ಸನ್ಮಾನ ಕಾರ್ಯಕ್ರಮದಲ್ಲಿ ನಟಿ ಸೋನಲ್ ಮೊಂಥೆರೋ ಮೈಮರೆತು ದುಪ್ಪಟ್ಟಾ ಮೇಲೆ ಕುಳಿತುಕೊಂಡರು. ಮುಂದೇನಾಯ್ತು ನೋಡಿ...
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್ 11ರಂದು ಬೆಂಗಳೂರಿನ ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿತ್ತು. ಸೋನಲ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ.
ಈ ಮದುವೆಯಾದ ಬಳಿಕ ಈ ಜೋಡಿಯ ಮೇಲೆ ಪಾಪರಾಜಿಗಳ ಕಣ್ಣು ಹೆಚ್ಚಾಗಿ ನೆಟ್ಟಿರುತ್ತದೆ. ಎಲ್ಲಿಯೇ ಹೋದರೂ ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಇರುವುದು ಸಹಜ. ಅದೇ ರೀತಿ ಈಗಲೂ ಆಗಿದೆ. ನಟಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಮೈಮರೆತು ನಟಿ ದುಪ್ಪಟ್ಟಾದ ಮೇಲೆ ಕುಳಿತಿದ್ದಾರೆ. ಅದು ಅವರಿಗೆ ಅರಿವಿಗೂ ಬಂದಿರಲಿಲ್ಲ. ಕೊನೆಗೆ ಅದೇ ರೀತಿ ಸನ್ಮಾನ ಕಾರ್ಯಕ್ರಮವೂ ನಡೆದಿದೆ. ಅಲ್ಲಿಯವರೆಗೂ ನಟಿಗೆ ಈ ಬಗ್ಗೆ ಅರಿವು ಇರಲಿಲ್ಲ. ಸನ್ಮಾನ ಕಾರ್ಯಕ್ರಮ ಮುಗಿದ ಮೇಲೆ ಏಳುವಾಗ, ದುಪ್ಪಟ್ಟಾದ ಮೇಲೆ ತಾವು ಕುಳಿತಿರುವುದು ಕಂಡಿದೆ. ಬಳಿಕ ಅದನ್ನು ತೆಗೆದುಹಾಕಿದಾಗ ಅದುಬಿದ್ದಿದೆ. ಅಲ್ಲಿದ್ದವರೊಬ್ಬರು ಅದನ್ನು ನಟಿಗೆ ನೀಡಿದ್ದಾರೆ. ಬಳಿಕ, ನಟಿ ಅದನ್ನು ಸರಿ ಮಾಡಿಕೊಂಡು ಹಾಕಿಕೊಂಡಿದ್ದಾರೆ. ಆಗಿದ್ದು ಇಷ್ಟೇ. ಆದರೆ ಇದರ ವಿಡಿಯೋ ಏನೋ ಆಗಬಾರದ್ದು ಆದವರ ರೀತಿಯಲ್ಲಿ ವೈರಲ್ ಆಗುತ್ತಿದೆ. ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
undefined
ಮದ್ವೆಯಾದ ವಿಷಯ ತಿಳಿಸಿ ಶಾಕ್ ನೀಡಿದ್ದ ನಟಿ ಅಶ್ವಿನಿ ಕಾಶ್ಮೀರದಲ್ಲಿ ಜಾಲಿ ಮೂಡ್: ವಿಡಿಯೋ ವೈರಲ್
ಇದಕ್ಕೂ ಮುನ್ನ, ಜೀ ಕುಟುಂಬ ಅವಾರ್ಡ್ ಫಂಕ್ಷನ್ನಲ್ಲಿ ಈ ಜೋಡಿ ಕಾಣಿಸಿಕೊಂಡು ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇಲ್ಲಿ ಇವರಿಗೆ ಆ್ಯಂಕರ್ಗಳಾದ ಅನುಶ್ರೀ ಮತ್ತು ಅಕುಲ್ ಬಾಲಾಜಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದರು. . ಇಬ್ಬರ ಫೋನ್ನಲ್ಲಿ ಹೆಸರು ಏನೆಂದು ಸೇವ್ ಆಗಿದೆ ಎಂದು ಪ್ರಶ್ನಿಸಿದಾಗ, ಸೋನಲ್ ಅವರ ಬಳಿ ಎರಡು ನಂಬರ್ ಇವೆ. ಒಂದರಲ್ಲಿ ಹಸ್ಬಂಡ್, ಇನ್ನೊಂದರಲ್ಲಿ ಲವ್ ಎಂದು ಇದೆ ಎಂದಿದ್ದರು. . ಆಮೇಲೆ ತರುಣ್ ಅವರು ತುಂಬಾ ಹೊತ್ತು ಯೋಚನೆ ಮಾಡಿ, 'ಸೋ ಫೈನಲಿ' ಎಂದು ಸೇವ್ ಮಾಡಿಕೊಂಡಿದ್ದೇನೆ ಎಂದರು. ಈ ಶಬ್ದಗಳಲ್ಲಿ, ಸೋನಲ್ ಕೂಡ ಬರುತ್ತೆ. ಫೈನಲಿ ನನಗೂ ಯಾರೋ ಸಿಕ್ಕರು ಎನ್ನೋದು ಬರತ್ತೆ ಎಂದಾಗ ಎಲ್ಲರೂ ನಕ್ಕಿದ್ದರು. . ಕೊನೆಗೆ, ಇಬ್ಬರಲ್ಲಿಯೂ ಜಾಸ್ತಿ ಗೊರಕೆ ಹೊಡೆಯುವವರು ಯಾರು ಕೇಳಿದಾಗ ತರುಣ್ ಹೆಸರು ಕೇಳಿ ಬಂದಿದೆ. ಇಬ್ಬರಲ್ಲಿ ಒಳ್ಳೆ ಕುಕ್ ಯಾರು ಎಂದು ಕೇಳಿದಾಗ ಇಬ್ಬರೂ ಸೋನಲ್ ಫೋಟೋ ತೋರಿಸಿದ್ದರು. . ಮಲಗೋದು ಯಾರು ಮೊದಲು ಎಂದು ಪ್ರಶ್ನಿಸಿದಾಗ ಇಬ್ಬರೂ ತರುಣ್ ಫೋಟೋ ತೋರಿಸಿದರೆ, ಮಲಗುವ ಮುನ್ನ ಐ ಲವ್ ಯೂ ಹೇಳೋದು ಯಾರು ಎಂದಾಗ ಇಬ್ಬರೂ ಇಬ್ಬರ ಫೋಟೋನೂ ತೋರಿಸಿದ್ದರು.
ಇನ್ನು ಸೋನಲ್ ಕುರಿತು ಹೇಳುವುದಾದರೆ, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್ ಫ್ಯಾಕ್ಟರಿ, ಬನಾರಸ್, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್, ಶಂಭೋ ಶಿವ ಶಂಕರ್ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.