'ಕೆಜಿಎಫ್‌'ನಲ್ಲಿ ಯಶ್ ನೋಡಿ ಕಲಿತಿದ್ಧೇನು ಎಂಬ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಕೊಟ್ರು ಶಾಕಿಂಗ್ ಆನ್ಸರ್!

By Shriram Bhat  |  First Published Apr 12, 2024, 7:37 PM IST

ಕೆಜಿಎಫ್‌ ಚಾಪ್ಟರ್‌ 1 ರಲ್ಲಿ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸೌಂದರ್ಯದಿಂದ ಮಾತ್ರವಲ್ಲ, ನಟನೆಯಿಂದಲೂ ಸಾಕಷ್ಟು ಗಮನ ಸೆಳೆದಿದ್ದಾರೆ. ಕೆಜಿಎಫ್ ನೋಡಿದವರು, ಅದೂ ಭಾರತದಲ್ಲೇ ಆಗಲಿ ಅಥವಾ ಜಗತ್ತಿನ ಯಾವುದೇ ಭಾಗದಲ್ಲಿ ಆಗಲಿ, ನಟಿ ಶ್ರೀನಿಧಿ ಶೆಟ್ಟಿ..


ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಸಂದರ್ಶನವೊಂದರಲ್ಲಿ ಮಾತನಾಡುತ್ತ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ತಾವು ಯಶ್ ಅವರಿಂದ ಕಲಿತಿದ್ದು ಏನು ಎಂಬ ಪ್ರಶ್ನೆಗೆ 'ನಾನು ಕೆಜಿಎಫ್ (KGF) ಸಿನಿಮಾದಲ್ಲಿ ಶೂಟಿಂಗ್ ಸ್ಥಳದಲ್ಲಿ ಯಶ್ ಸೇರಿದಂತೆ ಎಲ್ಲರನ್ನೂ ಎಲ್ಲವನ್ನೂ ತುಂಬಾನೇ ಆಬ್ಸರ್ವ್ ಮಾಡಿದ್ದೇನೆ. ಯಶ್ ಅವರು ಹೇಗೆ ಕೆಲಸ ಮಾಡುತ್ತಾರೆ, ಯಾವುದನ್ನೆಲ್ಲ ವಿಚಾರಿಸುತ್ತಾರೆ, ಶೂಟಿಂಗ್‌ನಲ್ಲಿ ಆನ್‌ ಸ್ಕ್ರೀನ್, ಆಫ್‌ ಸ್ರೀನ್‌ ನಲ್ಲಿ ಹೇಗಿರುತ್ತಾರೆ ಎಂಬುದನ್ನು ನೋಡಿದ್ದೇನೆ, ನನ್ನಿಂದ ಆದಷ್ಟೂ ಅರ್ಥ ಮಾಡಿಕೊಂಡಿದ್ದೇನೆ. 

ಯಶ್ ಅವರು ಈಗಾಗಲೇ ಎಸ್ಟಾಬ್ಲಿಶ್ ಆಗಿರೋ ಸ್ಟಾರ್. ಆದರೂ ಕೂಡ ಅವರು ಸಿನಿಮಾ ಬಗೆಗಿನ ಪ್ರತಿಯೊಂದನ್ನೂ ಹೊಸಬರಂತೆ ಕೇಳುತ್ತಾರೆ, ಪ್ರತಿಯೊಂದನ್ನೂ ಗಮನಿಸುತ್ತಾರೆ. ಶೂಟಿಂಗ್ ವೇಳೆಯಲ್ಲಿ ಆಗಲೀ ಅಥವಾ ಬೇರೆ ಸಮಯದಲ್ಲೇ ಆಗಲಿ, ಅವರಲ್ಲಿ ನಾನು ತುಂಬಾ ಡೆಡಿಕೇಶನ್ ನೋಡಿದ್ದೇನೆ. ಮಾತು, ಕೃತಿ ಯಾವುದೇ ಇರಲಿ,  ಅದರಲ್ಲಿ ಸಿನಿಮಾ ಬಗೆಗಿನ ಅವರ ತುಡಿತ, ಮಿಡಿತ ಹಾಗೂ ಡೆಡಿಕೇಶನ್ ಎದ್ದು ಕಾಣುತ್ತದೆ. ನಾನು ಕೆಜಿಎಫ್ ಸಿನಿಮಾ ಶೂಟಿಂಗ್‌ ಸ್ಥಳದಲ್ಲಿ ನನ್ನ ಪಾಲಿನ ಶೂಟಿಂಗ್ ಇಲ್ಲದಿರುವಾಗ ಎಲ್ಲವನ್ನೂ ಗಮನಿಸುವುದನ್ನ ಕಲಿತುಕೊಂಡಿದ್ದೇನೆ ಎಂದು ಹೇಳಲು ಬಯಸುತ್ತೇನೆ' ಎಂದಿದ್ದಾರೆ ನಟಿ ಶ್ರೀನಿಧಿ ಶೆಟ್ಟಿ.

