ಬಹುಭಾಷಾ ನಟಿ ಸೌಂದರ್ಯ ನೆನಪು ಮಾಸಲು ಸಾಧ್ಯವೇ ಇಲ್ಲ. ಅದ್ಭುತ ನಟಿಯಾಗಿದ್ದ ಸೌಂದರ್ಯ ಸಾವು ದೊಡ್ಡ ನೋವು. ಹೆಲಿಕಾಪ್ಟರ್ ಏರುವ ಮೊದಲೇ ಸೌಂದರ್ಯಗೆ ಸಾವಿನ ಸುಳಿವು ಸಿಕ್ಕಂತಿತ್ತು. ಸೌಂದರ್ಯ ಹಾಗೂ ಅವರ ಅಣ್ಣನ ವರ್ತನೆ ಅಂದು ಭಿನ್ನವಾಗಿತ್ತು.
ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿರುವ, ಮುದ್ದು ಮುದ್ದಾದ ಮುಗ್ದ ಚಲುವೆ ನಟಿ ಸೌಂದರ್ಯ (South Indian Actress Soundarya). ಅವರು ಇಹಲೋಕ ತ್ಯಜಿಸಿ 20 ವರ್ಷಗಳ ಕಳೆದ್ರೂ ಅವರ ನಗು, ಅವರ ನಟನೆಯನ್ನು ಅಭಿಮಾನಿಗಳು ಮರೆತಿಲ್ಲ. ಈಗ್ಲೂ ಈ ನಟಿ ಇರಬೇಕಿತ್ತು ಎನ್ನುವವರ ಸಂಖ್ಯೆ ಲಕ್ಷದಲ್ಲಿದೆ.
ಸಾವು (Death) ಹತ್ತಿರ ಬರುವಾಗ ಮುನ್ಸೂಚನೆ ನೀಡುತ್ತೆ ಎನ್ನುವ ಮಾತೊಂದಿದೆ. ನಟಿ ಸೌಂದರ್ಯ (Sowndarya) ಹಾಗೂ ಅವರ ಅಣ್ಣ ಅಮರತಾಥ್ ಅವರಿಗೂ ತಮ್ಮ ಸಾವಿನ ಸುಳಿವು ಸಿಕ್ಕಿತ್ತಾ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ. ರಾಜೇಶ್ ಗೌಡ ಜೊತೆ ಸೌಂದರ್ಯ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಅವರ ಅತ್ತಿಗೆ ನಿರ್ಮಲಾ ಅಮರನಾಥ್ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆ ದಿನ ಹೆಲಿಕಾಪ್ಟರ್ ಏರುವ ಮುನ್ನ ಸೌಂದರ್ಯ ಏನು ಮಾಡಿದ್ರು ಎಂಬುದನ್ನು ನಿರ್ಮಲಾ ಹೇಳಿದ್ದಾರೆ.
ಪರ್ಫೆಕ್ಟ್ ಪೇರೆಂಟಿಂಗ್ ಕಾನ್ಸೆಪ್ಟ್ ಅನುಸರಿಸ್ತಾರಾ ಆಲಿಯಾ? ಎಲ್ಲ ಪಾಲಕರು ತಿಳೀಬೇಕು ಈ ವಿಷ್ಯ
ಒಂದ್ಕಡೆ ಟೈಂ ಆಯ್ತು ಬೇಗ ಬಾ ಎನ್ನುವ ಒತ್ತಡದ ಮಧ್ಯೆಯೂ ಮನೆಯಿಂದ ಹೊರಗೆ ಹೊರಟಿದ್ದ ಸೌಂದರ್ಯ, ಮತ್ತೆ ವಾಪಸ್ ಮನೆಗೆ ಬಂದಿದ್ದರು. ಓಡ್ತಾ ಬಂದಿದ್ದ ಅವರು, ಅತ್ತಿಗೆ ಬಳಿ ಕುಂಕುಮ ಕೊಡಿ ಅಂತ ಕೇಳಿ ಪಡೆದಿದ್ದರು. ನಿರ್ಮಲಾ, ಸೌಂದರ್ಯ ಅವರಿಗೆ ಸಾವಿನ ಸುಳಿವು ಸಿಕ್ಕಿತ್ತಾ ಎನ್ನುವ ಪ್ರಶ್ನೆಗೆ, ಬಹುಶಃ ಇರಬಹುದೇನೋ. ಅವರು ಯಾವಾಗ್ಲೂ ಕುಂಕುಮ ಇಟ್ಟುಕೊಂಡೇ ಹೊರಗೆ ಹೋಗ್ಬೇಕು ಎನ್ನುವ ನಿಯಮ ಪಾಲಿಸಿದವರಲ್ಲ. ಆದ್ರೆ ಆ ದಿನ ಮಾತ್ರ ಮನೆಯಿಂದ ಹೊರಗೆ ಹೋದವರು ಮತ್ತೆ ಬಂದು ಕುಂಕುಮ ಕೇಳಿದ್ರು ಎಂದಿದ್ದಾರೆ.
