ರಜನಿಕಾಂತ್ ಜೊತೆ ನಟಿಸಲಿರುವ ಕನ್ನಡದ 'ನರಸಿಂಹ' ಅಮೆರಿಕಾದಿಂದ ಬರೋದು ಯಾವಾಗ?

Published : Jan 19, 2025, 04:34 PM ISTUpdated : Jan 19, 2025, 04:37 PM IST
ರಜನಿಕಾಂತ್ ಜೊತೆ ನಟಿಸಲಿರುವ ಕನ್ನಡದ 'ನರಸಿಂಹ' ಅಮೆರಿಕಾದಿಂದ ಬರೋದು ಯಾವಾಗ?

ಸಾರಾಂಶ

ಜೈಲರ್ ಚಿತ್ರದ ಯಶಸ್ಸಿನ ಬೆನ್ನಲ್ಲೇ, ರಜನಿಕಾಂತ್ 'ಜೈಲರ್ ೨' ಚಿತ್ರದಲ್ಲಿ ಮತ್ತೆ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ ಜೊತೆಗೂಡಿ ಮತ್ತೊಂದು ಬ್ಲಾಕ್‌ಬಸ್ಟರ್ ಸೃಷ್ಟಿಸುವ ಸೂಚನೆ ನೀಡಿದೆ. ಶಿವಣ್ಣ ಮತ್ತು ಮೋಹನ್‌ಲಾಲ್ ಚಿತ್ರದ ಭಾಗವಾಗುವ ಸಾಧ್ಯತೆಗಳಿವೆ. 74ರ ಹರೆಯದಲ್ಲೂ ರಜನಿ ಅದೇ ಖದರ್‌ನಲ್ಲಿ ಮಿಂಚುತ್ತಿದ್ದಾರೆ.

ಸೂಪರ್​ ಸ್ಟಾರ್​ ರಜನಿಕಾಂತ್ (Rajinikanth) ನಟನೆಯ ಜೈಲರ್​​ ಸಿನಿಮಾ ಬಾಕ್ಸಾಫೀಸ್​​ನಲ್ಲಿ ಬಿರುಗಾಳಿ ಸೃಷ್ಟಿಸಿತ್ತು. 2023ರಲ್ಲಿ ಬಂದ ಜೈಲರ್​ ವಿಶ್ವದಾದ್ಯಂತ 650 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ತಲೈವಾ ಮತ್ತೆ ಜೈಲರ್​​ ಕಾ ಹುಕುಂ ಎಂದಿದ್ದಾರೆ. ಜೈಲರ್​2 ಅನೌನ್ಸ್​ಮೆಂಟ್ ಟೀಸರ್ ಬಂದ ಬಳಿಕ ಈಗ ಜೈಲರ್​​2 ಮೇಕಿಂಗ್ ರಿವೀಲ್ ಆಗಿದೆ. ಸೂಪರ್ ಸ್ಟಾರ್​ ರಜನಿಕಾಂತ್​ ಮತ್ತೊಮ್ಮೆ ಸುನಾಮಿ ಎಬ್ಬಿಸಿದ್ದಾರೆ.. 

ಜೈಲರ್.. ಕಾಲಿವುಡ್​​ನ ಕಟೌಟ್​ ಸೂಪರ್​ ಸ್ಟಾರ್​ ರಜನಿಕಾಂತ್ ನಟನೆಯ ಸಿನಿಮಾ. 2023ರಲ್ಲಿ ಬಂದಿದ್ದ ಜೈಲರ್ ರಜನಿ ಫ್ಯಾನ್ಸ್​ಗೆ ಭರ್ಜರಿ ಕಿಕ್ ಕೊಟ್ಟಿತ್ತು. ಸಿನಿಮಾ ನೋಡಿದವರೆಲ್ಲಾ ಟೈಗರ್​​​ ಕಾ ಹುಕುಂ ಅಂತ ಝೈಕಾರ ಹಾಕಿದ್ರು. ಈಗ ಜೈಲರ್​​2 ಅನೌನ್ಸ್ ಆಗಿದೆ. ಮತ್ತೆ ಸೂಪರ್ ಸ್ಟಾರ್ ಫ್ಯಾನ್ಸ್ ಟೈಗರ್​​ ಕಾ ಹುಕುಂ ಎನ್ನುತ್ತಿದ್ದಾರೆ. 

ರಜನಿಕಾಂತ್ 'ಜೈಲರ್‌ 2'ನಲ್ಲಿ ಶಿವತಾಂಡವ ಇದ್ಯಾ? ಹೊಸದೇನೋ ಇದ್ಯಂತೆ!

