ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?

By Shriram Bhat  |  First Published May 29, 2024, 9:23 AM IST

ನಾನು ಚಿಕ್ಕವನಾಗಿದ್ದಾಗ ಅಪ್ಪ ಹಾಗೂ ಅಮ್ಮ ಎತ್ತಿಕೊಂಡಿದ್ದು, ನನ್ನ ಅಣ್ಣಂದಿರಾದ ಶಿವಣ್ಣ, ರಾಘಣ್ಣ ನನ್ನ ಎತ್ತಿಕೊಂಡಿದ್ದು, ನಾವೆಲ್ಲ ಆಟವಾಡಿದ್ದು ಎಲ್ಲವೂ ನನಗೆ ಚೆನ್ನಾಗಿ ನೆನಪಿದೆ. ನಮ್ಮ ಅತ್ತೆ, ಅವರ ಮಕ್ಕಳು, ನಮ್ಮ ಎಲ್ಲ ನೆಂಟರು..


ಕನ್ನಡದ ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಅಪ್ಪ-ಅಮ್ಮನ ಬಗ್ಗೆ ಪ್ರೀತಿ ಜಾಸ್ತಿ. ತಮ್ಮ ಅಪ್ಪ ಹಾಗೂ ಅಮ್ಮನ ನೆನಪುಗಳನ್ನು ತಾವು ಜೋಪಾನ ಮಾಡಿಟ್ಟಿರುವುದಾಗಿ ಹಲವು ಬಾರಿ ಅವರು ಹೇಳಿಕೊಂಡಿದ್ದರು. 'ಕನ್ನಡದ ಕೋಟ್ಯಧಿಪತಿ' ಶೋದಲ್ಲಿ ಕೂಡ ಈ ಬಗ್ಗೆ ಮಾತನಾಡಿದ್ದರು. 'ನನಗೆ ಅಪ್ಪ ಹಾಗೂ ಅಮ್ಮನ ನೆನಪುಗಳು ತುಂಬಾ ಮುಖ್ಯ. ಹೀಗಾಗಿ ನಾನು ಅಪ್ಪ ಬಳಸುತ್ತಿದ್ದ ಬಟ್ಟೆ, ಸಾಮಾನುಗಳು ಹಾಗೂ ಚಪ್ಪಲಿಗಳನ್ನೆಲ್ಲ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಅಪ್ಪ ಕೊನೆಗಾಲದಲ್ಲು ಉಪಯೋಗಿಸುತ್ತಿದ್ದ ಚಪ್ಪಲಿ ಈಗಲೂ ಚೆನ್ನಾಗಿದ್ದು, ಅದನ್ನು ತುಂಬಾ ಜೋಪಾನವಾಗಿ ಎತ್ತಿ ಇಟ್ಟುಕೊಂಡಿದ್ದೇನೆ. 

ನನ್ನ ಅಮ್ಮನ (Parvathamma Rajkumar) ಫೋಟೋವನ್ನು ಎದೆಯಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಅಮ್ಮ ಅಪ್ಪನಿಗೆ (Dr Rajkumar) ನಮಸ್ಕಾರ ಮಾಡುತ್ತಿದ್ದ ಫೋಟೋ, ನಮ್ಮೆಲ್ಲರ ಫೋಟೋಗಳನ್ನು ನಾನು ಅಚ್ಚುಕಟ್ಟಾಗಿ ಜೋಡಿಸಿಕೊಂಡು ಇಟ್ಟುಕೊಂಡಿದ್ದೇನೆ. ನನಗೆ ಅವೆಲ್ಲವೂ ನನ್ನ ಜೀವ ಇರುವವರೆಗೂ ತುಂಬಾ ಮುಖ್ಯವಾದ ಸಂಗತಿಗಳು. ಅಮ್ಮ-ಅಪ್ಪನ ನೆನಪುಗಳ ಸ್ಮಾರಕಗಳಂತೆ ಅವು ಯಾವತ್ತೂ ನಮ್ಮ ಜೊತೆ ಇರಬೇಕು. ಅಪ್ಪ-ಅಮ್ಮ ಓಡಾಡಿದ ಸ್ಥಳ, ನಮ್ಮ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದ ಜಾಗ, ಮಾತನಾಡುತ್ತಿದ್ದ ಜನರು ಎಲ್ಲವೂ ನನಗೆ ಜ್ಞಾಪಕವಿದೆ, ಯಾವತ್ತಿಗೂ ಇರುತ್ತವೆ. ಅವೆಲ್ಲವೂ ನನಗೆ ತುಂಬಾ ಮುಖ್ಯ ಸಂಗತಿಗಳಾಗಿ ಎಂದಿಗೂ ಉಳಿದುಬಿಡುತ್ತವೆ. 

