ಆ ಕಾಲ್ದಲ್ಲೇ ಹುಟ್ಟಿದ್ರೆ ಶಂಕರ್‌ ನಾಗ್ ಅವ್ರನ್ನೇ ಕೇಳ್ತಿದ್ದೆ: ಸಾಯಿ ಪಲ್ಲವಿ ಯಾಕೆ ಹೀಗ್ ಹೇಳಿದ್ದು?

By Shriram Bhat  |  First Published Aug 1, 2024, 8:10 PM IST

ನಾನು ಗಂಟು ಮೂಟೆ, ಗರುಡ ಗಮನ ವೃಷಭ ವಾಹನ, ಲೂಸಿಯಾ, ಯೂ ಟರ್ನ್ ಹೀಗೆ ಹಲವು ಕನ್ನಡ ಸಿನಿಮಾಗಳನ್ನು ನೋಡಿದೀನಿ.. ನಾನು ಗಾರ್ಗಿ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡಲು ಶುರು..


ನಟಿ ಸಾಯಿ ಪಲ್ಲವಿ ( Sai Pallavi ) ಭಾಗಿಯಾಗಿದ್ದ ಸಂದರ್ಶನವೊಂದರ ಬರಹವಿದು. 'ರಕ್ಷಿತ್ ಶೆಟ್ಟಿ (Rakshith Shetty) ಡೈರೆಕ್ಷನ್‌ನಲ್ಲಿ ಪರಂವಾ ಸ್ಟುಡಿಯೋ ಏನಾದ್ರೂ ಸಿನಿಮಾ ಮಾಡಿ ನಿಮಗೆ ಆಫರ್ ಕೊಟ್ರೆ ನೀವೇನಾದ್ರೂ ಆಕ್ಟ್ ಮಾಡೋಕೆ ರೆಡಿ ಇದೀರಾ' ಅಂತ ಸಾಯಿ ಪಲ್ಲವಿ ಅವರನ್ನು ಕೇಳಲಾಗಿತ್ತು. ಅದಕ್ಕೆ ಸಾಯಿ ಪಲ್ಲವಿ ಕೊಟ್ಟ ಉತ್ತರ ಅಮೋಘವಾಗಿತ್ತು. 

ಹಾಗಿದ್ರೆ, ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ ಅವರು ರಕ್ಷಿತ್ ಶೆಟ್ಟಿ ಜೊತೆ ನಟಿಸ್ತಾರಂತಾ? ಏನಂತ ಉತ್ತರ ಕೊಟ್ಟಿದ್ರು ಅನ್ನೋ ಕುತೂಹಲವಂತೂ ನಿಮ್ಗೆ ಇದ್ದೇ ಇರುತ್ತೆ.. ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ.. 

Tap to resize

Latest Videos

ಯಾವುದೇ ಕ್ಷಣ, ಪರಿಸ್ಥಿತಿಯಲ್ಲೂ ದರ್ಶನ್ ಸರ್ ಬಗ್ಗೆ ಹಗುರವಾಗಿ ಮಾತನಾಡೋದಿಲ್ಲ: ಎಪಿ ಅರ್ಜುನ್

ನನಗೆ ಸ್ಕ್ರಿಪ್ಟ್ ತುಂಬಾ ಮುಖ್ಯ. ಕಥೆ-ಚಿತ್ರಕಥೆ ಇಷ್ಟ ಆದ್ರೆ ಖಂಡಿತ ನಾನು ಕನ್ನಡ ಸಿನಿಮಾದಲ್ಲಿ ನಟಿಸ್ತೀನಿ.. ಯಾಕಂದ್ರೆ, ನಂಗೆ ಚಾಲೆಂಜಸ್ ಅಂದ್ರೆ ಯಾವಾಗ್ಲೂ ತುಂಬಾನೇ ಇಷ್ಟ..'ಎಂದ್ರು. 'ಕನ್ನಡ ಸಿನಿಮಾವನ್ನು ನಿಮಗೆ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡ್ತೀನಿ ಅಂದ್ರೆ ನೀವು ಕನ್ನಡದ ಯಾವ ಹೀರೋನ ಸೆಲೆಕ್ಟ್ ಮಾಡ್ತೀರಾ?' ಎನ್ನುವ ಪ್ರಶ್ನೆಗೆ 'ಇದು ತುಂಬಾ ಕಷ್ಟದ ಪ್ರಶ್ನೆ.. 

ಏಕೆಂದರೆ, ನೀವು ಈ ರೀತಿಯ ಪ್ರಶ್ನೆನಾ ನಂಗೆ ಕೇಳ್ತೀರಾ ಅಂದ್ರೆ, ನಾನು ಏನ್ ಹೇಳೋಕೆ ಇಷ್ಟಪಡ್ತೀನಿ ಅಂದ್ರೆ, ನಾನು ಇನ್ನೂ ಮೊದಲೇ ಹುಟ್ಟಿದ್ದರೆ, ಅಂದ್ರೆ ಶಂಕರ್‌ನಾಗ ಸರ್ ಕಾಲದಲ್ಲಿಯೇ ಹುಟ್ಟಿದ್ದರೆ ನಾನು ಅವರೇ ನಂಗೆ ಸಿನಿಮಾ ಡೈರೆಕ್ಟ್ ಮಾಡಲಿ ಅಂತ ಹೇಳ್ತಾ ಇದ್ದೆ. 

