ಅಪ್ಪ ಕೊಡಿಸಿದ ಐಸ್ ಕ್ರೀಂ ತಿಂದು, ಅಮ್ಮನಿಗೆ ಮುದ್ದಾಗಿ Sorry ಹೇಳಿದ ಪರಿ…. ಮಿಲನಾ ಕೃಷ್ಣ ಮಗಳ ಕ್ಯೂಟ್ Video viral

Published : Nov 18, 2026, 07:02 PM IST
Milana Nagaraj

ಸಾರಾಂಶ

ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಗಳಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಮುದ್ದು ಮಗಳು ಪರಿಯ ಮುದ್ದಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇದೀಗ ಐಸ್ ಕ್ರೀಂ ತಿಂದು ಸಾರಿ ಹೇಳುತ್ತಿರುವ ವಿಡಿಯೋ ಜನ ಮನ ಗೆಲ್ಲುತ್ತಿದೆ.

ಮಿಲನಾ ಕೃಷ್ಣ ಮುದ್ದಿನ ಮಗಳು ಪರಿ

ಚಂದನವನದ ಸ್ಟಾರ್ ಜೋಡಿಗಳಲ್ಲಿ ಒಬ್ಬರು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ. ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮ ಮುದ್ದು ಮಗಳ ಜೊತೆ ಕ್ವಾಲಿಟಿ ಸಮಯ ಕಳೆಯೋದನ್ನು ಮಾತ್ರ ಮರೆಯೋದಿಲ್ಲ. ಮಗಳ ಜೊತೆಗಿನ ಆಟ, ಪಾಠದ ಮುದ್ದಾದ ವಿಡಿಯೋಗಳನ್ನು ಪರಿ ಹೆಸರಿನ ಇನ್’ಸ್ಟಾಗ್ರಾಂ ಖಾತೆಯಲ್ಲಿ ನಟಿ ಶೇರ್ ಮಾಡುತ್ತಲೂ ಇರುತ್ತಾರೆ. ಈ ವಿಡಿಯೋಗಳಂತೂ ಮಗಳಷ್ಟೇ ಸಖತ್ ಕ್ಯೂಟ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ.

ಇನ್ಸ್ಟಾಗ್ರಾಂನಲ್ಲಿ ಪರಿಗೆ ಸಿಕ್ಕಾಪಟ್ಟೆ ಫಾಲೋವರ್ಸ್

ಪರಿ ಪುಟ್ಟ ಮಗುವಾಗಿರುವಾಗಲೇ ಆಕೆಯ ಹೆಸರಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದು, ಅದರಲ್ಲಿ ಮುದ್ದಾದ ವಿಡಿಯೋ ಫೋಟೋಗಳನ್ನು ನಟಿ ಶೇರ್ ಮಾಡುತ್ತಾ ಬಂದಿದ್ದಾರೆ. ಈಗಾಗಲೇ ಪರಿ ಎಂ ಕೃಷ್ಣ ಖಾತೆಯಲ್ಲಿ 65 ವಿಡಿಯೋಗಳು ಪೋಸ್ಟ್ ಆಗಿದ್ದು, ಮಗುವನ್ನು ಬರೋಬ್ಬರಿ 71,100 ಜನರು ಫಾಲೋ ಮಾಡುತ್ತಿದ್ದಾರೆ. ಈ ಬಾರಿ ಐಸ್ ಕ್ರೀಮ್ ತಿನ್ನುತ್ತಿರುವ ಮುದ್ದಾದ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಪರಿಯ ಮುದ್ದಾದ ಮಾತು, ಅಪ್ಪ -ಅಮ್ಮನ ಮಿಮಿಕ್ರಿ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.

