ನಟಿ ಸಂಯುಕ್ತಾ ಹೆಗಡೆ ಕಾಲಿಗೆ ಗಾಯ; ಕ್ರೀಂ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ಅವಘಡ

Published : Feb 23, 2024, 05:45 PM ISTUpdated : Feb 23, 2024, 05:50 PM IST
 ನಟಿ ಸಂಯುಕ್ತಾ ಹೆಗಡೆ ಕಾಲಿಗೆ ಗಾಯ; ಕ್ರೀಂ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ಅವಘಡ

ಸಾರಾಂಶ

ಅಗ್ನಿ ಶ್ರೀಧರ್ ಕಥೆ ಬರೆದಿರೋ ಸಿನಿಮಾ ಈ ಕ್ರೀಂ. ಚಿತ್ರದ ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶನ ಮಾಡಿರುವ ಕ್ರೀಂ ಚಿತ್ರದಲ್ಲಿ ನಟಿ ಸಂಯುಕ್ತಾ ಹೆಗಡೆ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. 

'ಕ್ರೀಂ' ಸಿನಿಮಾ ಶೂಟಿಂಗ್ ನಡೆಯುತ್ತಿರುವುದು ಗೊತ್ತೇ ಇದೆ. ಕ್ರೀಂ ಸಿನಿಮಾ ಶೂಟಿಂಗ್ ಸಮಯದಲ್ಲಿ ಅವಘಡ ನಡೆದಿದ್ದು, ಚಿತ್ರದ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡುವಾಗ ನಾಯಕಿ ನಟಿ ಬಲಗಾಲಿಗೆ ಗಾಯವಾಗಿದೆ. ನಟಿ ಸಂಯುಕ್ತಾ ಹೆಗಡೆ ಕ್ರೀಂ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು. ಆಕ್ಷನ್ ದೃಶ್ಯಗಳಲ್ಲಿ ಯಾವುದೇ ಅಳುಕಿಲ್ಲದೇ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆಕ್ಷನ್ ಮಾಡುವಾಗ ನಟಿ ಸಂಯುಕ್ತ ಹೆಗಡೆ ಆಯ‌ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ. 

ನಟಿ ಸಂಯುಕ್ತಾ ಹೆಗಡೆ ಅಪಾಯವನ್ನೂ ಲೆಕ್ಕಿಸದೇ ಶೂಟಿಂಗ್ ಮಾಡುತ್ತಿದ್ದರು. ಆದರೆ, ಶೂಟಿಂಗ್ ವೇಳೆ ಆಯ ತಪ್ಪಿ ಬಿದ್ದು ಬಲಗಾಲಿಗೆ ಗಾಯವಾಗಿದೆ. ಅವರನ್ನು ಕ್ರೀಂ ಚಿತ್ರದ ಬರಹಗಾರ ಅಗ್ನಿ ಶ್ರೀಧರ್ ಅವರು ಸಂತೈಸಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಅಗ್ನಿ ಶ್ರೀಧರ್ ಅವರು ಕ್ರೀಂ ಚಿತ್ರದ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರು ಸಿನಿಮಾವೊಂದರಲ್ಲಿ ನಟಿಸಲು ಮೊಟ್ಟಮೊದಲು ಬಣ್ಣ ಹಚ್ಚಿದ್ದು ಎನ್ನಲಾಗಿದೆ. ಹಲವರ ಅಪೇಕ್ಷೆಯಂತೆ, ಒಬ್ಬರ ಸಲಹೆಯಂತೆ ಅಗ್ನಿ ಶ್ರೀಧರ್ ಕ್ರೀಂ ಚಿತ್ರದಲ್ಲಿ ನಟಿಸಿದ್ದಾರಂತೆ.

ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಯ್ತು; ಯಶ್ ಫ್ಯಾನ್ಸ್ ಮನದಲ್ಲಿ ನೂರಾರು ಪ್ರಶ್ನೆಗಳು!

ಅಗ್ನಿ ಶ್ರೀಧರ್ ಕಥೆ ಬರೆದಿರೋ ಸಿನಿಮಾ ಈ ಕ್ರೀಂ. ಚಿತ್ರದ ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶನ ಮಾಡಿರುವ ಕ್ರೀಂ ಚಿತ್ರದಲ್ಲಿ ನಟಿ ಸಂಯುಕ್ತಾ ಹೆಗಡೆ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ 'ಕ್ರೀಂ' ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಅಗ್ನಿ ಶ್ರೀಧರ್ ಹಲವಾರು ಚಿತ್ರದ ಬಗೆಗಿನ ಹಲವಾರು ಸೀಕ್ರೆಟ್ ಗಳನ್ನು ಹಂಚಿಕೊಂಡಿದ್ದರು. ಆದರೆ, ಚಿತ್ರದ ಕಥೆಯ ಗುಟ್ಟು ರಟ್ಟಾಗದಂತೆ ಸೀಕ್ರೆಟ್‌ಅನ್ನು ಕಾಪಾಡಿಕೊಂಡು 'ಅಡ್ಡಗೋಡೆ ಮೇಲೆ ದೀಪವಟ್ಟಂತೆ' ಮಾತನಾಡಿದ್ದಾರೆ ಅಗ್ನಿ ಶ್ರೀಧರ್ ಎನ್ನಬಹುದು.

ನಟ ದರ್ಶನ್ ಮೇಲೆ ಮೂರು, ಮತ್ತೊಂದು ದೂರು ದಾಖಲು; ಗೌಡತಿಯರ ಸೇನೆ ಭಾರೀ ಗರಂ!

ಇತ್ತೀಚೆಗೆ ಬಿಡುಗಡೆಯಾಗಿರುವ ಕ್ರೀಂ ಚಿತ್ರದ ಟ್ರೇಲರ್ ನೋಡಿದರೆ ಚಿತ್ರದಲ್ಲಿ ಹೊಸತೇನೋ ಇರುವಂತೆ ಭಾಸವಾಗುತ್ತಿದೆ. ಚಿತ್ರದ ಕಥಾವಸ್ತು ನೈಜ ಘಟನೆಯಿಂದ ಪ್ರೇರೇಪಣೆ ಪಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಬಗ್ಗೆ ಇನ್ನಷ್ಟು ಡೀಟೇಲ್ಸ್ ಮುಂದಿನ ದಿನಗಳಲ್ಲಿ ಲಭ್ಯವಾಗಬಹುದು. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಕ್ರೀಂ ಚಿತ್ರವು 'ನರಬಲಿ'ಗೆ ಸಂಬಂಧಿಸಿದ ಕಥಾವಸ್ತು ಒಳಗೊಂಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ಈಗ ಕ್ರೀಂ ನಾಯಕಿ ನಟಿ ಸಂಯುಕ್ತಾ ಹೆಗಡೆ ಕಾಲಿಗೆ ಗಾಯವಾಗಿರುವ ಸುದ್ದಿ ಸ್ಪೋಟವಾಗಿದೆ.

ಪುರುಷರಿಗೆ ಪಾಠ ಮಾಡಿದ್ರು ನಟಿ ಪ್ರಿಯಾಂಕಾ ಚೋಪ್ರಾ; ಲೆಸನ್ ನೋಡಿದ್ರೆ ತಲೆ ತಿರುಗೋದು ಗ್ಯಾರಂಟಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
ಜೈಲಲ್ಲಿ ಮುಂದುವರೆದ ದಾಸನ ದಾದಾಗಿರಿ.. ಟಿವಿ ಬದಲು ಸಿಸಿಟಿವಿ ಬಂತು ದರ್ಶನ್ ಸೆಲ್‌ಗೆ!