
ಅವರು 67ರ ಅಭಿನೇತ್ರಿ.. ಯಾವುದೇ ಪಾತ್ರ ಕೊಟ್ರೂ ನೀರು ಕುಡಿದಂತೆ ನಿರ್ಗಳವಾಗಿ ಅಭಿನಯಿಸೋ ಚತುರೇ.. ಸಿನಿಮಾ.. ಸೀರಿಯಲ್.. ರಾಜಕೀಯ.. ರಂಗಭೂಮಿಯಲ್ಲಿ ಸೈ ಎನಿಸಿಕೊಂಡಿದ್ದ ಅಪ್ರತಿಮ ಕಲಾವಿಧೆ ಈಗ ಯಕ್ಷರಂಗಕ್ಕೂ ಲಗ್ಗೆ ಇಟ್ಟಿದ್ದಾರೆ.. ಈಕೆಯ ಅಭಿನಯ ಕಂಡು ಶಬ್ಬಾಶ್ ಅಂತಿದ್ದಾರೆ.. ಹಾಗಾದ್ರೆ ಯಾರ್ ಆ ಕಲಾವಿದೇ?
ಹೀಗೆ ವೇದಿಕೆ ಮೇಲೆ ನೀಲಿ ಬಣ್ಣದ ಸೀರೆಯುಟ್ಟು.. ನಿಬ್ಬೆರಗಾಗುವಂತೆ ನಟನೆ ಮಾಡ್ತಿರೋ ಮಹಿಳೆ.. ತನ್ನ ಅಭಿನಯದಿಂದಲೇ ಎಲ್ಲರನ್ನ ಹಿಡಿದಿಟ್ಟುಕೊಂಡಿದ್ದಾಳೆ.. ನಿಜವಾಗ್ಲೂ ಮಂಥರೇಯೇ ಆಹ್ವಾನ ಆಗಿದ್ದಾಳಾ ಅನ್ನೋ ಮಟ್ಟಿಗೆ ಎಲ್ಲರನ್ನ ತನ್ನತ್ತ ಸೆಳೆಯುತ್ತಿರೋ ಈಕೆ ಬೇರ್ಯಾರು ಅಲ್ಲಾ.. ಕನ್ನಡ ಸಿನಿರಂಗದಲ್ಲಿ ದಶಕಗಳಿಂದ ಅಭಿನಯಿಸುತ್ತಿರೋ ಕಲಾಪುತ್ರಿ ಪುಟ್ನಂಜನ ಪುಟ್ಮಲ್ಲಿ.. ಹಾಸ್ಯ ನಟಿ, ಡಾಕ್ಟರ್ ಉಮಾಶ್ರೀ (Umashree) ..
ಹೌದು, .. ರಂಗಭೂಮಿ… ಸಿನಿರಂಗ.. ರಾಜಕೀಯ.. ಸೀರಿಯಲ್ನಲ್ಲೂ ತನ್ನ ನೈಜ ನಟನೆಯಿಂದ ಯಾವುದೇ ಪಾತ್ರ ಕೊಟ್ರೂ ನಿರರ್ಗಳವಾಗಿ ಅಭಿನಿಯಿಸುವ ಈ ಅಭಿನೇತ್ರಿ ಈಗ ಯಕ್ಷರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ನಟಿ ಉಮಾಶ್ರೀಗೆ ವಯಸ್ಸು 67 ಆಗಿದೆ. ಆದ್ರೆ ಬಣ್ಣ ಹಚ್ಚಿದ್ರು ಅಂದ್ರೆ ಮುಗೀತು. ಎಲ್ಲೆ ಇರಲಿ ಯಾವ್ದೆ ಸ್ಟೇಜ್ ಆಗ್ಲಿ ಉಮಾಶ್ರೀ ಮೈ ಮೇಲೆ ಅಭಿನಯ ಆಹ್ವಾನ ಆಗುತ್ತೆ. ಈಗ ಕರಾವಳಿ ಕಲೆಯ ಯಕ್ಷಗಾನದಲ್ಲೂ ಉಮಾಶ್ರೀ ಸೈ ಎನೆಸಿಕೊಂಡಿದ್ದಾರೆ.
