪೋಸ್ಟರ್‌ನ್ನೂ ಅವರು ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿದ್ದಾರೆ.
ಮಧ್ಯಮ ವರ್ಗದ ವ್ಯಕ್ತಿಯ ಅಪಾಯಕಾರಿ ಪಯಣ
‘ವಾಲ್‌ಪೋಸ್ಟರ್’ ಸಿನಿಮಾ ಸಾಮಾನ್ಯ ಮಧ್ಯಮ ವರ್ಗದ ವ್ಯಕ್ತಿಯೊಬ್ಬನ ಕನಸು ಮತ್ತು ಆ ಕನಸನ್ನು ನನಸಾಗಿಸಿಕೊಳ್ಳಲು ಆತ ತುಳಿಯುವ ಅಪಾಯಕಾರಿ ಹಾದಿಯ ಸುತ್ತ ಕಥೆ ಸಾಗಲಿದೆ ಎಂಬ ಸುಳಿವು ಪೋಸ್ಟರ್‌ನಿಂದ ಸಿಕ್ಕಿದೆ. ಕನಸನ್ನು ಬೆನ್ನತ್ತುವಾಗ ಎದುರಾಗುವ ಸವಾಲುಗಳು, ಅಪಾಯಗಳು ಹಾಗೂ ಅದರಿಂದ ಉಂಟಾಗುವ ತಿರುವುಗಳನ್ನು ಒಳಗೊಂಡಿರುವ ಕಥೆ ಇದಾಗಿರಲಿದೆ ಎನ್ನಲಾಗಿದ್ದು, ಸಿನಿಮಾವನ್ನು ಸಸ್ಪೆನ್ಸ್ ಹಾಗೂ ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ರೂಪಿಸಲಾಗುತ್ತಿದೆ.
‘ವಾಲ್‌ಪೋಸ್ಟರ್’ ಶೂಟಿಂಗ್ ಶುರು
ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗಿರುವುದನ್ನು ಖಚಿತಪಡಿಸಿರುವ ಚಿರಂಜೀವಿ, ಪೋಸ್ಟರ್ ಹಂಚಿಕೊಂಡು ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಿನಿಮಾದ ಮೊದಲ ಲುಕ್ ಹಾಗೂ ಕಥೆಯ ಕುರಿತ ಸುಳಿವು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದು, ಕಿರುತೆರೆಯಲ್ಲಿ ಚಿರಂಜೀವಿ ಅವರನ್ನು ನೋಡಿರುವ ಪ್ರೇಕ್ಷಕರಲ್ಲಿ ಅವರ ಸಿನಿಮಾ ಎಂಟ್ರಿ ಕುತೂಹಲ ಮೂಡಿಸಿದೆ. ಸಹಕಲಾವಿದರು ಹಾಗೂ ಅಭಿಮಾನಿಗಳು ಕೂಡ ಚಿರಂಜೀವಿ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಚಿರಂಜೀವಿ ಅವರಿಗೆ ಕಿರುತೆರೆಯಲ್ಲಿ ‘ಅಣ್ಣಯ್ಯ’ ಧಾರಾವಾಹಿಯ ಪರಶುರಾಮ್ ಪಾತ್ರ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ. ಧಾರಾವಾಹಿಯಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ‘ಅಣ್ಣಯ್ಯ’ಗೂ ಮುನ್ನವೂ ಅವರು ಕಿರುತೆರೆಯಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಆದರೆ ಪರಶು ಪಾತ್ರವೇ ಅವರ ವೃತ್ತಿಜೀವನದಲ್ಲಿ ದೊಡ್ಡ ಗುರುತನ್ನು ನೀಡಿದೆ. ಇದೀಗ ಕಿರುತೆರೆಯ ಜನಪ್ರಿಯತೆಯನ್ನು ಬೆನ್ನಿಗಿಟ್ಟುಕೊಂಡು ಚಿರಂಜೀವಿ ಬೆಳ್ಳಿತೆರೆಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ‘ವಾಲ್‌ಪೋಸ್ಟರ್’ ಮೂಲಕ ಅವರ ಸಿನಿಮಾ ಜರ್ನಿ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.