ಒಬ್ಬನು ಹೋದ್ರೆ ಮತ್ತೊಬ್ಬನ ಕಥೆ ಮುಗೀತು; ಯಾಕೆ ಹಾಗೆ ಅಂದಿದ್ರು ಶಂಕರ್ ನಾಗ್?

By Shriram BhatFirst Published Oct 23, 2024, 8:47 PM IST
Highlights

1954, ನವೆಂಬರ್ 9 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಜನಿಸಿದ ಶಂಕರ್‌ ನಾಗ್ ಅವರ ಮೂಲ ಹೆಸರು ಅವಿನಾಶ್. ಆದರೆ, ಪ್ರೀತಿಂದ ಭವಾನಿ ಶಂಕರ್ ಎಂದು ಕರೆಯುತ್ತಿದ್ದರು. ಚಿತ್ರರಂಗಕ್ಕೆ ಬಂದ ಬಳಿಕ..

ಕನ್ನಡದ 'ಆಟೋ ರಾಜ' ಖ್ಯಾತಿಯ ನಟ-ನಿರ್ದೇಶಕ ಶಂಕರ್‌ ನಾಗ್ (Shankar Nag) ಅವರನ್ನು ಮತ್ತು ಅವರ ದುರಂತ ಸಾವನ್ನು ಯಾರು ತಾನೇ ಮರೆಯಲು ಸಾಧ್ಯ? ಕೇವಲ ಮ5ನೇ ವಯಸ್ಸಿಗೇ ಅಸು ನೀಗಿದ ಶಂಕರಣ್ಣ, ಅಷ್ಟರೊಳಗೇ ಬರೋಬ್ಬರಿ 83 ಸಿನಿಮಾದಲ್ಲಿ ನಟನೆ ಮಾಡಿದ್ದರು ಎಂದರೆ ನಂಬಲಿಕ್ಕೇ ಅಸಾಧ್ಯ. ಆದರೆ ಅದು ಸತ್ಯ! 'ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಬಂದ ಶಂಕರ್‌ ನಾಗ್ ಅವರು ಮೊದಲು ನಿರ್ದೇಶಿಸಿದ ಚಿತ್ರ 'ಮಿಂಚಿನ ಓಟ'. 

ನಟ ಹಾಗೂ ಶಂಕರ್‌ ನಾಗ್ ಅವರ ಅಣ್ಣ ಅನಂತ್‌ ನಾಗ (Anant Nag) ಅವರು, ಶಂಕರ್ ನಾಗ್ ಅವರು ನಿಧನರಾದ ಬಳಿಕ 'ನನ್ನ ತಮ್ಮ ಶಂಕರ' ಎಂಬ ಹೆಸರಿನ ಪುಸ್ತಕ ಬರೆದಿದ್ದಾರೆ. ಅದರಲ್ಲಿ ನಟ ಅನಂತ್‌ ನಾಗ್ ಅವರು- 'ಶಂಕರ್‌ ನಾಗ್ ಅವರಿಗೆ ತಾವು 'ಅಕಾಲ ಮೃತ್ಯು' ಹೊಂದುವ ಬಗ್ಗೆ' ಮೊದಲೇ ಸುಳಿವು ಇತ್ತು ಎನ್ನಿಸುತ್ತಿದೆ' ಎಂದಿದ್ದಾರೆ. ಏಕೆಂದರೆ, ಅವರ ತಮ್ಮ ಶಂಕರ್‌ ನಾಗ್ ಅವರು ಆ ಬಗ್ಗೆ ಜ್ಞಾನ ಇರುವವರಂತೆ ವರ್ತಿಸುತ್ತಿದ್ದರು ಎಂದು ಬಳಿಕ ಅನಂತ್‌ ನಾಗ್ ಅವರಿಗೆ ಅನ್ನಿಸಿದೆಯಂತೆ. 

Latest Videos

ಕೂಸು ಹುಟ್ಟುವ ಮುನ್ನವೆ ಕುಲಾವಿ ರೆಡಿ; ಹೆಸರಿಟ್ಟಿಲ್ಲ, ಆಗ್ಲೇ ಒಟಿಟಿ ಹಕ್ಕು ಸಿಕ್ಕ ಮೊದಲ ಕನ್ನಡ ಚಿತ್ರ!

ಶಂಕರ್‌ ನಾಗ್ ಅವರಿಗೆ ತಾವು ಸಾಯೋದು 2 ವರ್ಷ ಮೊದಲೇ ಗೊತ್ತಿತ್ತಾ? ಗೊತ್ತಿತ್ತು ಅನ್ನಿಸುತ್ತದೆ. 1988 ರಲ್ಲೇ ಏನೋ ಚಡಪಡಿಕೆ, ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂಬ ತರಾತುರಿ.. ಒಬ್ಬನು ಹೋದರೆ ಮತ್ತೊಬ್ಬನ ಕಥೆ ಮುಗಿದಂತೆ ಎಂದಿದ್ದ. ಯಾವ ಕ್ಷಣದಲ್ಲಿ ಆ ಮಾತನ್ನು ಹೇಳಿದನೋ ಏನೋ ಗೊತ್ತಿಲ್ಲ, 35ನೇ ವರ್ಷಕ್ಕೇ ಆತನನ್ನು ದೇವರು ಕರೆದುಕೊಂಡ ಬಿಟ್ಟ..' ಎಂದು ಅನಂತ್ ನಾಗ್‌ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. 

