ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್​! ಒಂದು ಸಾವಿರ ರೂ. ಗೆದ್ದೋರು ಯಾರು?

Published : Mar 06, 2025, 03:46 PM ISTUpdated : Mar 06, 2025, 04:42 PM IST
ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್​! ಒಂದು ಸಾವಿರ ರೂ. ಗೆದ್ದೋರು ಯಾರು?

ಸಾರಾಂಶ

ನಟಿ ಅದಿತಿ ಪ್ರಭುದೇವ್ ಚಿತ್ರರಂಗದ ಜೊತೆಗೆ ವೈಯಕ್ತಿಕ ಜೀವನವನ್ನೂ ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ತಂದೆಯೊಂದಿಗೆ ಎಳನೀರು ಕುಡಿಯುವ ಸ್ಪರ್ಧೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಮಗುವಿಗೆ ಹಾಲುಣಿಸುವ ಸಲುವಾಗಿ ವಾಹಿನಿಯವರು ನೀಡಿದ ಸಹಕಾರದ ಬಗ್ಗೆ ಮಾತನಾಡಿದ್ದಾರೆ. ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಅದಿತಿ, ಅಭಿಮಾನಿಗಳೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.

 ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿದ ನಟಿ,  ಸ್ಯಾಂಡಲ್‌ವುಡ್​ನಲ್ಲಿ ಬೇಡಿಕೆ ಇರುವಾಗಲೇ ಹಸೆಮಣೆ ಏರಿದರು. ಅದಿತಿ, ಕೂರ್ಗ್ ಮೂಲದ ಉದ್ಯಮಿ ಯಶಸ್ ಜೊತೆ ದಾಂಪತ್ಯ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಇದೀಗ ಹತ್ತು ತಿಂಗಳ ಮಗುವಿನ ಅಮ್ಮ ಕೂಡ. ಸಿನಿಮಾ ಜೊತೆಗೆ ವೈವಾಹಿಕ ಬದುಕನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ  ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿಯಾಗಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  

ಇದೀಗ, ನಟಿ ಅಪ್ಪನ ಜೊತೆ ಎಳನೀರು ಚಾಲೆಂಜ್​ ಮಾಡಿ ವಿಡಿಯೋ ಮಾಡಿದ್ದಾರೆ. ತುಂಬಾ ದಿನಗಳ ಬಳಿಕ ತಮ್ಮ ಮಗಳನ್ನು ಹೊರಗಡೆ ಕರೆದುಕೊಂಡು ಹೋಗಿರುವ ನಟಿ, ಅಪ್ಪನ ಜೊತೆ ಎಳನೀರು ಬೆಟ್​ ಕಟ್ಟಿದ್ದಾರೆ. ಯಾರು ಹೆಚ್ಚು ಫಾಸ್ಟ್​ ಆಗಿ ಎಳನೀರು ಕುಡಿಯುತ್ತಾರೆ ಎನ್ನುವುದು ಚಾಲೆಂಜ್​. ಅದರಲ್ಲಿ ನಟಿಯೇ ಗೆದ್ದಿದ್ದಾರೆ. ಅಪ್ಪನಿಂದ ದುಡ್ಡು ಪಡೆದುಕೊಂಡಿದ್ದಾರೆ. ಇದರ ವಿಡಿಯೋವನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಕೆಲವು ಬ್ರಾಂಡ್​ಗಳು ತಮ್ಮ ವಸ್ತುಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಈಗೀಗ ಕಿರುತೆರೆ ಮತ್ತು ಹಿರಿತೆರೆ ನಟ-ನಟಿಯರ ಮೊರೆ ಹೋಗುತ್ತವೆ. ಟಿವಿಗಳಲ್ಲಿ ಜಾಹೀರಾತು ಹಾಕುವುದಕ್ಕಿಂತ ಹೆಚ್ಚು ಯೂಟ್ಯೂಬ್​ಗಳ ಮೂಲಕ ಇಂಥ ಜಾಹೀರಾತುಗಳನ್ನು ಮಾಡುತ್ತವೆ. ಅವರ ಜಾಹೀರಾತುಗಳನ್ನು ನೇರವಾಗಿ ಹಾಕುವ ಬದಲು ಏನಾದರೂ ವಿಡಿಯೋ ಮಾಡಿ ಅದರಲ್ಲಿ, ಜಾಹೀರಾತುಗಳನ್ನೂ ತೋರಿಸಿ, ಅದೇ ಪ್ರಾಡಕ್ಟ್​ ತಾವು ಉಪಯೋಗಿಸುವುದು ಎಂದು ಹೇಳುವ ಟ್ರೆಂಡ್​​ ಇದೆ.

