ನಟಿ ಸುಧಾ ಬೆಳವಾಡಿ ಅಂದು ಸಾವಿನಿಂದ ಪಾರಾಗಿದ್ದು ಹೇಗೆ? ನಟ ವಿಷ್ಣುವರ್ಧನ್ ಬಗ್ಗೆ ಹೇಳಿದ್ದೇನು ನೋಡಿ!

Published : Apr 05, 2026, 12:59 PM IST
Sudha Belawadi

ಸಾರಾಂಶ

ನಟಿ ಸುಧಾ ಬೆಳವಾಡಿಯವರು ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ, ಮೊಗ್ಗಿನಮನಸ್ಸು, ಜೋಕ್‌ ಫಾಲ್ಸ್, ಗಾಳಿಪಟ, ಗೂಗ್ಲಿ ಸೇರಿದಂತೆ ಹಲವಾರು ಸಿನಿಮಾಗಳನ್ನು, ಅವರ ಅತ್ಯದ್ಭುತ ನಟನೆಯನ್ನೂ ಇಂದಿಗೂ ಸಿನಿಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಇದೀಗ, ಈ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.

ಸುಧಾ ಬೆಳವಾಡಿ ಹಳೆಯ ವಿಡಿಯೋ ವೈರಲ್

ಕನ್ನಡ ಚಿತ್ರರಂಗದ ನಟಿ, ನಿರ್ದೇಶಕಿ ಹಾಗೂ 'ಮುಂಗಾರು ಮಳೆ' ಚಿತ್ರದ ಎವರ್‌ಗ್ರೀನ್ ಅಮ್ಮ ಸುಧಾ ಬೆಳವಾಡಿ (Sudha Belawadi) ಅವರದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ದೂರದರ್ಶನದಲ್ಲಿ "ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ, ನಾ. ಸೋಮೇಶ್ವರ ಅವರ ಜೊತೆ ನಡೆದ ಸಂವಾದದಲ್ಲಿ ಸುಧಾ ಬೆಳವಾಡಿಯವರು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗ್ತಿದೆ.

ಹಾಗಿದ್ದರೆ ನಾ ಸೋಮೇಶ್ವರ್ ಹಾಗೂ ಸುಧಾ ಬೆಳವಾಡಿ ಮಾತುಕತೆಯಲ್ಲಿ ಏನಿದೆ?

ಹೌದು, ಸಾಕಷ್ಟು ಕುತೂಹಲಕಾರಿ ಎನ್ನಿಸುವ ಸಂಗತಿಗಳನ್ನು ಅಲ್ಲಿ ಹಂಚಿಕೊಳ್ಳಲಾಗಿದೆ. ನಾ ಸೋಮೇಶ್ವರ ಅವರು ಸುಧಾ ಅವರಿಗೆ 'ಸುಧಾ ಅಂದ್ರೆ ನಮಗೆಲ್ಲಾ ನೆನಪಾಗೋದು- 'ಭೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ಪ್ರವಾಹ ಬಂದು ತೋಟವೆಲ್ಲಾ ಮುಳುಗಿಹೋಗಿ, ಮನೆಯ ಮೇಲ್ಛಾವಣಿ ಹೆಂಚಿನ ಮೇಲೆ ಕುಳಿತು 'ಗುಳ್ಳಾ.. ಗುಳ್ಳಾ..' ಎಂದು ಕೂಗುವ ಚಿಕ್ಕ ಹೆಣ್ಣುಮಗು' ಎಂದಿದ್ದಾರೆ. ಅದಕ್ಕೆ ಹೌದು ಎಂದು ದನಿಗೂಡಿಸಿರುವ ಸುಧಾ ಬೆಳವಾಡಿ ಅವರು 'ಸಿನಿಮಾ ಬಳಿಕ ನಾನು ಸ್ಕೂಲಿಗೆ ಹೋದಾಗ ಎಲ್ಲರೂ ನನ್ನನ್ನು ನೋಡಿ 'ಗುಳ್ಳಾ ಗುಳ್ಳಾ' ಎಂದು ಕರೆಯುತ್ತಿದ್ದರು ಎಂದಿದ್ದಾರೆ.

