ಮಳೆ ಅಂದ್ರೆ ಇಷ್ಟ ಎಂದ ರಚಿತಾ, ಹನಿ ಬಿದ್ರೆ ಯಾಕ್ ಓಡ್ತೀರಾ, ಹುಷಾರು ಶೀತವಾಗುತ್ತೆಂದ ಫ್ಯಾನ್ಸ್

Published : Jul 27, 2023, 01:07 PM ISTUpdated : Jul 27, 2023, 01:08 PM IST
ಮಳೆ ಅಂದ್ರೆ ಇಷ್ಟ ಎಂದ ರಚಿತಾ, ಹನಿ ಬಿದ್ರೆ ಯಾಕ್ ಓಡ್ತೀರಾ, ಹುಷಾರು ಶೀತವಾಗುತ್ತೆಂದ ಫ್ಯಾನ್ಸ್

ಸಾರಾಂಶ

ಡಿಂಪಲ್​ ಕ್ವೀನ್​ ರಚಿತಾ ರಾಮ್​ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಶೇರ್​  ಮಾಡಿಕೊಂಡಿದ್ದು, ಮಳೆಯೆಂದರೆ ಭಯವೇಕೆ ಅಂತಿದ್ದಾರೆ ಫ್ಯಾನ್ಸ್​. ಏನಿದು ವಿಡಿಯೋ?  

ಸ್ಯಾಂಡಲ್‌ವುಡ್‌ ಬುಲ್ ಬುಲ್, ಡಿಂಪಲ್​ ಕ್ವೀನ್​ ರಚಿತಾ ರಾಮ್ (Rachita Ram) ಸದ್ಯಕ್ಕೆ ಬೇಡಿಯ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿರುವ ನಟಿ. 2013ರಲ್ಲಿ ತೆರೆಕಂಡ 'ಬುಲ್‌ಬುಲ್' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ರಚಿತಾ ಕೈಯಲ್ಲಿ ಈಗ ಅನೇಕ ಚಿತ್ರಗಳಿವೆ.  ಪ್ರಥಮ ಚಿತ್ರ ಬುಲ್​ಬುಲ್​ನಲ್ಲಿಯೇ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು  ನಟನೆಯಿಂದ ಮನ ಗೆದ್ದ ಬೆಡಗಿ ಈಕೆ. ಇದರ ಯಶಸ್ಸಿನ ಬೆನ್ನಲ್ಲೇ   ಅಂಬರೀಶ್,  `ದಿಲ್ ರಂಗೀಲಾ', `ರನ್ನ',   `ರಥಾವರ', `ಚಕ್ರವ್ಯೂಹ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಖ್ಯಾತ ಚಿತ್ರನಟರ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಕನ್ನಡದ ಬಹುಬೇಡಿಕೆಯ ನಟಿಯಾಗಿರೋ ರಚಿತಾ ಅವರಿಗೆ ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌತ್​ ಪ್ರಶಸ್ತಿ ಕೂಡ ಲಭಿಸಿದೆ.
 
ಇಂತಿಪ್ಪ ರಚಿತಾ ಸೋಷಿಯಲ್​ ಮೀಡಿಯಾದಲ್ಲಿಯೂ (Social Media) ಆ್ಯಕ್ಟೀವ್​ ಆಗಿದ್ದು, ಆಗ್ಗಾಗ್ಗೆ ವಿಡಿಯೋ, ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಮಳೆಯ ವಿಡಿಯೋ ಒಂದನ್ನು ಶೇರ್​  ಮಾಡಿಕೊಂಡಿದ್ದಾರೆ. ಸದ್ಯ ಎಲ್ಲೆಲ್ಲೂ ಮಳೆಯ ಅಬ್ಬರ. ಕೆಲವೆಡೆ ವರುಣ ರೌದ್ರಾವತಾರ ತೋರಿದ್ದರೆ, ಇನ್ನು ಕೆಲವೆಡೆ ಆಗೊಮ್ಮೆ ಈಗೊಮ್ಮೆ ಬಂದು ಮರೆಯಾಗುತ್ತಿದ್ದಾನೆ. ಮಳೆಗಾಲ ಎಂದರೆ ಬಹುತೇಕ ಎಲ್ಲರಿಗೂ ಖುಷಿಯೇ. ಹನಿಹನಿಯಾಗಿ ಮಳೆ ಸುರಿಯುತ್ತಿದ್ದರೆ, ಅದರಲ್ಲಿ ಆಟವಾಡುವುದು ಎಂದರೆ ಹಲವರಿಗೆ ಅದರಲ್ಲಿಯೂ ಯುವತಿಯರಿಗೆ ತುಂಬಾನೇ ಖುಷಿ. ಅದೇ ರೀತಿ ರಚಿತಾ ರಾಮ್​ ಅವರಿಗೂ ಮಳೆ ಎಂದರೆ ಖುಷಿಯಂತೆ. ಅದನ್ನೇ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ಸಂಜು ವೆಡ್ಸ್ ಗೀತಾ-2 ಚಿತ್ರದಿಂದ ರಮ್ಯಾ ಔಟ್; ರಚಿತಾ ರಾಮ್ ನಾಯಕಿ?