ರಜನಿಕಾಂತ್ ಜೊತೆ ನಟಿಸಲಿರುವ ಕನ್ನಡದ 'ನರಸಿಂಹ' ಅಮೆರಿಕಾದಿಂದ ಬರೋದು ಯಾವಾಗ?
ಕನ್ನಡ ಸಿನಿರಂಗ ಕಂಡ ಅದ್ಭುತ ನಟಿ ಉಮಾಶ್ರೀ.. ಗ್ಲಾಮರ್ ಗೊಂಬೆಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ ಉಮಾಶ್ರೀ ಆನಂತರ ಹಾಸ್ಯ ನಟಿಯಾಗಿ ಮಿಂಚಿದ್ರು.. ಒಂದು ಲೆಕ್ಕದಲ್ಲಿ ಹೇಳೋದಾದ್ರೆ ರಾರಾಜಿಸಿದ್ರು.. ಈಕೆ ಹಾಸ್ಯ ಕಲಾವಿಧೆಯಾಗಿ ಅಷ್ಟೇ ಅಲ್ಲ.. ಯಾವ ಪಾತ್ರ ಕೊಟ್ರೂ ಮಾಡಬಲ್ಲೇ ಅನ್ನೋದನ್ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುಟ್ನಂಜ ಸಿನಿಮಾದಲ್ಲಿ ವಟಗುಟ್ಟೋ ಅಜ್ಜಿಯ ಪಾತ್ರವನ್ನ ಮಾಡಿ ಸೈ ಎನಿಸಿಕೊಂಡಿದ್ರು..
ಅಳು, ನಗು, ಪ್ರೀತಿ, ಸಿಟ್ಟು ಆಕ್ರೋಶ, ಯಾವ ರೋಲ್ ಆದ್ರೂ ಉಮಾಶ್ರೀ ಮೀರಿಸೋ ಮತ್ತೊಬ್ಬ ನಟಿ ಇಲ್ಲ.. ಹಾಗೆ ನೋಡಿದ್ರೆ ಉಮಾಶ್ರೀ ಅವರಿಗೆ ರಂಗಭೂಮಿ ಹೊಸದೇನೂ ಅಲ್ಲ.. ಅವರು ಬಣ್ಣ ಹಚ್ಚಿದ್ದೇ ಇಲ್ಲಿಂದ… ಆನಂತರ ಸಿನಿಮಾ.. ಸೀರಿಯಲ್ನಲ್ಲಿ ಪುಟ್ಟಕ್ಕ ಮಿಂಚಿದ್ರು.. ಆದ್ರೆ ಯಕ್ಷಗಾನ ಯಕ್ಷರಂಗ ಉಮಾಶ್ರೀಗೆ ಕಂಪ್ಲೀಟ್ ಹೊಸದೇ..
ಸೈಫ್ ಮೇಲಿನ ದಾಳಿಗೆ 'ಕಿಸ್' ನಟಿ ಶ್ರೀಲೀಲಾಗೆ ಸಮಸ್ಯೆ, ಒಗಟು ಬಿಡಿಸ್ತೀರಾ ನೋಡಿ!
ಹೊನ್ನಾವರದ ಪೆರ್ಡೂರು ಮೇಳದಿಂದ ಆಯೋಜನೆಗೊಂಡಿದ್ದ ಶ್ರೀ ರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಎಂಬ ಯಕ್ಷಗಾನದಲ್ಲಿ ಉಮಾಶ್ರೀ ಮಂಥರೇಯಾಗಿ ಅಭಿನಯಿಸಿದ್ದಾರೆ.. ಉಮಾಶ್ರೀ ಅಭಿನಯಕ್ಕೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ನಿಬ್ಬೆರಗಾಗಿದ್ದಾರೆ. 67 ರ ವಯಸ್ಸಿನಲ್ಲೂ ಅದೇ ಹುಮ್ಮಸ್ಸಿನಲ್ಲಿ ಇಂಥ ಪಾತ್ರ ಮಾಡಿದ್ದ ಉಮಾಶ್ರೀ ಅಭಿನಯ ಎಲ್ಲರೂ ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.