
‘ಲವ್ ಮಾಕ್‌ಟೇಲ್’ (Love Mocktail) ಚಿತ್ರ ಮಾಡಿದಾಗ ಜನ ಯಾವ ನಿರೀಕ್ಷೆಯೂ ಇಲ್ಲದೇ ಥಿಯೇಟರ್‌ಗೆ ಬಂದು ಚಿತ್ರ ಮೆಚ್ಚಿಕೊಂಡರು. ಈಗ 'ಲವ್ ಮಾಕ್‌ಟೇಲ್ 2' (Love Mocktail 2) ಬಗ್ಗೆ ಅವರ ನಿರೀಕ್ಷೆ ಹೆಚ್ಚಾಗಿದೆ. ಅದನ್ನು ರೀಚ್ ಮಾಡೋದೇ ಚಾಲೆಂಜಿಂಗ್’ ಎಂದು ಡಾರ್ಲಿಂಗ್ ಕೃಷ್ಣ (Darling Krishna) ಹೇಳಿದರು.
ಅವರ ನಿರ್ದೇಶನ, ನಟನೆಯ ‘ಲವ್ ಮಾಕ್‌ಟೇಲ್ 2’ ಚಿತ್ರದ ಟ್ರೈಲರ್ ಬಿಡುಗಡೆ ಪ್ರಯುಕ್ತ ಸುದ್ದಿಗೋಷ್ಠಿ ಕರೆಯಾಗಿತ್ತು. ಈ ವೇಳೆ ಮಾತನಾಡಿದ ಕೃಷ್ಣ, ‘ಲವ್ ಮಾಕ್‌ಟೇಲ್‌ನ ಈ ಭಾಗದಲ್ಲಿ ನಿಧಿಮಾ ನೆನಪು ಜೊತೆಗಿರುತ್ತದೆ. ಆದಿಯ ಲೈಫಿನಲ್ಲಿ ಬಂದ ಮೂವರು ಹಳೆ ಹುಡುಗಿಯರ ಜೊತೆಗೆ ಇನ್ನೂ ಇಬ್ಬರು ಹೊಸ ಹುಡುಗಿಯರು ಬರುತ್ತಾರೆ. ರಾಚೆಲ್ ಡೇವಿಡ್ (Rachel David) ಸಿಹಿ ಪಾತ್ರದಲ್ಲಿ ನಾಯಕಿಯಾಗಿರುತ್ತಾರೆ. ಸಿನಿಮಾದ ಪ್ರತೀ ಫ್ರೇಮ್‌ನಲ್ಲೂ ಪ್ರೀತಿ ಇದೆ. ಶೇ.100 ಸೀಟು ಅವಕಾಶ ಸಿಕ್ಕರೆ ಫೆ.11ಕ್ಕೇ ಚಿತ್ರ ಬಿಡುಗಡೆ ಆಗುತ್ತೆ’ ಎಂದು ಹೇಳಿದರು.
ನಿರ್ಮಾಪಕಿ, ನಟಿ ಮಿಲನಾ ನಾಗರಾಜ್ (Milana Nagaraj), ಕೃಷ್ಣ ಅವರ ಸಿಟ್ಟನ್ನು ಪರಿ ಪರಿಯಾಗಿ ವರ್ಣಿಸಿದರು. ‘ಒಮ್ಮೆ ಕೊಡಗಿನಲ್ಲಿ ಶೂಟಿಂಗ್ ಮಾಡುವಾಗ ಕೃಷ್ಣ ಸಿಟ್ಟಲ್ಲಿ ಯಾವ ಪರಿ ಕಿರುಚಿದ್ರು ಅಂದ್ರೆ ಅವರ ಕೂಗು ಇಡೀ ಕೂರ್ಗ್‌ಗೆ ಕೇಳಿತ್ತು, ಅವರ ಕೋಪದ ಕಾರಣದಿಂದ ಒಂದು ಕಪ್ ಕಾಫಿಯನ್ನೂ ನೆಮ್ಮದಿಯಿಂದ ಕುಡಿಯಲಾಗದ ಸ್ಥಿತಿ ನನ್ನದು’ ಎಂದು ಹೇಳಿಕೊಂಡರು. ಇತರ ನಟಿಯರು ಇದಕ್ಕೆ ದನಿಗೂಡಿಸಿದರು. ‘ನಾನಿಲ್ಲಿ ಶಾಟ್ ಇಟ್ಟು ಕಾಯುತ್ತಿರಬೇಕಾದ್ರೆ ಮಿಲನಾ ಹುಡುಗೀರನ್ನ ಕಾಫಿಗೆ ಕರ್ಕೊಂಡು ಹೋಗ್ತಾಳೆ’ ಎಂದು ಕೃಷ್ಣ ಆರೋಪಿಸಿದರು.
