
ಕನ್ನಡದ ಖ್ಯಾತ ನಿರೂಪಕಿ, ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಡಿವೋರ್ಸ್ ಎಷ್ಟು ಸುದ್ದಿ ಆಗಿತ್ತೊ ಅದಕ್ಕಿಂತ ಅವರ ಎರಡನೇ ಮದುವೆ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಮಾರ್ಚ್ 2ರಂದು ಉದ್ಯಮಿ ಜಗದೀಪ್ ಜೊತೆ ಬೆಂಗಳೂರಿನ ಐಷಾರಾಮಿ ಮದುವೆ ಛತ್ರದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಡಿವೋರ್ಸ್ ಕಾರಣ ಈಗಲೂ ರಹಸ್ಯವಾಗಿದೆ ಆದರೆ ಇಷ್ಟು ಬೇಗ ಮದುವೆ ಫಿಕ್ಸ್ ಆಗಿದ್ದು ನಿಜಕ್ಕೂ ಆಶ್ಚರ್ಯ ಎನ್ನಬಹುದು. ಇಷ್ಟು ದಿನ ಚೈತ್ರಾ ವಾಸುದೇವನ್ ಮದುವೆ ಬಗ್ಗೆ ಅಪ್ಡೇಟ್ ಸಿಗುತ್ತಿತ್ತು ಆದರೆ ಈಗ ಅವರ ಮಾಜಿ ಪತಿ ಕೂಡ ಮದುವೆ ಬಗ್ಗೆನೂ ಹರಿದಾಡುತ್ತಿದೆ.
ಹೌದು! ಸುಮಾರು 5 ವರ್ಷಗಳ ಕಾಲ ಉದ್ಯಮಿ ಸತ್ಯ ನಾಯ್ಡು ಎಂಬುವವರ ಜೊತೆ ಚೈತ್ರಾ ವೈವಾಹಿಕ ಜೀವನ ನಡೆಸಿದ್ದಾರೆ. ಸಿಕ್ಕಾಪಟ್ಟೆ ಹ್ಯಾಪಿ ಲೈಫ್ ಫುಲ್ ಹಣಕಾಸು ಎಂದು ಕಾಮೆಂಟ್ ಮಾಡುತ್ತಿದ್ದವರಿಗೆ ಡಿವೋರ್ಸ್ ವಿಚಾರ ನಿಜಕ್ಕೂ ಶಾಕಿಂಗ್. ಮತ್ತೊಂದು ಶಾಕ್ ಏನೆಂದರೆ ಚೈತ್ರಾ ವಾಸುದೇವನ್ ಎರಡನೇ ಮದುವೆ ಮಾಡಿಕೊಂಡ ದಿನವೇ ಸತ್ಯ ನಾಯ್ಡು ಕೂಡ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ಇದೇನು ಗೊತ್ತಿದ್ದು ಆಗಿದ್ದೋ ಗೊತ್ತಿಲ್ಲದೆ ಆಗಿದೋ ಗೊತ್ತಿಲ್ಲ ಆದರೆ ಮದುವೆ ಛತ್ರ ಕೂಡ ಒಂದೇ ಅನ್ನೋ ಸತ್ಯ ಈಗ ಹೊರ ಬಂದಿದೆ.
