Thurthu Nirgamana ಚಿತ್ರದ ಪಾತ್ರಕ್ಕೆ ಬೆಚ್ಚಿಬಿದ್ದ ಸುಧಾರಾಣಿ!

By Suvarna News  |  First Published Jun 17, 2022, 5:53 PM IST

80 ರ ದಶಕದ ಬಹುಬೇಡಿಕೆಯ ನಟಿ ಸುಧಾರಾಣಿ ಈಗ ಹೇಮಂತ್‌ ಕುಮಾರ್‌ ಎಲ್‌ ಅವರು ನಿರ್ದೇಶಿಸುತ್ತಿರುವ “ತುರ್ತು ನಿರ್ಗಮನ" ಚಿತ್ರದಲ್ಲಿ ನರ್ಸ್‌ ಆಗಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಸುಧಾರಾಣಿ ಅಭಿಪ್ರಾಯ ಇಲ್ಲಿದೆ.


ಬೆಂಗಳೂರು (ಜೂನ್.17): ಸುಧಾರಾಣಿ 80 ರ ದಶಕದ ಬಹುಬೇಡಿಕೆಯ ನಾಯಕಿಯರಲ್ಲಿ ಒಬ್ಬರು. ನಾಯಕಿಯಾಗಿ ನಟಿಸಿರುವ ಎಲ್ಲಾ ಚಿತ್ರಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ಹೇಮಂತ್‌ ಕುಮಾರ್‌ ಎಲ್‌ ಅವರು ನಿರ್ದೇಶಿಸುತ್ತಿರುವ “ತುರ್ತು ನಿರ್ಗಮನ" ಚಿತ್ರದಲ್ಲಿ ನರ್ಸ್‌ ಆಗಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟನಾಗಿ ಸುನೀಲ್‌ ರಾವ್‌, ರಾಜ್‌ ಬಿ ಶೆಟ್ಟಿ ಹಾಗೂ ಸಂಯುಕ್ತಾ ಹೆಗ್ಡೆ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ.

ನನ್ನ ಪಾತ್ರ ಎಲ್ಲರಿಗೂ ಒಂದು ಅಚ್ಚರಿಯನ್ನು ನೀಡುವ ಪಾತ್ರವಾಗಿದೆ. ಹೇಮಂತ್ ಕಥೆಯನ್ನು ನನಗೆ ಹೇಳಿದಾಗ, ನಾನು ಪಾತ್ರ ಪರಿಚಯದ ಬಗ್ಗೆ ಕೇಳಿ ಬೆಚ್ಚಿಬಿದ್ದೆ. ಈ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದಾಗ ನನಗೆ ಇನ್ನಷ್ಟು ಆಶ್ಚರ್ಯವಾಯಿತು. ತುರ್ತು ನಿರ್ಗಮನ ಚಿತ್ರವು ವಿಷಯಾಧಾರಿತ ಚಿತ್ರ.  ಹೀಗಾಗಿ ಇದು  ಸ್ಯಾಂಡಲ್‌ವುಡ್‌ನಲ್ಲಿ ಒಂದು ಮನಮುಟ್ಟುವ  ಕಥೆಯಾಗಿದೆ. ವೀಕ್ಷಕರು ನನ್ನ ಈ ಹೊಸ ಪಾತ್ರಕ್ಕೆ ಮೆಚ್ಚುಗೆ ನೀಡುತ್ತಾರೆ ಅಂತಾ ಭಾವಿಸಿದ್ದೇನೆ. 

Tap to resize

Latest Videos

ಹೇಮಂತ್ ತಮ್ಮ ಕೆಲಸವನ್ನು ತಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ ಮತ್ತು ಅವರ ಯೋಜನೆಯು ತುಂಬಾ ಅಚ್ಚುಕಟ್ಟಾಗಿದೆ.  ಜನರ ಮನ ಮಿಡಿಯವ ವಿಚಾರವನ್ನು ಕಥೆಯ ರೂಪದಲ್ಲಿ ತಂದಿದ್ದಾರೆ. 

SALMAN KHAN ಅವರ ಮುಂದಿನ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಹತ್ತು ನಾಯಕಿರಂತೆ!

ಇದು ಫ್ಯಾಂಟಸಿ, ವಿಜ್ಞಾನ ವಿಷಯಗಳನ್ನು ಮತ್ತು ಟೈಮ್ ಲೂಪ್ ಅಂಶಗಳನ್ನು ಹೊಂದಿರುವ ಸವಾಲಿನ ಚಿತ್ರ.  ಉತ್ಸಾಹಭರಿತ ಮತ್ತು ಹೊಸ ತಂಡದೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಯಿತು. ವಯಸ್ಸಿನ ಭೇದವಿಲ್ಲದೆ ಈ ಸಿನಿಮಾ ಎಲ್ಲರನ್ನೂ ತಲುಪುತ್ತದೆ ಎಂಬ ನಂಬಿಕೆ ನನಗಿದೆ ಎಂದು ಸುಧಾರಣಿ ಹೇಳಿದ್ದದಾರೆ.

