ಗರಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿ ಸೋನಲ್ ನಟಿಸಿದ್ದಾರೆ. ಇನ್ನು ತರುಣ್ ಸುಧೀರ್ ಬಗ್ಗೆ ಸಾಕಷ್ಟು ಗೊತ್ತಿದೆ. ಚೌಕ, ಕಾಟೇರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಸ್ಯಾಂಡಲ್‌ವುಡ್ ಸಿನಿರಂಗಕ್ಕೆ ಕೊಟ್ಟಿದ್ದಾರೆ. ದರ್ಶನ್ ನಾಯಕತ್ವದ ಕಾಟೇರ್ ಸಿನಿಮಾವಂತೂ..
ಕನ್ನಡದ ಸ್ಟಾರ್ ನಟ ದರ್ಶನ್ (Darshan) ಕೊಲೆ ಕೇಸ್ ಒಂದರಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿ ಜೈಲಿನಲ್ಲಿ ಇರೋದು ಗೊತ್ತೇ ಇದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿ ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಬೆಂಗಳೂರಿನಲ್ಲಿ ಕೊಲೆಯಾಗಿದ್ದಾರೆ. ಆ ಆರೋಪದಲ್ಲಿ ನಟ ದರ್ಶನ್ ಸುಮಾರು 40 ದಿನಗಳಿಂದ ಜೈಲಿನಲ್ಲಿ ಇದ್ದಾರೆ. 'ದರ್ಶನ್ ಅವರನ್ನು ನೀವು ಮೀಟ್ ಮಾಡಲು ಜೈಲಿಗೆ ಹೋಗೋದಿಲ್ವಾ' ಎಂಬ ಪ್ರಶ್ನೆಗೆ ಸೋನಲ್ ಉತ್ತರಿಸಿದ್ದಾರೆ.
'ಈ ಬಗ್ಗೆ ನಟಿ ಸೋನಲ್ ಮಂತೆರೂ (Sonal Monteiro) ಅವರು 'ಅವ್ರು ಹೋಗಿ ಮೀಟ್ ಆಗಿದಾರೆ, ಆದ್ರೆ ನಂಗೆ ಪರ್ಸನಲ್ ಆಗಿ ಅವ್ರನ್ನು ಅಲ್ಲಿ ಮೀಟ್ ಆಗೋದು ಬೇಡ ಅಂತ.. ನಾವು ಪ್ರತಿ ಬಾರಿ ಒಂದು ಬೇರೆ ಔರಾದಲ್ಲಿ ನೋಡಿದೀವಿ ದರ್ಶನ್ ಸರ್‌ನ.. ಅದಕ್ಕೇ ಅಲ್ಲಿ ಅವ್ರನ್ನ ಭೇಟಿ ಆಗ್ಬಾರ್ದು ಅಂದ್ಕೊಂಡಿದೀನಿ.. ಬಟ್ ನೋಡೋಣ, ಅವಕಾಶ ಸಿಕ್ರೆ ಅವ್ರನ್ನ ನಾಳೆ, ನಾಡಿದ್ದು ಅಷ್ಟರಲ್ಲಿ ಭೇಟಿ ಆಗ್ಬಹುದು. ಆದ್ರೆ, ಅಷ್ಟರಲ್ಲಿ ಅವ್ರೇ ಆಚೆ ಬರ್ತಾರೆ ಅನ್ನೋ ನಂಬಿಕೆ ಕೂಡ ಇದೆ' ಎಂದಿದ್ದಾರೆ.
ಸೀಡ್ಸ್ ವೆಡ್ಡಿಂಗ್ ಕಾರ್ಡ್ ಇನ್ವಿಟೇಷನ್, ಗಮನ ಸೆಳೆಯುತ್ತಿರೋ ತರುಣ್ –ಸೋನಾಲ್ ಲಗ್ನ ಪತ್ರಿಕೆ!
ನಟಿ ಸೋನಲ್ ಮಂತೆರೋ ಹಾಗೂ ನಿರ್ದೇಶಕ ತರುಣ್ ಸುಧೀರ್ (Tharun Sudhir) ಇಬ್ಬರೂ ಲವ್‌ನಲ್ಲಿ ಬಿದ್ದು ಮದುವೆ ಆಗುತ್ತಿರುವುದು ಗೊತ್ತೇ ಇದೆ.