1954, ನವೆಂಬರ್ 9 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಜನಿಸಿದ ಶಂಕರ್‌ ನಾಗ್ ಅವರ ಮೂಲ ಹೆಸರು ಅವಿನಾಶ್. ಆದರೆ, ಪ್ರೀತಿಂದ ಭವಾನಿ ಶಂಕರ್ ಎಂದು ಕರೆಯುತ್ತಿದ್ದರು. ಚಿತ್ರರಂಗಕ್ಕೆ ಬಂದ ಬಳಿಕ ಹೆಸರು ಶಂಕರ್‌ ನಾಗ್ ಎಂದು ಬದಲಾಯ್ತು. ಡಾ ರಾಜ್‌ಕುಮಾರ್ ನಟನೆಯ 'ಒಂದು ಮುತ್ತಿನ ಕಥೆ' ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದ ಶಂಕರ್‌ ನಾಗ್ ಅವರು ಅಂದಿನ ಕಾಲದಲ್ಲಿ ನಟ-ನಿರ್ದೇಶಕ ಏನಿಸಿದ್ದ ಏಕೈಕ ಕನ್ನಡಿಗ. 

ಮಾಲಾಶ್ರಿ 'ಕೋತಿ' ಹೇಳಿಕೆ ಅಸಲಿಯತ್ತು ಬಹಿರಂಗ; ಕನಸಿನ ರಾಣಿ ನಿಜವಾಗಿ ಹಾಗೆ ಹೇಳಿದ್ರಾ?

ದಿವಂಗತ ಶಂಕರ್‌ ನಾಗ್ ಅವರ ಬಗ್ಗೆ ನಿಮಗೆ ಇಲ್ಲಿ ಹೆಚ್ಚಿನ ಎಲ್ಲ ಮಾಹಿತಿಯನ್ನು ಸಂಕ್ಷಿಪ್ತವಾಗಿ ಕೊಡಲಾಗಿದೆ, ನೋಡಿ.. 

ಹೆಸರು: ಶಂಕರ್ ನಾಗ್

ಹುಟ್ಟಿದ್ದು: 1954, ನವೆಂಬರ್ 9

ನಕ್ಷತ್ರ ನಾಮ: ಅವಿನಾಶ

ಪ್ರೀತಿಯಿಂದ ಕರೆದದ್ದು: ಭವಾನಿ ಶಂಕರ್

ಊರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರ

ಕುಟುಂಬ: ಶ್ಯಾಮಲಾ (ಅಕ್ಕ), ಅನಂತ್‌ ನಾಗ್ (ಅಣ್ಣ), ಅರುಂಧತಿ (ಹೆಂಡತಿ), ಕಾವ್ಯಾ (ಮಗಳು)

ತಂದೆ: ಹೊನ್ನಾವರ ಸದಾನಂದ ನಾಗರಕಟ್ಟೆ, ತಾಯಿ: ಆನಂದಿ ನಾಗರಕಟ್ಟೆ

ಮೊದಲ ಉದ್ಯೋಗ: ಬ್ಯಾಂಕ್ ನೌಕರ

ಗುರುಗಳು: ಸಾಯಿ ಪರಾಂಜಪೆ, ಗಿರೀಶ್ ಕಾರ್ನಾಡ್

ಇಷ್ಟದ ತಿಂಡಿ: ಖಡಕ್ ಪಾವ್

ನಟಿಸಿದ ಮೊದಲ ಚಿತ್ರ: ಒಂದಾನೊಂದು ಕಾಲದಲ್ಲಿ

ತಿರುವು ನೀಡಿದ ಚಿತ್ರ: ಸೀತಾರಾಮು

ನಿರ್ದೇಶನದ ಮೊದಲ ಚಿತ್ರ: ಮಿಂಚಿನ ಓಟ

ನಿರ್ಮಾಣದ ಮೊದಲ ಚಿತ್ರ: ಮಿಂಚಿನ ಓಟ

ಯಾವತ್ತೂ ಮರೆಯದ ಕೊಡುಗೆ: ಸಂಕೇತ್ ಸ್ಟುಡಿಯೋ

ಜಗತ್ತು ಕೊಂಡಾಡಿದ್ದು: ಮಾಲ್ಗುಡಿ ಡೇಸ್ ಧಾರಾವಾಹಿ ನಿರ್ದೇಶನ

ಬದುಕಿದ್ದು: 35 ವರ್ಷ, 10 ತಿಂಗಳು, 21 ದಿನ

ಚಿತ್ರರಂಗದಲ್ಲಿ ಇದ್ದಿದ್ದು: 1978 ರಿಂದ 1990

ಒಟ್ಟೂ ಚಿತ್ರಗಳು: 83

***

click me!