ನಾಯಕಿಯಾಗುವುದರಿಂದ ಹಿಡಿದು ಪಾತ್ರದವರೆಗೆ ಅಭಿನಯಿಸಿರುವ ಅನುಭವ ಇರುವ ನಾನು,  ಸ್ತ್ರೀ-ಆಧಾರಿತ ಪಾತ್ರಗಳನ್ನು ಚಿತ್ರಿಸಿರುವ ವಿಭಿನ್ನ ಅಭಿನಯದ ಶಾಲೆಯಿಂದ ಬಂದಿದ್ದೇನೆ, ನಾನು ನನಗೆ ಇಷ್ಟದ ಪಾತ್ರಗಳನ್ನು ಮಾತ್ರ ಹುಡುಕುತ್ತೇನೆ. ಹೆಚ್ಚಾಗಿ ನಾನು ನಿರ್ದಿಷ್ಟ ಪಾತ್ರವನ್ನು ಹುಡುಕುತ್ತೇನೆ.  ಜೊತೆಗೆ ಕಥೆ ಹೇಳುವಿಕೆ ಮತ್ತು ತಾಂತ್ರಿಕವಾಗಿ ಹೆಸರುವಾಸಿಯಾದ ತಂಡಗಳೊಂದಿಗೆ ಕೆಲಸ ಮಾಡಲು ಬಯಸುತ್ತೇನೆ.  ನನಗೆ ನಟನೆ ಇಷ್ಟ. ನನ್ನ ಮುಂದಿನ ಚಿತ್ರಗಳಲ್ಲಿಯೂ ಸಹ ನಾನು ಆಸಕ್ತಿದಾಯಕ ಪಾತ್ರಗಳಲ್ಲಿ ಅಭಿನಯಿಸಲು ಇಚ್ಚಿಸುತ್ತೇನೆ.

ಆದರೆ ನಾಯಕಿಯಾಗಿ ಪಾತ್ರಗಳನ್ನು ಪೂರ್ಣ ಮಾಡುವವರೆಗೆ ನನಗೆ ಸಮಾಧಾನವಿರುವುದಿಲ್ಲ ಮತ್ತು ಪೂರ್ಣಗೊಂಡಾಗಲೇ ಏನೋ ಒಂದು ಖುಷಿ ಸಿಕ್ಕ ಅನುಭವ ನನಗಾಗುತ್ತದೆ "ಟೆಲಿವಿಷನ್ ಮನರಂಜನೆಯ ಮತ್ತೊಂದು ಮಾಧ್ಯಮವಾಗಿದ್ದು, ನಾನು ಕೆಲಸ ಮಾಡುವುದನ್ನು ಆನಂದಿಸಿದೆ. ಸಣ್ಣ ಪರದೆ ಅಥವಾ ದೊಡ್ಡ ಪರದೆ ಎಂಬುದು ನನಗೆ ಮುಖ್ಯವಲ್ಲ," ಜೊತೆ ಜೊತೆಯಲ್ಲಿ ಕಿರುತೆರೆಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಸುಧಾರಾಣಿ ಒಂದೆರಡು ಪ್ರಾಜೆಕ್ಟ್‌ಗಳ ಚರ್ಚೆಯಲ್ಲಿದ್ದಾರೆ.

Hitler Kalyanaದ ಎಡವಟ್ಟು ಲೀಲಾ ಈಗ ಹಾಸ್ಯ ನಟ ಚಿಕ್ಕಣ್ಣನ ಪ್ರೇಯಸಿ? 

ರೀ ಎಂಟ್ರಿ  ಕೊಡುತ್ತಿರುವ ಸುನೀಲ್‌ ರಾವ್‌ :  ಎಕ್ಸ್‌ಕ್ಯೂಸ್‌ಮೀ ಹೀರೋ ಸುನೀಲ್‌ ರಾವ್‌ ಅವರ ರೀ ಎಂಟ್ರಿ ಸಿನಿಮಾ ‘ತುರ್ತು ನಿರ್ಗಮನ’. ಚಿತ್ರ ಇದೇ ಜೂನ್‌ 24ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಗಿದೆ. ಹೇಮಂತ್‌ ಕುಮಾರ್‌ ಈ ಚಿತ್ರ ನಿರ್ದೇಶಿದ್ದಾರೆ. ‘12 ವರ್ಷಗಳ ನಂತರ ಮತ್ತೆ ಚಿತ್ರದಲ್ಲಿ ನಟಿಸಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ ತುರ್ತು ನಿರ್ಗಮನ. ಯಾರೇ ನಟರು ಕೇಳಿದ್ದರೂ, ಬೇಡ ಎನ್ನಲು ಆಗದಂತಹ ಕತೆ ಇದು. ತುಂಬಾ ವರ್ಷಗಳ ನಂತರ ಒಳ್ಳೆಯ ಚಿತ್ರದಲ್ಲಿ ನಟಿಸಿದ ಖುಷಿ ಇದೆ’ ಎಂದರು ಸುನೀಲ್‌ ರಾವ್‌.

ಹೇಮಂತ್‌ ಕುಮಾರ್‌ ಅವರು ಈ ಹಿಂದೆ ಹೇಮಂತ್‌ ರಾವ್‌ ಅವರ ಬಳಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಕೆಲಸ ಮಾಡಿದವರು. ‘ಈ ರೀತಿಯ ಕತೆ ಆಧರಿಸಿ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ಚಿತ್ರತಂಡದ ಎಲ್ಲರ ಸಹಕಾರವನ್ನು ನೆನೆಯುತ್ತೇನೆ. ನಿಮ್ಮ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದೇನೆ ಎಂಬ ಭರವಸೆಯೊಂದಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತೇನೆ’ ಎಂದಿದ್ದು ನಿರ್ದೇಶಕರು. ಹಿತಾ ಚಂದ್ರಶೇಖರ್‌ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 

click me!