ಸುದೀಪ್‌ ಹಾಡಿದ ಶಾರುಖ್‌ ಹಾಡು ಕೇಳಿದ್ರಾ? ಮದುವೆ ಸಮಾರಂಭದಲ್ಲಿ ಕಿಚ್ಚನ ಮ್ಯೂಸಿಕಲ್‌ ಟ್ರೀಟ್‌

Published : Aug 20, 2026, 09:27 PM IST
Kichcha Sudeep

ಸಾರಾಂಶ

Kichcha Sudeep Viral Video: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಂದ್ರೆ ಬರೀ ಅಭಿನಯ ಮಾತ್ರವಲ್ಲ, ಅವರ ಸ್ಟೈಲ್‌, ಸ್ಟೇಜ್‌ ಪ್ರೆಸೆನ್ಸ್‌ ಹಾಗೂ ಸಂಗೀತದ ಮೇಲಿನ ಆಸಕ್ತಿಗೂ ಪ್ರತ್ಯೇಕ ಅಭಿಮಾನಿ ಬಳಗವಿದೆ.

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಂದ್ರೆ ಬರೀ ಅಭಿನಯ ಮಾತ್ರವಲ್ಲ, ಅವರ ಸ್ಟೈಲ್‌, ಸ್ಟೇಜ್‌ ಪ್ರೆಸೆನ್ಸ್‌ ಹಾಗೂ ಸಂಗೀತದ ಮೇಲಿನ ಆಸಕ್ತಿಗೂ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದೀಗ ಅದ್ಧೂರಿ ಮದುವೆ ಸಮಾರಂಭವೊಂದರಲ್ಲಿ ಕಿಚ್ಚ ಸುದೀಪ್‌ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಶಾರುಖ್‌ ಹಾಡಿಗೆ ಧ್ವನಿಗೂಡಿಸಿದ ಸುದೀಪ್!

ಕಾಂಗ್ರೆಸ್‌ ಯುವ ನಾಯಕ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಅವರ ವಿವಾಹ ಸಮಾರಂಭದಲ್ಲಿ ಕಿಚ್ಚ ಸುದೀಪ್‌ ಹಾಗೂ ಅವರ ಪತ್ನಿ ಪ್ರಿಯಾ ಸುದೀಪ್‌ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳೊಂದಿಗೆ ಸಮಯ ಕಳೆಯುತ್ತಿದ್ದ ಸುದೀಪ್‌, ಬಳಿಕ ‘ಸುಕೂನ್ ವಾಲಿ ಕವ್ವಾಲಿ’ ತಂಡದ ಜೊತೆ ವೇದಿಕೆ ಹಂಚಿಕೊಂಡು ಹಾಡೊಂದನ್ನು ಹಾಡಿದ್ದಾರೆ. ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಹಾಗೂ ರಾಣಿ ಮುಖರ್ಜಿ ಅಭಿನಯದ ‘Chalte Chalte’ ಸಿನಿಮಾದ ಜನಪ್ರಿಯ ರೊಮ್ಯಾಂಟಿಕ್‌ ಹಾಡು ‘Suno Na Suno Na’ ಅನ್ನು ಸುದೀಪ್‌ ಹಾಡಿದ್ದಾರೆ. ಜತಿನ್‌-ಲಲಿತ್‌ ಸಂಗೀತ ಸಂಯೋಜನೆಯ ಈ ಹಾಡಿಗೆ ಜಾವೇದ್‌ ಅಖ್ತರ್‌ ಸಾಹಿತ್ಯ ಬರೆದಿದ್ದಾರೆ.

ಸುದೀಪ್‌ ಸಿಂಗಿಂಗ್‌ ನೋಡಿ ಫಿದಾ ಆದ ಅಭಿಮಾನಿಗಳು!