ಆಗಸ್ಟ್ 10 ಹಾಗೂ 11 ರಂದು ನಡೆಯಲಿರೋ ತರುಣ್ ಮತ್ತು ಸೋನಾಲ್ ಮದುವೆಗೆ ಈಗಾಗಲೇ ಸಕಲ ಸಿದ್ದತೆಗಳು ನಡೆಯುತ್ತಿವೆ. ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ ಹಾಗೂ ನಾಯಕಿಯ ಮದುವೆಗೆ ಇಡೀ ಚಿತ್ರರಂಗ ಸಾಕ್ಷಿ ಆಗಲಿದೆ... ಸದ್ಯ ಮದುವೆ ಇನ್ವಿಟೇಷನ್‌ನಲ್ಲಿ ಸ್ಪೆಷಲ್ ಅನ್ನಿಸ್ತಿರೋ ಈ ಜೋಡಿ ಮದುವೆಗೆ ಏನೆಲ್ಲಾ ಸರ್ ಪ್ರೈಸ್ ಪ್ಲಾನ್ ಮಾಡಿದೆ ಅಂತ ಕಾದು ನೋಡಬೇಕಿದೆ.
ಗರಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿ ಸೋನಲ್ ನಟಿಸಿದ್ದಾರೆ. ಇನ್ನು ತರುಣ್ ಸುಧೀರ್ ಬಗ್ಗೆ ಸಾಕಷ್ಟು ಗೊತ್ತಿದೆ. ಚೌಕ, ಕಾಟೇರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಸ್ಯಾಂಡಲ್‌ವುಡ್ ಸಿನಿರಂಗಕ್ಕೆ ಕೊಟ್ಟಿದ್ದಾರೆ. ದರ್ಶನ್ ನಾಯಕತ್ವದ ಕಾಟೇರ್ ಸಿನಿಮಾವಂತೂ ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಅಭೂತಪೂರ್ವ ಯಶಸ್ಸು ತಂದುಕೊಟ್ಟ ಸಿನಿಮಾ. ದರ್ಶನ್-ಆರಾಧನಾ ರಾಮ್ ಜೋಡಿಯ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನೇ ಸೃಷ್ಟಿಸಿತ್ತು.
ಜೈಲಿಂದ ದರ್ಶನ್ ಬಿಡುಗಡೆ ಯಾವಾಗ? ಈ ಬಗ್ಗೆ ಕಾಳಿಕಾ ಮಾತೆ ಉಪಾಸಕರು ಹೇಳಿದ್ದೇನು?
ಕಾಟೇರ ಚಿತ್ರೀಕರಣದ ಸಮಯದಲ್ಲೇ ನಟ ದರ್ಶನ್ ಅವರು ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಅವರ ಲವ್ ಬಗ್ಗೆ ಕಾಮೆಂಟ್ ಮಾಡಿದ್ದರಂತೆ. ಅವರಿಬ್ಬರ ಲವ್ ಹಾಗೂ ಈಗ ಮದುವೆ ಹಂತಕ್ಕೆ ಹೋಗಿರುವುದು ನಟ ದರ್ಶನ್ ಅಂದು ಮಾಡುತ್ತಿದ್ದ ಕಾಮೆಂಟ್ ಕಾರಣಕ್ಕೇ ಎನ್ನಲಾಗುತ್ತಿದೆ. ಅದರ ಸತ್ಯಾಸತ್ಯತೆ ಅವರಿಗೇ ಗೊತ್ತು. ಅದನ್ನು ನಾವು ಅಧೀಕೃತ ಎಂದು ಹೇಳಲಾಗುವುದಿಲ್ಲ. ಆದರೆ, ನಟ ದರ್ಶನ್ ಅವರಿಗೆ ತರುಣ್-ಸೋನಲ್ ಲವ್ ಬಗ್ಗೆ ಗೊತ್ತಿದೆ ಎನ್ನುವುದಂತೂ ಸ್ಪಷ್ಟವಾಗಿದೆ.