ಬೆಂಗಳೂರಿನ ಚಾಮರ ವಜ್ರದಲ್ಲಿ ಎರಡು ಮೂರು ಮದುವೆ ಮಂಟಪಗಳು ಇದೆ. ಒಂದರಲ್ಲಿ ಚೈತ್ರಾ - ಜಗದೀಶ್ ಮದುವೆ ಮಾಡಿಕೊಂಡರೆ ಮತ್ತೊಂದರಲ್ಲಿ ಸತ್ಯಾ ನಾಯ್ಡು ಹಾಗೂ ವಸುಂಧರಾ ರೆಡ್ಡಿ ಮದುವೆ ಆಗಿದ್ದಾರೆ. ಹೀಗಾಗಿ ಇದು ಬೇಕು ಬೇಕು ಅಂತಲೇ ಫಿಕ್ಸ್ ಮಾಡಿಕೊಂಡಿರುವ ಮದುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸತ್ಯ ಅವರಿಗೆ ಚಿತ್ರರಂಗದ ಕನೆಕ್ಷನ್ ಇಲ್ಲ ಆದರೆ ಮದುವೆಗೆ ರಾಜಕೀಯದವರನ್ನು ಅಹ್ವಾನಿಸಿದ್ದರು. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡರು. ವಸುಂಧರಾ ರೆಡ್ಡಿ ಕೂಡ ದೊಡ್ಡ ಕುಟುಂಬಕ್ಕೆ ಸೇರಿದ ಹುಡುಗಿ.
ನನ್ನ ಜಗತ್ತು ಬದಲಾಯಿಸಿದ ಸುಂದರಿ ನೀನು; ಆನಿವರ್ಸರಿ ಪ್ರಯುಕ್ತ ಪತ್ನಿಗೆ ಪತ್ರ ಬರೆದ ಮನೋಜ್ ಮಂಚು
ಚೈತ್ರಾ ಲವ್ ಮ್ಯಾರೇಜ್:
ವಿದ್ಯಾಭ್ಯಾಸ ಮುಗಿಸುತ್ತಿದ್ದಂತೆ ಮದುವೆ ಮಾಡಲು ಅಜ್ಜಿ ಆಸೆ ಪಟ್ಟರು ಎಂದು ಚೈತ್ರಾಗೆ ಹುಡುಗನನ್ನು ಹುಡುಕಿದರು. ಆಗ ನಿಶ್ಚಯವಾಗಿದ್ದು ಸತ್ಯ ನಾಯ್ಡು ಜೊತೆ. ಸುಮಾರು 5 ವರ್ಷಗಳ ದಾಂಪತ್ಯ ಜೀವನ. ಸಣ್ಣ ಪುಟ್ಟ ವೈಮನಸ್ಸು ಇದ್ದ ಕಾರಣ ಒಂದೆರಡು ವರ್ಷ ದೂರ ಉಳಿದಿದ್ದರು. ಅಫೀಶಿಯಲ್ ಆಗಿ ಡಿವೋರ್ಸ್ ಪಡೆದು ಅನೌನ್ಸ್ ಕೂಡ ಮಾಡಿದ್ದರು. ಇದಾದ ಮೇಲೆ ಕಾರ್ಯಕ್ರಮವೊಂದರಿಂದ ಭೇಟಿ ಆಗಿದ್ದು ಜಗದೀಪ್. ಅದಾದ ಮೇಲೆ ಒಂದೇ ಜಿಮ್ ಎಂದು ತಿಳಿಯುತ್ತದೆ. ಸ್ನೇಹ ಪ್ರೀತಿಗೆ ತಿರುಗುತ್ತದೆ. ಪ್ಯಾರಿಸ್‌ನಲ್ಲಿ ಚೈತ್ರಾಗೆ ಪ್ರಪೋಸ್ ಕೂಡ ಮಾಡುತ್ತಾರೆ. ಅದಾದ ಮೇಲೆ ಎರಡನೇ ಮದುವೆ ಅನೌನ್ಸ್ ಮಾಡುತ್ತಾರೆ. ಈಗ ಹೊಸ ಜೀವವನ್ನು ಎಂಜಾಯ್ ಮಾಡುತ್ತಿದ್ದಾರೆ.
ಗಂಡ ಯಾವಾಗಲೂ ಅದು ಮಾಡು ಇದು ಮಾಡು ಅಂತ ಕೆಲಸ ಹೇಳಬಾರದು; ದಿಯಾ ನಟಿ ಖುಷಿ ಹೇಳಿಕೆ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.