ಅಷ್ಟೇ ಅಲ್ಲ ಪತಿ ಅಮರನಾಥ್ ಬಗ್ಗೆ ಮಾತನಾಡಿದ ಅವರು, ಹೆಲಿಕಾಪ್ಟರ್ ಹತ್ತುವ ಮೊದಲು ನನ್ನ ಬಳಿ ಬಂದ ಅಮರನಾಥ್, ಹಗ್ ಮಾಡಿ, ಮುತ್ತಿಟ್ಟು, ಹೋಗಿ ಬರ್ತೇನೆ ಎಂದಿದ್ದರು. ಪ್ರತಿಬಾರಿ ಹೀಗೆ ಮಾಡದ ಅಮರ್ ನಾಥ್ ಆ ದಿನ ಮಾಡಿದ್ರು ಅಂತ ಭಾವುಕರಾಗ್ತಾರೆ ನಿರ್ಮಲಾ.
ಜನರಿಗೆ ಸಹಾಯ ಮಾಡ್ಬೇಕು, ರಾಜಕೀಯಕ್ಕೆ ಸೇರಬೇಕು ಎಂಬ ಬಗ್ಗೆ ಮನೆಯಲ್ಲಿ ಗೊಂದಲವಿತ್ತಂತೆ. ಒಬ್ಬರು ಸೌಂದರ್ಯ ರಾಜಕೀಯ ಸೇರಬೇಕು ಅಂದ್ರೆ ಮತ್ತೊಬ್ಬರು ಬೇಡ ಎನ್ನುತ್ತಿದ್ದರು. ದುರ್ಘಟನೆ ನಡೆದ ಹಿಂದಿನ ದಿನ ಕೂಡ, ಸೌಂದರ್ಯ ಪತಿ ರಘು ಸ್ಪಷ್ಟ ನಿರ್ಧಾರ ಹೇಳಿರಲಿಲ್ಲವಂತೆ. ಅವರಿಗೆ ಇದು ಅಷ್ಟಾಗಿ ಇಷ್ಟವಿರಲಿಲ್ಲವಂತೆ. ಹಾಗಾಗಿ ಸೌಂದರ್ಯ ಡಬಲ್ ಮೈಂಡ್ ಹೊಂದಿದ್ರು ಎನ್ನುತ್ತಾರೆ ನಿರ್ಮಲಾ. ಈ ಬಗ್ಗೆ ಹಿಂದಿನ ದಿನ ಮನೆಯವರೆಲ್ಲ ಗಂಭೀರ ಚರ್ಚೆ ನಡೆಸಿದ್ದರು. ಆ ಟೈಂನಲ್ಲಿ ಸೌಂದರ್ಯ ಸ್ವಲ್ಪ ಡಿಸ್ಟರ್ಬ್ ಆಗಿದ್ರು. ಅವರ ಮನಸ್ಸು ಕೂಲ್ ಆಗಿರಲಿಲ್ಲ. ಒಂದು ವೀಕ್ ನಿಂದ ಅವರಲ್ಲಿ ಏನೋ ಗೊಂದಲ ಕಾಣ್ತಿತ್ತು ಎನ್ನುತ್ತಾರೆ ನಿರ್ಮಲಾ. ಹಿಂದಿನ ದಿನ ಅತ್ತಿಗೆ ಬಳಿ ಸೌಂದರ್ಯ ಮಾತನಾಡಿದ್ದರಂತೆ. ಏನು ಮಾಡ್ಬೇಕು ಗೊತ್ತಾಗ್ತಿಲ್ಲ ಎಂದ ಸೌಂದರ್ಯ, ಪ್ರಚಾರಕ್ಕೆ ಹೋಗಲು ಸೀರೆ ಆಯ್ಕೆ ಮಾಡಿದ್ದರಂತೆ. ಅತ್ತಿಗೆ ಸೀರೆ ಧರಿಸುವ ನಿರ್ಧಾರಕ್ಕೆ ಬಂದಿದ್ದರಂತೆ ಸೌಂದರ್ಯ.
