Dhruva Sarja: 'ಮಾರ್ಟಿನ್' ಚಿತ್ರಕ್ಕೆ ನಾಯಕಿಯಾಗಿದ್ದಾರಾ ನಟಿ ವೈಭವಿ ಶಾಂಡಿಲ್ಯ

By Suvarna NewsFirst Published Dec 2, 2021, 9:50 PM IST
Highlights

ಎ.ಪಿ ಅರ್ಜುನ್ ನಿರ್ದೇಶನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ 'ಮಾರ್ಟಿನ್' ಚಿತ್ರಕ್ಕೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ ಆಯ್ಕೆಯಾಗಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. 

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) 'ಪೊಗರು' (Pogaru) ಚಿತ್ರದ ನಂತರ 'ಮಾರ್ಟಿನ್' (Martin) ಚಿತ್ರದಲ್ಲಿ ನಟಿಸುತ್ತಿದ್ದು, ನಿರ್ದೇಶಕ ಎ.ಪಿ ಅರ್ಜುನ್ (A.P.Arjun) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ (Independence Day) ದಿನದಂದು ಭರ್ಜರಿಯಾಗಿ ಟೈಟಲ್ ಟೀಸರ್ (Title Teaser) ಕೂಡಾ ಲಾಂಚ್ ಆಗಿತ್ತು. ಈಗಾಗಲೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಧ್ರುವ ಸರ್ಜಾಗೆ ನಾಯಕಿ ಯಾರು ಎಂಬ ಪ್ರಶ್ನೆ ಮೂಡಿದೆ. ಹೌದು 'ಮಾರ್ಟಿನ್' ಚಿತ್ರಕ್ಕೆ ನಾಯಕಿಯಾಗಿ ನಟಿ ವೈಭವಿ ಶಾಂಡಿಲ್ಯ (Vaibhavi Shandilya) ಆಯ್ಕೆಯಾಗಿದ್ದಾರೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ಹೊರಬಿಟ್ಟಿಲ್ಲ.

ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿರುವ ವೈಭವಿ ಶಾಂಡಿಲ್ಯ, ಶರಣ್ (Sharan) ಅಭಿನಯದ 'ರಾಜ್ ವಿಷ್ಣು' (Raj Vishnu) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಯೋಗರಾಜ್ ಭಟ್ (Yogaraj Bhat) ನಿರ್ದೇಶದ 'ಗಾಳಿಪಟ 2' (Galipata 2) ಚಿತ್ರದಲ್ಲೂ ವೈಭವಿ ಪವನ್‌ಗೆ (Pawan) ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ಖಚಿತಪಡಿಸಿದರೆ 'ಮಾರ್ಟಿನ್' ಅವರ ಮೂರನೇ ಚಿತ್ರವಾಗಲಿದೆ. ತಾರಾಗಣ ವಿಚಾರದಲ್ಲಿ 'ಮಾರ್ಟಿನ್' ಚಿತ್ರ ತಂಡ ಗುಟ್ಟು ಕಾಪಾಡಿಕೊಂಡಿದ್ದು, ಯಾವುದೇ ಮಾಹಿತಿಯನ್ನು ಹೊರಬಿಟ್ಟಿಲ್ಲ. ನಟ ಚಿಕ್ಕಣ್ಣ (Chikkanna) ಈ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಮಾರ್ಟಿನ್' ಆದ ಧ್ರುವ ಸರ್ಜಾ; ಬಾಡಿ ನೋಡಿ ಗಾಬರಿ ಆದ ನೆಟ್ಟಿಗರು!

