Vedha Movie Success Meet: ಶಿವಣ್ಣ ನಿವಾಸದಲ್ಲಿ ವೇದ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್

Published : Feb 19, 2023, 09:18 PM IST
Vedha Movie Success Meet: ಶಿವಣ್ಣ ನಿವಾಸದಲ್ಲಿ ವೇದ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್

ಸಾರಾಂಶ

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ನಟಿಸಿರುವ ವೇದ ಸಿನಿಮಾ 50 ದಿನ ಪೂರೈಸಿರುವ ಹಿನ್ನೆಲೆ  ಹಾಗೂ ಚಿತ್ರರಂಗಕ್ಕೆ ಶಿವಣ್ಣ ಕಾಲಿಟ್ಟು 37 ವರ್ಷ ಪೂರೈಸಿರೋ ಹಿನ್ನೆಲೆ ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ  ಸಕ್ಸಸ್ ಸೆಲೆಬ್ರೇಷನ್ ಕಾರ್ಯಕ್ರಮ ನಡೆಸಲಾಗಿದೆ.

ಬೆಂಗಳೂರು (ಫೆ.19): ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ನಟಿಸಿರುವ ವೇದ ಸಿನಿಮಾ 50 ದಿನ ಪೂರೈಸಿರುವ ಹಿನ್ನೆಲೆ  ಹಾಗೂ ಚಿತ್ರರಂಗಕ್ಕೆ ಶಿವಣ್ಣ ಕಾಲಿಟ್ಟು 37 ವರ್ಷ ಪೂರೈಸಿರೋ ಹಿನ್ನೆಲೆ ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ  ಸಕ್ಸಸ್ ಸೆಲೆಬ್ರೇಷನ್ ಕಾರ್ಯಕ್ರಮ ನಡೆಸಲಾಗಿದೆ. ಶಿವಣ್ಣ ಆ್ಯಂಡ್ ಟೀಂ ಎರಡೂ ಕಾರ್ಯಕ್ರಮಗಳನ್ನ ಒಟ್ಟಿಗೆ ಆಚರಿಸಿದೆ. ವೇದ ಸಿನಿಮಾ ಗೀತಾ ಪಿಕ್ಚರ್ಸ್ ನ ಮೊದಲ ನಿರ್ಮಾಣ ಚಿತ್ರವಾಗಿದ್ದು, ಎ ಹರ್ಷ ನಿರ್ದೇಶನದ ಈ ಸಿನೆಮಾ ಕನ್ನಡ, ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಕಂಡಿದೆ. ಈ ಸಕ್ಸಸ್ ಕಾರ್ಯಕ್ರಮದಲ್ಲಿ ಶಿವಣ್ಣ ದಂಪತಿ, ಹಾಗೂ ವೇದ ಚಿತ್ರತಂಡದ ಎಲ್ಲರೂ ಭಾಗಿಯಾಗಿದ್ದಾರೆ.

'ವೇದ' ಸಿನಿಮಾ ಭರ್ಜರಿ ಪ್ರದರ್ಶನ: ಈ ಸಂಭ್ರಮದಲ್ಲಿ ಶಿವಣ್ಣ ಮಾಡ್ತಿರೋ ಕೆಲಸ ಏನು ಗೊತ್ತೇ?

ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ವೇದ ಸಿನಿಮಾ ನಿಮ್ಮೆಲ್ಲರ ಆಶೀರ್ವಾದದಿಂದ 50 ದಿನ ಪೂರೈಸಿದೆ. ವೇದ ಸಿನಿಮಾ ಈಗ್ಲೂ ಚನ್ನಾಗಿ ಪ್ರದರ್ಶನ ಆಗ್ತಿದೆ. ಹರ್ಷ ಹಾಗು ಟೀಂ ತುಂಬಾ ಚನ್ನಾಗಿ ಕೆಲಸ ಮಾಡಿ ಈ ಸಿ‌ನಿಮಾ ಗೆಲ್ಲಿಸಿದ್ದಾರೆ ಎಂದರು. ಇನ್ನು ವೇದ ಸಿನಿಮಾದಲ್ಲಿ ನಟಿಸಿದ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಬೆಳ್ಳಿ ಸ್ಮರಣಿಕೆ ಕೊಟ್ಟು ಶಿವ ರಾಜ್‌ಕುಮಾರ್ ದಂಪತಿ ಶುಭ ಹಾರೈಸಿದರು.

ಹೈದರಾಬಾದ್‌ನಲ್ಲಿ ವೇದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ: ಅಪ್ಪು ನೆನೆದು ಶಿವಣ್ಣ ಕಣ್ಣೀರು

ವೇದ ಚಿತ್ರದ ನಟಿ ಗಾನವಿ ಲಕ್ಷ್ಮಣ್ ಮಾತನಾಡಿ, ಸಿನಿಮಾ 50 ದಿನ ಆಯ್ತು ತುಂಬಾ ಖುಷಿ‌ ಆಗ್ತಿದೆ. ನಾನು ಹೋದಲ್ಲೆಲ್ಲಾ ಸಿ‌ನಿಮಾನ ನೋಡಿ ಮೆಚ್ಚಿಕೊಂಡಿದ್ದಾರೆ.  ಬೇರೆ ರಾಜ್ಯದವರು ಕೂಡ ವೇದ ಸಿನಿಮಾ ಮೆಚ್ಚಿಕೊಂಡಿದ್ದಾರೆ. ನನ್ನ ತಂದೆ ತಾಯಿಗೆ ನಮ್ಮ‌ ವೇದ ಸಿನಿಮಾ ತಂಡಕ್ಕೆ‌ ನನ್ನ ಧನ್ಯವಾದ. ವೇದ ಸಿನಿಮಾದ ಪುಷ್ಪ ಕ್ಯಾರೆಕ್ಟರ್ ತುಂಬಾ ಇಷ್ಟ ಆಯ್ತು.  ನನಗೆ ಆ ಪಾತ್ರ ಮಾಡ್ತೀನಾ ಅನ್ನೋ ಡೌಟ್ ಇತ್ತು. ಗೀತಾ ಶಿವರಾಜ್ ಕುಮಾರ್ ಸ್ವೀಟ್ ಆ್ಯಂಡ್ ಲವ್ಲಿ ಹಾರ್ಟ್ ಇರೋರು.  ಶಿವಣ್ಣ ಎನರ್ಜಿಟಿಕ್ ಅಂತ ನಮ್ಗೆಲ್ಲಾ ಗೊತ್ತು. ಆದ್ರೆ ಗೀತಾ ಶಿವರಾಜ್ ಕುಮಾರ್ ಶಿವಣ್ಣನಿಗಿಂತ ಎನರ್ಜಿಟಿಕ್ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