ದೇವರ ಮುಂದೆ ಯಾರೂ ಸೂಪರ್‌ ಸ್ಟಾರ್ ಅಲ್ಲ...: ಧ್ರುವ ಸರ್ಜಾ ಪತ್ನಿ ಹೇಳಿಕೆ ವೈರಲ್

Published : Mar 14, 2025, 03:41 PM ISTUpdated : Mar 14, 2025, 03:48 PM IST
ದೇವರ ಮುಂದೆ ಯಾರೂ ಸೂಪರ್‌ ಸ್ಟಾರ್ ಅಲ್ಲ...: ಧ್ರುವ ಸರ್ಜಾ ಪತ್ನಿ ಹೇಳಿಕೆ ವೈರಲ್

ಸಾರಾಂಶ

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮತ್ತು ಧ್ರುವ ಸರ್ಜಾ ಕುಟುಂಬದೊಂದಿಗೆ ಜಕ್ಕನಹಳ್ಳಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ಧ್ರುವ ಆಗಮನದ ಸುದ್ದಿ ತಿಳಿದು ಜನರು ಸೇರಿದರು, ಆದರೆ ಅವರು ಸರಳವಾಗಿ ಎಲ್ಲರೊಂದಿಗೆ ಮಾತನಾಡಿದರು. "ದೇವರ ಮುಂದೆ ಎಲ್ಲರೂ ಸಮಾನರು" ಎಂದು ಧ್ರುವ ಪತ್ನಿ ಪ್ರೇರಣಾ ಹೇಳಿದರು. ಪ್ರೇರಣಾ ಶಿಕ್ಷಕಿಯಾಗಿದ್ದು, ಸದ್ಯ ಕುಟುಂಬದ ಆರೈಕೆಯಲ್ಲಿ ನಿರತರಾಗಿದ್ದಾರೆ. ಧ್ರುವ ಅಭಿನಯದ 'ಕೆಡಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಚಿತ್ರರಂಗದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಆಕ್ಷನ್ ಪ್ರಿನ್ ಧ್ರುವ ಸರ್ಜಾ ತಮ್ಮ ಫ್ಯಾಮಿಲಿ ಜೊತೆ ಜಕ್ಕನಹಳ್ಳಿಯಲ್ಲಿ ನಡೆಯುತ್ತಿರು ಊರು ಜಾತ್ರೆಯಲ್ಲಿ ಭಾಗಿಯಾಗಿದ್ದರು. ಊರು ದೇವರ ಪೂಜೆ ಮುಗಿಸಿಕೊಂಡು ಅಲ್ಲೇ ಇಲ್ಲ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆಎ. ಧ್ರುವ ಸರ್ಜಾ ಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಊರಿನ ಜನರು ಆಗಮಿಸಿ ಫೋಟೋ ಮತ್ತು ವಿಡಿಯೋ ತೆಗೆದುಕೊಂಡಿದ್ದಾರೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಧ್ರುವ ಕಾಮನ್ ಮ್ಯಾನ್ ರೀತಿಯಲ್ಲಿ ಬಂದವರನ್ನು ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ವಯಸ್ಸಾದವರಿಗೆ ಗೌರವ ಕೊಟ್ಟು ತಮಾಷೆ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದೆ. 

ಇನ್ನು ಸೂಪರ್ ಸ್ಟಾರ್‌ಗಳು ಆದ್ರೂ ನಮ್ಮ ಊರು ನಮ್ಮ ಜಾತ್ರೆ ಎಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಎಷ್ಟು ಖುಷಿ ಇದೆ ಎಂದು ಪ್ರಶ್ನೆ ಮಾಡಿದಾಗ. 'ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ದೇವರ ಮುಂದೆ ಯಾರೂ ಸೂಪರ್ ಸ್ಟಾರ್ ಅಲ್ಲ. ಪ್ರತಿಯೊಬ್ಬರೂ ಸಮಾನರೇ. ದೇವರು ನೀನು ಸೂಪರ್ ಸ್ಟಾರ್ ನೀನು ಹೀಗೆ ಅನ್ನಲ್ಲ...ದೇವರು ಕೊಟ್ಟಿರುವುದಕ್ಕೆ ಇವರು ಸೂಪರ್ ಸ್ಟಾರ್. ನಮ್ಮ ರೂಲ್ಸ್ ಏನಿದೆ ಹಿಂದಿನ ಕಾಲದಿಂದ ನಮ್ಮ ಹಿರಿಯರು ಏನ್ ನಡೆಸಿಕೊಂಡು ಬಂದಿದ್ದಾರೆ ಆ ಪದ್ಧತಿಯನ್ನು ನಾವು ಫಾಲೋ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ' ಎಂದು ಧ್ರುವ ಸರ್ಜಾ ಪತ್ನಿ ಪ್ರೇರಣಾ ಉತ್ತರಿಸಿದ್ದಾರೆ. ಇದೇ ಮೊದಲು ಪ್ರೇರಣಾ ಅವರು ಮಾತನಾಡುತ್ತಿರುವುದು ಹೀಗಾಗಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಫ್ಯಾನ್ಸ್‌ ಎದುರು ಆ ಹುಡುಗನಿಗೆ 'ಏಯ್ ಮನೆ ಹಿಂದೆ ಏನೋ ಇದೆ' ಎಂದು ಪುನೀತ್ ಗದರಿದ್ದು ಯಾಕೆ; ವಿಡಿಯೋ ವೈರಲ್

ಪ್ರೇರಣಾ ಮತ್ತು ಧ್ರುವ ಸರ್ಜಾ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಮಾಡಿಕೊಂಡರು. ಸಖತ್ ಸಿಂಪಲ್ ಮನೆತನದಿಂದ ಬಂದಿರುವ ಪ್ರೇರಣಾ ವೃತ್ತಿಯಲ್ಲಿ ಟೀಚರ್. ಪ್ರತಿಷ್ಠಿತ ಕಾಲೇಜ್‌ನಲ್ಲಿ ಪಾಠ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳಾದ ಕಾರಣ ಸದ್ಯ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಹಾರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಣ್ಣ ಪುಟ್ಟ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈಗಾಗಲೆ ಪ್ರೇಮ್ ಬರೆದಿರುವ ಹಾಡುಗಳು ಟ್ರೆಂಡ್ ಕ್ರಿಯೇಟ್ ಮಾಡಿದೆ. ಧ್ರುವ ಸರ್ಜಾ ತೋಟದ ಮನೆಯಲ್ಲಿ ಇರಲಿ ಅಥವಾ ಬೆಂಗಳೂರಿನ ನಿವಾಸದಲ್ಲಿ ಇರಲಿ ಅಭಿಮಾನಿಗಳು ಹುಡುಕಿಕೊಂಡು ಹೋಗಿ ಸೆಲ್ಫಿ ಕೇಳಿ ಕೆಡಿ ಚಿತ್ರದ ಹಾಡುಗಳನ್ನು ಹಾಡಿ ಡ್ಯಾನ್ಸ್ ಮಾಡಿ ತೋರಿಸುತ್ತಾರೆ. 

ಕಾಲೇಜ್‌ನಲ್ಲಿ ಆ ಹುಡುಗಿಗೆ ಐ ಲವ್ ಯೂ ಹೇಳೋಕೆ 1 ವರ್ಷ ತೆಗೊಂಡೆ; ಕೊನೆಗೂ ಹಳೆ ಕಹಾನಿ ಬಿಚ್ಚಿಟ್ಟ ರವಿಚಂದ್ರನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