Maana Teaser: ನನಗೆ ಉಮಾಶ್ರೀ ಜೊತೆ ನಟಿಸೋಕೆ ಭಯ: ದೇವರಾಜ್‌

Kannadaprabha News   | Asianet News
Published : Feb 05, 2022, 09:02 AM ISTUpdated : Feb 05, 2022, 09:03 AM IST
Maana Teaser: ನನಗೆ ಉಮಾಶ್ರೀ ಜೊತೆ ನಟಿಸೋಕೆ ಭಯ: ದೇವರಾಜ್‌

ಸಾರಾಂಶ

‘ರಂಗಭೂಮಿಯ ದಿನಗಳಿಂದಲೂ ಉಮಾಶ್ರೀ, ಅನಂತ್‌ನಾಗ್‌ ಮೊದಲಾದ ಪ್ರತಿಭಾವಂತರ ಜೊತೆಗೆ ಆ್ಯಕ್ಟ್ ಮಾಡೋದು ಅಂದರೆ ನನಗೆ ಭಯ’ ಎಂದು ಹೇಳಿಕೊಂಡಿದ್ದು ಡೈನಾಮಿಕ್‌ ಸ್ಟಾರ್‌ ದೇವರಾಜ್‌.

‘ರಂಗಭೂಮಿಯ ದಿನಗಳಿಂದಲೂ ಉಮಾಶ್ರೀ (Umashree), ಅನಂತ್‌ನಾಗ್‌ (Anant Nag) ಮೊದಲಾದ ಪ್ರತಿಭಾವಂತರ ಜೊತೆಗೆ ಆ್ಯಕ್ಟ್ ಮಾಡೋದು ಅಂದರೆ ನನಗೆ ಭಯ’ ಎಂದು ಹೇಳಿಕೊಂಡಿದ್ದು ಡೈನಾಮಿಕ್‌ ಸ್ಟಾರ್‌ ದೇವರಾಜ್‌ (Devaraj). ದೇವರಾಜ್‌ ಹೀಗೆ ಮನಸ್ಸು ಬಿಚ್ಚಿ ಮಾತನಾಡಿದ್ದು ‘ಮಾನ’ (Maana) ಸಿನಿಮಾದ ಸುದ್ದಿಗೋಷ್ಠಿಯಲ್ಲಿ. ಇದು ಕುಂ.ವೀರಭದ್ರಪ್ಪ (KUM Veerabhadrappa) ಅವರ ಕತೆಯಾಧರಿಸಿದ ನೈಜ ಘಟನೆಯಿಂದ ಪ್ರೇರಣೆ ಪಡೆದು ನಿರ್ಮಿಸಲಾಗಿರುವ ಸಿನಿಮಾ. ಇದರಲ್ಲಿ ದೇವರಾಜ್‌ ಮಾನಿಗ ದಲಿತ ಜೀತದಾಳಿನ ಪಾತ್ರದಲ್ಲಿ ನಟಿಸಿದ್ದಾರೆ.  

ಈ ಬಗ್ಗೆ ಮಾತನಾಡಿದ ದೇವರಾಜ್‌, ‘ಮಾನಿಗನ ಪಾತ್ರ ಬರೀ ಗೋಳಿನದ್ದು ಎಂದು ಊಹಿಸಿದರೆ ನಿಮ್ಮ ಊಹೆ ತಪ್ಪು. ಆತ ಪ್ರತೀ ವಿಷಯವನ್ನೂ ಹಾಸ್ಯ ಬೆರೆಸಿ ಮಾತನಾಡುವ ಮುಗ್ಧ. ಸೂಕ್ಷ್ಮವನ್ನು ಆತನ ಪಾತ್ರ ಕನ್ವೇ ಮಾಡುವ ರೀತಿ ಬಹಳ ಇಷ್ಟವಾಯ್ತು. ಈ ಪಾತ್ರಕ್ಕಾಗಿ ನಿರ್ದೇಶಕರು ನನ್ನನ್ನು ಕಸದ ಗುಂಡಿಗೆ, ಪಿಟ್‌ಗಳಿಗೆ ಇಳಿಸಿ ಆ್ಯಕ್ಟ್ ಮಾಡಿಸಿದ್ದಾರೆ’ ಎನ್ನುತ್ತಾ ಈ ಹಿಂದೆ ಕುಂ.ವಿ ಅವರ ಕತೆ ಆಧರಿತ ‘ಕೆಂಡದ ಮಳೆ’ (Kendhada Male) ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡರು. 70-80ರ ದಶಕದಲ್ಲಿ ಮೈಸೂರು-ಮಂಡ್ಯ ಹೇಗಿತ್ತು? ಎಂಬುದರ ಮೇಲೆನೆ ಚಿತ್ರವನ್ನು ನಿರ್ಮಿಸಲಾಗಿದೆ. 

Devaraj In Mafia: ಪುತ್ರ ಪ್ರಜ್ವಲ್‌ ಜೊತೆ ಮತ್ತೆ ದೇವರಾಜ್ ಖಾಕಿ ಖದರ್!

