ಆ್ಯಂಕರ್ ಅನುಶ್ರೀಗೆ ಆ ಗುಟ್ಟು ಹೇಳದ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದೇಕೆ?

By Shriram Bhat  |  First Published May 29, 2024, 10:47 AM IST

ಏನ್ ಯೂಟ್ಯೂಬ್‌ನಲ್ಲಿ ಶಾರ್ಟ್ ಮೂವಿನಾ ನೀನ್ ಮಾಡೋದು?'ಎಂದು ಕಿಚಾಯಿಸಿದ್ದಾರೆ. ರಕ್ಷಿತ್ 'ಇಲ್ಲ ಇಲ್ಲ, ಸಿನಿಮಾನೇ..' ಎನ್ನಲು ಸಾಯಿ ಪಲ್ಲವಿ ಸೇರಿದಂತೆ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹಾಗಿದ್ದರೆ, ನಟಿ ಸಾಯಿ ಪಲ್ಲವಿಗೆ ರಕ್ಷಿತ್ ಶೆಟ್ಟಿ..


ಆ್ಯಂಕರ್ ಅನುಶ್ರೀ ಪ್ರಶ್ನೆಯೊಂದಕ್ಕೆ ನಟ ರಕ್ಷಿತ್ ಶೆಟ್ಟಿ ಯಾಕೆ ಹಾಗೆ ರಿಯಾಕ್ಟ್ ಮಾಡಿದ್ರು? ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟ ರಕ್ಷಿತ್ ಶೆಟ್ಟಿ, ಸಾಯಿ ಪಲ್ಲವಿ ಬಗ್ಗೆ ಮೌನವಾಗಿದ್ದು ಯಾಕೆ? ಪಕ್ಕದಲ್ಲೇ ಇದ್ದ ಸಾಯಿ ಪಲ್ಲವಿ ಅಂದುಕೊಂಡಿದ್ದೇನು, ಅವರು ರಕ್ಷಿತ್ ನಡೆಯನ್ನು ಏನಂತ ಅಂದುಕೊಂಡು ಹಾಗೆ ಹೇಳಿದ್ರು? ಎಲ್ಲವೂ ಒಂಥರಾ ವಿಚಿತ್ರವಾದ ಪ್ರಶ್ನೆ-ಉತ್ತರದಂತಿಗೆ. ಉತ್ತರವಿಲ್ಲದ ಒಗಟಿನಂತೆ ನೋಡುಗರು ಮತ್ತೆ ಮತ್ತೆ ನೋಡುವಂತಾಗಿದೆ ಈ ವಿಡಿಯೋ ಕ್ಲಿಪ್ಪಿಂಗ್!

ಹಾಗಿದ್ದರೆ ವೈರಲ್ ವೀಡಿಯೋದಲ್ಲಿ ಅಂಥದ್ದೇನಿದೆ? ನಟ ರಕ್ಷಿತ್ ಶೆಟ್ಟಿ (Rakshit Shetty) ಹಾಗೂ ಸಾಯಿ ಪಲ್ಲವಿ (Sai Pallavi) ಹಾಗೂ ಗಾರ್ಗಿ ನಿರ್ದೇಶಕರಾದ ಗೌತಮ್ ರಾಮಚಂದ್ರನ್ ಅವರೆಲ್ಲರೂ ನಿರೂಪಕಿ ಅನುಶ್ರೀ ಮುಂದೆ ಕುಳಿತಿರುವ ವೀಡಿಯೋ. ಅನುಶ್ರೀ ಅಂದರೆ ಗೊತ್ತಲ್ಲ, ಏನೇನೋ ಪ್ರಶ್ನೆ ಕೇಳಿ ಅದೇನೇನನ್ನೋ ಎದುರಿಗಿದ್ದವರ ಮಾಹಿತಿ ಹೊರಗೆ ಎಳೆಯುವ ಚಾಲಾಕಿ. ನಟ-ನಿರ್ದೇಶಕ ರಕ್ಷಿತ್ ಶೆಟ್ಟಿಗೆ 'ಸಾಯಿ ಪಲ್ಲವಿಗೆ ಸಿನಿಮಾ ಡಿರೆಕ್ಟ್ ಮಾಡ್ಬೇಕು ಅಂದ್ರೆ ಯಾವ ಥರದ  ಸಿನಿಮಾ ಮಾಡ್ತೀರಿ' ಎಂಬ ಪ್ರಶ್ನೆ ಕೇಳಿದ್ದಾರೆ ಅನುಶ್ರೀ (Anchor Anushree). ಅದಕ್ಕೆ ರಕ್ಷಿತ್ 'ನಾನು ಹೇಳ್ತೀನಿ, ಹೇಳ್ತೀನಿ ಮೊಂದೊಮ್ಮೆ..' ಎಂದು ಹೇಳಿ ಜಾರಿಕೊಂಡಿದ್ದಾರೆ. 

Tap to resize

Latest Videos

ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?