ಆ ದಿನ ಬೆಳಿಗ್ಗೆ ಏನೆಲ್ಲ ಆಯ್ತು : ಘಟನೆ ದಿನ ಲೇಟಾಗಿ ಅಣ್ಣನ ಮನೆಗೆ ಬಂದ ಸೌಂದರ್ಯ ಹಾಗೂ ಅವರ ಅಣ್ಣ ತುಂಬಾ ಬ್ಯುಸಿ ಇದ್ರು. ಟೆನ್ಷನ್ ಇತ್ತು. ಒಂದಾದ್ಮೇಲೆ ಒಂದು ಕರೆ ಬರ್ತಾನೆ ಇತ್ತು. ಮನೆಯಲ್ಲೇ ಅಡುಗೆ ಮಾಡ್ದೆ ಆಹಾರ ತರಿಸಿ ತಿಂದಿದ್ದರು. ಮನೆಗೆ ಹೀಗೆ ಬಂದಿದ್ದ ಸ್ನೇಹಿತನನ್ನು ಅಮರನಾಥ್ ತಮ್ಮ ಜೊತೆ ಕರೆದುಕೊಂಡು ಹೊರಟಿದ್ರು ಎನ್ನುತ್ತಾರೆ ನಿರ್ಮಲಾ. ಹತ್ತಕ್ಕೆ ಹೊರಟವರು, 10.30ಕ್ಕೆ ಇಲ್ಲ. ಏನೋ ಆಗಿದೆ ಎನ್ನುವ ಸುದ್ದಿ ಸಿಗುತ್ತಿದ್ದಂತೆ ನಾನು ಹೊರಟೆ. ಅಲ್ಲಿ ಹೋದ್ರೆ ಏನೂ ಇರಲಿಲ್ಲ ಎನ್ನುತ್ತಾರೆ ನಿರ್ಮಲಾ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ ಬೇಬಿ ಪಂಪ್ ತೋರಿಸಿದ ರಾಪರ್!
ಈ ಸಂದರ್ಶನದಲ್ಲಿ ನಿರ್ಮಲಾ, ಸೌಂದರ್ಯ ಹಾಗೂ ಪತಿ ಅಮರನಾಥ್ ಬಗ್ಗೆ ಅನೇಕ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ನಿರ್ಮಲಾ, ಸೌಂದರ್ಯ ಅವರನ್ನು ತನ್ನ ಮಗಳಂತೆ ನೋಡಿಕೊಂಡಿದ್ದರು. ನಿರ್ಮಲಾ – ಅಮರನಾಥ್ ಮದುವೆ ಸಮಯದಲ್ಲೇ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಸೌಂದರ್ಯ, ಅಣ್ಣ ಹೇಳಿದಂತೆ ಕೇಳ್ತಿದ್ದರು ಎನ್ನುತ್ತಾರೆ ನಿರ್ಮಲಾ. ಅತ್ತಿಗೆ ಜೊತೆ ಮಕ್ಕಳಂತೆ ಮಾತನಾಡ್ತಿದ್ದ ಸೌಂದರ್ಯ, ತಮ್ಮದೆಲ್ಲ ಕಥೆಯನ್ನು ಹೇಳ್ತಿದ್ದರು. ಸೌಂದರ್ಯ ಬೆಂಗಳೂರಿನಲ್ಲಿದ್ದಾರೆ ಅಂದ್ರೆ ಮನೆಯಲ್ಲಿ ಹಬ್ಬದ ವಾತಾವರಣ ಇರ್ತಿತ್ತು ಎನ್ನುತ್ತಾರೆ ನಿರ್ಮಲಾ.