ಲಂಗೋಟಿ ಕಟ್ಕೊಂಡು ಅಂಡರ್‌ವೇರ್‌ಗಾಗಿ ಓಡೋ ಪಾತ್ರ 'ಲಂಗೋಟಿಮ್ಯಾನ್‌': ಸೆ.20ರಂದು ರಿಲೀಸ್

By Kannadaprabha News  |  First Published Sep 13, 2024, 6:41 PM IST

‘ಲಂಗೋಟಿ ಬಲು ಒಳ್ಳೆದಣ್ಣ’ ಹಾಡು ಬಿಡುಗಡೆಯಾದ ಮೇಲೆ ಆಕ್ಷೇಪ ವ್ಯಕ್ತಪಡಿಸಿದವರು ಸುಮ್ಮನಾಗಿದ್ದಾರೆ. ಪುರಂದರ ದಾಸರ ‘ಲಂಗೋಟಿ ಬಲು ಒಳ್ಳೆದಣ್ಣ’ ಎಂಬ ಪದದ ಮೊದಲ ಸಾಲನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.


ಸಂಜೋತಾ ಭಂಡಾರಿ ನಿರ್ದೇಶನದ ‘ಲಂಗೋಟಿ ಮ್ಯಾನ್’ ಮುಂದಿನವಾರ ಸೆ.20ರಂದು ಬಿಡುಗಡೆ ಆಗಲಿದೆ. ಚಿತ್ರದ ಟೀಸರ್‌ ಬಿಡುಗಡೆ ಆಗುತ್ತಿದ್ದಂತೆ ಕೆಲವರು ಈ ಚಿತ್ರದ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ‘ಲಂಗೋಟಿ ಬಲು ಒಳ್ಳೆದಣ್ಣ’ ಹಾಡು ಬಿಡುಗಡೆಯಾದ ಮೇಲೆ ಆಕ್ಷೇಪ ವ್ಯಕ್ತಪಡಿಸಿದವರು ಸುಮ್ಮನಾಗಿದ್ದಾರೆ. ಪುರಂದರ ದಾಸರ ‘ಲಂಗೋಟಿ ಬಲು ಒಳ್ಳೆದಣ್ಣ’ ಎಂಬ ಪದದ ಮೊದಲ ಸಾಲನ್ನು ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ.

ಪ್ರಮೋದ್ ಮರವಂತೆ ಹಾಡಿನ ಗೀತರಚನೆ ಮಾಡಿದ್ದು, ಎ2 ಮ್ಯೂಸಿಕ್‌ನಲ್ಲಿ ಬಿಡುಗಡೆ ಆಗಿದೆ. ಸುಮೇದ್ ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಕುರಿತು ನಿರ್ದೇಶಕಿ ಸಂಜೋತಾ ಭಂಡಾರಿ, ‘ಈ ಚಿತ್ರದ ನಿಜವಾದ ಹೀರೋ ಲಂಗೋಟಿ. ಶೀರ್ಷಿಕೆ ಕುರಿತು ಅನೇಕರು ಆಕ್ಷೇಪ ಎತ್ತಿದ್ದಾರೆ. ಆದರೆ ಈ ಸಿನಿಮಾ ಎಲ್ಲಕ್ಕೂ ಉತ್ತರ ಕೊಡಲಿದೆ’ ಎಂದು ಹೇಳಿದ್ದಾರೆ. ಸಂಜೋತಾ ಜೊತೆ ಐಶ್ವರ್ಯಾ ರಮೇಶ್, ವರ್ಷ ಅಮರನಾಥ್, ಸುಧೀಕ್ಷಾ ಎನ್ ರೆಡ್ಡಿ, ರೋಮಿ ಮುಂತಾದ ಮಹಿಳಾ ತಂಡ ಚಿತ್ರಕ್ಕಾಗಿ ಕಾರ್ಯ ನಿರ್ವಹಿಸಿರುವುದು ವಿಶೇಷ. ಆಕಾಶ್ ರ‍್ಯಾಂಬೋ, ಸ್ನೇಹಾ ಖುಷಿ, ಸಂಹಿತಾ ವಿನ್ಯಾ ಪ್ರಧಾನ ಪಾತ್ರಗಳಲ್ಲಿದ್ದಾರೆ.

Tap to resize

Latest Videos

undefined

ಟೀಸರ್‌ಗೆ ಜನ ಮೆಚ್ಚುಗೆ: ಆಕಾಶ್‌ ರ್‍ಯಾಂಬೋ ನಟನೆಯ ‘ಲಂಗೋಟಿ ಮ್ಯಾನ್‌’ ಸಿನಿಮಾ ಟೀಸರ್‌ ಏ2 ಫಿಲಂಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಐದೂವರೆ ಲಕ್ಷದಷ್ಟು ಜನ ಈ ಟೀಸರ್‌ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ಆಕಾಶ್‌ ರ್‍ಯಾಂಬೋ, ‘ನಿರ್ದೇಶಕರು ಹಿಂಜರಿಕೆಯಲ್ಲೇ, ಬರೀ ಲಂಗೋಟಿ ಹಾಕ್ಕೊಂಡು ಆ್ಯಕ್ಟ್‌ ಮಾಡಬೇಕಾಗುತ್ತೆ ಅಂದರು. ನಾನು ಕ್ಯಾಮರಾ ಮುಂದೆ ಫುಲ್ ಬೆತ್ತಲಾಗಿ ಓಡು ಅಂದರೆ ಅದಕ್ಕೂ ರೆಡಿ ಅಂದೆ. ಈ ಸಿನಿಮಾದಲ್ಲಿ ನನಗೆ ಲಂಗೋಟಿ ಕಟ್ಕೊಂಡು ಅಂಡರ್‌ವೇರ್‌ಗಾಗಿ ಓಡೋ ಪಾತ್ರ’ ಎಂದರು.

ಕಪ್ಪು ಕಲ್ಲಿನ ಕಥೆ, ಸಿನಿಮಾ ಹೀರೋ ಸೈನಿಕ.. ವಿಕ್ಕಿ ವರುಣ್‌ ನಟನೆಯ ಥ್ರಿಲ್ಲರ್‌ ಚಿತ್ರ ಕಾಲಾಪತ್ಥರ್‌

ನಿರ್ದೇಶಕಿ ಸಂಜೋತಾ ಭಂಡಾರಿ ಮೂಲತಃ ಸಾಫ್ಟ್‌ವೇರ್ ಹಿನ್ನೆಲೆಯವರು. ಅವರು, ‘ನಾನು ಈ ಕಥೆಯ ಹಿಂದೆ ಹೋದದ್ದಲ್ಲ. ಕಥೆಯೇ ಸಿನಿಮಾವಾಗಲು ನನ್ನನ್ನು ಬಳಸಿಕೊಂಡಿತು. ಈ ಸಿನಿಮಾ ಸೂಪರ್‌ ಹಿಟ್‌ ಆಗಿ, ಅವಾರ್ಡೂ ಪಡೆಯುತ್ತದೆ ಎಂಬ ನಂಬಿಕೆ ನನ್ನದು’ ಎಂದರು. ನಟ ಶರಣ್‌ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. ನಾಯಕಿ ಸಂಹಿತಾ ವಿನ್ಯಾ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಕಲಾವಿದರಾದ ಹುಲಿ ಕಾರ್ತಿಕ್‌, ವೀರೇಂದ್ರ, ಸಾಯಿ ಪಾಲ್ಗುಣ್, ಪಲ್ಟಿ ಗೋವಿಂದ ಸುದ್ದಿಗೋಷ್ಠಿಯಲ್ಲಿದ್ದರು.

click me!