ಅಮ್ಮ ಆದ್ಮೇಲೆ ದಪ್ಪ ಆಗ್ತಾರೆನ್ನೋ ಸೆನ್ಸೂ ಇಲ್ವೇನ್ರೀ.. ತೆಳ್ಳಗಾದ್ರೂ ಕೇಳ್ತೀರಾ... ನಟಿ ಅದಿತಿ ಪ್ರಭುದೇವ ವಿಡಿಯೋ ವೈರಲ್

ಅದೇ ರೀತಿ, ಈ ಎಳನೀರು ಚಾಲೆಂಜ್​ ವಿಡಿಯೋದಲ್ಲಿಯೂ ನಟಿ ಅದಿತಿ ಪ್ರಭುದೇವ, ಕ್ರೀಂ ಒಂದಕ್ಕೆ ಪ್ರಮೋಟ್​ ಮಾಡಿರುವುದನ್ನೂ ನೋಡಬಹುದು. ಜೊತೆಗೆ ಮಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಮಗುವಿಗೆ 2-3 ತಿಂಗಳು ಇರುವಾಗ  ನಟಿ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಂಡು ಕಮ್​ಬ್ಯಾಕ್​ ಮಾಡಿದ್ದಾರೆ. ಈ ರೀತಿಯಾಗಿ ಅವರು ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ,  ಚಿಕ್ಕಮಗುವನ್ನು ಬಿಟ್ಟು ಬಂದು ಕೆಲಸ ಮಾಡುವ ಅವಶ್ಯಕತೆ ಏನಿತ್ತು ಎನ್ನುವುದು ಫ್ಯಾನ್ಸ್​ ಅಸಮಾಧಾನ ಹೊರಹಾಕಿದ್ದರು.   

ಇದಕ್ಕೆ ಉತ್ತರಿಸಿದ್ದ ನಟಿ, ಇದೇ ವೇಳೆ ಪ್ರತಿ ಎರಡು ಗಂಟೆಗೊಮ್ಮೆ ಮಗುವಿಗೆ ನಾನು ಎದೆಹಾಲು ಕುಡಿಸಬೇಕು. ಕಲರ್ಸ್​ಕನ್ನಡ ವಾಹಿನಿ ನನಗೆ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲದಿದ್ದರೆ ರಿಯಾಲಿಟಿ ಷೋನಲ್ಲಿ ಬರಲು ಆಗುತ್ತಿರಲಿಲ್ಲ ಎಂದಿದ್ದರು. ಇದರ ಹೊರತಾಗಿಯೂ ಅಭಿಮಾನಿಗಳಿಗೆ ಯಾಕೋ ಸಮಾಧಾನ ಆಗಿರಲಿಲ್ಲ. ಇದೀಗ ಮಗಳಿಗೆ 10 ತಿಂಗಳು ಆಗಿದ್ದು, ನಟಿ ವಿವಿಧ ಚಟುವಟಿಕೆಗಳಲ್ಲಿ ಬಿಜಿ ಆಗಿದ್ದಾರೆ. ಆಗಾಗ್ಗೆ ಹೊಸ ಹೊಸ ಟಿಪ್ಸ್​ಗಳನ್ನು ಶೇರ್​ ಮಾಡುತ್ತಲೇ  ಇರುತ್ತಾರೆ. 

ದೊಡ್ಡಪತ್ರೆಯಲ್ಲಿದೆ ನಟಿ ಅದಿತಿ ಪ್ರಭುದೇವ್ ಆರೋಗ್ಯದ ಗುಟ್ಟು: ಅಮ್ಮನಾದ ಮೇಲೆ ಮತ್ತಷ್ಟು ಹಾಟ್​ ಹೇಗೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