Love Mocktail 2 ಚಿತ್ರದ ಟ್ರೈಲರ್ ರಿಲೀಸ್: ಆದಿ ಲೈಫ್ಗೆ ಜೋ ಮತ್ತೆ ಬರುತ್ತಾಳಾ?
ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಬಂದರೆ ‘ಲವ್ ಮಾಕ್‌ಟೇಲ್ 3’ ಮಾಡುವುದಾಗಿ ಘೋಷಿಸಿದ ನಿರ್ಮಾಪಕಿ ಮಿಲನಾ ಈ ಸಿನಿಮಾಕ್ಕೂ ಕೃಷ್ಣ ಅವರೇ ನಿರ್ದೇಶಕರಾಗುತ್ತಾರೆ ಅನ್ನಲು ಮರೆಯಲಿಲ್ಲ. ಸುದ್ದಿಗೋಷ್ಠಿಯಲ್ಲಿ ನಟಿಯರಾದ ರಾಚೆಲ್ ಡೇವಿಡ್, ಅಮೃತಾ ಅಯ್ಯಂಗಾರ್, ರಚನಾ ಇಂದರ್, ಸುಷ್ಮಿತಾ, ಸುಷ್ಮಾ, ಡಾರ್ಜಿಲಿಂಗ್‌ನ ಶ್ವೇತಾ, ಅವಿ, ರವಿ ಸೀತಾರಾಮನ್, ಸಂಗೀತ ನಿರ್ದೇಶಕ ನಕುಲ್ ಅಭಯಂಕರ್, ಸಾಹಿತ್ಯ ನೀಡಿರುವ ರಾಘವೇಂದ್ರ ಕಾಮತ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.
'ಲವ್ ಮಾಕ್ಟೇಲ್ 2' ಟ್ರೈಲರ್ನಲ್ಲಿ ನಿಧಿಮಾ ನೆನಪಲ್ಲಿ ಆದಿ ಪಾತ್ರ ಕಾಲ ಕಳೆಯುತ್ತೆ. ಮೊದಲ ಭಾಗದಲ್ಲಿ ಜೋ ಆಗಿ ಕಾಣಿಸಿಕೊಂಡಿದ್ದ ಅಮೃತಾ ಅಯ್ಯಂಗಾರ್ (Amrutha Iyengar) ಎರಡನೇ ಭಾಗದಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಮಾತ್ರವಲ್ಲದೇ ಆದಿ ಲೈಫ್ಗೆ ಜೋ ಮತ್ತೆ ಬರುತ್ತಾಳಾ ಎನ್ನುವ ಕುತೂಹಲವೂ ಮೂಡಿದೆ. 'ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್' ಎಂದು ಆದಿ ಗೆಳೆಯ ಹೇಳೋದು, ನಂತರ ಮತ್ತೊಂದು ಮದುವೆ ಆಗುವುದಕ್ಕೆ ಆದಿ ತೀರ್ಮಾನ ಮಾಡುವುದು ಕಥೆಯ ಜೀವಾಂಶ ಎಂಬುದು ಟ್ರೈಲರ್ನಲ್ಲಿ ಹೈಲೈಟ್ ಆಗಿದೆ.
Love Mocktail 2: ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಡಾರ್ಲಿಂಗ್ ಕೃಷ್ಣ
'ಲವ್ ಮಾಕ್ಟೇಲ್ 2' ಟ್ರೈಲರ್ ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ರಾಚೆಲ್ ಡೇವಿಡ್ ನಟನೆಯ ಈ ಸಿನಿಮಾದ ಟ್ರೈಲರ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸಕಲೇಶಪುರ, ಮಡಿಕೇರಿ, ಲಡಾಖ್, ಚಿಕ್ಕಮಗಳೂರು ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. 'ಲವ್ ಮಾಕ್ಟೇಲ್ 2' ಸೆನ್ಸಾರ್ (Censor) ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ 'ಯು' (U Certificate) ಪ್ರಮಾಣ ಪತ್ರ ನೀಡಿದ್ದಾರೆ. ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಅವರೇ ಆಕ್ಷನ್ ಕಟ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.