ಕನ್ನಡದ 'ಪಲ್ಲವಿ ಅನುಪಲ್ಲವಿ'ಗೆ ಹಿಂದಿಯ ಅನಿಲ್ ಕಪೂರ್ ಆಯ್ಕೆಯಾಗಿದ್ದು ಹೇಗೆ?

Published : Jan 18, 2025, 11:54 PM ISTUpdated : Jan 18, 2025, 11:57 PM IST
ಕನ್ನಡದ 'ಪಲ್ಲವಿ ಅನುಪಲ್ಲವಿ'ಗೆ ಹಿಂದಿಯ ಅನಿಲ್ ಕಪೂರ್ ಆಯ್ಕೆಯಾಗಿದ್ದು ಹೇಗೆ?

ಸಾರಾಂಶ

ಬಾಲಿವುಡ್ ನಟ ಅನಿಲ್ ಕಪೂರ್ ಅವರ ಮೊದಲ ಚಿತ್ರ ಕನ್ನಡದ "ಪಲ್ಲವಿ ಅನುಪಲ್ಲವಿ". ಸಂಗೀತ ನಿರ್ದೇಶಕ ಆರ್.ಎನ್. ಜಯಗೋಪಾಲ್ ಅವರ ಶಿಫಾರಸ್ಸಿನ ಮೇರೆಗೆ ನಿರ್ದೇಶಕ ಮಣಿರತ್ನಂ ಅನಿಲ್ ಕಪೂರ್ ಅವರನ್ನು ಆಯ್ಕೆ ಮಾಡಿದರು. ಲಕ್ಷ್ಮೀ ನಾಯಕಿಯಾಗಿದ್ದ ಈ ಚಿತ್ರ ಅನಿಲ್ ಕಪೂರ್ ಗೆ ಬಾಲಿವುಡ್ ಪ್ರವೇಶಕ್ಕೆ ಮೆಟ್ಟಿಲಾಯಿತು.

ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ಅನಿಲ್ ಕಪೂರ್ (Anil Kapoor) ಎಂಬುದು ಬಹಳಷ್ಟು ಜನಕ್ಕೆ ಗೊತ್ತು. ಬೇಟಾ, ಜುದಾಯಿ, ರೂಪ್‌ ಕಿ ರಾಣಿ ಚೋರೋಂಕಾ ರಾಜಾ, ನಾಯಕ್, ಮಿಸ್ಟರ್ ಇಂಡಿಯಾ, ವೀರಾಸತ್ ಹಾಗೂ ಕರ್ಮ, ಹೀಗೆ ಬರೆಯಲು ಹೊರಟರೆ ಸಾಕಷ್ಟು ಟೈಮ್ ಬೇಕಾದಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ ನಟ ಅನಿಲ್ ಕಪೂರ್. ಆದರೆ ಅವರ ಮೊಟ್ಟಮೊದಲ ಚಿತ್ರ ಕನ್ನಡದ 'ಪಲ್ಲವಿ ಅನುಪಲ್ಲವಿ' ಎಂಬುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಆದರೆ ಹಲವರಿಗೆ ಖಂಡಿತ ಗೊತ್ತಿಲ್ಲ!

ಹಾಗಿದ್ದರೆ ಹಿಂದಿ ಹುಡುಗ ಕನ್ನಡ ಸಿನಿಮಾ ಮಾಡಿದ್ದೇಕೆ? ಬಾಲಿವುಡ್ ಬೇಟಾ ಕನ್ನಡ ಸಿನಿಮಾದಲ್ಲಿ ನಟಿಸಲು ಕಾರಣರಾದ 'ಗಾಡ್ ಫಾದರ್' ಯಾರು? ಈ ಎಲ್ಲ ಸಂಗತಿಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ, ನಿಧಾನವಾಗಿ ಕೊನೆಯವರೆಗೂ ಓದಿ.. ಹೌದು, ಈಗ ಹಿಂದಿಯ ನಟ ಎಂದು ಕರೆಸಿಕೊಳ್ಳುವ ಅನಿಲ್ ಕಪೂರ್ ಅವರು ಮೊದಲು ನಟಿಸಿದ್ದ ಸಿನಿಮಾ ಕನ್ನಡದ 'ಪಲ್ಲವಿ ಅನುಪಲ್ಲವಿ'. ಈ ಸಿನಿಮಾಗೆ ಅನಿಲ್ ಕಪೂರ್ ಎಂಬ ಹುಡುಗ ಸೆಲೆಕ್ಟ್ ಆಗಲು ಕಾರಣ ಕನ್ನಡದ ರೈಟರ್, ಗೀತ ಸಾಹಿತಿ, ಸಂಗೀತ ನಿರ್ದೇಶಕ ಅರ್‌ಎನ್ ಜಯಗೋಪಾಲ್ (RN Jayagopal) ಎಂದರೆ ಎಲ್ಲರಿಗೂ ಅಚ್ಚರಿ ಆಗಬಹುದು. 

ಡಾ ರಾಜ್‌-ಆರ್‌ಎನ್‌ ಜಯಗೋಪಾಲ್ ಮಧ್ಯೆ 'ದಾರಿ ತಪ್ಪಿದ ಮಗ' ವೇಳೆ ನಡೆದ ಕಹಿ ಘಟನೆ ಏನು?