Tap to resize

Latest Videos

ರಾಕಿ ಅಂದ್ರೆ ಬೆಂಕಿ, ದುಶ್ಮನ್ ಅಂದ್ರೆ ಪೆಟ್ರೋಲ್; ಬೇರೆಯದೇ ಆ್ಯಂಗಲ್‌ನಲ್ಲಿ ಅರ್ಥ ಹೇಳ್ಬಿಟ್ರು ಯಶ್!

ಕೆಜಿಎಫ್‌ ಚಾಪ್ಟರ್‌ 1 ರಲ್ಲಿ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸೌಂದರ್ಯದಿಂದ ಮಾತ್ರವಲ್ಲ, ನಟನೆಯಿಂದಲೂ ಸಾಕಷ್ಟು ಗಮನ ಸೆಳೆದಿದ್ದಾರೆ. ಕೆಜಿಎಫ್ ನೋಡಿದವರು, ಅದೂ ಭಾರತದಲ್ಲೇ ಆಗಲಿ ಅಥವಾ ಜಗತ್ತಿನ ಯಾವುದೇ ಭಾಗದಲ್ಲಿ ಆಗಲಿ, ನಟಿ ಶ್ರೀನಿಧಿ ಶೆಟ್ಟಿ ಅವರ ಬಗ್ಗೆ ಕೂಡ ಮಾತನಾಡುವಷ್ಟರ ಮಟ್ಟಿಗೆ ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾಲಿನ ಕ್ರೆಡಿಟ್ ತೆಗೆದುಕೊಳ್ಳುವುದರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಹಿಂದೆ ಬಿದ್ದಿಲ್ಲ ಎನ್ನಬಹುದು. 

ಅನುಷ್ಕಾ ಶರ್ಮಾ ಕೊಟ್ಟ ಬಿಗ್ ಫ್ಲಾಪ್‌ನಿಂದ ಕಂಗಾಲಾಗಿ ನಟನೆಯನ್ನೇ ಬಿಟ್ಟ ವಿಲನ್ ಪಾತ್ರಧಾರಿ!

ಒಟ್ಟಿನಲ್ಲಿ, ಸಂದರ್ಶನದಲ್ಲಿ (Srinidhi Shetty Interview) ಮಾತನಾಡುವಾಗ ಕೂಡ ಶ್ರೀನಿಧಿ ಶೆಟ್ಟಿ ಅವರಿಗೆ ಸಿನಿಮಾದಲ್ಲಿ ಇನ್‌ವಾಲ್ವ್‌ಮೆಂಟ್ ಇದೆ ಎಂಬುದನ್ನು ಗುರುತಿಸಬಹುದು. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಎರಡಲ್ಲೂ ನಟಿ ಶ್ರೀನಿಧಿ ಶೆಟ್ಟಿ ಸಾಕಷ್ಟು ಗಮನ ಸೆಳೆದಿದ್ದಾರೆ. ಸದ್ಯ ಸಿನಿಮಾ ಆಯ್ಕೆಯಲ್ಲಿ ಬಹಳಷ್ಟು ಚೂಸಿಯಾಗಿರುವ ಅವರು ಮುಂದಿನ ಹೆಜ್ಜೆಯನ್ನು ಹುಶಾರ್ ಆಗಿ ಇಡಲಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಊಹಿಸಬೇಕಿಲ್ಲ ಅಥವಾ ಹೇಳಬೇಕಿಲ್ಲ. 

ಗೌರಿ ಖಾನ್ ಜತೆ ಬೆಂಗಳೂರಿಗೆ ಬಂದಿದ್ದ ಶಾರುಖ್ ಖಾನ್ ಹಳೆಯ ಫೋಟೋ 'ಚಮತ್ಕಾರ' ಮಾಡ್ತಿದೆ ನೋಡ್ರೀ!

click me!