
ಕನ್ನಡ ಕಿರುತೆರೆಯ ನಾಗಿಣಿ ಮತ್ತು ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಟ್ರಾವಲರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದೀಪಿಕಾ ದಾಸ್ ಚಿತ್ರದ ಹೆಸರು ಹ್ಯಾಷ್‌ಟ್ಯಾಗ್ ಪಾರು ಪಾರ್ವತಿ ಎಂದು. ಈ ಚಿತ್ರಕ್ಕೆ ಡೀಪಿ ಸಿಕ್ಕಾಪಟ್ಟೆ ವೇಟ್ ಲಾಸ್ ಮಾಡಿದ್ದಾರೆ. ಮದುವೆಗೂ ಮುನ್ನ ಒಂದು ತೂಕವಿದ್ದ ದೀಪಿಕಾ ದಾಸ್ ಮದುವೆ ಆದ ಮೇಲೆ ಮತ್ತೊಂದು ಸೈಜ್ ಇದ್ದಾರೆ.
ಒಂದು ತಿಂಗಳಲ್ಲಿ ವೇಟ್ ಲಾಸ್:
'ತಿಂಗಳಲ್ಲಿ 10 ಕೆಜಿ ಕಡಿಮೆ ಮಾಡಲು ಯಾರೂ ಹೋಗಬೇಡಿ ಅದು ಒಳ್ಳೆಯದಲ್ಲ. ನನಗೆ ಅನಿವಾರ್ಯವಾಗಿತ್ತು ಹೀಗಾಗಿ ತೂಕ ಇಳಿಸಿಕೊಂಡೆ. ನಮ್ಮ ಸಿನಿಮಾ ಶೂಟಿಂಗ್ ಸಮಯದಲ್ಲಿ ತುಂಬಾ ಚಾಲೆಂಜ್‌ಗಳಿತ್ತು ಏಕೆಂದರೆ ಅದೇ ವಾತಾವರಣದಲ್ಲಿ ಚಿತ್ರೀಕರಣ ಮಾಡಬೇಕಿತ್ತು ಆಮೇಲೆ ನಮಗೋಸ್ಕರ ಇಡೀ ಟೀಂ ಕಾಯುತ್ತಿರುತ್ತಾರೆ ಹಾಗೂ ಮತ್ತೊಬ್ಬರಿಗೆ ಡೇಟ್ ಸಿಗುವುದಿಲ್ಲ ಈ ರೀತಿ ಸಮಸ್ಯೆಗಳು ಆಗುತ್ತದೆ ಹೀಗಾಗಿ ಪ್ರಯತ್ನ ಮಾಡೋಣ ಅಂತ ಮಾಡಿದ್ದಕ್ಕೆ ಸಣ್ಣಗಾದೆ. ಸಣ್ಣಗಾಗಿದ್ದಕ್ಕೆ ಸರಿಯಾದ ಪ್ರತಿಫಲ ಸಿಕ್ಕಿತ್ತು ಪಾತ್ರ ಡಿಮ್ಯಾಂಡ್ ಮಾಡುತ್ತಿದ್ದದನ್ನು ನೀಡಿರುವೆ' ಎಂದು ದೀಪಿಕಾ ದಾಸ್.
ಗಣೇಶನ ಮುಂದೆನೂ ಟ್ರಾನ್ಸ್‌ಪರೆಂಟ್ ಸೀರೆ ಹಾಕ್ಬೇಕಾ?; ಭವ್ಯಾ ಗೌಡ ಫೋಟೋ ವೈರಲ್ ಮಾಡಿ ನೆಟ್ಟಿಗರು!
ಹೇರ್‌ಕಟ್:
'ನಾನು ಉದ್ದ ಕೂದಲು ಬಿಟ್ಟು ಅದಕ್ಕೆ ನೀಲಿ ಬಣ್ಣ ಕಲರಿಂಗ್ ಮಾಡಿಸಿಕೊಂಡು ಕೂಲ್ ಆಗಿದ್ದೆ ಏಕೆಂದರೆ ನನಗೆ ಉದ್ದ ಕೂದಲು ತುಂಬಾನೇ ಆಸೆ ಇತ್ತು. ಆ ಸಮಯದಲ್ಲಿ ಈ ಪ್ರಾಜೆಕ್ಟ್ ಬಂದಾಗ ತುಂಬಾನೇ ಯೋಚನೆ ಮಾಡಿದೆ ನನ್ನ ಕೂದಲು ನನಗೆ ಮತ್ತೆ ಬರುತ್ತದೆ ಆದರೆ ಈ ಪಾತ್ರ ಸಿಗುವುದು ಒಂದು ಅವಕಾಶ ಅನ್ನೋ ಪಾಸಿಟಿವ್ ಯೋಚನೆಯಲ್ಲಿ ಕಟ್ ಮಾಡಿದೆ. ಚಿತ್ರದಲ್ಲಿ ನನಗೆ ಬೇಸರ ಆಗಬಾರದು ಎಂದು ನಮ್ಮ ನಿರ್ದೇಶಕರು ಆರಂಭದಲ್ಲಿ ಉದ್ದ ಕೂದಲು ಇದ್ದಾಗ ಶೂಟಿಂಗ್ ಮಾಡಿ ಆಮೇಲೆ ಟ್ರಾನ್ಸ್‌ಫಾರ್ಮೇಷನ್ ಆದ ಮೇಲೆ ಮತ್ತೆ ಶೂಟಿಂಗ್ ಮಾಡಿದ್ದಾರೆ. ನನಗೆ ಸಮಾಧಾನ ಆಗುವ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ' ಎಂದು ದೀಪಿಕಾ ದಾಸ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನನಗೆ ಜೀವ ಬೆದರಿಕೆ ಹಾಕಿರುವುದು ನಿಜ, ಈಗಲೂ ತಂದೆ ತಾಯಿಗೆ ಧೈರ್ಯ ಹೇಳುತ್ತಿರುವೆ: ವರ್ಷ ಕಾವೇರಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.