ಈ ಸಿನಿಮಾಕ್ಕೆ ನಾನು ಹೀರೋಯಿನ್‌ ಅಂತೆ ಎಂದು ಮಾತು ಆರಂಭಿಸಿದ ಉಮಾಶ್ರೀ, ‘ಇದು ಸಮಾಜದಲ್ಲಿ ಬದಲಾವಣೆ ತರುವ ಚಿತ್ರ. ದೇವರಾಜ್‌ ಅವರಂಥಾ ಪ್ರತಿಭಾವಂತರ ಜೊತೆಗೆ ನಟಿಸಿದ್ದು ಖುಷಿ ಕೊಟ್ಟಿತು’ ಎಂದರು. ನಿರ್ದೇಶಕ ಸೆಬಾಸ್ಟಿನ್‌ ಡೇವಿಡ್‌ (Sebastian David), ‘ಇದು 70ರ ದಶಕದ ಕತೆಯಾದರೂ ಇಂದಿಗೂ ಪ್ರಸ್ತುತ. ಮಾನಿಗನ ಪಾತ್ರಕ್ಕೆ ದೇವರಾಜ್‌ ಅವರೇ ಮನಸ್ಸಲ್ಲಿದ್ದರು. ನಿರ್ಮಾಪಕರಂತೂ ದೇವರಾಜ್‌ ಅವ್ರು ಪಾತ್ರ ಮಾಡಿದ್ರೆ ಮಾತ್ರ ಬಂಡವಾಳ ಹಾಕ್ತೀನಿ ಅಂದಿದ್ರು. ಮೊದಲಿಗೆ ಈ ಸಿನಿಮಾ ಮಾಡಲ್ಲ ಎಂದ ಉಮಾಶ್ರೀ, ದೇವರಾಜ್‌ಗೆ ಹೀರೋಯಿನ್‌ ಅಂದಾಗ ಒಪ್ಪಿಕೊಂಡರು’ ಎಂದು ಹೇಳಿದರು. 

ಈ ಸಿನಿಮಾಗೆ ಸೆಬಾಸ್ಟಿಯನ್ ಡೇವಿಡ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ನೀಡುವ ಅವರು, 'ಮದ್ದೂರು, ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಉಮಾಶ್ರೀ ಮತ್ತು ದೇವರಾಜ್ ಅವರು ಅತ್ಯುತ್ತಮವಾಗಿ ನಟಿಸಿದ್ದಾರೆ. ಇಬ್ಬರೂ ಡೌನ್ ಟು ಅರ್ಥ್ ಕಲಾವಿದರು' ಎಂದು ಹೊಗಳಿದರು. ಪ್ರಜ್ವಲ್‌ ದೇವರಾಜ್‌ (Prajwal Devaraj) ತಂದೆಯನ್ನು ಈ ಪಾತ್ರಕ್ಕೆ ಒಪ್ಪಿಸಿದ್ದಕ್ಕೂ ಸಾರ್ಥಕವಾಯಿತು ಅಂತ ಖುಷಿಪಟ್ಟರು. ಒಂದು ಕಲಾತ್ಮಕ ಸಿನಿಮಾ ರೀತಿಯಲ್ಲಿ 'ಮಾನ' ಚಿತ್ರ ಮೂಡಿಬಂದಿದ್ದು, ಶ್ರೀನಿವಾಸ್ ಪ್ರಭು, ಎಂ.ಡಿ.ಕೌಶಿಕ್, ಮೂಗು ಸುರೇಶ್, ಸರಿಗಮ ವಿಜಿ, ರತ್ನಕುಮಾರಿ, ಹರಿಣಿ ಸೇರಿದಂತೆ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

Pushkar Mallikarjunaiah: ಹೀರೋ ಆದ್ರು ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ

ಇನ್ನು ಕುಂ.ವೀರಭದ್ರಪ್ಪ ಕಥೆ, ಶಿವಪ್ರಸಾದ್ ಯಾದವ್ (Shivaprasad Yadav) ಸಂಕಲನ, ಸೊಜೊ ಕೆ ಜೋಸ್ (Sojo K Jose) ಕ್ಯಾಮೆರಾ ಕೈಚಳಕ, ಹಾಗೂ ಪಳನಿ ಡಿ ಸೇನಾಪತಿ (Palani D Senapathi) ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಕಾಂತಲಕ್ಷ್ಮಿ (Kanthalakshmi), ರಮೇಶ್ ಬಾಬು (Ramesh Babu) ಅವರು 'ಮಾನ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಟೀಸರ್ (Teaser) ಬಿಡುಗಡೆ ಕಾರ್ಯಕ್ರಮಕ್ಕೆ ಮಹರ್ಷಿವಾಣಿಯ ಆನಂದ್ ಗುರೂಜಿ, ಪ್ರಜ್ವಲ್ ದೇವರಾಜ್‌ ಮುಖ್ಯ ಅತಿಥಿಗಳಾಗಿ ಆಗಮಿಸಿ, ಹಾರೈಸಿದರು. ನಿರ್ಮಾಪಕರಾದ ರಮೇಶ್‌ ಬಾಬು, ಕಾಂತಲಕ್ಷ್ಮೀ ಉಪಸ್ಥಿತರಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?