ಅಪ್ಪ ಕೊಡಿಸಿದ ಐಸ್ ಕ್ರೀಂ ತಿಂದು, ಅಮ್ಮನಿಗೆ ಸಾರಿ ಹೇಳಿದ ಕಂದ

ವಿಡೀಯೋದಲ್ಲಿ ಪರಿ ಐಸ್ ಕ್ರೀಂ ತಿನ್ನುತ್ತಿದ್ದಾರೆ, ಅಮ್ಮ ಮಿಲನಾ ನಾಗರಾಜ್ ಮಗುವಿನ ಬಳಿ ಪರಿ ಏನ್ ತಿಂತಾ ಇದ್ದೀಯಾ ಎಂದು ಕೇಳಿದ್ದಾರೆ. ಪರಿ: ಐಸ್ ಕ್ರೀಂ ಎಂದು ಹೇಳಿದ್ದಾರೆ. ಯಾರ್ ಕೊಟ್ಟಿದ್ದು ಐಸ್ ಕ್ರೀಂ ಎಂದು ಕೇಳಿದಾಗ ಪಪ್ಪ ಎಂದಿದ್ದಾಳೆ ಪರಿ. ಅದಕ್ಕೆ ಮಿಲನಾ, ಐಸ್ ಕ್ರೀಂ ತಿಂದರೆ ಅಮ್ಮ ಏನೆನ್ನುತ್ತಾರೆ ಎಂದು ಕೇಳಿದ್ದಕ್ಕೆ, ಬೈಯ್ಯುತ್ತಾರೆ ಎನ್ನುವಂತೆ ಕೈಯಲ್ಲಿ ತೋರಿಸಿದ್ದಾಳೆ ಪರಿ. ಪಪ್ಪನೂ ಹಾಗೆ ಹೇಳುತ್ತಾರೆ ಎಂದಾಗ, ಕೃಷ್ಣ ನಾನು ಹೋಯ್ ಹೇಳ್ತೀನಾ, ನಾನೆ ಅಲ್ವಾ ಐಸ್ ಕ್ರೀಂ ಕೊಡಿಸಿದ್ದು ಎನ್ನುತ್ತಾರೆ. ಇನ್ನು ಐಸ್ ಕ್ರೀಂ ತಿಂದ್ರೆ ಏನಾಗುತ್ತೆ ಎಂದಿದ್ದಕ್ಕೆ ಚಳಿಯಾಗುತ್ತೆ ಎಂದು ನಟಿಸಿ ತೋರಿಸಿದ್ದಾರೆ ಪರಿ. ಕೊನೆಗೆ ಅಪ್ಪನಿಗೆ ಥ್ಯಾಂಕ್ಯೂ ಪಪ್ಪ ಹೇಳಿ, ಅಮ್ಮನಿಗೆ ಸಾರಿ ಅಮ್ಮ ಎಂದು ಮುದ್ದಾಗಿ ಹೇಳಿ, ಇನ್ನು ಮುಂದೆ ಐಸ್ ಕ್ರೀಂ ತಿನ್ನೋದಿಲ್ಲ ಎಂದು ಪ್ರಾಮೀಸ್ ಮಾಡಿದ್ದಾರೆ ಪರಿ. ಈ ವಿಡಿಯೋ ಕೆಲವೇ ಸಮಯದಲ್ಲಿ ಲಕ್ಷ ವ್ಯೂವ್ಸ್ ದಾಟಿದ್ದು, ಜನ ಸಿಕ್ಕಾಪಟ್ತೆ ಇಷ್ಟಪಟ್ಟಿದ್ದಾರೆ. ಪರಿಯ ಮುದ್ದಾದ ವಿಡಿಯೋ, ಮಾತು ಕೇಳಿ ಪರಿ ಸೋ ಕ್ಯೂಟ್ ಎನ್ನುತ್ತಾ, ಹಾರ್ಟ್ ಸುರಿಮಳೆ ಸುರಿಸಿದ್ದಾರೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ ಮಿಲನಾ ನಾಗರಾಜ್ ಮತ್ತು ಕೃಷ್ಣ, ಲವ್ ಮಾಕ್ಟೇಲ್ ಸಿನಿಮಾ ಬಳಿ, 2021 ಫೆಬ್ರುವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ 2024ರ ಸೆಪ್ಟೆಂಬರ್ 5ರಂದು ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಪರಿ ಎಂದು ಹೆಸರಿಟ್ಟಿದ್ದಾರೆ. ಇದೀಗ ಪರಿಗೆ ಎರಡು ವರ್ಷ ತುಂಬಿದ್ದು, ಮಿಲನಾ ಮತ್ತು ಕೃಷ್ಣ ತಮ್ಮ ಹೆಚ್ಚಿನ ಸಮಯವನ್ನು ಮಗಳೊಂದಿಗೆ ಕಳೆಯುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಯಲ್ ಸ್ಟಾರ್ ಪುತ್ರನ 'ಆಯುಷ್' ವಿವಾದ ಸುಖಾಂತ್ಯ; ಪುರುಷೋತ್ತಮ್-ಪ್ರಿಯಾಂಕಾ ಉಪೇಂದ್ರ ವಿವಾದ ಬಗೆಹರಿದಿದ್ದು ಹೇಗೆ?
ಪತ್ನಿ ಪಾವನಾಗೆ ಚಿಕ್ಕಣ್ಣ ಕೊಟ್ಟ ಮೊದಲ ಸರ್ಪ್ರೈಸ್ ಗಿಫ್ಟ್ ಯಾವುದು? ಗುಟ್ಟು ಬಿಚ್ಚಿಟ್ಟ ಹಾಸ್ಯನಟ