'ಕ್ಷಮೆ' ಕಾದಂಬರಿ ಹೇಗೆ 'ಅಮೆರಿಕಾ ಅಮೆರಿಕಾ 2' ಆಯಿತು? ಮತ್ತೆ ಅದೇ ಮ್ಯಾಜಿಕ್ ಮಾಡ್ತಾರಾ ನಾಗತಿಹಳ್ಳಿ ಚಂದ್ರಶೇಖರ್!

Published : Jul 01, 2026, 05:40 PM IST
Nagathihalli Chandrashekhar

ಸಾರಾಂಶ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟೈಟಲ್ ಅಧಿಕೃತವಾಗಿ ಅನಾವರಣಗೊಂಡಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ನಟಿಸಿರುವ ಈ ಸಿನಿಮಾ 'ಕ್ಷಮೆ' ಕಾದಂಬರಿ ಆಧಾರಿತವಾಗಿದೆ.

ಕನ್ನಡ ಚಿತ್ರರಂಗದ ಸಾರ್ವಕಾಲಿಕ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾದ 'ಅಮೆರಿಕಾ ಅಮೆರಿಕಾ' ಮೂಲಕ ಹೊಸ ಪ್ರೇಮಕಥೆಯ ಅಲೆಯನ್ನು ಸೃಷ್ಟಿಸಿದ್ದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಇದೀಗ ಅದರ ಮುಂದುವರಿದ ಭಾಗವಾದ 'ಅಮೆರಿಕಾ ಅಮೆರಿಕಾ 2' ಚಿತ್ರದೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕೆಲ ದಿನಗಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಚಿತ್ರದ ಶೀರ್ಷಿಕೆಯನ್ನು ಊಹಿಸುವಂತೆ ಅಭಿಮಾನಿಗಳಿಗೆ ಸವಾಲು ಹಾಕಿದ್ದರು. 'ಅಮೆರಿಕಾ ಅಮೆರಿಕಾ', 'ಅಮೃತಧಾರೆ', 'ನನ್ನ ಪ್ರೀತಿಯ ರಾಮು' ಹಾಗೂ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರತಂಡದಿಂದ ಜುಲೈ 1ರಂದು ಹೊಸ ಟೈಟಲ್ ಅನಾವರಣವಾಗಲಿದೆ ಎಂದು ತಿಳಿಸಿದ್ದ ಅವರು, ಇದೀಗ ಅಧಿಕೃತವಾಗಿ 'ಅಮೆರಿಕಾ ಅಮೆರಿಕಾ 2' ಎಂಬ ಶೀರ್ಷಿಕೆಯನ್ನು ಘೋಷಿಸಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಈ ಚಿತ್ರದ ವಿತರಣೆಯ ಹೊಣೆಗಾರಿಕೆಯನ್ನು ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ KVN Productions ವಹಿಸಿಕೊಂಡಿದೆ. ಚಿತ್ರೀಕರಣ ಪೂರ್ಣಗೊಂಡಿರುವ ಚಿತ್ರತಂಡ ಸದ್ಯ ಪೋಸ್ಟ್‌ಪ್ರೊಡಕ್ಷನ್ ಹಾಗೂ ಪ್ರಚಾರ ಕಾರ್ಯಗಳಲ್ಲಿ ತೊಡಗಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

'ಅಮೆರಿಕಾ ಅಮೆರಿಕಾ 2' ಚಿತ್ರದ ಮತ್ತೊಂದು ವಿಶೇಷವೆಂದರೆ, ಇದು ಲೇಖಕಿ ಸಹನಾ ವಿಜಯಕುಮಾರ್ ಅವರ ಜನಪ್ರಿಯ ಕಾದಂಬರಿ 'ಕ್ಷಮೆ' ಆಧಾರಿತವಾಗಿದೆ. ಸಾಹಿತ್ಯದ ಭಾವನಾತ್ಮಕ ಅಂಶಗಳನ್ನು ಸಮಕಾಲೀನ ಚಿತ್ರಭಾಷೆಯಲ್ಲಿ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನವನ್ನು ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರದ ಮೂಲಕ ಮಾಡಿದ್ದಾರೆ. ಕಾದಂಬರಿ ಆಧಾರಿತ ಸಿನಿಮಾಗಳು ವಿರಳವಾಗುತ್ತಿರುವ ಸಮಯದಲ್ಲಿ ಈ ಪ್ರಯತ್ನ ವಿಶೇಷ ಗಮನ ಸೆಳೆಯುತ್ತಿದೆ.

ಚಿತ್ರದ ಕಥೆಗೆ ಹೊಸ ಆಯಾಮ

ಚಿತ್ರದಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಹಾಗೂ ಶಾನ್ವಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಭಿನ್ನ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಈ ಮೂವರು ಕಲಾವಿದರು ಚಿತ್ರದ ಕಥೆಗೆ ಹೊಸ ಆಯಾಮ ನೀಡಲಿದ್ದಾರೆ. ರೊಮ್ಯಾಂಟಿಕ್ ಹಾಗೂ ಭಾವನಾತ್ಮಕ ಕಥಾಹಂದರ ಹೊಂದಿರುವ ಈ ಸಿನಿಮಾ ಹೊಸ ತಲೆಮಾರಿನ ಪ್ರೇಕ್ಷಕರಿಗೂ ಮನಮುಟ್ಟುವ ಅನುಭವ ನೀಡುವ ಭರವಸೆ ಮೂಡಿಸಿದೆ. ಇನ್ನು ಕ್ಲಾಸಿಕ್ ಚಿತ್ರದ ಪರಂಪರೆಯನ್ನು ಮುಂದುವರಿಸುವ 'ಅಮೆರಿಕಾ ಅಮೆರಿಕಾ 2' ಕನ್ನಡ ಸಿನಿಪ್ರಿಯರ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅರೆರೆ.. 'ಗಿಚ್ಚಿ ಗಿಲಿಗಿಲಿ' ಪ್ರಶಾಂತ್‌ ಮದುವೆ ಕಾರ್ಡ್ ನೋಡಿ ಅಚ್ಚರಿಗೊಂಡ ಮೇಘನಾ ರಾಜ್‌!
ನಟ ಅಜೇಯ್ ರಾವ್‌ಗೆ 'ಪಾರ್ಟ್‌ನರ್' ಸಿಕ್ಕರು: ಏನಿದು ಲವ್, ಬ್ರೇಕಪ್, ಲಿವ್-ಇನ್ ನಂತರದ ನಿಜವಾದ ಸಂಬಂಧ!