ಡಾ ರಾಜ್‌ ಜೊತೆ ನಟಿಸಿದ್ದ ಕನ್ನಡದ ಹಿರಿಯ ನಟ ಟಿ ತಿಮ್ಮಯ ವಿಧಿವಶ

By Shriram Bhat  |  First Published Nov 16, 2024, 6:28 PM IST

ಮೇರು ನಟರಾದ   ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಅನಂತ್ ನಾಗ್. ಹೆಸರಾಂತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಮತ್ತು ಅನೇಕರೊಂದಿಗೆ..


ಸ್ಯಾಂಡಲ್‌ವುಡ್‌ನ ಹಿರಿಯ ನಟ ಟಿ ತಿಮ್ಮಯ (T Thimmaiah) ವಿಧಿವಶರಾಗಿದ್ದಾರೆ. ಇಂದು ಅವರು ಹೃದಯಾಘಾತದಿಂದ ನಿಧನರಾದರು.ಕನ್ನಡದ ಹಿರಿಯ ನಟ ಟಿ ತಿಮ್ಮಯ್ಯ ಅವರಿಗೆ 92 ವರ್ಷ ವಯಸ್ಸಾಗಿತ್ತು. 

ಮೇರು ನಟರಾದ   ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಅನಂತ್ ನಾಗ್. ಹೆಸರಾಂತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆವಿ ಜಯರಾಮ್ ಮತ್ತು ಅನೇಕರೊಂದಿಗೆ ಕೆಲಸ ಈ ಟಿ ತಿಮ್ಮಯ್ಯ ಅವರು ಮಾಡಿದ್ದಾರೆ. 

Tap to resize

Latest Videos

undefined

ಮನೆಗೆ ಚಿರು ಹೆಸರಿಲ್ಲ ಎಂದಿದ್ದ ಅಭಿಮಾನಿಗಳೇ 'ದೇವತೆ ನಮ್ಮ ಕರುನಾಡ ಅತ್ತಿಗೆ' ಅಂದಿದ್ಯಾಕೆ?

ಚಲಿಸುವ ಮೋಡಗಳು, ಪ್ರತಿಧ್ವನಿ, ಬಂಧನ, ಬೆಂಕಿಯ ಬಾಲೆ, ಕಾಮನ ಬಿಲ್ಲು, ಪರಮೇಶಿ ಪ್ರೇಮ ಪ್ರಸಂಗ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ , ಕರ್ಣ, ಈ ಜೀವ ನಿನಗಾಗಿ, ಕುರುಕ್ಷೇತ್ರ, ನಿಶ್ರ್ಕರ್ಷ, ಬೆಳದಿಂಗಳ ಬಾಲೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದರು. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ಹಿರಿಯ ನಟ ಟಿ ತಿಮ್ಮಯ್ಯನವರು ಚಿತ್ರರಂಗದೇ ಯಾವುದೇ ಹಿನ್ನೆಲೆ ಇಲ್ಲದೇ ಬಂದವರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅವರನ್ನು ಕನ್ನಡ ಚಿತ್ರರಂಗ ಕೈ ಬೀಸಿ ಕರೆಯಿತು. ನಾಯಕರ ಜೊತೆ ಪ್ರಮುಖ ಪೋಷಕ ಪಾತ್ರಗಳಲಲ್ಇ ಕಾಣಿಸಿಕೊಳ್ಳುತ್ತಿದ್ದ ಅವರು, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅನಾರೋಗ್ಯ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ. 

ಡಾ ರಾಜ್‌ ಮೇಲಿದ್ದ ಭಾರೀ ಆರೋಪವೇನು? ಏನೇ ಇದ್ದರೂ ಅವೆಲ್ಲವೂ ಸತ್ಯಕ್ಕೆ ದೂರ ಅಂದ್ರಲ್ಲ!

ಹಿರಿಯ ನಟ ತಿಮ್ಮಯ್ಯನವರ ನಿಧನಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಹರಿದು ಬರುತ್ತಿದೆ. ಕನ್ನಡ ಚಿತ್ರರಂಗ ಇನ್ನೂ ಒಬ್ಬರು ಹಿರಿಯ ನಟರನ್ನು ಕಳೆದುಕೊಂಡಿತು. ಹಳೆ ಬೇರೊಂದು ದೂರವಾಗಿ ಸ್ಯಾಂಡಲ್‌ವುಡ್ ಬಡವಾಯಿತು ಎಂದು ಹಲವರು ತಮ್ಮ ಸಂತಾಪ ಸೂಚಕ ಮೆಸೇಜ್‌ಗಳಲ್ಲಿ ಬರೆದುಕೊಂಡಿದ್ದಾರೆ. 

click me!