ರಕ್ಷಿತ್ ಶೆಟ್ಟಿ 'ಸಪ್ತಸಾಗರದಾಚೆ ಎಲ್ಲೋ...' 12 ಹಾಡುಗಳ 'ಪ್ರೇಮಲೋಕ'

Published : Jul 26, 2023, 01:24 PM IST
ರಕ್ಷಿತ್ ಶೆಟ್ಟಿ 'ಸಪ್ತಸಾಗರದಾಚೆ ಎಲ್ಲೋ...' 12 ಹಾಡುಗಳ 'ಪ್ರೇಮಲೋಕ'

ಸಾರಾಂಶ

'ಸಪ್ತಸಾಗರದಾಚೆ ಎಲ್ಲೋ' ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರೋದ್ರಿಂದ ಹಾಡುಗಳು ಮೇಜರ್ ಹೈಲೈಟ್ ಆಗಿದೆ ಎನ್ನಲಾಗಿದೆ. ಅಂದಹಾಗೆ ಈ ಸಿನಿಮಾದಲ್ಲಿ ಬರೋಬ್ಬರಿ 12 ಹಾಡುಗಳಿವೆ.


ಸಪ್ತಸಾಗರದಾಚೆ ಎಲ್ಲೋ... ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡ್ತಿರೋ ಸಿನಿಮಾ. ಈ ಸಿನಿಮಾ ಮೇಲೆ ಬಹುದೊಡ್ಡ ನಿರೀಕ್ಷೆ ಇಂಡಸ್ಟ್ರಿಯಲ್ಲಿ ಹುಟ್ಟಿದೆ. ಇದಕ್ಕೆ ಕಾರಣ ಏನಂದ್ರೆ ರಕ್ಷಿತ್ - ಹೇಮಂತ್ ಕಾಂಬಿನೇಷನ್. ಇವರಿಬ್ಬರ ಕಾಂಬೋದಲ್ಲಿ ಬಂದಂತಹ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಗೆದ್ದಿತ್ತು. ಇದೀಗ ಮತ್ತೊಮ್ಮೆ ಜಾದೂ ಆಗಲಿರೋ ಸಾಧ್ಯತೆ ದಟ್ಟವಾಗಿ ಕಾಡ್ತಿದೆ.. ಪ್ರತಿ ಹಂತದಲ್ಲೂ ಸಿನಿಮಾ ತಂಡ ಎಕ್ಸೈಟಿಂಗ್ ವಿಚಾರಗಳನ್ನು ನೀಡುತ್ತಾ ಬಂದಿದೆ. ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ 'ಹೋರಾಟ' ಹಾಡನ್ನು ಜನ ಅಪ್ಪಿ ಒಪ್ಪಿದ್ದಾರೆ. ಇದೀಗ ಬರ್ತಿರೋ ಮತ್ತೊಂದು ಎಕ್ಸೈಟಿಂಗ್ ನ್ಯೂಸ್ ಏನಂದ್ರೆ ಸಿನಿಮಾದಲ್ಲಿ ಬರೋಬ್ಬರಿ  12 ಹಾಡುಗಳಿವೆ.

ಸಿನಿಮಾ 2 ಪಾರ್ಟ್. ಸಾಂಗ್ 12.

ಚಿತ್ರತಂಡ ಮೊದಲೇ ತಿಳಿಸಿರುವಂತೆ 'ಸಪ್ತಸಾಗರದಾಚೆ ಎಲ್ಲೋ' ಎರಡು ಪಾರ್ಟ್ಗಳಲ್ಲಿ ರಿಲೀಸ್ ಆಗ್ತಿದೆ.‌ ಅದೂ ಕೂಡ ಒಂದು ತಿಂಗಳ ಅಂತರದಲ್ಲಿ. ಸೆಪ್ಟೆಂಬರ್ 1 ರಂದು ಪಾರ್ಟ್ 1 ರಿಲೀಸಾದ್ರೆ, ಪಾರ್ಟ್ 2 ಅಕ್ಟೋಬರ್ 20 ರಂದು ಜನರೆದುರು ಬರಲಿದೆ.. 'ಸಪ್ತಸಾಗರದಾಚೆ ಎಲ್ಲೋ' ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರೋದ್ರಿಂದ ಹಾಡುಗಳು ಮೇಜರ್ ಹೈಲೈಟ್ ಆಗಬೇಕಿದೆ. ಹೀಗಾಗಿಯೇ ಪಾರ್ಟ್ 1 - ಪಾರ್ಟ್ 2 ಎರಡನ್ನೂ ಸೇರಿಸಿ 12 ಹಾಡುಗಳನ್ನು ಪ್ಲಾನ್ ಮಾಡಲಾಗಿದೆ. ಪಾರ್ಟ್ 1 ರಿಲೀಸ್ಗೆ ಮೊದಲು ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಒಟ್ಟಿನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಒಂದು ಮ್ಯೂಸಿಕಲ್ ಜರ್ನಿಯಾಗಿ ಜನರನ್ನು ಸೆಳೆಯಲಿದೆ ಅನ್ನೋದಂತು ಸತ್ಯ.. ಈ ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದು, ಈ ಜೋಡಿ ಈಗಾಗಲೇ ಜನರನ್ನು ಆಕರ್ಷಿಸಿದೆ.

ರಕ್ಷಿತ್‌ ಶೆಟ್ಟಿ ಮುಂದಿನ ಚಿತ್ರಗಳಿಗೆ ಪರಶುರಾಮ ಮತ್ತು ಆತನ ಕೊಡಲಿಯೇ ಸ್ಫೂರ್ತಿ!

ಈ ಚಿತ್ರವನ್ನು ಹೇಮಂತ್ ಎಂ ರಾವ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಎಂ ರಾವ್ ಕಾಂಬಿನೇಶನ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ.

ರಕ್ಷಿತ್ ಶೆಟ್ಟಿ ಬಾಳಿನ ಹೋರಾಟ : ಗಮನ ಸೆಳೆದ ಸಪ್ತಸಾಗರದಾಚೆ ಹಾಡು!

ಈ ಸಿನಿಮಾದಲ್ಲಿನ ಹೋರಾಟ ಎಂಬ ಹಾಡನ್ನು ಎಂ ಸಿ ಬಿಜ್ಜು,ಕಿರಣ್ ಕಾವೇರಪ್ಪ ಬರೆದಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಪರಂವಃ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಎಂ ಸಿ ಬಿಜ್ಜು (ರಾಪರ್) ಹಾಗೂ ಕೀರ್ತನ್ ಹೊಳ್ಳ ಹಾಡಿರುವ ಈ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?