ನಟ ದರ್ಶನ್ ಮೇಲೆ ಮೂರು, ಮತ್ತೊಂದು ದೂರು ದಾಖಲು; ಗೌಡತಿಯರ ಸೇನೆ ಭಾರೀ ಗರಂ!

By Shriram Bhat  |  First Published Feb 23, 2024, 3:14 PM IST

ಈ ವೇಳೆ ಗೌಡತಿಯರ ಸೇನೆ ದರ್ಶನ್‌ ಅವರ ಈ ಹಿಂದಿನ ಪ್ರಕರಣಗಳನ್ನೂ ಸಹ ನೆನಪು ಮಾಡಿದೆ. ದರ್ಶನ್‌ ಅವರು ಈ ಹಿಂದೆ ಹೆಂಡತಿಯನ್ನು ಸಿಗರೇಟಿನಿಂದ ಸುಟ್ಟ ಆರೋಪದಲ್ಲಿ ಜೈಲಿಗೆ ಹೋಗಿದ್ದವರು...


ಸ್ಯಾಂಡಲ್‌ವುಡ್ ನಟ ದರ್ಶನ್‌ (Actor Darshan)ಅವರು ಇತ್ತೀಚೆಗೆ ಮಂಡ್ಯದಲ್ಲಿ ನಡೆದ 'ಬೆಳ್ಳಿ ಪರ್ವ 25' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ವೇಳೆ 'ಇವತ್ತು ಇವಳು ಇರ್ತಾಳೆ, ನಾಳೆ ಇನ್ನೊಬ್ಬಳು ಬರ್ತಾಳೆ..' ಎಂಬ ಡೈಲಾಗ್‌ ಹೊಡೆದಿದ್ದರು. ಬಹಳಷ್ಟು ಜನರು ಸೇರಿದ್ದ ವೇದಿಕೆಯ ಮೇಲೆ ಮಾತನಾಡಿದ್ದ ದರ್ಶನ್‌ ಅವರ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಅದೇ ಹೇಳಿಕೆ ವಿರುದ್ಧ ಗೌಡತಿಯರ ಸೇನೆ ಮಹಿಳಾ ಆಯೋಗಕ್ಕೆ ದೂರು ನೀಡಿದೆ. 

'ಸ್ಟಾರ್ ನಟರನ್ನು ಯುವಜನತೆ ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಅವರಿಗೆಲ್ಲ ಮಾದರಿಯಾಗಬೇಕಾದ ಇಂಥ ನಟರು ಇಂತಹ ಹೇಳಿಕೆ ನೀಡುವುದು ಸಮಂಜಸವಲ್ಲ. ಶ್ರೀರಂಗಪಟ್ಟಣದ 25 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳು ಅಭಿರುಚಿ ಪ್ರದರ್ಶಿಸುವುದು ತಪ್ಪು. 'ಒಬ್ಬಳು ಹೋಗುತ್ತಾಳೆ, ಒಬ್ಬಳು ಬರುತ್ತಾಳೆ, ಅವಳ ಅಜ್ಜಿನಾ ಬಡಿಯ…'ಅಂತಾ ಹೇಳಿರುತ್ತಾರೆ. 

Tap to resize

Latest Videos

ಈ ಸಭೆಯಲ್ಲಿ ಆದಿ ಚುಂಚನಗಿರಿ ಗುರುಗಳು ಸೇರಿದಂತೆ, ಸಂಸದೆ ಸುಮಲತಾ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು, ಸಾವಿರಾರು ಅಭಿಮಾನಿಗಳು ಇದ್ದರು.  ನಟನೊಬ್ಬ ಸಮಾಜಕ್ಕೆ ಮಾದರಿ ಆಗಿರಬೇಕು. ಈ ರೀತಿ ಮಾತನಾಡಿರುವ ನಟ ದರ್ಶನ್‌ ಅವರಿಂದ ಸೂಕ್ತ ವಿವರಣೆ ಪಡೆದುಕೊಳ್ಳಬೇಕು' ಎಂದು ಗೌಡತಿಯರ ಸೇನೆಯ ದೂರು (Complaint on Darshan)ನೀಡಿದೆ. 

ಈ ವೇಳೆ ಗೌಡತಿಯರ ಸೇನೆ ದರ್ಶನ್‌ ಅವರ ಈ ಹಿಂದಿನ ಪ್ರಕರಣಗಳನ್ನೂ ಸಹ ನೆನಪು ಮಾಡಿದೆ. ದರ್ಶನ್‌ ಅವರು ಈ ಹಿಂದೆ ಹೆಂಡತಿಯನ್ನು ಸಿಗರೇಟಿನಿಂದ ಸುಟ್ಟ ಆರೋಪದಲ್ಲಿ ಜೈಲಿಗೆ ಹೋಗಿದ್ದವರು. ಅದೃಷ್ಟ ದೇವತೆ ನಿಮ್ಮ ಮನೆಗೆ ಬಂದರೆ ಬಟ್ಟೆ ಬಿಚ್ಚಿ ರೂಮಿನಲ್ಲಿ ಕೂಡಿಹಾಕಿ ಎಂದು ಹೇಳಿಕೆ ಕೊಟ್ಟಿದ್ದವರು. ಹೆಣ್ಣು ಮಕ್ಕಳನ್ನು ತೆರೆಯ ಮೇಲೆ ಗೌರವಿಸುವಂತೆ, ತೆರೆಯ ಹಿಂದೆಯೂ ಗೌರವಿಸುವುದನ್ನು ಕಲಿಯಬೇಕು , ನಾಯಕ ನಟನೊಬ್ಬ ಮಾಡೆಲ್‌ ಆಗಿರಬೇಕು' ಎಂದು ಗೌಡತಿಯರ ಸೇನೆ ಒತ್ತಾಯಿಸಿದೆ.

