ಶಿವಣ್ಣ ಜೊತೆ ಮದುವೆಯಾಗುವ ಆಸೆ… ಫೇಕ್ ಸುದ್ದಿಗಳಿಗೆ ಮೀಮ್ಸ್ ಮೂಲಕ ಬಿಸಿ ಮುಟ್ಟಿಸಿದ ಸುಧಾರಾಣಿ

Published : Apr 06, 2026, 03:47 PM IST
Sudharani

ಸಾರಾಂಶ

ಟ್ರೋಲ್ ಪೇಜ್ ಗಳ ಹಾವಳಿ ಎಷ್ಟಾಗಿದೆ ಎಂದರೆ, ನಟಿಯರು ಸಂದರ್ಶನದಲ್ಲಿ ಏನನ್ನೋ ಹೇಳಿದರೆ, ಅದನ್ನು ಈ ಪೇಜ್ ಗಳು ಇನ್ನೊಂದು ಅರ್ಥ ಮಾಡಿಕೊಂಡು, ಫೇಕ್ ಸುದ್ದಿಗಳನ್ನು ಶೇರ್ ಮಾಡುತ್ತಿದೆ. ತಮ್ಮ ಕುರಿತಾದ ಅಂತಹ ಫೇಕ್ ಸುದ್ದಿಗೆ ನಟಿ ಸುಧಾರಾಣಿ ಮೀಮ್ಸ್ ಮೂಲಕ ಪಂಚ್ ಕೊಟ್ಟಿದ್ದಾರೆ.

ಫೇಕ್ ಸುದ್ದಿಗಳಿಗೆ ಮೀಮ್ಸ್ ಮೂಲಕ ಬಿಸಿ ಮುಟ್ಟಿಸಿದ ಸುಧಾರಾಣಿ

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದ ನಟ-ನಟಿಯರು ಏನೇ ಮಾತನಾಡಿದರೂ ಸಹ, ಅದಕ್ಕೆ ವಿಭಿನ್ನ ಅರ್ಥವನ್ನು ಕಲ್ಪಿಸಿ, ಫೇಕ್ ಸುದ್ದಿ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಯ ಬಿಡುವ ಟ್ರೋಲ್ ಪೇಜ್ ಗಳ್ ಅಥವಾ ಫೇಕ್ ಪೇಜ್ ಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇತ್ತೀಚೆಗೆ ನಟಿ ಸುಧಾರಾಣಿ ಅವರು ‘ಸುವರ್ಣ ನ್ಯೂಸ್’ ನ ಬೆಂಗಳೂರು ಬಜ್ ಪಾಡ್ ಕಾಸ್ಟ್ ನಲ್ಲಿ ತಮ್ಮ ‘ಆನಂದ್’ ಚಿತ್ರದ ಅನುಭವವನ್ನು ತೆರೆದಿಟ್ಟಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವು ಸೋಶಿಯಲ್ ಮೀಡಿಯಾದ ಪೇಜ್ ಗಳು ಅದಕ್ಕೆ ತಮ್ಮದೇ ರೀತಿಯಲ್ಲಿ ರೆಕ್ಕೆ ಪುಕ್ಕಗಳನ್ನು ಕೊಟ್ಟು ಸುದ್ದಿ ಮಾಡಿ ಹಂಚಿಕೊಂಡಿದ್ದಾರೆ. ಇದೀಗ ನಟಿ ಸುಧಾರಾಣಿಯವರು ತಮ್ಮ ನಾಯಿಗಳ ಜೊತೆ ಒಂದು ಮುದ್ದಾದ ಮೀಮ್ಸ್ ಮಾಡಿ ಫೇಕ್ ಸುದ್ದಿ ಮಾಡುವವರಿಗೆ ಎಚ್ಚರಿಕೆಯ ಬಿಸಿ ಮುಟ್ಟಿಸಿದ್ದಾರೆ. ಅಷ್ಟಕ್ಕೂ ಸುಧಾರಾಣಿ ಕುರಿತಾಗಿ ಶೇರ್ ಆಗಿರುವ ಸುದ್ದಿ ಏನು? ಅದಕ್ಕೆ ಎವರ್ ಗ್ರೀನ್ ಬ್ಯೂಟಿ ಕೊಟ್ಟ ಉತ್ತರ ಏನು ನೀವೇ ನೋಡಿ.