ಹೌದು, ಅಂದು ನಟ ಅನಿಲ್ ಕಪೂರ್ ಅವರು ಬೆಂಗಳೂರಿನಲ್ಲಿ ಕ್ಲಬ್ ಒಂದಕ್ಕೆ ಟೆನ್ನಿಸ್ ಆಡಲು ಬರುತ್ತಿದ್ದರು. ಅದೇ ಕ್ಲಬ್‌ಗೆ ಆರ್‌ಎನ್ ಜಯಗೋಪಾಲ್ ಕೂಡ ಬರುತ್ತಿದ್ದರು. ಹೀಗಾಗಿ ಅವರಿಬ್ಬರಿಗೆ ಪರಸ್ಪರ ಪರಿಚಯವಿತ್ತು. ಅದೇ ವೇಳೆ ಆರ್‌ಎನ್ ಜಯಗೋಪಾಲ್ ಅವರ ಕಥೆ ಓಕೆ ಆಗಿ ನಿರ್ದೇಶಕ ಮಣಿರತ್ನಂ (Maniratnam) ಅವರು ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ ಆಯ್ಕೆಯಾಗಿದ್ದರು. ಆಗ ಅವರು ಆರ್‌ಎನ್ ಜಯಗೋಪಾಲ್ ಅವರ ಬಳಿ 'ಈ ಚಿತ್ರಕ್ಕೆ ಹೀರೋ ಆಗಿ ಯಾರನ್ನು ಆಯ್ಕೆ ಮಾಡುವದು?' ಎಂದು ಕೇಳಿದ್ದರಂತೆ. 

ಅದಕ್ಕೆ ಸಾಹಿತಿ, ಸಂಗೀತ ನಿರ್ದೇಶಕರಾದ ಆರ್‌ಎನ್ ಜಯಗೋಪಾಲ್ ಅವರು ಅನಿಲ್ ಕಪೂರ್ ಅವರನ್ನು ತೋರಿಸಿ 'ಈ ಹುಡುಗ ಮುಂಬೈನಿಂದ ಬಂದು ಇಲ್ಲಿ ಇದ್ದಾನೆ. ಚೂಟಿ ಹುಡುಗ, ಒಳ್ಳೆಯವನು, ಅವನನ್ನು ಆಯ್ಕೆ ಮಾಡಿಕೊಳ್ಳಬಹುದು' ಎಂದಿದ್ದಾರೆ. ಹೀಗೆ ಆರ್‌ಎನ್ ಜಯಗೋಪಾಲ್ ಮಾತಿನಿಂದ ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ ಮುಂಬೈನ ಅನಿಲ್ ಕಪೂರ್ ಆಯ್ಕೆಯಾಗಿದ್ದಾರೆ. ನಾಯಕಿಯಾಗಿ ಪಂಚಭಾಷಾ ತಾರೆ ಲಕ್ಷ್ಮೀ ಆ ಚಿತ್ರದಲ್ಲಿ ನಟಿಸಿದ್ದಾರೆ. 

ಮತ್ತೆ ಮದ್ವೆಯಾಗ್ಬೇಕ್ ಕಣಪ್ಪಾ, ಒಳ್ಳೇ ಹುಡ್ಗ ನೀನು; ಅಜ್ಜಿ ಮಾತು ಕೇಳಿ ಚಂದನ್ ಶೆಟ್ಟಿ ಏನಂದ್ರು?

ಆದ್ದರಿಂದ ಮೊಟ್ಟಮೊದಲು ಕನ್ನಡ ಚಿತ್ರದಲ್ಲಿ ನಟಿಸಿ, ಬಳಿಕ ಮುಂಬೈಗೆ ಹೋಗಿ ಅಲ್ಲಿ ದೊಡ್ಡ ಸ್ಟಾರ್ ಆಗಿರುವ ನಟ ಅನಿಲ್ ಕಪೂರ್. ಅವರಿಗೆ ಗಾಡ್ ಫಾದರ್ ಕನ್ನಡದ ಆರ್‌ಎನ್ ಜಯಗೋಪಾಲ್. ಹಾಗೇ, ಅವರನ್ನು ನಟರನ್ನಾಗಿ ತಿದ್ದಿ ತೀಡಿರುವ ಮಾಸ್ಟರ್ ಈಗ ತಮಿಳಿನಲ್ಲಿ ದೊಡ್ಡ ನಿರ್ದೇಶಕ ಎನ್ನಿಸಿಕೊಂಡಿರುವ ಮಣಿರತ್ನಂ. ಹೀಗೆ ಚಿತ್ರಂಗದಲ್ಲಿ ಅನೇಕ ಅಚ್ಚರಿ ಹುಟ್ಟಿಸುವ ಸಂಗತಿಗಳು, ಉದಾಹರಣೆಗಳು ಇವೆ. ಇದಕ್ಕೇ ಹೇಳುವುದು 'ಯಾವ ಹೂವು ಯಾರ ಮುಡಿಗೋ' ಎಂದು! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್