ನಟ ದರ್ಶನ್ ಮೇಲೆ ಎರಡು ಹಾಗೂ ಮತ್ತೊಂದು ದೂರು ದಾಖಲು:-

ಪುಟ್ಟೆನಹಳ್ಳಿ ಪೊಲೀಸ್ ಠಾಣೆಗೆ ದರ್ಶನ್ ವಿರುದ್ಧ ದೂರು- 15 ಕ್ಕೂ ಹೆಚ್ಚು ಮಹಿಳೆಯರು ಸ್ಟೇಷನ್ ಗೆ ಎಂಟ್ರಿ ಕೊಟ್ಟಿದ್ದು, ಪುಟ್ಟೇನಹಳ್ಳಿ ಮಹಿಳಾ ಸ್ವಸಹಾಯ ಸಂಘದಿಂದ ದೂರು ದಾಖಲಾಗಿದೆ. ನಟ ದರ್ಶನ್ ವಿರುದ್ದ ದೂರು ದಾಖಲಿಸಲು  ಬಂದ ಮಹಿಳೆಯರು ತಮ್ಮ ಹೇಳಿಕೆ ದಾಖಲಿಸಿದ್ದಾರೆ. 'ನಟ ದರ್ಶನ್ ವೇದಿಕೆ ಮೇಲೆ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸ್ಟಾರ್ ನಟನಾಗಿ ಮಹಿಳೆಯರ ಬಗ್ಗೆ ಈ ರೀತಿ ಹೇಳಿಕೆ ಕೊಡುವುಡು ಸಮಂಜಸವಲ್ಲ. ಈ ಹಿನ್ನೆಲೆಯಲ್ಲಿ ನಾವು ದೂರು ನೀಡುತ್ತಿದ್ದೇವೆ' ಎಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಮಹಿಳೆಯರ ಗುಂಪು ದೂರು ನೀಡಿದೆ.

ಪುರುಷರಿಗೆ ಪಾಠ ಮಾಡಿದ್ರು ನಟಿ ಪ್ರಿಯಾಂಕಾ ಚೋಪ್ರಾ; ಲೆಸನ್ ನೋಡಿದ್ರೆ ತಲೆ ತಿರುಗೋದು ಗ್ಯಾರಂಟಿ!

ನಟ ದರ್ಶನ್ ವಿರುದ್ಧ ಆರ್ ಆರ್ ನಗರ ಠಾಣೆಗೆ ಮತ್ತೆರಡು ದೂರು ದಾಖಲಾಗಿದೆ. ಗಣೇಶ್ ಗೌಡ ಹಾಗೂ ಜಗದೀಶ್ ಎನ್ನುವವರಿಂದ ಆರ್.ಆರ್.ನಗರ ಠಾಣೆಗೆ ದೂರು ದಾಖಲಾಗಿದೆ. 'ನಟ ದರ್ಶನ್ ಅವರು ರಾಜ್ಯದ ಪ್ರಭಾವಿ ಸಮುದಾಯದ ನಾಯಕರ ಬಗ್ಗೆ ಮತ್ತು ವೇದಿಕೆ ಮೇಲೆ ಹೆಣ್ಣು ಮಕ್ಕಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದಾರೆ. ದರ್ಶನ್ ಅವರ ಮಾತು ಒಂದು ಸಮುದಾಯವನ್ನ ಕೆರಳಿಸುವಂತಿದೆ. ದರ್ಶನ್ ಗೆ ಹೆಣ್ಣು ಮಕ್ಕಳೆಂದರೆ ಆಟಿಕೆಯ ವಸ್ತುಗಳ ರೀತಿ ಬಳಸಿ ಬಿಸಾಡುವಂತ ಮಾತುಗಳಾಡಿದ್ದಾರೆ. 

ಅಕ್ಷಯ್ -ಟೈಗರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ; ಬಡೇ ಮಿಯಾನ್ ಚೋಟೆ ಮಿಯಾನ್' ಟೈಟಲ್ ಟ್ರ್ಯಾಕ್ ನೋಡಿದ್ರಾ?

ಇದು ಈ ರಾಜ್ಯದ ಮತ್ತು ದೇಶದ ಮಹಿಳಾ ಕುಲಕ್ಕೆ ಮಹಾ ಅಪಮಾನ. ಒಕ್ಕಲಿಗ ನಾಯಕರ ವಿರುದ್ಧ ಚುನಾವಣೆ ಸಂಧರ್ಭದಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಒಂದು ಸಮುದಾರ ರೊಚ್ಚಿಗೇಳುವ ಮುಂಚೆ ಕಾನೂನು ಕ್ರಮ ಕೈ ಗೊಳ್ಳುವಂತೆ ದೂರಿನಲ್ಲಿ ಹೇಳಿಕೆ ನೀಡಲಾಗಿದೆ. ಈ ಬಗ್ಗೆ ಆರ್ ಆರ್ ನಗರ ಠಾಣೆಯಲ್ಲಿ ಎನ್ ಸಿ ಆರ್ ದಾಖಲು ಮಾಡಲಾಗಿದೆ.  ಒಟ್ಟಿನಲ್ಲಿ, ನಟ ದರ್ಶನ್ ಮೇಲೆ ಒಟ್ಟೂ ನಾಲ್ಕು ದೂರು ಸದ್ಯಕ್ಕೆ ದಾಖಲಾಗಿದೆ. 

ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಸಂಯೋಜಕ ಗುರುಕಿರಣ್ ಏನ್ ಹೇಳ್ತಿದಾರೆ ನೋಡ್ರೀ!

click me!