ಜೊತೆಗೆ, 'ನಾನು ನ್ಯಾಷನಲ್ ಸ್ಕೂಲಿನಲ್ಲಿ ಓದಿದ್ದು. ಅಲ್ಲಿಯೇ ವಿಷ್ಣುವರ್ಧನ್ ಅವರೂ ಕೂಡ ಓದಿದ್ದು. ನನಗೆ ನಟ ವಿಷ್ಣುವರ್ಧನ್ ಅವರ ಪರಿಚಯ ಮೊದಲಿನಿಂದಲೂ ಇತ್ತು. ಅವರು ನನ್ನನ್ನು ಆ ಸಿನಿಮಾ ಶೂಟಿಂಗ್ ವೇಳೆ ತುಂಬಾ ಚೆನ್ನಾಗಿ ನೋಡಿಕೊಂಡರು. ನಾನಾಗ ಇನ್ನೂ ಚಿಕ್ಕ ಮಗು. ನನಗೆ ಅವರೊಟ್ಟಿಗೆ ನಟಿಸುವಾಗ ಸ್ವಲ್ಪವೂ ಭಯ ಆಗದಂತೆ ಚೆನ್ನಾಗಿ ನೋಡಿಕೊಂಡಿದ್ದಾರೆ ವಿಷ್ಣು ಸರ್..' ಎಂದು ಹಳೆಯ ಸವಿನೆನಪನ್ನು ಬಿಚ್ಚಿಟ್ಟಿದ್ದಾರೆ ನಟಿ ಸುಧಾ ಬೆಳವಾಡಿ.

ಆಳವಾದ ಜಲಪಾತವಿತ್ತು

ಮತ್ತೊಂದು ನೆನಪನ್ನೂ ಕೂಡ ಹಂಚಿಕೊಂಡಿದ್ದಾರೆ ಸುಧಾ ಬೆಳವಾಡಿ.. 'ಭೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ನದಿಯಲ್ಲಿ ತೆಪ್ಪದ ಮೇಲೆ ಸಹಕಲಾವಿದರ ಜೊತೆಗೆ ನಾನಿದ್ದೆ. ನಾವು ಹೋಗುತ್ತಿರುವ ದಿಕ್ಕಿನಲ್ಲಿ ಮುಂದಕ್ಕೆ ಒಂದು ಆಳವಾದ ಜಲಪಾತವಿತ್ತು. ತೆಪ್ಪವನ್ನು ಒಂದು ಮರಕ್ಕೆ ಹಗ್ಗದಲ್ಲಿ ಕಟ್ಟಿ ಹಾಕಿ, ನಾವಿರುವ ತೆಪ್ಪವನ್ನು ನದಿಯಲ್ಲಿ ತೇಲಿಬಿಟ್ಟಿದ್ದರು. ಆದರೆ ಕಟ್ಟಿದ್ದ ಹಗ್ಗ ತುಂಡಾಗಿತ್ತು. ದಡದಲ್ಲಿರುವ ಯಾರೋ ಅದನ್ನು ನೋಡಿ, ತಕ್ಷಣ ಹಗ್ಗವನ್ನು ಎಳೆದುಕೊಂಡು ನಮ್ಮನ್ನು ಅಪಾಯದಿಂದ ಪಾರುಮಾಡಿದ್ದರು. ಅಂದು ಅವರು ರಕ್ಷಣೆ ಮಾಡಿದ್ದಕ್ಕೆ ಇಂದು ನಾನು ನಿಮ್ಮ ಮುಂದೆ ಇದ್ದೇನೆ' ಎಂದಿದ್ದಾರೆ.

ಅಂದಹಾಗೆ, ನಟಿ ಸುಧಾ ಬೆಳವಾಡಿಯವರು ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ, ಮೊಗ್ಗಿನಮನಸ್ಸು, ಜೋಕ್‌ ಫಾಲ್ಸ್, ಗಾಳಿಪಟ, ಗೂಗ್ಲಿ ಸೇರಿದಂತೆ ಹಲವಾರು ಸಿನಿಮಾಗಳನ್ನು, ಅವರ ಅತ್ಯದ್ಭುತ ನಟನೆಯನ್ನೂ ಇಂದಿಗೂ ಸಿನಿಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಇದೀಗ, ಈ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.

ವಿಡಿಯೋ ಲಿಂಕ್ ನೋಡಿ-

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಗಳು ಗೌರಿ ಬಗ್ಗೆ ನನ್ನ 2ನೇ ಪತ್ನಿ ಯಾವಾಗಲೂ ಇದೇ ಮಾತಾಡ್ತಾಳೆ; ನಿರ್ದೇಶಕ ಎಸ್‌ ಮಹೇಂದರ್‌ ಮುಕ್ತ ಮಾತು
"ನಮಗೆ ಹೇಗೆನಿಸುತ್ತೆ?": 'ಡ*ರ್' ಪದ ಬಳಕೆಗೆ ನಿರೂಪಕಿ ಅನುಶ್ರೀ ತೀವ್ರ ಬೇಸರ