ಆಗ ನನ್ನ ಆಯ್ಕೆ ಹೇಗೆ ಇರ್ತಾ ಇತ್ತು ಅಂದ್ರೆ, ನಂಗೆ ಶಂಕರ್ ನಾಗ್ ಸರ್ (Shankar Nag) ಡೈರೆಕ್ಟ್ ಮಾಡ್ಬೇಕಿತ್ತು, ಅದಕ್ಕೆ ಹೀರೋ ಆಗ ಬಹುಶಃ ರಕ್ಷಿತ್ ಶೇಟ್ಟಿ ಅವ್ರು ಇರ್ಬಹುದಿತ್ತೇನೋ..' ಎಂದಿದ್ದಾರೆ ನಟಿ ಸಾಯಿ ಪಲ್ಲವಿ.. ಕನ್ನಡ ಇಂಡಸ್ಟ್ರಿಯಲ್ಲಿ ಯಾರಾದ್ರೂ ಪರಿಚಯ ಇದಾರಾ ಅಂದಿದ್ದಕ್ಕೆ ನಟಿ ಸಾಯಿ ಪಲ್ಲವಿ ಅವರು 'ಈಗ ನಾನು ಕನ್ನಡ ಸಿನಿರಂಗವನ್ನು ತಿಳಿದುಕೊಳ್ತಾ ಇದೀನಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಹೀಗೆ ಕೆಲವೊಬ್ಬರ ಹೆಸರುಗಳನ್ನು ತಿಳಿದುಕೊಂಡಿದೀನಿ. 

ನಾನು ಗಂಟು ಮೂಟೆ, ಗರುಡ ಗಮನ ವೃಷಭ ವಾಹನ, ಲೂಸಿಯಾ, ಯೂ ಟರ್ನ್ ಹೀಗೆ ಹಲವು ಕನ್ನಡ ಸಿನಿಮಾಗಳನ್ನು ನೋಡಿದೀನಿ.. ನಾನು ಗಾರ್ಗಿ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡಲು ಶುರು ಮಾಡಿದ ಮೇಲೆ ಇಲ್ಲಿನ ಕಾಲವಿದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದ್ದೇನೆ. ನನಗೆ ಫ್ರೀ ಟೈಮ್‌ ಸಿಕ್ಕಾಗ ನಾನು ಕನ್ನಡ ಸಿನಿಮಾಗಳನ್ನು ವೀಕ್ಷಿಸುತ್ತೇನೆ' ಎಂದಿದ್ದಾರೆ ಬಹುಭಾಷಾ ಸ್ಟಾರ್ ನಟಿ ಸಾಯಿ ಪಲ್ಲವಿ.

ಮುಂಬೈನಲ್ಲಿ ಹಫ್ತಾ ವಸೂಲಿಗೆ ಬಂದವನು ವಿಷ್ಣುವರ್ಧನ್ ಕಾಲಿಗೆ ಬಿದ್ದಿದ್ದು ಯಾಕೆ? ಏನಾಗಿತ್ತು ಅಲ್ಲಿ?

ಇದು ಹಳೆಯ ವಿಡಿಯೋ. ಅಂದು ಗಾರ್ಗಿ ಚಿತ್ರ ಬಿಡುಗಡೆ ವೇಳೆ ಸಾಯಿ ಪಲ್ಲವಿ ಈ ಮಾತು ಹೇಳಿದ್ದರು. ಆದರೆ, ಈಗ ಅದೇ ಸಾಯಿ ಪಲ್ಲವಿ ಬಾಲಿವುಡ್‌ನಲ್ಲಿ ನಮ್ಮ ಕನ್ನಡ ನಟ ಯಶ್ ಹಾಗೂ ಹಿಂದಿ ನಟ ರಣಬೀರ್ ಕಪೂರ್ ಜತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೌದು, ನಟಿ ಸಾಯಿ ಪಲ್ಲವಿ ಅವರು ಹಿಂದಿಯ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ, ಯಶ್ ನಾಯಕತ್ವದ 'ಟಾಕ್ಸಿಕ್' ಚಿತ್ರಕ್ಕೆ ಕೂಡ ಸಾಯಿ ಪಲ್ಲವಿ ಅವರೇ ನಾಯಕಿ ಎನ್ನಲಾಗುತ್ತಿದೆ. ಆದರೆ ಅದು ಅಧಿಕೃತ ಸುದ್ದಿಯೇನಲ್ಲ. 

click me!