'ಅದ್ಧೂರಿ' (Adduri) ಚಿತ್ರದ ನಂತರ 'ಮಾರ್ಟಿನ್' ಮೂಲಕ ಧ್ರುವ ಸರ್ಜಾ ಮತ್ತು ಎ.ಪಿ.ಅರ್ಜುನ್ ಎರಡನೇ ಬಾರಿಗೆ ಒಂದಾಗುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. 'ಮಾರ್ಟಿನ್' ಚಿತ್ರದ ಟೈಟಲ್ ಟೀಸರ್ ನೋಡಿದವರು ಧ್ರುವ ಸರ್ಜಾ ಅವರ ಖಡಕ್ ಲುಕ್, ಬಾಡಿ ಲಾಂಗ್ವೇಜ್, ಕೈಯಲ್ಲಿ ಕ್ರಾಸ್ ಚೈನ್ ಹಿಡಿದುಕೊಂಡಿರುವುದನ್ನು ನೋಡಿ, ಆ್ಯಕ್ಷನ್ ಪ್ರಿನ್ಸ್ ಅವರೇ 'ಮಾರ್ಟಿನ್' ಎಂದುಕೊಂಡಿದ್ದರು. ಆದರೆ ಈ ಚಿತ್ರದಲ್ಲಿ ನಾನು ಮಾರ್ಟಿನ್​ ಅಲ್ಲ. ಅದು ಯಾರು ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ಅದಕ್ಕಾಗಿಯೇ ಈ ಟೀಸರ್​ನಲ್ಲಿ Who is Martin ಎಂಬ ಡೈಲಾಗ್​ ಇದೆ' ಎಂದು ಧ್ರುವ ಸರ್ಜಾ ಇತ್ತೀಚೆಗೆ ಹೇಳಿದ್ದರು.



ಔಟ್ ಅಂಡ್ ಔಟ್ ಕಮರ್ಶಿಯಲ್ ಆಕ್ಷನ್ ಥ್ರಿಲ್ಲರ್ 'ಮಾರ್ಟಿನ್' ಸಿನಿಮಾ ಕಾಲೇಜ್ ಬ್ಯಾಕ್‌ ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದ್ದು, ಈ ಚಿತ್ರದಲ್ಲಿ ನವಿರಾದ ಪ್ರೇಮಕಥೆಯೂ ಇರಲಿದೆ. ಲವ್ ಸ್ಟೋರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ.  ಈ ಚಿತ್ರದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳಿದ್ದು, 'ಅದ್ಧೂರಿ' ಚಿತ್ರಕ್ಕಿಂತಲೂ ಡಿಫರೆಂಟ್ ಆಗಿರಲಿದೆ. ಇದರಲ್ಲಿ ಹೆಚ್ಚು ಡೈಲಾಗ್ಸ್ ಇರುವುದಿಲ್ಲ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ. ಏಕಕಾಲದಲ್ಲೇ ಬೆಂಗಳೂರು ಹಾಗೂ ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ನಮ್ಮ ಅದ್ದೂರಿ ಟೀಮ್ ಈಸ್ ಬ್ಯಾಕ್: ಧ್ರುವ ಸರ್ಜಾ

ಕನ್ನಡ, ತೆಲುಗು, ತಮಿಳು ಭಾಷೆಗಳ ಜೊತೆಗೆ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ 'ಮಾರ್ಟಿನ್' ಚಿತ್ರ ಬಿಡುಗಡೆಯಾಗಲಿದೆ. ಉದಯ್​ ಕೆ. ಮೆಹ್ತಾ (Uday K.Mehta) ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ (Satya Hegde) ಛಾಯಾಗ್ರಹಣ ಮಾಡುತ್ತಿದ್ದಾರೆ. ಇನ್ನು, ಧ್ರುವ ಸರ್ಜಾ ಹುಟ್ಟುಹಬ್ಬದಂದು 'ಮಾರ್ಟಿನ್‌' ನಿರ್ದೇಶಕ ಎ.ಪಿ ಅರ್ಜುನ್‌-ಧ್ರುವ ಸರ್ಜಾ ಕಾಂಬಿನೇಶನ್‌ನ ಇನ್ನೊಂದು ಸಿನಿಮಾವನ್ನೂ ಘೋಷಿಸಲಾಗಿದೆ. ಎ ಪಿ ಅರ್ಜುನ್‌ ಫಿಲಂಸ್‌ ಬ್ಯಾನರ್‌ನಡಿ (AP Arjun Films Banner) ಅರ್ಜುನ್‌ ಅವರೇ ಈ ಸಿನಿಮಾ ನಿರ್ಮಿಸಲಿದ್ದಾರೆ. 
 

click me!