ರಕ್ಷಿತ್ ಪಕ್ಕದಲ್ಲಿದ್ದ ನಟಿ ಸಾಯಿ ಪಲ್ಲವಿ 'ನೀವು ರಕ್ಷಿತ್‌ಗೆ ನನ್ನ ಬಗ್ಗೆ ಒತ್ತಾಯ ಮಾಡಿ ಏನೋ ಒಂದನ್ನು ಹೇಳಿಸಲು ಪ್ರಯತ್ನಿಸುತ್ತಿರುವಂತಿದೆ' ಎಂದಿದ್ದಾರೆ. ಅವರೆಲ್ಲರ ಕನ್ನಡ ಭಾಷೆಯ ಸಂಭಾಷಣೆ ನಟಿ ಸಾಯಿ ಪಲ್ಲವಿಗೆ ಸರಿಯಾಗಿ ಅರ್ಥವಾಗಿಲ್ಲ. ನಟ ರಕ್ಷಿತ್ 'ನಾನು ಮುಂದಿನ 5 ಸಿನಿಮಾಗಳನ್ನು ಈಗಾಗಲೇ ಘೋಷಣೆ ಮಾಡಿದ್ದೇನೆ' ಎಂದಿದ್ದಾರೆ. ಅದಕ್ಕೆ ಗಾರ್ಗಿ ಅವರು 'ಅಂದರೆ ಇನ್ನು ಹದಿನೈದು ವರ್ಷದಲ್ಲಿ 5 ಸಿನಿಮಾ' ಎಂದು ಕಾಲೆಳೆದಿದ್ದಾರೆ. ಅದಕ್ಕೆ ರಕ್ಷಿತ್ 'ಇಲ್ಲ ಇಲ್ಲ 3 ವರ್ಷದಲ್ಲಿ 5 ಸಿನಿಮಾ' ಎಂದಿದ್ದಾರೆ. ಅದಕ್ಕಂತೂ ಗಾರ್ಗಿ ಸರಿಯಾಗಿಯೇ ಕಾಲೆಳೆದಿದ್ದಾರೆ. 

ಸುಜಯ್ ಹೆಗಡೆ 'ಹೊಸ ಕಥೆಯೊಂದು ಶುರುವಾಗಿದೆ', ಪ್ರೇರಣಾಗೆ 'ಮನಸೆಲ್ಲಾ ನೀನೇ' ಅಂದಿದ್ದಾಯ್ತು..!

'ಹೌದಾ, ಏನ್ ಯೂಟ್ಯೂಬ್‌ನಲ್ಲಿ ಶಾರ್ಟ್ ಮೂವಿನಾ ನೀನ್ ಮಾಡೋದು?'ಎಂದು ಕಿಚಾಯಿಸಿದ್ದಾರೆ. ರಕ್ಷಿತ್ 'ಇಲ್ಲ ಇಲ್ಲ, ಸಿನಿಮಾನೇ..' ಎನ್ನಲು ಸಾಯಿ ಪಲ್ಲವಿ ಸೇರಿದಂತೆ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ. ಹಾಗಿದ್ದರೆ, ನಟಿ ಸಾಯಿ ಪಲ್ಲವಿಗೆ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ದೇಶನ ಮಾಡುವುದು ಯಾವಾಗ? ರಕ್ಷಿತ್-ಸಾಯಿ ಪಲ್ಲವಿ ಜೋಡಿಯನ್ನು ನೋಡಲು ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ ಎಂಬ ಮಾತಂತೂ ಖಂಡಿತವಾಗಿಯೂ ಸತ್ಯ. 

ಅದನ್ನು ಪದೇಪದೇ ಮುಟ್ಟಿಕೊಳ್ಳುವುದು ಸಮಸ್ಯೆಯಲ್ಲ, ಕಾರಣವಿದೆ: ನಮ್ರತಾ ಗೌಡ!

ಒಟ್ಟಿನಲ್ಲಿ, ಆ್ಯಂಕರ್ ಅನುಶ್ರೀ ರಕ್ಷಿತ್ ಶೆಟ್ಟಿಯ ಬಾಯಲ್ಲಿ, ಅವರು ನಟಿ ಸಾಯಿ ಪಲ್ಲವಿ ಜೊತೆ ನಟಸುವುದು ಯಾವಾಗ ಎಂಬ ಗುಟ್ಟನ್ನು ರಟ್ಟು ಮಾಡಲು ಯತ್ನಿಸಿದ್ದಾರೆ. ಆದರೆ ರಕ್ಷಿತ್ ಟ್ರಿಕ್‌ನಿಂದ ಅದು ಸಾಧ್ಯವಾಗಿಲ್ಲ. ಆದರೆ, ಮುಂದೊಂದು ದಿನದ ಆ ಸಾಧ್ಯತೆಯನ್ನು ರಕ್ಷಿತ್ ಶೆಟ್ಟಿ ತಳ್ಳಿಹಾಕಿಲ್ಲವಲ್ಲ ಎಂಬುದು ರಕ್ಷಿತ್ ಹಾಗೂ ಸಾಯಿ ಪಲ್ಲವಿಗೆ ಸದ್ಯಕ್ಕಿರುವ ಸಮಾಧಾನದ ಸಂಗತಿ!

click me!