ಸೋಶಿಯಲ್ ಮೀಡಿಯಾದ ಪೇಜ್ ಒಂದರಲ್ಲಿ ಈ ರೀತಿಯಾಗಿ ಫೇಕ್ ನ್ಯೂಸ್ ಶೇರ್ ಮಾಡಲಾಗಿತ್ತು. ‘ಆನಂದ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುಮಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು. ಆದರೆ ಡಾ. ರಾಜ್ಕುಮಾರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಇದನ್ನು ನಟಿ ಸುಧಾರಾಣಿಯವರು ತಮ್ಮ ಇನ್ಸ್ಟ್ರಾಗ್ರಾಮ್ ಪೇಜ್ ನಲ್ಲಿ ಶೇರ್ ಮಾಡಿ, ತಮ್ಮ ಮುದ್ದಿನ ಶ್ವಾನಗಳನ್ನು ಬಳಸಿ, ತಮಾಷೆಯಾಗಿರುವ ಮೀಮ್ಸ್ ಮಾಡಿ, ಆ ಸುದ್ದಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ. ಅದರ ಜೊತೆಗೆ ಈ ರೀತಿಯಾಗಿ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ ಸುಧಾರಾಣಿ.

ಅಪಪ್ರಚಾರ! ನಕಲಿ ಸುದ್ದಿ ದಯವಿಟ್ಟು ಕೆಲವು ಮೂಲಭೂತ ನೀತಿಗಳನ್ನು ತೋರಿಸಿ. ಕೇವಲ ವ್ಯೂವ್ಸ್ ಪಡೆಯಲು ಜನರು ಸುಳ್ಳು ಮಾಹಿತಿಯನ್ನು ಹರಡುವುದನ್ನು ನೋಡುವುದು ನಿರಾಶಾದಾಯಕವಾಗಿದೆ. ಉತ್ತಮವಾಗಿ ಮಾಡಿ - ಕಷ್ಟಪಟ್ಟು ಕೆಲಸ ಮಾಡಿ, ಪ್ರಾಮಾಣಿಕವಾಗಿರಿ ಮತ್ತು ನಿಮ್ಮ ಯಶಸ್ಸನ್ನು ಸರಿಯಾದ ರೀತಿಯಲ್ಲಿ ಗಳಿಸಿ ಎಂದು ನಟಿ ಹಂಚಿಕೊಂಡಿದ್ದಾರೆ. ಇದರ ಜೊತೆಗಿನ ವಿಡೀಯೋದ ಫನ್ನಿ ಸನ್ನಿವೇಷ ಹೀಗಿದೆ.

ಮಿಕ್ಕಿ: ಅಮ್ಮ ನೀನು ಆನಂದ್ ಸಿನಿಮಾ ಮಾಡುವಾಗಲೇ ಶಿವಣ್ಣನ ಮದುವೆ ಮಾಡಿಕೊಳ್ತೀನಿ ಅಂದಿದ್ಯಂತೆ.

ಸುಧಾರಾಣಿ: ಯಾರೋ ನಿಂಗೆ ಇದೆಲ್ಲಾ ಹೇಳಿದ್ದು?

ಮಿನಿ: ಲೋ ಅಣ್ಣ, ಆಗ ಅಮ್ಮ ಇನ್ನೂ 7ನೇ ಕ್ಲಾಸ್, ಶಿವಣ್ಣಂಗೆ ಗೀತಾ ಅವರ ಜೊತೆ ಎಂಗೇಜ್ ಮೆಂಟ್ ಆಗಿತ್ತು.

ಸುಧಾರಾಣಿ: ಸರಿಯಾಗಿ ಹೇಳಿದೆ ಮಿನಿ

ಮಿಕ್ಕಿ: ಅವನ್ಯಾವನೋ ತಿರಬೋ* ನನ್ ಮಗ ಅಮ್ಮ ಇತ್ತೀಚೆಗೆ ಸಂದರ್ಶನದಲ್ಲಿ ಮದುವೆಯಾಗ್ತಾರೆ ಅಂತ ಅಪಪ್ರಚಾರ ಮಾಡ್ತಿದ್ದಾನೆ.

ಮಿನಿ: ಅಮ್ಮ ಹೇಗೂ ನಮ್ ಸುಬ್ಬಿ ಕುಟ್ಟಿನೇ ಲಾಯರ್, ಹಾಕು ಒಂದು ಡಿಫಮೇಶನ್ ಕೇಸು, ಆಯ್ಕೊಂಡು ತಿನ್ನೋರೆಲ್ಲಾ ಕಾಂಟೆಂಟ್ ಕ್ರಿಯೇಟರ್ಸ್ ಆದ್ರೆ, ಹೀಗೆ ಆಗೋದು…

ಈ ರೀತಿಯಾಗಿ ತಮ್ಮ ಫನ್ನಿ ವಿಡಿಯೋ ಮೂಲಕ ಫೇಕ್ ನ್ಯೂಸ್ ಕ್ರಿಯೇಟ್ ಮಾಡುವವರಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಾರಾ ಆರ್‌ಸಿಬಿ ರನ್ ಮಷೀನ್ ! ವಿರಾಟ್ ಕೊಹ್ಲಿ ಬಯೋಪಿಕ್​​​​​​ ಮೇಲೆ ಸಿನಿ ಜಗತ್ತಿನ ಕಣ್ಣು..!
Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