ಈ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಲೈಫ್ ಯುವಕರಿಗೆ ಖುಷಿ ಕೊಡುತ್ತೆ. ಅದಕ್ಕೆ ಅವರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೋ ವೀಡಿಯೋ ಮಿಲಿಯನ್‌ಗಟ್ಟಲೆ ಕ್ಲಿಕ್ ಪಡೆಯುತ್ತೆ. ಇದೀಗ ಕೃಷ್ಮ ಪೋಸ್ಟ್ ಮಾಡಿದ್ದು ಎಲ್ಲ ಗಂಡಸರೂ ಯೋಚಿಸುವಂತೆ ಮಾಡಿದೆ.
ಗಂಡಂದಿರು ಹೆಂಡತಿಯರನ್ನು ಹೊಗಳುತ್ತಾರಾ? ಅದರಲ್ಲೂ ಸಿನಿಮಾ ಕಾರ್ಯಕ್ರಮಗಳಲ್ಲಂತೂ ಹೊಗಳಿದಂತೆ ಮಾಡಿ, ಕಾಲೆಳೆಯುವುದೇ ಜಾಸ್ತಿ. ಅಂಥದ್ದರಲ್ಲಿ ಹೆಂಡತಿಯನ್ನು ಹೊಗಳುವ ಸ್ಟಾರ್ ಗಂಡ ಎನ್ನಿಸಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ.
ನಿಜ ಜೀವನದ ದಂಪತಿಯಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಪಾಸಿಟಿವ್ ವಿಮರ್ಶೆಗಳು ಬಂದಿದ್ದೇ ಬಂದಿದ್ದು, ಅದರಲ್ಲೂ ಮಿಲನಾ ನಾಗರಾಜ್ ನಟನೆಗೆ ಒಳ್ಳೆಯ ಮಾತುಗಳು ಕೇಳಿದ್ದೇ ಕೇಳಿದ್ದು ಡಾರ್ಲಿಂಗ್ ಕೃಷ್ಣ ತನ್ನ ಪತ್ನಿಯನ್ನು ವಾಚಾಮಗೋಚರ ಹೊಗಳಿದ್ದಾರೆ.
Kousalya Supraja Rama Review: ಗಂಡಸಿನ ಅಹಂ, ಹೆಣ್ಣಿನ ತಾಳ್ಮೆ ಮಧ್ಯೆ ರಾಮನ ಆಟ
ಅವರ ಮಾತುಗಳು ಹೀಗಿವೆ ನೋಡಿ-
ನಿಧಿಮಾ ಈಸ್ ಬ್ಯಾಕ್. ಈ ಸಲ ಮುತ್ತುಲಕ್ಷ್ಮಿಯಾಗಿ ಬಂದಿದ್ದಾರೆ. ನಾನಂತೂ ಮಿಲನಾ ನಾಗರಾಜ್ ಫ್ಯಾನ್ ಆಗ್ಬಿಟ್ಟೆ. ನಿಮ್ಮ ಫರ್ಫಾರ್ಮೆನ್ಸ್ ಮತ್ತು ನೀವು ಪಾತ್ರ ನಿರ್ವಹಿಸಿದ ರೀತಿಗೆ ಹೆಮ್ಮೆ ಪಡುತ್ತೇನೆ. ತುಂಬಾ ವಿಭಿನ್ನವಾದ ಪಾತ್ರವನ್ನು ಪರ್ಫೆಕ್ಷನ್‌ನಿಂದ ನಿಭಾಯಿಸಿದ್ದೀರಿ. ತುಂಬಾ ಅಪರೂಪದ ಕಾಂಬಿನೇಷನ್ ಆದ ಬುದ್ಧಿಯ ಜೊತೆ ಚಂದ ಮತ್ತು ಬೆಸ್ಟ್ ಗಂಡ ನಿಮಗೆ ದೊರೆತಾಗಿದೆ. ಒಳ್ಳೆಯ ಕೆಲಸವನ್ನು ಮುಂದುವರಿಸಿ ಮತ್ತು ಸ್ಫೂರ್ತಿಯಾಗುತ್ತಿರಿ. ಲವ್ ಯೂ, ಎಂಬ ಪೋಸ್ಟ್ ಬರೆದುಕೊಂಡಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರ ಈ ಮೆಚ್ಚುಗೆಯ ಮಾತುಗಳು ಮಿಲನಾ ಅವರಿಗೆ ಎಷ್ಟು ಖುಷಿ ಕೊಟ್ಟಿದೆಯೋ ಗೊತ್ತಿಲ್ಲ. ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.