ಸುದೀಪ್‌ ವೇದಿಕೆ ಮೇಲೆ ಹಾಡಲು ಶುರು ಮಾಡುತ್ತಿದ್ದಂತೆ ಕಾರ್ಯಕ್ರಮದ ವಾತಾವರಣವೇ ಮತ್ತಷ್ಟು ರಂಗೇರಿದೆ. ಕವ್ವಾಲಿ ತಂಡದೊಂದಿಗೆ ಸುದೀಪ್‌ ಹಾಡಿಗೆ ಧ್ವನಿಗೂಡಿಸಿದ ರೀತಿ ಹಾಗೂ ಅವರ ಎಂದಿನ ಸ್ಟೈಲಿಶ್‌ ಸ್ಟೇಜ್‌ ಪ್ರೆಸೆನ್ಸ್‌ ಎಲ್ಲರ ಗಮನ ಸೆಳೆದಿದೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ, ಇಂತಹ ಕಾರ್ಯಕ್ರಮಗಳಲ್ಲೂ ತಮ್ಮ ವಿಭಿನ್ನ ಪ್ರತಿಭೆಯಿಂದ ಗಮನ ಸೆಳೆಯುವ ಸುದೀಪ್‌ ಅವರ ಈ ಸಿಂಗಿಂಗ್‌ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಶಾರುಖ್‌ ಖಾನ್‌ ಹಾಡಿಗೆ ಕಿಚ್ಚನ ಧ್ವನಿ ಕೇಳಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೆ ಭರ್ಜರಿ ಕಮ್‌ಬ್ಯಾಕ್‌ ನಿರೀಕ್ಷೆಯಲ್ಲಿ ಕಿಚ್ಚ

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಸುದೀಪ್‌ ಕೊನೆಯದಾಗಿ 2025ರಲ್ಲಿ ಬಿಡುಗಡೆಯಾದ ಆ್ಯಕ್ಷನ್‌ ಥ್ರಿಲ್ಲರ್‌ ‘ಮಾರ್ಕ್’ ಸಿನಿಮಾದಲ್ಲಿ ಎಸ್‌ಪಿ ಅಜಯ್‌ ಮಾರ್ಕಾಂಡೇಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 2026ರಲ್ಲಿ ಬಿಡುಗಡೆಯಾದ ‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವ ಪಾತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸುದೀಪ್‌ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಬಿಲ್ಲ ರಂಗ ಬಾಷಾ’. ಈ ಚಿತ್ರದಲ್ಲಿ ಅವರು ಬಿಲ್ಲ, ರಂಗ ಹಾಗೂ ಬಾಷಾ ಎಂಬ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣ ಸೇರಿದಂತೆ ತಮ್ಮದೇ ಆದ ಹಲವು ಕ್ರಿಯೇಟಿವ್‌ ಪ್ರಾಜೆಕ್ಟ್‌ಗಳಲ್ಲೂ ಸುದೀಪ್‌ ಸಕ್ರಿಯರಾಗಿದ್ದಾರೆ. ಒಟ್ಟಿನಲ್ಲಿ ಸಿನಿಮಾದ ಹೊರತಾಗಿಯೂ ಕಿಚ್ಚ ಸುದೀಪ್‌ ಮತ್ತೊಮ್ಮೆ ತಮ್ಮ ಸಿಂಗಿಂಗ್‌ ಟ್ಯಾಲೆಂಟ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದು, ಬೆಂಗಳೂರಿನ ಈ ಮದುವೆ ಸಮಾರಂಭದ ವಿಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಂದಿನ ಸಿನಿಮಾಗೆ ಹೊಸ ಟ್ವಿಸ್ಟ್: ‘ತತ್ಸಮ ತದ್ಭವ’ ನಿರ್ದೇಶಕನ ಜೊತೆ ಮಾತುಕತೆ!
Toxic ಸಿನಿಮಾನ್ನ ತಮಿಳು ಭಾಷೆ ಎನ್ನೋದಾ? ಬ್ರಿಟಿಷ್​ ಸೆನ್ಸಾರ್​ ಮಂಡಳಿ ಎಡವಟ್ಟಿಗೆ ಕನ್ನಡಿಗರು ಗರಂ