Tap to resize

Latest Videos

ಸುಜಯ್ ಹೆಗಡೆ 'ಹೊಸ ಕಥೆಯೊಂದು ಶುರುವಾಗಿದೆ', ಪ್ರೇರಣಾಗೆ 'ಮನಸೆಲ್ಲಾ ನೀನೇ' ಅಂದಿದ್ದಾಯ್ತು..!

ನಾನು ಚಿಕ್ಕವನಾಗಿದ್ದಾಗ ಅಪ್ಪ ಹಾಗೂ ಅಮ್ಮ ಎತ್ತಿಕೊಂಡಿದ್ದು, ನನ್ನ ಅಣ್ಣಂದಿರಾದ ಶಿವಣ್ಣ, ರಾಘಣ್ಣ ನನ್ನ ಎತ್ತಿಕೊಂಡಿದ್ದು, ನಾವೆಲ್ಲ ಆಟವಾಡಿದ್ದು ಎಲ್ಲವೂ ನನಗೆ ಚೆನ್ನಾಗಿ ನೆನಪಿದೆ. ನಮ್ಮ ಅತ್ತೆ, ಅವರ ಮಕ್ಕಳು, ನಮ್ಮ ಎಲ್ಲ ನೆಂಟರು, ಬಂಧುಬಳಗ ಎಲ್ಲವೂ ನನಗೆ ಸವಿನೆನಪುಗಳಾಗಿ ಯಾವತ್ತು ನನ್ನ ಜತೆಗೇ ಇರುತ್ತವೆ. ಅದಕ್ಕೆ ಸಂಬಂಧಪಟ್ಟ ವಸ್ತುಗಳನ್ನೂ ಕಲೆಹಾಕಿ ಜೋಪಾನವಾಗಿ ಇಟ್ಟುಕೊಳ್ಳುವುದು ನನ್ನ ಹವ್ಯಾಸ. ಅವುಗಳನ್ನು ಆಗಾಗ ನೋಡುತ್ತ ಖುಷಿ ಪಡುವುದು ನನ್ನ ಅಭ್ಯಾಸ' ಎಂದಿದ್ದರು ನಟ ಅಪ್ಪು. 

ಅದನ್ನು ಪದೇಪದೇ ಮುಟ್ಟಿಕೊಳ್ಳುವುದು ಸಮಸ್ಯೆಯಲ್ಲ, ಕಾರಣವಿದೆ: ನಮ್ರತಾ ಗೌಡ!

ಅಂದಹಾಗೆ, ನಟ ಪುನೀತ್ ರಾಜ್‌ಕುಮಾರ್ ಅವರು 29 ಅಕ್ಟೋಬರ್ 2021ರಂದು ತಮ್ಮ 46ನೆಯ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ಇಹಲೋಕ ತ್ಯಜಿಸಿದ್ದಾರೆ. ಡಾ ರಾಜ್‌ಕುಮಾರ್ ಅವರು 12 ಏಪ್ರಿಲ್ 2006ರಲ್ಲಿ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರು 31 ಮೇ 2017ರಲ್ಲಿ ನಿಧನರಾಗಿದ್ದಾರೆ. ಈ ಮೂವರೂ ಕೂಡ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ಅಪಾರ, ಈ ಕಾರಣಕ್ಕೆ ಇಂದಿಗೂ ಕೂಡ ಕರುನಾಡು ಹಾಗು ಕನ್ನಡ ಸಿನಿಪ್ರೇಕ್ಷಕರು ಇವರನ್ನು ಸ್ಮರಿಸುತ್ತಲೇ ಇದ್ದಾರೆ. 

ಜಡೇಜಾ ಫ್ಯಾಮಿಲಿ ಸೊಸೆಯಾಗಲಿಲ್ಲ ಮಾಧುರಿ ದೀಕ್ಷಿತ್; ಕ್ರಿಕೆಟಿಗನ ಲವ್ ಬ್ರೇಕಪ್‌ ಆಗಿದ್ದೇಕೆ?

click me!