ಯೆಸ್, ಸಂಕ್ರಾಂತಿ ಹಬ್ಬಕ್ಕೆ ಬಂದಿದ್ದ ಜೈಲರ್​​2 ಟೀಸರ್​​ ಸಿಕ್ಕಾಪಟ್ಟೆ ಕಿಕ್ ಕೊಟ್ಟಿತ್ತು. ಈಗ ಜೈಲರ್​ ಮೇಕಿಂಗ್ ಹೊರ ಬಂದಿದೆ. ರಜನಿಕಾಂತ್ ಅವರನ್ನು ಮತ್ತೆ ಆ್ಯಕ್ಷನ್ ಅವತಾರದಲ್ಲಿ ನೀವು ಇಲ್ಲಿ ಕಾಣಬಹುದಾಗಿದೆ. ಸನ್ ಪಿಕ್ಚರ್ಸ್​ ಸಂಸ್ಥೆಯು ಈ ಚಿತ್ರವನ್ನು  ನಿರ್ಮಾಣ ಮಾಡುತ್ತಿದೆ.

ಜೈಲರ್​​2 ಟೀಸರ್​ ಮೇಕಿಂಗ್​​ನಲ್ಲಿರೋ ಎಲಿಮೆಂಟ್ಸ್​ ಸಿನಿಮಾ ಡಬಲ್ ಎಂಟರ್​ಟೈನ್​ ಆಗಿರುತ್ತೆ ಅನ್ನೋ ಸೂಚನೆ ಕೊಡುತ್ತಿದೆ. ನಿರ್ದೇಶಕ ನೆಲ್ಸನ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ ಈ ಮೇಕಿಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಲೈವಾ ರಜನಿಕಾಂತ್ ಶಕ್ತಿವಂತನಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಜೈ ಹೋ ತಲೈವಾ ಎನ್ನುತ್ತಿದ್ದಾರೆ. 

ಜೈಲರ್​​ನಲ್ಲಿ ರಿಟೈರ್ಡ್ ಜೈಲರ್​​​​ ಆಫೀಸರ್ ಆಗಿದ್ದ ರಜನಿಕಾಂತ್​ ಕಮಾಲ್ ಮಾಡಿದ್ರು. ಒಂದು ಕಡೆ ಫ್ಯಾಮಿಲಿ ಕಥೆ ಮತ್ತೊಂದು ಕಡೆ ಹೈ ವೋಲ್ಟೇಜ್ ಆ್ಯಕ್ಷನ್ ಆಡಿಯೆನ್ಸ್​​​ನ ನಿಬ್ಬೆರಗಾಗಿಸಿತ್ತು. ನಮ್ಮ ಶಿವಣ್ಣ ಜೈಲರ್​​ನಲ್ಲಿ ನರಸಿಂಹನ ಅವತಾರ ಎತ್ತಿ ಥ್ರಿಲ್ ಕೊಟ್ಟಿದ್ರು. ಇದೀಗ ಜೈಲರ್​​2 ಮೇಕಿಂಗ್ ಬಂದಿದೆ. ಆದ್ರೆ ಶಿವಣ್ಣ ಕಾಣಿಸಿಕೊಂಡಿಲ್ಲ. ಬಟ್ ಜೈಲರ್​​​​2ನಲ್ಲಿ ಶಿವಣ್ಣ (Shivarajkumar) ಹಾಗು ಮೋಹನ್​ ಲಾಲ್​​ ಇದ್ದೇ ಇರ್ತಾರೆ ಅಂತ ಹೇಳಲಾಗ್ತಿದೆ. ರಜನಿಕಾಂತ್ ವಯಸ್ಸು 74 ಆದ್ರೂ ಅದೇ ಖದರ್​​ ಅದೇ ಪವರ್ ಕಾಣಿಸ್ತಾ ಇದೆ. 

ಸೈಫ್ ಮೇಲಿನ ದಾಳಿಗೆ 'ಕಿಸ್' ನಟಿ ಶ್ರೀಲೀಲಾಗೆ ಸಮಸ್ಯೆ, ಒಗಟು ಬಿಡಿಸ್ತೀರಾ ನೋಡಿ!
 
ಜೈಲರ್​2 ಮೇಕಿಂಗ್​ ಹಾಗು ಮ್ಯೂಸಿಕ್​ ನೋಡುತ್ತಿದ್ರೆ ನಿರ್ದೇಶನ ಲೆಲ್ಸನ್​ ಹಾಗು ಸಂಗೀತ ನಿರ್ದೇಶಖ ಅನಿರುದ್ಧ್ ಮತ್ತೊಮ್ಮೆ ಬಾಕ್ಸಾಫೀಸ್​ನಲ್ಲಿ ಮಸ್ತಿ ಮಾಡೋದು ಗ್ಯಾರಂಟಿ. ಸಧ್ಯ ರಜನಿಕಾಂತ್ ಕೂಲಿ ಶೂಟಿಂಗ್​​ನಲ್ಲಿ ಬ್ಯಾಂಕಾಕ್​​ನಲ್ಲಿದ್ದಾರೆ. ಇದರ ಜೊತೆಗೆ ಜೈಲರ್​​​​2 ಬೇರೆ ಅನೌನ್ಸ್ ಅಗಿದ್ದು, ಈ ವರ್ಷದ ಕೊನೆಯಲ್ಲಿ ಅಥವ ಮುಂದಿನ ವರ್ಷ ಜೈಲರ್​​2 ತೆರೆ ಮೇಲೆ ಬರಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