ಸ್ಯಾಂಡಲ್ವುಡ್ ನಟಿ ಶ್ರುತಿ ಕೃಷ್ಣ ಅವರು ತಮ್ಮ ತೋಟದಲ್ಲಿ ಹೆತ್ತವರ ಜೊತೆಗಿನ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನಟಿ ಹೇಳಿದ್ದೇನು?
ನಟಿ ಹಾಗೂ ರಾಜಕಾರಣಿ ಶ್ರುತಿ ಅವರು ಈಗ ನಟನೆ, ರಾಜಕಾರಣದಲ್ಲಿ ಮಾತ್ರವಲ್ಲದೇ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಒಂದಾದ ಮೇಲೊಂದರಂತೆ ಅಳುವ ದೃಶ್ಯಗಳಲ್ಲಿಯೇ ನಟಿಸುತ್ತಾ, ಎಲ್ಲರನ್ನೂ ಅಳಿಸುತ್ತಿದ್ದ ಶ್ರುತಿ ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳ ಚಿತ್ರರಂಗದಲ್ಲಿಯೂ ಸಕತ್ ಫೇಮಸ್ ಆದವರು. 1990 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದ ಶ್ರುತಿ ಇಂದಿಗೂ ನಟನೆಯನ್ನು ಮುಂದುವರೆಸಿದ್ದಾರೆ. ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದ ನಟಿ, ಲಾಕ್ ಡೌನ್ ಸಮಯದಲ್ಲಿ ಶೂಟಿಂಗ್ ಎಲ್ಲವೂ ಸ್ಟಾಪ್ ಆಗಿದ್ದ ಸಂದರ್ಭದಲ್ಲಿ ತಮ್ಮ ಮಗಳ ಜೊತೆ ಮೈಸೂರಿನ ಹತ್ತಿರ ಇರುವ ತಮ್ಮ 25 ಎಕರೆ ತೋಟದಲ್ಲಿ ವಾಸವಾಗಿದ್ದರು. ತಮ್ಮ ತೋಟದಲ್ಲಿ ಪರಿಸರ ಸ್ನೇಹಿ ಮನೆಯನ್ನು ಸಿಮೆಂಟ್ ಬಳಸದೆ, ಕೇವಲ ಕಲ್ಲು ಮಣ್ಣಿನಿಂದ ಸುಂದರವಾದ ಮನೆಯೊಂದನ್ನು ಕಟ್ಟಿದ್ದಾರೆ.
ಕೃಷಿಯಲ್ಲಿಯೂ ವಿಪರೀತ ಆಸಕ್ತಿ ಇರುವ ಶ್ರುತಿಯವರು ಸಾವಯುವ ಕೃಷಿ ಮೂಲಕ ತಮ್ಮ ತೋಟದಲ್ಲಿ ಅನೇಕ ತರಕಾರಿ ಬೆಳೆಸಿದ್ದಾರೆ. ಹಿಂದೊಮ್ಮೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ ನಟಿ, ತಮ್ಮ ತೋಟದಲ್ಲಿ ಮಹಿಳೆಯರೇ ಹೆಚ್ಚು ಕೆಲಸ ಮಾಡುತ್ತಾರೆ ಎಂದಿದ್ದರು. ತಮ್ಮ ತೋಟದಲ್ಲಿ ಬೆಳೆದಿದ್ದು ಸ್ವಲ್ಪವೇ ಆದರೂ ಆಗಿರುವ ಖುಷಿ ಮಾತ್ರ ಟನ್ ಗಟ್ಟಲೇ ಎಂದಿದ್ದರು. ಇದೀಗ ತಮ್ಮ ಅಪ್ಪ-ಅಮ್ಮ ತೋಟವನ್ನು ವೀಕ್ಷಿಸುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ನಟಿ. ನನ್ನ ತೋಟದಲ್ಲಿ, ಹೆತ್ತವರೊಂದಿಗೆ ಎಂಬ ಶೀರ್ಷಿಕೆ ಕೊಟ್ಟಿರುವ ನಟಿಯ ಅಪ್ಪ-ಅಮ್ಮ ಅವರು ತೋಟವನ್ನು ವೀಕ್ಷಣೆ ಮಾಡುತ್ತಿರುವುದನ್ನು ನೋಡಬಹುದು.
ಇವಳು ಹೊಟ್ಟೆಯಲ್ಲಿದ್ದಾಗ ಸಾಯಿಸಲು ಹೊರಟಿದ್ವಿ: ಆ ದಿನಗಳ ನೆನೆದ ಶ್ರೀರಸ್ತು ಶುಭಮಸ್ತು ಪೂರ್ಣಿಯ ಅಪ್ಪ
ಇದಕ್ಕೆ ಥಹರೇವಾರಿ ಕಮೆಂಟ್ಸ್ ಬಂದಿವೆ. ಕೃಷಿ ಅಥವಾ ನಟನೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಟಿ, ನಟನೆ ನನ್ನ ಉಸಿರು, ಕೃಷಿ ನನ್ನ ಕನಸು ಎಂದಿದ್ದಾರೆ. ಈಗಿನ ಕಾಲದಲ್ಲೂ ನಿಮ್ ಅಪ್ಪ ಅಮ್ಮಂದಿರ bonding ನಿಜಕ್ಕೂ ಅದ್ಭುತ ಮೇಡಂ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಅನೇಕ ಅಭಿಮಾನಿಗಳು ಶುಭಾಶಯ ಹಾಗೂ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ.
ಇನ್ನು ಶ್ರುತಿ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಗೌರಿ ಗಣೇಶ (1991), ಆಗತಾ (1995), ಕಲ್ಕಿ (1996), ಗೌಡ್ರು (2004), ಅಕ್ಕ ತಂಗಿ (2008) ಮತ್ತು ಪುಟ್ಟಕ್ಕನ ಹೈವೇ (2011) ಮುಂತಾದ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ. ಅವರು ನಟ ಶರಣ್ ಅವರ ಸಹೋದರಿ . 2016 ರಲ್ಲಿ ಬಿಗ್ ಬಾಸ್ ಕನ್ನಡದ ಮೂರನೇ ಸೀಸನ್ ಕೂಡ ಗೆದ್ದವರು. ಅವರು ಈಚೆಗೆ ತಮ್ಮ ಮಗಳು ಗೌರಿ (Gowri) ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಷಯ ಶೇರ್ ಮಾಡಿಕೊಂಡಿದ್ದರು. ನಟನೆಗೆ ಬೇಕಾಗಿರುವ ತಯಾರಿ ಮಾಡಿಕೊಂಡೇ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾಳೆ. ಗೌರಿಗೆ ಒಳ್ಳೆಯ ಕಥೆಗಳು ಅರಸಿ ಬರುತ್ತಿವೆ. ಬೇರೆಯವರ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಾಳೆ ಎಂದು ನಟಿ ಹೇಳಿದ್ದರು.
ಸ್ತ್ರೀವಾದ ಎನ್ನುವ ಹುಚ್ಚಾಟ ಬಿಟ್ಟು ಕೆಲಸದತ್ತ ಗಮನ ಕೊಡಿ: ಗಂಡು-ಹೆಣ್ಣು ಸಮಾನರಲ್ಲ; ನಟಿ ನೀನಾ ಗುಪ್ತಾ