ಡಾರ್ಲಿಂಗ್ ಕೃಷ್ಣಗೆ ಧೈರ್ಯ ಇದ್ದರೆ ಮನೇಲಿ ಹೆಂಡ್ತಿ ಕಾಲೆಳೆದು ಕೂರಿಸಲಿ: ಸುದೀಪ್
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕನ್ನಡ ಚಿತ್ರರಂಗದ ಸದ್ಯದ ಹಾಟ್ ಫೇವರಿಟ್ ಜೋಡಿ. ಅವರಿಬ್ಬರನ್ನು ಇಷ್ಟಪಡುವ ಲಕ್ಷಾಂತರ ಮಂದಿ ಇದ್ದಾರೆ. ಅವರೆಲ್ಲರೂ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯನ್ನು ಫಾಲೋ ಮಾಡುತ್ತಾರೆ. ಅವರಿಬ್ಬರು ಎಷ್ಟು ಪ್ರೀತಿಯಿಂದ ಇರುತ್ತಾರೋ ಅಷ್ಟು ಅಭಿಮಾನಿಗಳಿಗೆ ಖುಷಿಯಾಗುತ್ತದೆ. ಡಾರ್ಲಿಂಗ್ ಕೃಷ್ಣಾ ಹಾಕಿರುವ ಈ ಪೋಸ್ಟ್ ಕೂಡ ಅಂಥದ್ದೇ. ಹೊಗಳಿದ್ದು ಹೆಂಡತಿಗಾದರೂ, ಚೆಂದ ಮತ್ತು ಬೆಸ್ಟ್ ಗಂಡ ನಿಮಗೆ ದೊರೆತಾಗಿದೆ ಅನ್ನೋ ಮೂಲಕ ತಮ್ಮ ಬೆನ್ನನ್ನೇ ತಾವು ತಟ್ಟಿಕೊಂಡಿದ್ದ ಸಾವಿರಾರು ಮಂದಿ ಅಭಿಮಾನಿಗಳ ಮುಖದಲ್ಲೂ ನಗು ಮೂಡಿಸಿದೆ.
‘ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಟ್ರೇಲರಲ್ಲಿ ಲಾಂಚ್ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಕೃಷ್ಣ ಅವರೊಂದು ಮಾತು ಹೇಳಿದ್ದಾರೆ, ಹುಡುಗೀರು ತಲೆ ಮೇಲೆ ಕೂತ್ಕೊಳ್ಳೋಕೆ ಹೋದಾಗಲೆಲ್ಲ ಕಾಲೆಳೆದು ಕೆಳಗಡೆ ಹಾಕ್ಬೇಕು ಅಂತ. ಧೈರ್ಯ ಇದ್ದರೆ ಈ ಮಾತನ್ನು ಮನೆಯಲ್ಲಿ ಎಕ್ಸಿಕ್ಯೂಟ್ ಮಾಡಲಿ. ಆಮೇಲೆ ಅವರು ರಿಯಲ್ ಹೀರೋ ಅಂತ ನಾನೂ ಒಪ್ತೀನಿ. ಮಿಲನಾ ಅವ್ರ ಪಾಯಿಂಟೆಡ್ ಹೀಲ್ಸ್ ನೋಡಿದ್ರಲ್ಲಾ, ಒಂದು ವೇಳೆ ಅವ್ರು ಈ ಡೈಲಾಗ್ ಮನೇಲಿ ಹೇಳಿದ್ರೆ ಅದೆಲ್ಲಿರುತ್ತೆ ಅಂತ ಊಹಿಸಬಹುದು. ಈಗ ಹೇಳಿ ಕೃಷ್ಣ, ನೀವು ರಿಯಲ್ ಮ್ಯಾನಾ?’ ಎನ್ನುವ ಮೂಲಕ ಕಿಚ್ಚ ಸುದೀಪ್ ಡಾರ್ಲಿಂಗ್ ಕೃಷ್ಮ ಕಾಲೆಳೆದಿದ್ದು ಸಕತ್ತು ಫನ್ನಿಯಾಗಿತ್ತು.
ರೀಯಲ್ ಮ್ಯಾನ್ ಸುದೀಪ್ ಎಂದಿದ್ದ ಕೃಷ್ಣ:
ಇದೇ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಕೃಷ್ಣ, ‘ನನ್ನ ನಟನಾ ಕೆರಿಯರ್‌ನಲ್ಲಿ ದಿ ಬೆಸ್ಟ್ ಕಥೆ ಈ ಚಿತ್ರದ್ದು. ಇದೊಂದು ಬೆಸ್ಟ್ ಫಿಲಂ ಆಗುತ್ತೆ. ಇನ್ನು ರಿಯಲ್ ಮ್ಯಾನ್ ವಿಷಯಕ್ಕೆ ಬರೋದಾದ್ರೆ ನನ್ ಪ್ರಕಾರ ರಿಯಲ್ ಮ್ಯಾನ್ ಸುದೀಪ್. ನಮ್ಮನೇಲೆಲ್ಲ ಗೆಸ್ಟ್‌ಗಳಿಗೆ ಹೆಂಡತಿ, ಅಮ್ಮ ಅಡುಗೆ ಮಾಡಿ ಬಡಿಸಿದ್ರೆ ಸುದೀಪ್ ಸ್ವತಃ ತಾವೇ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸ್ತಾರೆ. ನಮಗೆಲ್ಲ ತಿನ್ನಿಸ್ತಾರೆ’ ಅಂದರು.