
ಬೆಂಗಳೂರು (ನ.18) ರೆಬೆಲ್ ಸ್ಟಾರ್ ಅಂಬರೀಷ್ ಕನ್ನಡ ಸಿನಿಮಾ ಮಾತ್ರವಲ್ಲ ಭಾರತೀಯ ಸಿನಿಮಾ ಲೋಕದ ದಿಗ್ಗಜ. ಅಂಬರೀಷ್ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ರೆಬೆಲ್ ಸ್ಟಾರ್. ಅಂಬರೀಷ್ ಹಲವು ಸೂಪರ್ ಹಿಟ್ ಹಾಗೂ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ. ಈ ಪೈಕಿ ಒಂದು ಸಿನಿಮಾ ಅಂಬರೀಷ್‌ಗೆ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಇಷ್ಟೇ ಅಲ್ಲ ಈ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡಿತ್ತು. ಬರೋಬ್ಬರಿ 550 ದಿನಗಳ ಪ್ರದರ್ಶನ ಕಂಡ ಈ ಸಿನಿಮಾ ನೇರವಾಗಿ ಹಿಂದಿಗೆ ಅಮಿತಾಬ್ ಬಚ್ಚನ್ ನಾಯಕನಾಗಿ ರಿಮೇಕ್ ಗೊಂಡಿತು. ಇಷ್ಟೇ ಅಲ್ಲ ತೆಲುಗಿನಲ್ಲೂ ಈ ಸಿನಿಮಾ ರಿಮೇಕ್ ಆಗಿದೆ. ಈ ಸಿನಿಮಾ ಒನ್ ಆ್ಯಂಡ್ ಒನ್ಲಿ ಚಕ್ರವ್ಯೂಹ.
1983ರಲ್ಲಿ ಚಕ್ರವ್ಯೂಹ ಸಿನಿಮಾ ತೆರೆಕಂಡಿತ್ತು. ಅಂಬರೀಷ್‌ಗ ಸಿನಿಮಾ ಪಯಣಕ್ಕೆ ತಿರುವು ನೀಡಿದ ಸಿನಿಮಾ ಇದಾಗಿದೆ. ಅಮರ್ ಅನ್ನೋ ಪೊಲೀಸ್ ಪಾತ್ರದಲ್ಲಿ ಅಂಬರೀಷ್ ಕಾಣಿಸಿಕೊಂಡಿದ್ದರು. ಅಂಬರೀಷ್‌ಗೆ ನಾಯಕಿಯಾಗಿ ಆಶಾ ನಟಿಸಿದ್ದರು. ಈ ಸಿನಿಮಾ ರಾಜ್ಯದ ಸಿನಿಮಾ ಮಂದಿರಗಳಲ್ಲಿ ಬರೋಬ್ಬರಿ 550 ದಿನ ಅಂದರೆ ಸರಿಸುಮಾರು 2 ವರ್ಷಗಳ ಕಾಲ ಪ್ರದರ್ಶನ ಕಂಡಿದೆ. ಇದು ಐತಿಹಾಸಿಕ ದಾಖಲೆಯಾಗಿದೆ.
ಚಕ್ರವ್ಯೂಹ ಸಿನಿಮಾ 25 ರಿಂದ 35 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಅಂದು ಸಿನಿಮಾದ ಕಲೆಕ್ಷನ್ ಕೇವಲ ಚಿತ್ರಮಂದಿರದ ಟಿಕೆಟ್ ಮಾರಾಟದಿಂದ ಬಂದ ಹಣವಾಗಿತ್ತು. ಇತರ ಯಾವುದೇ ಮೂಲಗಳಿಲ್ಲ. ಅಂದು ಟಿಕೆಟ್ ಬೆಲೆ 2 ರೂಪಾಯಿಯಿಂದ 5 ರೂಪಾಯಿ ಮಾತ್ರ. ಈ ಟಿಕೆಟ್ ಬೆಲೆಯಲ್ಲಿ ಅಂಬರೀಷ್ ಅಭಿನಯದ ಚಕ್ರವ್ಯೂಹ ಸಿನಿಮಾ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಮೂಲಕ 1983ರಲ್ಲಿ ಸಾರ್ವಕಾಲಿಕ ದಾಖಲೆ ಬರೆದಿತ್ತು. 1983ರ ಸಮಯದಲ್ಲಿ ಕನ್ನಡ ಸಿನಿಮಾ 10 ರಿಂದ 15 ಲಕ್ಷ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಅತೀ ದೊಡ್ಡ ತಾರಾ ಬಳಗವಿತ್ತು. ರಾಜಕಾರಣಿ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಅಭಿನಯಿಸಿದರೆ, ವಜ್ರಮುನಿ, ತೂಗುದೀಪ್ ಶ್ರೀನಿವಾಸ್, ಟೈಗರ್ ಪ್ರಭಾವಕರ್, ವಿ ರವಿಚಂದ್ರನ್, ಶಕ್ತಿ ಪ್ರಸಾದ್ ಸೇರಿದಂತೆ ಸ್ಟಾರ್ ನಟರು ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ದೊಡ್ಡ ತಾರಾಬಳಗದ ಕಾರಣ ಈ ಸಿನಿಮಾದ ಬಜೆಟ್ ಹೆಚ್ಚಾಗಿತ್ತು.
ಅಂಬರೀಷ್ ಅವರ ಚಕ್ರವ್ಯೂಹ ಸಿನಿಮಾ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ಇತರ ಭಾಷೆಗಳ ಸಿನಿಮಾ ಇಂಡಸ್ಟ್ರಿಯ ಕುತೂಹಲಕ್ಕೆ ಕಾರಣವಾಗಿತ್ತು. ಹೀಗಾಗಿ ಇದೇ ಸಿನಿಮಾವನ್ನು ಅಮಿತಾಬ್ ಬಚ್ಚನ್ ನಾಯಕನಾಗಿ ಇಂಕ್ವಿಲಾಬ್ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. 1984ರಲ್ಲಿ ಇಂಕ್ವಿಲಾಬ್ ಸಿನಿಮಾ ತೆರೆಕಂಡಿತ್ತು.ತೆಲುಗಿನಲ್ಲಿ ಕೃಷ್ಣ ನಾಯಕನಾಗಿ ಈ ಸಿನಿಮಾವನ್ನು ಮುಖ್ಯಮಂತ್ರಿ ಅನ್ನೋ ಹೆಸರಿನಲ್ಲಿ ರಿಮೇಕ್ ಮಾಡಾಲಾಯಿತು. ಹಿಂದಿ ಹಾಗೂ ತೆಲುಗಿನಲ್ಲಿ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು.
ಕನ್ನಡದ ಸಿನಿಮಾ ಒಂದು ಹಿಂದಿ ಹಾಗೂ ತೆಲುಗು ಭಾಷೆಗೆ ರಿಮೇಕ್ ಆಗುವ ಮೂಲಕ ಹೊಸ ಇತಿಹಾಸ ರಚಿಸಿತ್ತು. ಇತ್ತ ಅಂಬರೀಷ್ ಸ್ಟಾರ್ ನಟನಾಗಿದ್ದು ಮಾತ್ರವಲ್ಲ, ಸ್ಯಾಂಡಲ್‌ವುಡ್ ಪಯಣದಲ್ಲಿ ಮಹತ್ತರ ಗೆಲುವು ಹಾಗೂ ಯಶಸ್ಸು ನೀಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.