   ಮಳೆ ಹನಿಯನ್ನ ಎಂಜಾಯ್  ಮಾಡುತ್ತಿರುವ ವಿಡಿಯೋ ಇದಾಗಿದೆ. ಹೊರಗಡೆ ತುಂತುರು ಮಳೆ ಸುರಿಯತ್ತಿದ್ದಾಗ ಅದಕ್ಕೆ ಕೈಯೊಡ್ಡಿ ನಿಂತಿರುವ ನಟಿ, ತಮಗೆ ಮಳೆಗಾಲ ಎಂದರೆ ತುಂಬಾ ಖುಷಿ ಎಂದಿದ್ದಾರೆ.  ಆದರೆ ವಿಡಿಯೋದಲ್ಲಿ  ಮಳೆ ಕಂಡು ಓಡಿ ಹೋಗಿದ್ದಾರೆ. ಇದರಿಂದ ಫ್ಯಾನ್ಸ್​ (Fans) ತಮಾಷೆಯ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.  ಮಳೆ ಹನಿಯನ್ನ ಕೈಯಲ್ಲಿ ಹಿಡಿಯಲು ನೋಡಿರುವ ವಿಡಿಯೋ ಹಂಚಿಕೊಂಡಿರುವ ರಚಿತಾ, ಮಳೆಯಲ್ಲಿ ನೆನೆಯಲು ಹೋಗಿ ಹೆದರಿ ವಾಪಸ್​ ಓಡಿ ಬಂದಿದ್ದಾರೆ. ಇದರಿಂದ ಫ್ಯಾನ್ಸ್ ನಟಿಯ ಕಾಲೆಳೆಯುತ್ತಿದ್ದಾರೆ. ಮಳೆ ಅಂದ್ರೆ ಇಷ್ಟ ಎಂದು ಬರೆದುಕೊಂಡಿದ್ದೀರಿ,  ನೀರ್ ಬಿದ್ರೆ ಯಾಕ್ ಒಡ್ತೀರಾ ಅಂತಿದ್ದಾರೆ  ಫ್ಯಾನ್ಸ್.  ಹಾಸ್ಯ ಕಾರ್ಯಕ್ರಮವೊಂದರಲ್ಲಿ ಜಡ್ಜ್​ ಆಗಿರುವ ರಚಿತಾ ಅವರ ಫೇಮಸ್​ ಡೈಲಾಗ್​, ನಿಮ್ದು ಬರೀ ಇಂತದೇಯಾ ಎನ್ನೋದು. ಅದನ್ನೇ ಕೆಲವರು ತಮಾಷೆಯಾಗಿ ಕಮೆಂಟ್​ನಲ್ಲಿ ಹಾಕಿದ್ದಾರೆ.  ಇನ್ನು ಹಲವು ಫ್ಯಾನ್ಸ್​ ಹಾರ್ಟ್​ ಎಮೋಜಿಗಳಿಂದ (Heart Emoji) ಕಮೆಂಟ್​ ಬಾಕ್ಸ್​ ತುಂಬಿಸಿದ್ದಾರೆ. 

ಇನ್ನು ಕೆಲ ಫ್ಯಾನ್ಸ್​, ಸೂಪರ್​ ಬಿಂದಿಯಾ ಎಂದಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ ರಚಿತಾ ರಾಮ್​ ಅವರು ಕಿರುತೆರೆಯಲ್ಲಿ ಪರಿಚಯವಾದದ್ದು  ಬಿಂದಿಯಾ ರಾಮ್‌ ಎಂದು. ಅದು ಅವರ ಮೊದಲ ಹೆಸರು ಕೂಡ. ಆದರೆ  `ಹಳ್ಳಿಮೇಷ್ಟ್ರು' ಮತ್ತು `ರಾಯರು ಬಂದರು ಮಾವನ ಮನೆಗೆ' ಚಿತ್ರಗಳಲ್ಲಿ ಖ್ಯಾತಿ ಪಡೆದ ಬಳಿಕ ಈಕೆ ಬಿಂದಿಯಾಳಿಂದ  ರಚಿತಾ ಆದರು. ಆದರೆ ಈಕೆಯ ಮೂಲ ತಿಳಿದವರು ಈಗಲೂ ನಟಿಯನ್ನು ಬಿಂದಿಯಾ ಎಂದೇ ಕರೆಯುವುದುಂಟು.  ರಚಿತಾ ರಾಮ್, ಚಿತ್ರ ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಶ್ರೀ ಮಹಾದೇವ ಮತ್ತು ಪ್ರಜ್ವಲ್ ದೇವರಾಜ್‌ರ ಪತ್ನಿ ರಾಗಿಣಿ ಚಂದ್ರನ್ (Ragini Chandran) ಅಭಿನಯದ `ರಿಷಭಪ್ರಿಯ' ಎಂಬ ಡಾಕ್ಯುಮೆಂಟರಿ  ನಿರ್ಮಿಸಿದ್ದಾರೆ.  ಮ್ಯೂಸಿಕಲ್ ಕಿರುಚಿತ್ರವಾಗಿದ್ದು ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಗಿಚ್ಚಿ ಗಿಲಿಗಿಲಿ ಜಗಪ್ಪ- ಸುಶ್ಮಿತಾ ಮದುವೆ?; ರಚಿತಾ ರಾಮ್ ಗಂಟಾಕೋಕೆ ಹೋಗಿದ್ದು ನಿಜವೇ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?